ಎಸ್ಸೆಸ್ಸೆಫ್ ದ.ಕ ಜಿಲ್ಲೆ ವೆಸ್ಟ್ ವಾರ್ಷಿಕ ಸಭೆ
ಮಂಗಳೂರು:ಎಸ್ಸೆಸ್ಸೆಫ್ ದ.ಕ ಜಿಲ್ಲೆ ವೆಸ್ಟ್ ವಾರ್ಷಿಕ ಸಭೆಯು ಫೆಬ್ರವರಿ 27ರಂದು ಜಿಲ್ಲಾಧ್ಯಕ್ಷರಾದ ನವಾಝ್ ಸಖಾಫಿ ಅಡ್ಯಾರ್ ಪದವುರವರ ಅಧ್ಯಕ್ಷತೆಯಲ್ಲಿ ದಾರುಲ್ ಇಝ್ಝ ಕೌಡೇಲಿನಲ್ಲಿ ನಡೆಯಿತು.ಜಿಲ್ಲಾ ಕ್ಯೂಡಿ ಕಾರ್ಯದರ್ಶಿ ಇಬ್ರಾಹಿಂ ಅಹ್ಸನಿ ದುಆ ನೆರವೇರಿಸಿದರು.ಕ್ಯಾಂಪಸ್ ಕಾರ್ಯದರ್ಶಿ ಹಮೀದ್ ತಲಪಾಡಿ ಸ್ವಾಗತಿಸಿ,ಎಸ್ಸೆಸ್ಸೆಫ್ ದ.ಕ ಜಿಲ್ಲಾ ನಿಕಟಪೂರ್ವ ಕಾರ್ಯದರ್ಶಿ ಅಬ್ದುಲ್ ರಶೀದ್ ಹಾಜಿ ವಗ್ಗ ಸಭೆಯನ್ನು ಉಧ್ಘಾಟಿಸಿದರು.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೈದರ್ ಕಾಟಿಪಳ್ಳ ವರದಿ ವಾಚಿಸಿ, ಫಿನಾನ್ಸ್ ಸೆಕ್ರೆಟರಿ ಇಕ್ಬಾಲ್ ಮಧ್ಯನಡ್ಕ ಲೆಕ್ಕ ಪತ್ರ ಮಂಡಿಸಿದರು.ಇಸ್ಹಾಖ್ ಝುಹ್ರಿ ಕಾನಕೆರೆ ಸಂಘಟಣಾ ತರಗತಿ ನಡೆಸಿದರು.
ವೀಕ್ಷಕರಾಗಿ ಆಗಮಿಸಿದ
ರಾಜ್ಯ ಕಾರ್ಯದರ್ಶಿ ಹುಸೈನ್ ಸಅದಿ ಹೊಸ್ಮಾರ್ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮರಿಕ್ಕಳ ಉಪಸ್ಥಿತರಿದ್ದರು. ಕೊನೆಯಲ್ಲಿ
ಮನ್ಸೂರ್ ಬಜಾಲ್ ಧನ್ಯವಾದ ಸಮರ್ಪಿಸಿದರು.
0 التعليقات: