Friday, 18 March 2022

“ದಿ ಕಾಶ್ಮೀರ್ ಫೈಲ್ಸ್’’ಚಲನಚಿತ್ರದಲ್ಲಿ ಅನೇಕ ಸುಳ್ಳುಗಳನ್ನು ಬಿಂಬಿಸಲಾಗಿದೆ: ಉಮರ್ ಅಬ್ದುಲ್ಲಾ


 “ದಿ ಕಾಶ್ಮೀರ್ ಫೈಲ್ಸ್’’ಚಲನಚಿತ್ರದಲ್ಲಿ ಅನೇಕ ಸುಳ್ಳುಗಳನ್ನು ಬಿಂಬಿಸಲಾಗಿದೆ: ಉಮರ್ ಅಬ್ದುಲ್ಲಾ

ಶ್ರೀನಗರ: “ದಿ ಕಾಶ್ಮೀರ್ ಫೈಲ್ಸ್’’ಚಲನಚಿತ್ರದಲ್ಲಿ ಅನೇಕ ಸುಳ್ಳುಗಳನ್ನು ಬಿಂಬಿಸಲಾಗಿದೆ" ಎಂದು ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಕಾರ್ಯಾಧ್ಯಕ್ಷ ಮತ್ತು ಜಮ್ಮು-ಕಾಶ್ಮೀರದ  ಮಾಜಿ ಮುಖ್ಯಮಂತ್ರಿ ಉಮರ್  ಅಬ್ದುಲ್ಲಾ ಅವರು ಶುಕ್ರವಾರ ಹೇಳಿದ್ದಾರೆ.

ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ರ್ಯಾಲಿಯೊಂದರಲ್ಲಿ ಭಾಗವಹಿಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಉಮರ್, ದಿ ಕಾಶ್ಮೀರ್ ಫೈಲ್ಸ್’’ ಸಾಕ್ಷ್ಯಚಿತ್ರವೇ ಅಥವಾ ಚಲನಚಿತ್ರವೇ ಎಂಬುದು ಸ್ಪಷ್ಟವಾಗಿಲ್ಲ ಎಂದು ಹೇಳಿದರು.

“ಸಿನಿಮಾವು ನೈಜತೆಯನ್ನು ಆಧರಿಸಿದೆ ಎಂದು ನಿರ್ಮಾಪಕರು ಹೇಳಿದ್ದಾರೆ. ಆದರೆ ಚಿತ್ರದಲ್ಲಿ ಹಲವು ಸುಳ್ಳುಗಳನ್ನು ಬಿಂಬಿಸಲಾಗಿದೆ ಎಂಬುದು ಸತ್ಯ. ನ್ಯಾಷನಲ್ ಕಾನ್ಫರೆನ್ಸ್ ಸರಕಾರ  ಇತ್ತು ಎಂಬುದು ದೊಡ್ಡ ಸುಳ್ಳು. 1990 ರಲ್ಲಿ ಕಾಶ್ಮೀರಿ ಪಂಡಿತರು ತೊರೆದಾಗ ಜಮ್ಮು-ಕಾಶ್ಮೀರದಲ್ಲಿ  ರಾಜ್ಯಪಾಲರ ಆಳ್ವಿಕೆ ಇತ್ತು. ಕೇಂದ್ರದಲ್ಲಿ ವಿ.ಪಿ. ಸಿಂಗ್ ನೇತೃತ್ವದ ಬಿಜೆಪಿ ಬೆಂಬಲಿತ ಸರಕಾರ ಇತ್ತು'' ಎಂದು ಉಮರ್ ಹೇಳಿದರು.

"ಕಾಶ್ಮೀರಿ ಪಂಡಿತರು ಮಾತ್ರ ವಲಸೆ ಹೋಗಿರುವುದಲ್ಲ ಅಥವಾ ಕೊಲ್ಲಲ್ಲಟ್ಟವರಲ್ಲ. ಮುಸ್ಲಿಮರು ಮತ್ತು ಸಿಖ್ಖರು ಕೂಡ  ಕೊಲ್ಲಲ್ಪಟ್ಟರು.  ಅವರು ಕೂಡ ಕಾಶ್ಮೀರದಿಂದ ವಲಸೆ ಹೋಗಬೇಕಾಯಿತು ಮತ್ತು ಇನ್ನೂ ಹಿಂತಿರುಗಿಲ್ಲ" ಎಂದು ಉಮರ್  ಹೇಳಿದರು.

ಕಾಶ್ಮೀರಿ ಪಂಡಿತರನ್ನು ಸುರಕ್ಷಿತವಾಗಿ ಕರೆತರುವಲ್ಲಿ ಎನ್‌ಸಿ ತನ್ನ ಪಾತ್ರವನ್ನು ವಹಿಸಲು ಪ್ರಯತ್ನಿಸುತ್ತಿದೆ. ಪ್ರಯತ್ನ  ಮುಂದುವರಿಸಿದೆ ಎಂದು ಅವರು ಹೇಳಿದರು.


SHARE THIS

Author:

0 التعليقات: