ಅಹ್ಲ್ ಬೈತನ್ನು ಚೆನ್ನಾಗಿ ತಿಳಿಯಿರಿ; ಡಾ. ಫಾರೂಕ್ ನಈಮಿ ಕೊಲ್ಲಂ
ಕಾಸರಗೋಡು : ಸಮೂಹವು ಅಹ್ಲ್ ಬೈತಿನ ಬಗ್ಗೆ ಚೆನ್ನಾಗಿ ಕಲಿಯಬೇಕು ಎಂದೂ ಪ್ರವಾದಿ ಪ್ರೇಮ ಅಧಿಕಗೊಳಿಸಬೇಕು ಎಂದು ಸುಪ್ರಸಿದ್ಧ ಭಾಷಣಗಾರ ಮತ್ತು ಎಸ್ಸೆಸ್ಸೆಫ್ ದೇಶೀಯ ಅಧ್ಯಕ್ಷರೂ ಆಗಿರುವ ಡಾ. ಫಾರೂಕ್ ನಈಮಿ ಕೊಲ್ಲಂ ಹೇಳಿದರು. ಸಯ್ಯಿದ್ ತ್ವಾಹಿರುಲ್ ಅಹ್ದಲ್ ತಂಙಳ್ ಉರೂಸ್ ಮುಬಾರಕ್ ಪ್ರಯುಕ್ತ ನಡೆದ ಮತ ಪ್ರಭಾಷಣ ವೇದಿಕೆಯಲ್ಲಿ ಅವರು ಮುಖ್ಯ ಪ್ರಭಾಷಣ ಮಾಡಿದರು.
ಹೊಸ ತಲೆಮಾರಿನ ರೋಲ್ ಮಾಡೇಲ್, ಪ್ರವಾದಿ ಜೀವನಗಳಾಗಿರಬೇಕು. ಚರಿತ್ರೆ ಕಲಿತವರಿಗೆ ಅಹ್ಲ್ ಬೈತನ್ನು ನಿಂದನೆ ಮಾಡಲು ಸಾಧ್ಯವಿಲ್ಲ. ದಾರಿ ತಪ್ಪಿ ನಡೆಯುವ ಯುವಕರು ಹಿಂದಿನವರ ಬಗ್ಗೆ ಆಳವಾಗಿ ಕಲಿಯಬೇಕು. ಅವರ ತ್ಯಾಗ ಪೂರ್ಣವಾದ ಜೀವನ ಕಲಿತವರಿಗೆ ಅಧಾರ್ಮಿಕವಾಗಿ ಸಾಗಲು ಸಾಧ್ಯವಿಲ್ಲ. ದಾರಿ ತಪ್ಪುವ ಸನ್ನಿವೇಶಗಳು ಅಧಿಕವಾಗುತ್ತಿರುವ ಈ ಆಧುನಿಕ ಕಾಲದಲ್ಲಿ ಇದಕ್ಕೆ ಪರಿಹಾರ ಪ್ರವಾದಿ ವಚನಗಳು ಮಾತ್ರ ಎಂದು ಅವರು ಹೇಳಿದರು.
ಸಯ್ಯಿದ್ ಅತಾವುಳ್ಳ ತಂಙಳ್ ಉದ್ಯಾವರ ಉದ್ಘಾಟಿಸಿದರು. ಹಾಜಿ ಅಮೀರಲಿ ಚೂರಿ ಅಧ್ಯಕ್ಷತೆ ವಹಿಸಿದರು.
0 التعليقات: