Saturday, 12 March 2022

ಮುಹಿಮ್ಮಾತ್ ಉರೂಸ್ ಮುಬಾರಕ್ ಭವ್ಯ ಸಮಾಪ್ತಿ ನಾಳೆ ; ಇಂದು ಸ್ನೇಹ ಸಂಗಮ

ಮುಹಿಮ್ಮಾತ್ ಉರೂಸ್ ಮುಬಾರಕ್  ಭವ್ಯ ಸಮಾಪ್ತಿ ನಾಳೆ ; ಇಂದು ಸ್ನೇಹ ಸಂಗಮ


ಪುತ್ತಿಗೆ: ಸಯ್ಯದ್ ತ್ವಾಹಿರುಲ್ ಅಹ್ದಲ್ ತಂಙಳ್ 16 ನೇ ಉರೂಸ್ ಪ್ರಯುಕ್ತ ಕಳೆದ ನಾಲ್ಕು ದಿನಗಳಿಂದೀಚೆಗೆ ವಿಶ್ವಾಸಿಗಳ ದಂಡೇ ಮುಹಿಮ್ಮಾತಿನಲ್ಲಿ ಜಮೆಯಾಗುತ್ತಿದೆ. ಕೇರಳದ ವಿವಿಧ ಜಿಲ್ಲೆಗಳಿಂದ ಹಾಗೂ ಇತರ ರಾಜ್ಯಗಳಿಂದ ಜನರು ತ್ವಾಹಿರುಲ್ ಅಹ್ದಲ್ ತಂಙಳರು ನಾಂದಿ ಹಾಡಿದ ಶೈಕ್ಷಣಿಕ ಕ್ರಾಂತಿ ಹಾಗೂ ಸಾಮಾಜಿಕ ಸೇವೆಯನ್ನು ಕಣ್ಣಾರೆ ಸವಿಯುವ ಸಲುವಾಗಿ ಅಸಂಖ್ಯಾತರಾಗಿ ಉರೂಸ್ ಗೆ ಆಗಮಿಸುತ್ತಿದ್ದಾರೆ.ಉರೂಸ್ ಪ್ರಯುಕ್ತ ಎಡೆಬಿಡದೆ ಖುರ್ ಆನ್ ಪಾರಾಯಣ ಹಾಗೂ ಇನ್ನಿತರ ಹಲವಾರು ಆಧ್ಯಾತ್ಮಿಕ ಕಾರ್ಯಕ್ರಮಗಳಿಗೆ ಮುಹಿಮ್ಮಾತ್ ಉರೂಸ್ ಸಾಕ್ಷಿಯಾಯಿತು. ಹಲವಾರು ಮಹಲ್ಲ್ ಗಳಿಂದ ಹಾಗೂ ಇನ್ನಿತರ ಸಂಘಟನಾ ಯುನಿಟ್ ಗಳ ಮೇಲುಸ್ತುವಾರಿವಲ್ಲಿ ನೇರ್ಚೆಗಳು ಹಾಗೂ ಭಕ್ಷ್ಯ ಪದಾರ್ಥಗಳನ್ನು ಸಂಗ್ರಹಿಸಿ ಮುಹಿಮ್ಮಾತ್ ಗೆ ಮುಟ್ಟಿಸಲಾಯಿತು. ಅನುದಿನವೂ ಉರೂಸ್ ಗಾಗಿ ಆಗಮಿಸುತ್ತಿರುವ ವಿಶ್ವಾಸಿ ಗಣಕ್ಕೆ ತಬರ್ರುಕ್ ವಿತರಣೆಯೂ ಎಗ್ಗಿಲ್ಲದೆ ನಡೆದಿದೆ.ರಾತ್ರಿಯಲ್ಲಿ ನಡೆಯುತ್ತಿರುವ ಮತಪ್ರವಚನಗಳು ದಿನವೂ ಜನ ನಿಬಿಡವಾಗುತ್ತಿದೆ. ನಿನ್ನೆ ಸಂಜೆ ಜರುಗಿದ ರಿಫಾಈ ರಾತೀಬ್ ಮಜ್ಲಿಸ್ ಗೆ ಸಯ್ಯದ್ ಮುಟ್ಟಂ ಕುಞ್ಞಿ ಕೋಯ ತಂಙಳ್ ಪ್ರಾರ್ಥನೆ ನಡೆಸಿದರು. ವೈ ಎಂ ಅಬ್ದುರ್ರಹ್ಮಾನ್ ಅಹ್ಸನಿ ಮಜ್ಲಿಸ್ ಗೆ ನೇತೃತ್ವ ವಹಿಸಿದರು. ಕಾಟ್ಟಿಪ್ಪಾರ ಅಬ್ದುಲ್  ಖಾದರ್ ಸಖಾಫಿ ಭಾಷಣಗೈದರು.ರಾತ್ರಿ ಅನಸ್ ಅಮಾನಿ ಪುಷ್ಪಗಿರಿ ಮತ ಪ್ರವಚನ ನೀಡಿದರು.ಇಂದು (ಮಾರ್ಚ್ 12) ಬೆಳಿಗ್ಗೆ 11 ಗಂಟೆಗೆ ಜರಗಲಿರುವ ಸ್ನೇಹ ಸಂಗಮವನ್ನು ಮುಹಿಮ್ಮಾತ್ ಪ್ರಧಾನ ಕಾರ್ಯದರ್ಶಿ ಬಿ ಎಸ್ ಅಬ್ದುಲ್ಲ ಕುಞ್ಞಿ ಫೈಝಿಯವರ ಅಧ್ಯಕ್ಷತೆಯಲ್ಲಿ ಕರ್ನಾಟಕ ವಿಧಾನ ಸಭೆಯ ವಿರೋಧಪಕ್ಷದ ಉಪನಾಯಕ ಯು ಟಿ ಖಾದರ್ ಉದ್ಘಾಟಿಸುವರು.ಮುಖ್ಯ ಅತಿಥಿಗಳಾಗಿ ಎ.ಕೆ.ಎಂ ಅಶ್ರಫ್ MLA; ಎನ್. ಎ ನೆಲ್ಲಿಕ್ಕುನ್ನು MLA ಆಗಮಿಸುವರು.ಸುಲೈಮಾನ್ ಕರಿವಲ್ಲೂರ್ ವಿಷಯ ಮಂಡಿಸಲಿದ್ದಾರೆ.ಸಾಯಂಕಾಲ ಸಮಯ 4 ಗಂಟೆಗೆ ಸರಿಯಾಗಿ ನಡೆಯಲಿರುವ ಮುಹ್ಯದ್ದೀನ್ ರಾತೀಬ್ ಮಜ್ಲಿಸಿನಲ್ಲಿ ಸಯ್ಯಿದ್ ಮುತ್ತು ಕೋಯ ತಙ್ಙಳ್ ಕಣ್ಣವಂ ಹಾಗೂ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ನೇತೃತ್ವ ವಹಿಸುವರು.  ರವಿವಾರ ಬೆಳಗ್ಗೆ  ಸಯ್ಯಿದ್ ಹಸನುಲ್ ಅಹ್ದಲ್ ತಙ್ಙಳರು ಹಿಮಮಿ ಬಿರುದದಾರಿಗಳಿಗೆ ಸ್ಥಾನ ವಸ್ತ್ರ ವಿತರಿಸಲಿದ್ದಾರೆ. ಮುಹಮ್ಮದಲಿ ಸಖಾಫಿ ತೃಕರಿಪ್ಪುರ್ ವಿಷಯ ಮಂಡನೆ ನಡೆಸುವರು.ಸಯ್ಯಿದ್ ಫಝಲ್ ಕೋಯಮ್ಮ ತಙ್ಙಳ್ ಕುರಾ ಬೆಳಗ್ಗೆ 11ಗಂಟೆಗೆ ಸರಿಯಾಗಿ ಮೌಲಿದ್ ಮಜ್ಲಿಸಿನಲ್ಲಿ ನೇತೃತ್ವ ವಹಿಸಲಿದ್ದಾರೆ. ಮುಹಮ್ಮದ್ ರಫೀಖ್ ಸಅದಿ ಪ್ರಭಾಷಣಗೈಯ್ಯುವರು. ಮದ್ಯಾಹ್ನ ಸಮಯ 1:30 ಕ್ಕೆ ನಡೆಯಲಿರುವ ಖತಂ ದುಆ ಕಾರ್ಯಕ್ರಮದಲ್ಲಿ ಸಯ್ಯಿದ್ ಶಹೀರ್ ತಙ್ಙಳ್ ಅಲ್ ಬುಖಾರಿ, ಸ್ವಾಲಿಹ್ ಸಅದಿ ತಳಿಪ್ಪರಂಬ್ ನೇತೃತ್ವ ವಹಿಸುವರು. 

ರವಿವಾರ ಸಾಯಾಹ್ನ 4:30 ಕ್ಕೆ ನಡೆಯಲಿರುವ ಮಹ್ಳರತುಲ್ ಬದ್ರಿಯಾ ಮಜ್ಲಿಸಿನೊಂದಿಗೆ ಆತ್ಮೀಯ ಸಂಗಮಕ್ಕೆ ನಾಂದಿ ಹಾಡಲಿದೆ. ಸಯ್ಯಿದ್ ಅಲಿ ಬಾಫಖಿ ತಙ್ಙಳರು ಪ್ರಾರ್ಥನೆಗೈಯಲಿರುವರು. ಸಯ್ಯಿದ್ ಹಸನುಲ್ ಅಹ್ದಲ್ ತಙ್ಙಳರ ಅಧ್ಯಕ್ಷತೆಯಲ್ಲಿ ಸಮಸ್ತ ಪ್ರೆಸಿಡೆಂಟ್ ಇ.ಸುಲೈಮಾನ್ ಮುಸ್ಲಿಯಾರ್ ಉದ್ಘಾಟನೆಗೈಯಲಿದ್ದಾರೆ. ಸನದುದಾನ ಭಾಷಣದೊಂದಿಗೆ ಭಾರತದ ಗ್ರಾಂಡ್ ಮುಫ್ತಿ ಗ್ರಾಂಡ್ ಎಂಟ್ರಿ ನೀಡುವರು.ಪ್ರಸ್ತುತ ಸಂಗಮದಲ್ಲಿ  ಮುಖ್ಯ ಪ್ರಭಾಷಕರಾಗಿ ಸಯ್ಯಿದ್ ಇಬ್ರಾಹೀಂ ಖಲೀಲ್ ಬುಖಾರಿ ತಙ್ಙಳ್ ಹಾಗೂ ಪೇರೋಡ್ ಅಬ್ದುಲ್ ರಹ್ಮಾನ್ ಸಖಾಫಿ ಆಗಮಿಸುವರು. ಸಮಾರೋಪ ಸಮಾರಂಭದಲ್ಲಿ ಸಯ್ಯಿದ್ ಮುಹಮ್ಮದ್ ಇಬ್ರಾಹೀಂ ಪೂಕುಞ್ಞಿ ತಙ್ಙಳ್,ಸಯ್ಯಿದ್ ತ್ವಾಹಾ ತಙ್ಙಳ್,ಸಯ್ಯಿದ್ ಶಿಹಾಬುದ್ದೀನ್ ತಙ್ಙಳ್ ಮುತ್ತೂರು ಸಯ್ಯಿದ್ ಮುನೀರುಲ್ ಅಹ್ದಲ್ ತಙ್ಙಳ್,ಎ.ಪಿ ಅಬ್ದುಲ್ಲಾ ಮುಸ್ಲಿಯಾರ್ ಮಾಣಿಕೋತ್ತ್,ಪಿ.ಹೈದ್ರೂಸ್ ಮುಸ್ಲಿಯಾರ್ ಕೊಲ್ಲಂ,ವಿ.ಪಿ.ಎಂ ಫೈಝಿ ವಿಳ್ಯಾಪ್ಪಳ್ಳಿ, ಕೆ.ಕೆ ಅಹ್ಮದ್ ಕುಟ್ಟಿ ಮುಸ್ಲಿಯಾರ್ ಕಟ್ಟಿಪ್ಪಾರ, ಶಾಫೀ ಸಅದಿ ಬೆಂಗಳೂರು,ಕೆ.ಪಿ ಅಬೂಬಕರ್ ಮುಸ್ಲಿಯಾರ್ ಪಟ್ಟುವಂ, ಹಝ್ರತ್ ಮುಖ್ತಾರ್ ಬಾಖವಿ, ಹುಸೈನ್ ಸಅದಿ ಕೆ.ಸಿ ರೋಡು, ಅಬ್ದುಲ್ ರಶೀದ್ ಝೈನಿ ಕಕ್ಕಿಂಜೆ, ಲತೀಫ್ ಸಅದಿ ಶಿವಮೊಗ್ಗ,ನಿಝಾಮುದ್ದೀನ್ ಫಾಳಿಲಿ ಕೊಲ್ಲಂ, ಸಿ.ಎನ್ ಜಾಫರ್ ಮೊದಲಾದವರು ಆಶಂಸ ಭಾಷಣ ಮಾಡಲಿದ್ದಾರೆ. ಯೆನಪೋಯ ಅಬ್ದುಲ್ಲಾ ಕುಞ್ಞಿ ಹಾಜಿ ಇವರಿಗೆ ಉಡುಗೊರೆ ನೀಡಲಾಗುವುದು. ಈ ವರ್ಷದ ಸಮ್ಮೇಳನವು 116 ಹಿಮಮಿ ವಿದ್ವಾಂಸರು ಹಾಗೂ ಪರಿಶುದ್ಧ ಖುರ್ ಆನ್ ಕಂಠ ಪಾಠ ಮಾಡಿದ 27 ಹಾಫಿಲ್ ಗಳ ಬಿರುದುದಾನ ಸಂಗಮಕ್ಕೆ ಐತಿಹಾಸಿಕವಾಗಿ  ಸಾಕ್ಷಿಯಾಗಲಿದೆ.


SHARE THIS

Author:

0 التعليقات: