Monday, 21 March 2022

ಮ್ಯಾನ್ಮಾರ್ ನಲ್ಲಿ ರೊಹಿಂಗ್ಯಾ ಮುಸ್ಲಿಮರ ಮೇಲಿನ ಹಿಂಸಾಚಾರವನ್ನು ʼನರಮೇಧʼ ಎಂದು ಘೋಷಿಸಲಿರುವ ಅಮೆರಿಕಾ


 ಮ್ಯಾನ್ಮಾರ್ ನಲ್ಲಿ ರೊಹಿಂಗ್ಯಾ ಮುಸ್ಲಿಮರ ಮೇಲಿನ ಹಿಂಸಾಚಾರವನ್ನು ʼನರಮೇಧʼ ಎಂದು ಘೋಷಿಸಲಿರುವ ಅಮೆರಿಕಾ

ವಾಷಿಂಗ್ಟನ್ : ಮ್ಯಾನ್ಮಾರ್‍ನಲ್ಲಿ ಅಲ್ಲಿನ ರೋಹಿಂಗ್ಯ ಮುಸ್ಲಿಂ ಸಮುದಾಯದ ಮೇಲೆ ಕಳೆದ ಹಲವಾರು ವರ್ಷಗಳಿಂದ ನಡೆಯುತ್ತಿರುವ ದಬ್ಬಾಳಿಕೆ ಹಾಗೂ ದೌರ್ಜನ್ಯವನ್ನು ʼನರಮೇಧ' ಎಂದು ಘೋಷಿಸಲು ಅಮೆರಿಕಾದ ಜೋ ಬೈಡೆನ್ ಸರಕಾರ ಚಿಂತಿಸುತ್ತಿದೆ ಎಂದು ಅಮೆರಿಕಾದ ಸೆಕ್ರಟರಿ ಆಪ್ ಸ್ಟೇಟ್ ಆಂಟನಿ ಬ್ಲಿಂಕೆನ್ ಹೇಳಿದ್ದಾರೆ. ಇಂದು ದೇಶದ ಹೊಲೊಕಾಸ್ಟ್ ಸ್ಮಾರಕ ಮ್ಯೂಸಿಯಂನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಅವರು ಈ ಘೋಷಣೆ ಮಾಡಲಿದ್ದಾರೆಂಬ ಮಾಹಿತಿಯಿದೆ.

ಮ್ಯಾನ್ಮಾರ್ ನ ದಕ್ಷಿಣ ರಾಖೀನ್ ರಾಜ್ಯದಲ್ಲಿ ರೋಹಿಂಗ್ಯನ್ನರ ಮೇಲೆ ದಬ್ಬಾಳಿಕೆ 2017ರಲ್ಲಿ ಆರಂಭಗೊಂಡಂದಿನಿಂದ ಅಮೆರಿಕಾ ಆ ದೇಶದ ಮೇಲೆ ಹಲವಾರು ನಿರ್ಬಂಧಗಳನ್ನು ಹೇರಿದೆ. ಈಗ ಈ ದಬ್ಬಾಳಿಕೆಯನ್ನು ನರಮೇಧವೆಂದು ಘೋಷಿಸಿದ ತಕ್ಷಣ ಮತ್ತೆ ಯಾವುದೇ ಕಠಿಣ ನಿರ್ಬಂಧಗಳನ್ನು ಮ್ಯಾನ್ಮಾರ್ ಮೇಲೆ ಹೇರಲಾಗುವ ಸುಳಿವು ಇಲ್ಲವಾದರೂ ಈಗಾಗಲೇ ಅಂತಾರಾಷ್ಟ್ರೀಯ  ನ್ಯಾಯಾಲಯದಲ್ಲಿ ಹೇಗ್ ಮಾನವ ಹಕ್ಕು ಸಂಘಟನೆಗಳು ಮತ್ತಿತರ ನಾಯಕರು ಮ್ಯಾನ್ಮಾರ್ ಮೇಲೆ ನರಮೇಧದ ಆರೋಪ ಹೊರಿಸಿರುವ ನಡುವೆ ಅಮೆರಿಕಾ ಮಾಡಲಿರುವ ಘೋಷನೆ ಮ್ಯಾನ್ಮಾರ್ ಮೇಲೆ ಇನ್ನಷ್ಟು ಅಂತರಾಷ್ಟ್ರೀಯ ಒತ್ತಡ ಸೃಷ್ಟಿಸಲಿದೆ.

ಇದೀಗ ಅಮೆರಿಕಾದ ನಿರ್ಧಾರವನ್ನು ರಿಫ್ಯೂಜೀಸ್ ಇಂಟರ್‍ನ್ಯಾಷನಲ್ ಸಹಿತ ಹಲವು ಸಂಘಟನೆಗಳು ಸ್ವಾಗತಿಸಿವೆ.

ಆಗಸ್ಟ್ 2017ರಿಂದೀಚೆಗೆ ಸುಮಾರು 7 ಲಕ್ಷಕ್ಕೂ ಅಧಿಕ ರೋಹಿಂಗ್ಯ ಮುಸ್ಲಿಮರು ಮ್ಯಾನ್ಮಾರ್‍ನಲ್ಲಿನ ಹಿಂಸಾಚಾರವನ್ನು ತಡೆಯಲಾರದೆ ದೇಶ ಬಿಟ್ಟು ಪಲಾಯನಗೈದಿದ್ದಾರೆ.


SHARE THIS

Author:

0 التعليقات: