ಸಮಾಜದಲ್ಲಿ ಅನೈತಿಕತೆ ತಾಂಡವಾಡುತ್ತಿದ್ದು, ಎಚ್ಚರ ಅಗತ್ಯ:
ಸಯ್ಯಿದ್ ಅತಾವುಳ್ಳ ತಂಙಳ್ ಉದ್ಯಾವರ
ಕಾಸರಗೋಡು: ಸಮೂಹದಲ್ಲಿ ಅನೈತಿಕತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಸಂಬಂಧಪಟ್ಟವರು ಎಚ್ಚರಿಕೆ ವಹಿಸದಿದ್ದರೆ ಹೊಸ ತಲೆಮಾರು ದುರಂತದಲ್ಲಿ ಬೀಳಬಹುದು ಎಂದು ಸಯ್ಯಿದ್ ಅತಾವುಳ್ಳ ತಂಙಳ್ ಉದ್ಯಾವರ ಹೇಳಿದರು . ಸಯ್ಯಿದ್ ತ್ವಾಹಿರುಲ್ ಅಹ್ದಲ್ ತಂಙಳ್ 16ನೇ ಉರೂಸ್ ಮುಬಾರಕ್ ಪ್ರಯುಕ್ತ ನಡೆದ ಮತಪ್ರಭಾಷಣ ವೇದಿಕೆಯನ್ನು ಉದ್ಘಾಟನೆ ನಡೆಸುತ್ತಾ ಅವರು ಭಾಷಣ ಮಾಡಿದರು.
ವಿದ್ಯಾರ್ಥಿಗಳು ಮತ್ತು ಯುವಕರು, ಸಮೂಹವನ್ನು ಮತ್ತು ಹೆತ್ತವರನ್ನು ಧಿಕ್ಕರಿಸುತ್ತಾ ಸ್ವ ಇಚ್ಛೆಯಂತೆ ಜೀವನ ಮಾಡುತ್ತಿದ್ದಾರೆ. ಗಾಂಜಾದಂತಹ ಲಹರಿ ವಸ್ತುಗಳ ಮತ್ತು ಮದ್ಯವನ್ನು ಉಪಯೋಗಿಸುತ್ತಿರುವ ಈ ಕಾಲದಲ್ಲಿ ಹೊಸ ತಲೆಮಾರುಗಳನ್ನು ಎಚ್ಚರಿಸಲು ಸಮೂಹ ಮತ್ತು ಮೊಹಲ್ಲಾಗಳು ಮುಂದೆ ಬರಬೇಕು. ಮುಹಿಮ್ಮಾತಿನಂತಹ ಸಂಸ್ಥೆಗಳು ಅದನ್ನೇ ಮಾಡುತ್ತಿರುವುದು.
ಸಯ್ಯಿದ್ ತ್ವಾಹಿರುಲ್ ಅಹ್ದಲ್ ತಂಙಳ್ ಅವರು ಸ್ಥಾಪಿಸಿದ ಸಂಸ್ಥೆ ಇಂದು ಕೂಡ ಅವರದೇ ನಿಯಂತ್ರಣದಲ್ಲಿದೆ. ಸಮೂಹಕ್ಕೆ ಒಳ್ಳೆಯ ಮಾರ್ಗದರ್ಶನ ನೀಡಿ ಮುನ್ನುಗ್ಗುತ್ತಿದೆ ಎಂಬುದು ಬಹಳಷ್ಟು ಶ್ಲಾಘನೀಯ. ಮುಹಿಮ್ಮಾತಿನಲ್ಲಿ ಈಗ ನಡೆಯುತ್ತಿರುವ ಉರೂಸ್ ಮುಬಾರಕ್ ಮಾದರಿ ಯೋಗ್ಯವಾಗಿದೆ ಎಂದು ಅವರು ಹೇಳಿದರು.
ಮುಹಿಮ್ಮಾತ್ ಟ್ರಶರರ್ ಅಮೀರಲಿ ಚೂರಿ ಅಧ್ಯಕ್ಷತೆ ವಹಿಸಿದ್ದರು. ಅಬ್ದುಲ್ ಖಾದರ್ ಸಖಾಫಿ ಮೊಗ್ರಾಲ್ ಸ್ವಾಗತಿಸಿದರು.
0 التعليقات: