ಹಿಜಾಬ್; ಕರ್ನಾಟಕ ಹೈಕೋರ್ಟ್ ನೀಡಿರುವ ತೀರ್ಪು ಇಸ್ಲಾಮಿನ ಸಿದ್ಧಾಂತಗಳಿಗೆ ವಿರುದ್ಧವಾಗಿದೆ ಎಂದು ಕೆಸಿಎಫ್ ಐಎನ್ಸಿ ಹೇಳಿದೆ.
ಹಿಜಾಬ್ ಧಾರ್ಮಿಕ ನಂಬಿಕೆಯ ಭಾಗವಾಗಿದ್ದು, ಈ ಕುರಿತು ಕರ್ನಾಟಕ ಹೈಕೋರ್ಟ್ ನೀಡಿರುವ ತೀರ್ಪು ಇಸ್ಲಾಮಿನ ಸಿದ್ಧಾಂತಗಳಿಗೆ ವಿರುದ್ಧವಾಗಿದೆ ಎಂದು ಕೆಸಿಎಫ್ ಐಎನ್ಸಿ ಹೇಳಿದೆ.
ಮಹಿಳೆಯರಿಗೆ ಹಿಜಾಬ್ ಕಡ್ಡಾಯ ಎನ್ನುವುದು ಖುರ್ಆನ್ ಮತ್ತು ಪ್ರವಾದಿ ವಚನಗಳ ಆದೇಶಗಳಲ್ಲಿ ಸಂಶಯಾತೀತವಾಗಿ ದಾಖಲೆ ಗೊಂಡಿದ್ದು ಜಾಗತಿಕ ಮಟ್ಟದಲ್ಲಿ ಹಿಜಾಬನ್ನು ಮುಸ್ಲಿಮ್ ಮಹಿಳೆಯರ ಸಂಕೇತವಾಗಿ ಕಾಣಲಾಗುತ್ತಿದೆ.ಇಂತಹ ಸ್ಪಷ್ಟ ವಿಷಯಗಳ ಬಗ್ಗೆ ನ್ಯಾಯಾಲಯವು "ಹಿಜಾಬ್ ಇಸ್ಲಾಮಿನ ಅವಿಭಾಜ್ಯ ಅಂಗವಲ್ಲ" ಎಂಬ ತೀರ್ಪನ್ನು ನೀಡಿರುವುದು ಅಚ್ಚರಿಯನ್ನು ಹುಟ್ಟಿಸಿದೆ.
ತೀರ್ಪಿನ ಬಗ್ಗೆ ವಿದ್ವಾಂಸ ಒಕ್ಕೂಟವು ಅಧ್ಯಯನ ನಡೆಸಿ ಇದರ ವಿರುದ್ಧ ಮೇಲ್ಮನವಿ ಸಲ್ಲಿಸಲಾಗುವುದು ಎಂದು ಕರ್ನಾಟಕ ಸುನ್ನೀ ಜಮ್ಇಯ್ಯತುಲ್ ಉಲಮಾ ತಿಳಿಸಿದ್ದು, ಮುಸ್ಲಿಂ ಹೆಣ್ಣುಮಕ್ಕಳ ಧಾರ್ಮಿಕ ಹಕ್ಕನ್ನು ಪಡೆಯಲು ಎಲ್ಲಾವಿಧ ಬೆಂಬಲವನ್ನು ನೀಡಲಾಗುವುದು ಎಂದು ಕೆಸಿಎಫ್ ಅಂತಾರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಡಾ|ಹಾಜಿ ಶೇಖ್ ಬಾವ ಮತ್ತು ಪ್ರ. ಕಾರ್ಯದರ್ಶಿ ಜನಾಬ್ ಖಮರುದ್ದೀನ್ ಗೂಡಿನಬಳಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
0 التعليقات: