Wednesday, 9 March 2022

ಮೇಲ್ಪರಂಬ: ಮೀನು ಸಾಗಾಟದ ಟೆಂಪೋ ಢಿಕ್ಕಿ: ಬೈಕ್ ಸವಾರರಿಬ್ಬರು ಮೃತ್ಯು

 

ಮೇಲ್ಪರಂಬ: ಮೀನು ಸಾಗಾಟದ ಟೆಂಪೋ ಢಿಕ್ಕಿ: ಬೈಕ್ ಸವಾರರಿಬ್ಬರು ಮೃತ್ಯು

ಕಾಸರಗೋಡು: ಬೈಕ್ ಮತ್ತು ಟೆಂಪೋ ನಡುವೆ ಉಂಟಾದ ಅಪಘಾತದಲ್ಲಿ ಇಬ್ಬರು ಯುವಕರು ಮೃತಪಟ್ಟ ಘಟನೆ  ಬುಧವಾರ ರಾತ್ರಿ ಮೇಲ್ಪರಂಬ ಠಾಣಾ ವ್ಯಾಪ್ತಿಯ ಕಳ್ನಾಡ್ ಪೇಟೆ ಎಂಬಲ್ಲಿ ನಡೆದಿದೆ.

ಪೆರಿಯ  ನಡುವೆಟ್ಟುಪಾರ ನಿವಾಸಿ ಎನ್.ಎ.ಪ್ರಜೀಶ್ (21) ಮತ್ತು ಪಳ್ಳಿಕೆರೆ ಸಿ.ಎಚ್.ನಗರದ ಅನಿಲ್( 24) ಎಂಬವರು ಮೃತಪಟ್ಟವರು.

ಕಳೆದ ರಾತ್ರಿ ಹತ್ತು ಗಂಟೆ ಸುಮಾರಿಗೆ ಕಳ್ನಾಡ್ ಪೇಟೆಯ ಸಮೀಪ ಈ ಅಪಘಾತ ನಡೆದಿದ್ದು, ಇವರು ಸಂಚರಿಸುತ್ತಿದ್ದ ಬೈಕಿಗೆ  ಕಾಸರಗೋಡು ಕಡೆಯಿಂದ ಕಾಞ೦ಗಾಡ್ ನತ್ತ ಮೀನು ಹೇರಿಕೊಂಡು ತೆರಳುತ್ತಿದ್ದ ಟೆಂಪೋ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ.

ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಅನಿಲ್ ಸ್ಥಳದಲ್ಲೇ ಮೃತಪಟ್ಟಿದ್ದರೆ, ಪ್ರಜೀಶ್ ಕಾಸರಗೋಡು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಅನಿಲ್  ರೂಫಿಂಗ್ ಕಾರ್ಮಿಕರಾಗಿದ್ದರೆ, ಪ್ರಜೀಶ್  ಪೈಂಟಿಂಗ್ ಕಾರ್ಮಿಕರಾಗಿದ್ದರು.

ಅಪಘಾತದ ಬಳಿಕ ಈ ರಸ್ತೆಯಲ್ಲಿ ಹಲವು ಸಮಯ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಮೇಲ್ಪರಂಬ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.


SHARE THIS

Author:

0 التعليقات: