ಎಲ್ಲ ಮುಸ್ಲಿಮರು ಕೆಟ್ಟವರಲ್ಲ, ಹಿಂದೂಗಳೆಲ್ಲರೂ ಒಳ್ಳೆಯವರಲ್ಲ: ಸಚಿವ ವಿ.ಸೋಮಣ್ಣ
ಚಾಮರಾಜನಗರ: ಎಲ್ಲ ಮುಸ್ಲಿಮರು ಕೆಟ್ಟವರಲ್ಲ, ಹಿಂದೂಗಳೆಲ್ಲರೂ ಒಳ್ಳೆಯವರಲ್ಲ ಎಂದು ಚಾಮರಾಜನಗರ ಉಸ್ತುವಾರಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.
ಕೊಳ್ಳೇಗಾಲದಲ್ಲಿಂದು 'ಕಾಶ್ಮೀರ ಫೈಲ್ಸ್' ಸಿನೆಮಾ ಕುರಿತಂತೆ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಕಾಶ್ಮೀರ ಫೈಲ್ಸ್ ಚಿತ್ರವನ್ನು ಮುಸ್ಲಿಮರೂ ನೋಡ್ತಾರೆ. ಇತಿಹಾಸದಲ್ಲಿ ನಡೆದ ಘಟನೆ ಮುಂದೆ ಪುನರಾವರ್ತನೆಯಾಗಬಾರದು ಎಂಬ ಉದ್ದೇಶದಿಂದ ಸಿನಿಮಾ ತಯಾರಾಗಿದೆ. ಇದರಲ್ಲಿ ಯಾರದೇ ಪ್ರಾಯೋಜಕತ್ವ ಇಲ್ಲ. ಎಲ್ಲ ಮುಸಲ್ಮಾನರು ಕೆಟ್ಟವರಲ್ಲ, ಎಲ್ಲ ಹಿಂದೂಗಳು ಒಳ್ಳೆಯವರಲ್ಲ ಎಂದು ಹೇಳಿದರು
ಪಠ್ಯ ಪುಸ್ತಕದಲ್ಲಿ ಭಗವದ್ಗೀತೆ ಸೇರ್ಪಡೆ ವಿಚಾರವಾಗಿ ಮಾತನಾಡಿದ ಅವರು, ಈ ವಿಚಾರವಾಗಿ ನಾನೊಬ್ಬ ಎಲ್ ಬೋರ್ಡ್. ನನಗೇನೂ ಗೊತ್ತಿಲ್ಲ. ಪಠ್ಯ ಪುಸ್ತಕ ರಚನೆಗೆ ಸಮಿತಿಯಿದೆ. ಸಮಿತಿ ಅವರು ಸೇರ್ಪಡೆ ಬಗ್ಗೆ ತೀರ್ಮಾನ ಕೈಗೊಳ್ತಾರೆ. ಮುಂದಿನ ಪೀಳಿಗೆಗೆ ಏನು ತಿಳಿಸಬೇಕು ಎಂಬುದರ ಬಗ್ಗೆ ಸಮಿತಿ ತೀರ್ಮಾನ ಮಾಡುತ್ತೆ ಎಂದು ಹೇಳಿದ್ದಾರೆ.
ವಂಶ ರಾಜಕಾರಣ ವಿಚಾರವಾಗಿ ಮಾತನಾಡಿದ ಅವರು, ಈ ಬಗ್ಗೆ ಪ್ರಧಾನಿ ಮೋದಿ ಒಳ್ಳೆಯ ಪರಿಕಲ್ಪನೆ ಜಾರಿಗೆ ತಂದಿದ್ದಾರೆ. ನನ್ನ ಮಗನಿಗೆ ಅದೃಷ್ಟ ಇದ್ದರೆ ಆತ ಶಾಸಕನಾಗುತ್ತಾನೆ. 6.5 ಕೋಟಿ ಜನರಲ್ಲಿ 224 ಮಂದಿ ಮಾತ್ರ ಶಾಸಕರಾಗುತ್ತಾರೆ. ನನ್ನ ಮಗ ಶಾಸಕನಾಗದೇ ಇದ್ದಲ್ಲಿ ಬೇಸರವಿಲ್ಲ ಎಂದಿದ್ದಾರೆ.
0 التعليقات: