Friday, 4 March 2022

ಸಾಲ ಮತ್ತು ಸಾರಾಯಿಗೆ ಅವಲಂಬಿತವಾದ ಬಜೆಟ್: ವಿಪಕ್ಷ ಉಪನಾಯಕ ಯು.ಟಿ ಖಾದರ್


 ಸಾಲ ಮತ್ತು ಸಾರಾಯಿಗೆ ಅವಲಂಬಿತವಾದ ಬಜೆಟ್: ವಿಪಕ್ಷ ಉಪನಾಯಕ ಯು.ಟಿ ಖಾದರ್

ಮಂಗಳೂರು: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಇಂದು ಮಂಡಿಸಿದ ಬಜೆಟ್ ಬಗ್ಗೆ ಪ್ರತಿಕ್ರಿಯಿಸಿದ ವಿಪಕ್ಷ ಉಪನಾಯಕ ಯು.ಟಿ ಖಾದರ್ ಈ ಬಜೆಟ್ ಸಾಲ ಮತ್ತು ಸಾರಾಯಿಗೆ ಅವಲಂಬಿತವಾದ ಬಜೆಟ್, ರಾಜ್ಯದ ಅಭಿವೃದ್ಧಿಗೆ ಯಾವುದೇ ದೂರದೃಷ್ಟಿ ರೂಪಿಸದೆ, ನಿಖರತೆ ಹಾಗೂ ಸ್ವಚ್ಛತೆ ಇಲ್ಲದ ಬಜೆಟ್ ಮಂಡಿಸಿದಂತಿದೆ. ಈ ಬಜೆಟ್ನಿಂದ ರಾಜ್ಯ ಅಭಿವೃದ್ಧಿಯಲ್ಲಿ ಮುನ್ನಡೆಯಾಗುವ ಬದಲು ಹಿನ್ನಡೆಯಾಗಲು ಹೊರಟಂತಿದೆ ಎಂದು ಅವರು ಹೇಳಿದ್ದಾರೆ.

ಕರಾವಳಿಗರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಬಹುತೇಕ ಅವಲಂಬಿಸಿದರು ಕೂಡ ಅವರ ಆತ್ಮವಿಶ್ವಾಸಕ್ಕೆ ಈ ಬಜೆಟ್ ಧಕ್ಕೆ ತಂದಿದೆ. ಮೀನುಗಾರಿಕೆಗೆ ರೈತರಿಗೆ ವಿದ್ಯಾರ್ಥಿಗಳಿಗೆ ಪೂರಕವಾದ ಯಾವುದೇ ಅಂಶಗಳು ಈ ಬಜೆಟ್ ನಲ್ಲಿ ಇಲ್ಲ ಎಂದು ವಿಪಕ್ಷ ಉಪನಾಯಕ ಯು.ಟಿ ಖಾದರ್ ಪ್ರತಿಕ್ರಿಯಿಸಿದ್ದಾರೆ.


SHARE THIS

Author:

0 التعليقات: