Saturday, 19 March 2022

ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷರಾಗಿ ಜಯ್ ಶಾ ಅವರ ಅಧಿಕಾರಾವಧಿ ಒಂದು ವರ್ಷ ವಿಸ್ತರಣೆ


 ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷರಾಗಿ ಜಯ್ ಶಾ ಅವರ ಅಧಿಕಾರಾವಧಿ ಒಂದು ವರ್ಷ ವಿಸ್ತರಣೆ

ಹೊಸದಿಲ್ಲಿ: ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಅಧ್ಯಕ್ಷರಾಗಿ ಇನ್ನೂ ಒಂದು ವರ್ಷ ಮುಂದುವರಿಯಲಿದ್ದಾರೆ. ಶನಿವಾರ ಕೊಲಂಬೊದಲ್ಲಿ ನಡೆದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಶಾ ಅವರ ಅಧಿಕಾರದ ಅವಧಿಯನ್ನು  ಸರ್ವಾನುಮತದಿಂದ ಒಂದು ವರ್ಷಕ್ಕೆ ವಿಸ್ತರಿಸಲಾಯಿತು.

ಶಾ ಅವರು ಕಳೆದ ವರ್ಷ ಜನವರಿಯಲ್ಲಿ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ) ಅಧ್ಯಕ್ಷ ನಝ್ಮುಲ್ ಹಸನ್ ಅವರಿಂದ ಎಸಿಸಿಯ ಅಧಿಕಾರವನ್ನು ವಹಿಸಿಕೊಂಡರು.


SHARE THIS

Author:

0 التعليقات: