Saturday, 19 March 2022

ನಕಲಿ ಸುದ್ದಿಗಳಿಗೆ ಕಡಿವಾಣ ಹಾಕಲು ಸೋಶಿಯಲ್ ಮೀಡಿಯಾ ನಿಗಾ ಕೇಂದ್ರ ರಚಿಸಲಿರುವ ತಮಿಳುನಾಡು ಪೊಲೀಸ್ ಇಲಾಖೆ


 ನಕಲಿ ಸುದ್ದಿಗಳಿಗೆ ಕಡಿವಾಣ ಹಾಕಲು ಸೋಶಿಯಲ್ ಮೀಡಿಯಾ ನಿಗಾ ಕೇಂದ್ರ ರಚಿಸಲಿರುವ ತಮಿಳುನಾಡು ಪೊಲೀಸ್ ಇಲಾಖೆ

ಚೆನ್ನೈ: ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಸುದ್ದಿ ಹಾಗೂ ತಪ್ಪು ಮಾಹಿತಿಗಳ ಹಾವಳಿಗೆ ಕಡಿವಾಣ ಹಾಕಲು ಪೊಲೀಸ್ ಇಲಾಖೆಯಲ್ಲಿ ವಿಶೇಷ ಸಾಮಾಜಿಕ ಜಾಲತಾಣ ನಿಗಾ ಕೇಂದ್ರ (ಸ್ಪೆಷಲ್ ಸೋಶಿಯಲ್ ಮೀಡಿಯಾ ಮಾನಿಟರಿಂಗ್ ಸೆಂಟರ್) ತೆರೆಯಲು ತಮಿಳುನಾಡು ಸರಕಾರ ನಿರ್ಧರಿಸಿದೆ.

ಶುಕ್ರವಾರ ಮಂಡಿಸಿದ ರಾಜ್ಯ ಬಜೆಟ್‍ನಲ್ಲಿ  ಈ ಪ್ರಸ್ತಾವನೆ ಮಾಡಲಾಗಿದೆ. ಬಜೆಟ್ ಮಂಡಿಸಿ ಮಾತನಾಡಿದ ವಿತ್ತ ಸಚಿವ ಪಳನಿವೇಲ್ ತ್ಯಾಗರಾಜನ್, ಅಂತರ್ಜಾಲದಲ್ಲಿ ನಕಲಿ ಸುದ್ದಿಗಳ ವಿರುದ್ಧ ಪೊಲೀಸ್ ಇಲಾಖೆ ಹೋರಾಡಲಿದೆ ಎಂದು ಹೇಳಿದರು.

ರಾಜ್ಯ ಪೊಲೀಸ್ ಇಲಾಖೆ 2017ರಿಂದ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದು ಲಾಕ್‍ಡೌನ್ ವೇಳೆ ಇಲಾಖೆಯ ಸಾಮಾಜಿಕ ಜಾಲತಾಣ ಹ್ಯಾಂಡಲ್‍ಗಳ ಅನುಯಾಯಿಗಳ ಸಂಖ್ಯೆ ಗರಿಷ್ಠ ಏರಿಕೆ ಕಂಡಿತ್ತು.

ಇತ್ತೀಚೆಗೆ ನಕಲಿ ಸುದ್ದಿಗಳ ಹಾವಳಿ ಅಧಿಕವಾಗಿರುವುದರಿಂದ ಇಂತಹ ಸುದ್ದಿಗಳ ಬಗ್ಗೆ ಜಾಗೃತಿ ಮೂಡಿಸುವುದರ ಜತೆಗೆ  ಪ್ರಕರಣ ದಾಖಲಿಸಲು ಹಾಗೂ ನಕಲಿ ಸುದ್ದಿಗಳನ್ನು ತೆಗೆದು ಹಾಕುವ ನಿಟ್ಟಿನಲ್ಲಿ ಈ ಪ್ರಸ್ತಾವಿತ ಕೇಂದ್ರ ಶ್ರಮಿಸಲಿದೆ.

ಬಜೆಟ್‍ನಲ್ಲಿ ಪೊಲೀಸ್ ಇಲಾಖೆಗೆ ರೂ. 10,285 ಕೋಟಿ ಹಾಗೂ ಅಗ್ನಿಶಾಮಕ ಇಲಾಖೆಗೆ ರೂ. 496.5 ಕೋಟಿ ಒದಗಿಸಲಾಗಿದೆ.


SHARE THIS

Author:

0 التعليقات: