Friday, 11 March 2022

ಜಮ್ಮು-ಕಾಶ್ಮೀರದಲ್ಲಿ ನಾಲ್ವರು ಉಗ್ರರ ಹತ್ಯೆ, ಓರ್ವ ಸೆರೆ


ಜಮ್ಮು-ಕಾಶ್ಮೀರದಲ್ಲಿ ನಾಲ್ವರು ಉಗ್ರರ ಹತ್ಯೆ, ಓರ್ವ ಸೆರೆ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತಾ ಪಡೆಗಳು ರಾತ್ರಿಯಿಡೀ ನಡೆಸಿದ ಕಾರ್ಯಾಚರಣೆಯಲ್ಲಿ ನಾಲ್ವರು ಭಯೋತ್ಪಾದಕರು ಹತರಾಗಿದ್ದಾರೆ ಹಾಗೂ  ಒಬ್ಬನನ್ನು ಸೆರೆಹಿಡಿಯಲಾಗಿದೆ ಎಂದು NDTV ವರದಿ ಮಾಡಿದೆ.

ಭದ್ರತಾ ಪಡೆಗಳ ಜಂಟಿ ಪಡೆಗಳು ರಾತ್ರಿಯಿಡೀ ಏಕಕಾಲದಲ್ಲಿ ಐದು ಕಾರ್ಯಾಚರಣೆ ಗಳನ್ನು ಆರಂಭಿಸಿದವು, ಇದರಲ್ಲಿ ಪುಲ್ವಾಮಾ, ಗಂದರ್ಬಾಲ್ ಮತ್ತು ಹಂದ್ವಾರ ಮೂರು ಜಿಲ್ಲೆಗಳಲ್ಲಿ ನಾಲ್ವರು ಭಯೋತ್ಪಾದಕರನ್ನು ಕೊಲ್ಲಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

"ನಾವು ನಿನ್ನೆ ರಾತ್ರಿ 4-5 ಸ್ಥಳಗಳಲ್ಲಿ ಜಂಟಿ ಕಾರ್ಯಾಚರಣೆಯನ್ನು ಆರಂಭಿಸಿದ್ದೇವೆ. ಇದುವರೆಗೆ ಪುಲ್ವಾಮಾದಲ್ಲಿ ಒಬ್ಬ ಪಾಕಿಸ್ತಾನಿ ಸೇರಿದಂತೆ ಜೆಇಎಂನ ಇಬ್ಬರು ಭಯೋತ್ಪಾದಕರು ಕೊಲ್ಲಲ್ಪಟ್ಟರು. ಗಂದರ್ಬಲ್ ಮತ್ತು ಹಂದ್ವಾರದಲ್ಲಿ ತಲಾ ಒಬ್ಬ ಎಲ್ಇಟಿ ಭಯೋತ್ಪಾದಕನನ್ನು ಕೊಲ್ಲಲಾಯಿತು. ಹಂದ್ವಾರ ಮತ್ತು ಪುಲ್ವಾಮಾದಲ್ಲಿ ಎನ್‌ಕೌಂಟರ್‌ಗಳು ಕೊನೆಗೊಂಡಿದೆ. ಓರ್ವ ಭಯೋತ್ಪಾದಕನನ್ನು ಬಂಧಿಸಲಾಗಿದೆ " ಎಂದು ಕಾಶ್ಮೀರದ ಪೊಲೀಸ್ ಮಹಾನಿರೀಕ್ಷಕ ವಿಜಯ್ ಕುಮಾರ್ ಅವರನ್ನು ಉಲ್ಲೇಖಿಸಿ ಕಾಶ್ಮೀರ ವಲಯ ಪೊಲೀಸರು ಟ್ವೀಟ್ ಮಾಡಿದ್ದಾರೆ.


 


SHARE THIS

Author:

0 التعليقات: