Friday, 11 March 2022

ಸಿ.ಎನ್ ಮಾಸ್ಟರ್ ರವರಿಗೆ ತ್ವಾಹಿರುಲ್ ಅಹ್ದಲ್ ಅವಾರ್ಡ್: ಇಂಡಿಯನ್ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಆದಿತ್ಯವಾರ ನೀಡುವರು

ಸಿ.ಎನ್ ಮಾಸ್ಟರ್ ರವರಿಗೆ ತ್ವಾಹಿರುಲ್ ಅಹ್ದಲ್ ಅವಾರ್ಡ್: ಇಂಡಿಯನ್ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಆದಿತ್ಯವಾರ ನೀಡುವರು

ಕಾಸರಗೋಡು: ಜಿ.ಸಿ.ಸಿ ರಾಷ್ಟ್ರಗಳ ಕಾಸರಗೋಡು ಜಿಲ್ಲೆಯವರ ಗುಂಪಾಗಿರುವ ಮಾಲಿಕ್ ದಿನಾರ್ ಕಲ್ಚರಲ್ ಫೋರಂನ ಮೂರನೇ "ತ್ವಾಹಿರುಲ್ ಅಹ್ದಲ್ ತಂಙಳ್ ಮೆಮೋರಿಯಲ್ ಅವಾರ್ಡ್" ದಾನ ಕಾರ್ಯಕ್ರಮ ಈ ತಿಂಗಳು 13 ರಂದು ಆದಿತ್ಯವಾರ ರಾತ್ರಿ ಪುತ್ತಿಗೆ ಮುಹಿಮ್ಮಾತಿನಲ್ಲಿ ನಡೆಯಲಿದೆ. ತ್ವಾಹಿರ್ ತಂಙಳ್ ಉರೂಸ್ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಇಂಡಿಯನ್ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಕಾಂತಪುರಂ ಎ.ಪಿ ಅಬೂಬಕರ್ ಮುಸ್ಲಿಯಾರ್ ಅವಾರ್ಡ್ ನೀಡುವರು. ಪ್ರಮುಖ ಸಾಮೂಹಿಕ ಕಾರ್ಯಕರ್ತರೂ ಮುಹಿಮ್ಮಾತ್ ಉಪಾಧ್ಯಕ್ಷರೂ ಆಗಿರುವ ಸಿ.ಎನ್ ಅಬ್ದುಲ್ ಖಾದರ್ ಮಾಸ್ಟರ್ ಅವರನ್ನು ಈ ವರ್ಷದ ಅವಾರ್ಡಿಗೆ ಆಯ್ಕೆ ಮಾಡಲಾಗಿದೆ. ಮುಹಿಮ್ಮಾತಿನ ಪ್ರಾರಂಭ ಕಾಲಗಳಲ್ಲಿ ಸಯ್ಯಿದ್ ತ್ವಾಹಿರುಲ್ ಅಹ್ದಲ್ ತಂಙಳ್ ರವರಿಗೆ ನೀಡಿದ ಬೆಂಬಲ, ಜಿಲ್ಲೆಯ ವಿದ್ಯಾಭ್ಯಾಸ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಮಾಡಿದಂತಹ ಕಾರ್ಯಗಳನ್ನು ಪರಿಗಣಿಸಿ ಸಿ.ಎನ್ ಅಬ್ದುಲ್ ಖಾದರ್ ಮಾಸ್ಟರ್ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪೆರ್ಲದ ಶೇಣಿಯಲ್ಲಿ ಸಾಮಾನ್ಯ ಕುಟುಂಬದಲ್ಲಿ ಜನಿಸಿದ ಸಿ.ಎನ್‌ ಅಬ್ದುಲ್ ಕಾದರ್ ಮಾಸ್ಟರ್ ಕಠಿಣ ಪರಿಶ್ರಮದಿಂದ ಅಧ್ಯಾಪಕರಾಗಿ ಜಿಲ್ಲೆಯ ವಿವಿಧ ಶಾಲೆಗಳಲ್ಲಿ ದೀರ್ಘವಾದ 36 ವರ್ಷಗಳ ಕಾಲ ಸೇವೆ ಸಲ್ಲಿಸಿದರು. 

2002 ರಲ್ಲಿ ಊಜಾರ್ ಉಳುವಾರ್ ಸ್ಕೂಲಿನ ಮುಖ್ಯ ಅಧ್ಯಾಪಕರಾಗಿ ವಿರಮಿಸಿದ ನಂತರ ಮುಹಿಮ್ಮಾತ್ ಸ್ಕೂಲ್ ಮ್ಯಾನೇಜರ್ ಆಗಿ ಸೇವೆ ಸಲ್ಲಿಸಿದ್ದರು. ಮುಹಿಮ್ಮಾತ್ ಹೊರತುಪಡಿಸಿ ಎಸ್.ವೈ.ಎಸ್, ಕೇರಳ ಮುಸ್ಲಿಂ ಜಮಾಅತ್ ಸಂಘಟನೆಗಳ ಜಿಲ್ಲಾ ಝೋನ್‌ ನಾಯಕರಾಗಿ ಸೇವೆ ಸಲ್ಲಿಸಿದರು. ಕೇರಳ ಮುಸ್ಲಿಂ ಜಮಾಅತ್ ಜಿಲ್ಲಾ ಕಮಿಟಿ ಸದಸ್ಯರು, ಕುಂಬಳೆ ಝೋನ್‌ ವೈಸ್ ಪ್ರೆಸಿಡೆಂಟ್, ಮುಹಿಮ್ಮಾತ್ ಮಹಲ್ಲ್, ರಿಫಾಈ ನಗರ್ ಮಹಲ್ಲ್ ಅಧ್ಯಕ್ಷರು ಮುಂತಾದ ಸ್ಥಾನಗಳನ್ನು ವಹಿಸುತ್ತಿದ್ದಾರೆ. ಅವರು ಎಸ್.ಎಸ್.ಎಫ್ ಕೇರಳ ರಾಜ್ಯ ಜನರಲ್ ಸೆಕ್ರೆಟರಿ ಆಗಿರುವ ಸಿ.ಎನ್ ಜಅಫರ್ ಅವರ ತಂದೆಯಾಗಿದ್ದಾರೆ. ಸಂಘಟಕರು ಕೂಡ ಆಗಿರುವ ಅವರು ಮೊದಲ ಕಾಲದಲ್ಲಿ ಅಧ್ಯಾಪಕರ ಹಕ್ಕುಗಳಿಗಾಗಿ ಹೋರಾಟ ಮಾಡಿ ಜೈಲ್ ವಾಸ ಅನುಭವಿಸಿದ್ದರು. ಈಗ ಅವರು ಪುತ್ತಿಗೆ ಸಮೀಪದ ಕಟ್ಟತ್ತಡುಕ ಎಂಬ ಸ್ಥಳದಲ್ಲಿ ವಾಸಿಸುತ್ತಿದ್ದಾರೆ. ಮುಹಿಮ್ಮಾತಿನ ಸ್ಥಾಪಕರಾಗಿರುವ ಸಯ್ಯಿದ್ ತಾಹಿರುಲ್ ಅಹ್ದಲ್ ತಂಙಳ್ ರವರು ಎಸ್ ವೈ ಎಸ್ ಪುತ್ತಿಗೆ ಪಂಚಾಯತಿನ ಪ್ರಥಮ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಜನರಲ್ ಸೆಕ್ರೆಟರಿಯಾಗಿ ಸಿ.ಎನ್ ಮಾಸ್ಟರ್ ರವರು ಆಯ್ಕೆಗೊಂಡು ಸಂಘಟನಾ ಕ್ಷೇತ್ರದಲ್ಲಿ ಸಜೀವ ಆಗಿದ್ದರು. ನಂತರ ಆರ್ಫನೇಜ್ ಕಮಿಟಿ ಸೆಕ್ರೆಟರಿಯಾಗಿ ಮತ್ತು 1992 ರಲ್ಲಿ ಮುಹಿಮ್ಮಾತ್ ರೂಪಿಸಿದಾಗ ಸೆಂಟ್ರಲ್ ಕಮಿಟಿ ಸೆಕ್ರೆಟರಿ ಆಗಿ ಸೇವೆ ಸಲ್ಲಿಸಿದ್ದರು. ಪ್ರೈಮರಿ ಎಜುಕೇಶನ್ ಎಕ್ಸ್ಟೆನ್ಶನ್ ಆಫೀಸರ್, ಸಾಕ್ಷರತಾ ಕೋರ್ಡಿನೇಟರ್ ಮುಂತಾದ ಕ್ಷೇತ್ರದಲ್ಲಿಯೂ ಚೆನ್ನಾಗಿ ಕಾರ್ಯಾಚರಣೆ ಮಾಡಿದ್ದರು.

ಅವಾರ್ಡ್ ದಾನ ಕಾರ್ಯಕ್ರಮದಲ್ಲಿ ಮುಹಿಮ್ಮಾತ್ ಸಾರಥಿಗಳು ಮತ್ತು ಸೆಂಟ್ರಲ್ ಕಮಿಟಿ ಸಾರಥಿಗಳು ಭಾಗವಹಿಸುವರು. ಜಿ.ಸಿ.ಸಿ ರಾಷ್ಟ್ರಗಳಲ್ಲಿ ವಿವಿಧ ಸಾಂಸ್ಕೃತಿಕ ಸೇವಾ ಕ್ಷೇತ್ರಗಳಲ್ಲಿ ಕಾರ್ಯಾಚರಣೆ ಮಾಡುತ್ತಿರುವ ಮಾಲಿಕ್ ದಿನಾರ್ ಕಲ್ಚರಲ್ ಫಾರಂ ಊರಿನ ಸಾಂತ್ವನ  ಕಾರ್ಯಗಳಿಗೆ ದೊಡ್ಡ ಮಟ್ಟದಲ್ಲಿ ಸಹಾಯ ಮಾಡುತ್ತಿದೆ. ಕಾಸರಗೋಡು ಮೆಡಿಕಲ್ ಕಾಲೇಜಿನ ಸಮೀಪವಿರುವ ಸಾಂತ್ವನ ಭವನದಲ್ಲಿ ಮಯ್ಯಿತ್ ಸ್ನಾನ ಮಾಡಿಸಲು ಬೇಕಾಗಿರುವ ಶೆಡ್, ಮಂಚ, ಕಫನ್ ಮಾಡಲು ಬೇಕಾಗಿರುವ ಟೇಬಲ್ ಮುಂತಾದ ಹಲವಾರು ವಸ್ತುಗಳನ್ನು ಮಾಲಿಕ್ ದೀನಾರ್ ಕಲ್ಚರಲ್ ಫಾರಂ ನೀಡಿದೆ. ಲತೀಫ್ ಸಅದಿ ಉರುಮಿ ಚೆಯರ್ಮ್ಯಾನ್, ಸುತ್ತಾರ್ ಕೋರಿಕ್ಕಾರ್ ಕನ್ವೀನರ್ ಮತ್ತು ಎನ್.ಎ ಅಬೂಬಕರ್ ಅಂಗಡಿಮೊಗರ್ ಟ್ರಶರರ್ ಆಗಿ ಪ್ರಸ್ತುತ ಫಾರಂ ಕಾರ್ಯಾಚರಿಸುತ್ತಿದೆ. ಹಮೀದ್ ಪರಪ್ಪ ಚೆಯರ್ಮ್ಯಾನ್ ಆಗಿರುವ ಸುಪ್ರಿಂ ಕೌನ್ಸಿಲ್ ಕೂಡ ಇದೆ.

ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದವರು

1. ಬಶೀರ್ ಕುಂಬೋಳ್ (ಆರ್ಗನೈಝಿಂಗ್ ಸೆಕ್ರೆಟರಿ)

2. ಶಮೀಂ ಕಂದಲ್ (ಜೋಯಿನ್ ಕನ್ವೀನರ್)

3. ಶಿಹಾಬ್ ಉರುಮಿ (ಜೋಯಿನ್ ಕನ್ವೀನರ್)

4. ಲತೀಫ್ ಪಳ್ಳತ್ತಡ್ಕ (ಜೋಯಿನ್ ಕನ್ವೀನರ್)

5. ಮುಹಮ್ಮದ್ ಕುಂಞಿ ಉಳುವಾರ್ (ಮೀಡಿಯಾ ಸೆಕ್ರೆಟರಿ)


SHARE THIS

Author:

0 التعليقات: