Sunday, 20 March 2022

ಹಿಜಾಬ್ ತೀರ್ಪು ನೀಡಿದ ಹೈಕೋರ್ಟ್ ನ್ಯಾಯಾಧೀಶರುಗಳಿಗೆ ವೈ ಕೆಟಗರಿ ಭದ್ರತೆ: ಸಿಎಂ ಬೊಮ್ಮಾಯಿ


 ಹಿಜಾಬ್ ತೀರ್ಪು ನೀಡಿದ ಹೈಕೋರ್ಟ್ ನ್ಯಾಯಾಧೀಶರುಗಳಿಗೆ ವೈ ಕೆಟಗರಿ ಭದ್ರತೆ: ಸಿಎಂ ಬೊಮ್ಮಾಯಿ

ಬೆಂಗಳೂರು: ಹಿಜಾಬ್ ತೀರ್ಪು ಪ್ರಕಟಿಸಿದ ರಾಜ್ಯ ಹೈಕೋರ್ಟ್‌ ನ್ಯಾಯಾಧೀಶರುಗಳಿಗೆ ತಮಿಳುನಾಡಿನಲ್ಲಿ ಕೊಲೆ ಬೆದರಿಕೆ ಹಾಕಿರುವ ಹಿನ್ನೆಲೆಯಲ್ಲಿ ನ್ಯಾಯಾಧೀಶರುಗಳಿಗೆ ವೈ ಕೆಟಗರಿ ಭದ್ರತೆ ನೀಡಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಇಂದು ಬೆಂಗಳೂರಿನ ತಮ್ಮ ಆರ್.ಟಿ.ನಗರ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನ್ಯಾಯಮೂರ್ತಿಗಳಿಗೆ ತಮಿಳುನಾಡಿನಲ್ಲಿ ಕೊಲೆ ಬೆದರಿಕೆ ಹಾಕಿರುವ ವಿಷಯವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ನ್ಯಾಯಾಧೀಶರಿಗೆ ಜೀವ ಬೆದರಿಕೆ ಕುರಿತು ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ದೂರಿನ ಬಗ್ಗೆ ಕೂಡಲೇ ಕೂಲಂಕುಷವಾಗಿ ತನಿಖೆ ನಡೆಸುವಂತೆ ಡಿಜಿ ಮತ್ತು ಐಜಿಗೆ ಆದೇಶಿಸಿದ್ದೇನೆ ಎಂದು ಹೇಳಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿ ತಮಿಳುನಾಡಿನಲ್ಲಿ ಬಂಧಿತ ಇಬ್ಬರನ್ನು ವಶಕ್ಕೆ ಪಡೆದು ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಡಿಜಿ ಮತ್ತು ಐಜಿಗೆ ಆದೇಶಿಸಿದ್ದೇನೆ ಎಂದು ಸಿಎಂ ಹೇಳಿದರು.

ಈ ರೀತಿಯ ಬೆದರಿಕೆಯ ಮೂಲಕ ಕೆಲವು ದೇಶದ್ರೋಹಿ ಶಕ್ತಿಗಳು ಈ ದೇಶದ ವ್ಯವ್ಯಸ್ಥೆಗೆ ಸವಾಲು ಹಾಕುವ ಪ್ರಯತ್ನ ಮಾಡಿವೆ. ಹಿಂದೆಂದೂ ಈ ರೀತಿ ಆಗಿರಲಿಲ್ಲ. ನ್ಯಾಯಾಂಗದ ತೀಪನ್ನು ಎಲ್ಲರೂ ಒಪ್ಪಬೇಕಿದೆ. ಅಲ್ಲದೆ, ತೀರ್ಪು ಸ್ವೀಕಾರಾರ್ಹವಲ್ಲದೆ ಇದ್ದರೆ ಮೇಲ್ಮನವಿ ಸಲ್ಲಿಸುವ ವ್ಯವಸ್ಥೆ ಇದೆ. ಹೀಗಿದ್ದರೂ ವಿಚ್ಛಿದ್ರ ಶಕ್ರಿಗಳು ಈ ರೀತಿಯ ಹೇಳಿಕೆ ಕೊಟ್ಟು ಜನರನ್ನು ಬಡಿದೆಬ್ಬಿಸಿ ಈ ವ್ಯವಸ್ಥೆಯ ವಿರುದ್ಧ ಎತ್ತಿ ಕಟ್ಟುತ್ತಿದ್ದಾರೆ. ಅಂಥ ಶಕ್ತಿಗಳನ್ನು ಸಹಿಸುವುದಿಲ್ಲ. ದಮನ ಮಾಡಬೇಕಾಗುತ್ತದೆ ಎಂದರು.

ಜಾತ್ಯತೀತರೆನ್ನುವವರು ಏಕೆ ಮೌನ?

 ‘ನ್ಯಾಯಾಧೀಶರಿಗೆ ಜೀವ ಬೆದರಿಕೆ ಪ್ರಕರಣದ ಬಗ್ಗೆ ಜಾತ್ಯತೀತರು ಎಂದು ಹೇಳಿಕೊಳ್ಳುವವರು ಯಾಕೆ ಮೌನವಾಗಿದ್ದಾರೆ ಎಂದು ಮುಖ್ಯಮಂತ್ರಿ ಆಕ್ರೋಶ ವ್ಯಕ್ತಪಡಿಸಿದರು.

ಘಟನೆ ನಡೆದು 3–4 ದಿನವಾದರೂ ಮೌನವಾಗಿದ್ದಾರೆ. ನ್ಯಾಯಮೂರ್ತಿಗಳಿಗೆ ಅಪಘಾತದಂಥ ಘಟನೆಯಾದರೆ ನಾವು ಹೊಣೆಯಲ್ಲ ಎಂದು ಕೊಲೆ ಬೆದರಿಕೆ ಒಡ್ಡಿರುವ ಆರೋಪಿಗಳು ಸುಳಿವು ನೀಡಿದ್ದಾರೆ. ಹೀಗಿದ್ದರೂ ಜಾತ್ಯತೀತವಾದಿಗಳು ಮೌನವಹಿಸಿದ್ದಾರೆ. ಬೇರೆ ವಿಷಯದಲ್ಲಿ ದೊಡ್ಡ ಕೂಗು ಹಾಕುವ ನೀವು, ಒಂದು ವರ್ಗದ ಜರನ್ನು ಇಷ್ಟು ಓಲೈಸುವುದು ನಿಜವಾದ ಸೆಕ್ಯುಲರಿಸಂ ಅಲ್ಲ, ಇದು ಕಮ್ಯುನಿಸಂ ಎಂದೂ ವಿರೋಧ ಪಕ್ಷಗಳ ಹೆಸರು ಹೇಳದೆ ಮುಖ್ಯಮಂತ್ರಿ ಹೇಳಿದರು.


SHARE THIS

Author:

0 التعليقات: