Friday, 11 March 2022

ಆಧ್ಯಾತ್ಮಿಕತೆಯತ್ತ ಕೊಂಡೊಯ್ದ ರಾತೀಬ್ ಮಜ್ಲಿಸ್; ಮುಹಿಮ್ಮಾತಿಗೆ ಭಾರೀ ಜನ ಪ್ರವಾಹ.

 

ಆಧ್ಯಾತ್ಮಿಕತೆಯತ್ತ ಕೊಂಡೊಯ್ದ ರಾತೀಬ್ ಮಜ್ಲಿಸ್; ಮುಹಿಮ್ಮಾತಿಗೆ ಭಾರೀ ಜನ ಪ್ರವಾಹ.

ಕಾಸರಗೋಡು-ಕುಂಬಳೆ: ಸಯ್ಯಿದ್ ತ್ವಾಹಿರುಲ್ ಅಹ್ದಲ್ ತಂಙಳ್ ಹದಿನಾರನೇ ಉರೂಸ್ ಮುಬಾರಕ್ ಪ್ರಯುಕ್ತ ರಾತಿಬ್ ಮಜ್ಲಿಸಿನ ಆಧ್ಯಾತ್ಮಿಕ ಕಾರ್ಯಕ್ರಮ ಮಾ.12 ರಂದು ಸಂಜೆ ಮುಹಿಮ್ಮಾತ್ ಕ್ಯಾಂಪಸ್ ನಲ್ಲಿ ನಡೆಯಿತು. ಮುಹಿಮ್ಮಾತಿನಲ್ಲಿ ಎಲ್ಲಾ ವಾರವೂ ನಡೆಯುತ್ತಿರುವ ರಾತಿಬ್ ಮಜ್ಲಿಸಿನ ವಾರ್ಷಿಕ ಕೂಡ ಆಗಿತ್ತು ಇದು. ಸಯ್ಯಿದ್ ಮುಟ್ಟಂ ಕುಞ್ಞಿ ಕೋಯ ತಂಙಳ್ ರವರ  ಪ್ರಾರ್ಥನೆಯೊಂದಿಗೆ ಆರಂಭಿಸಿದ ಕಾರ್ಯಕ್ರಮಕ್ಕೆ ವೈ.ಎಂ ಅಬ್ದುರ್ರಹ್ಮಾನ್ ಅಹ್ಸನಿ ಉಸ್ತಾದ್ ನೇತೃತ್ವ ವಹಿಸಿದರು. ಅಬ್ದುಲ್ ಖಾದರ್ ಸಖಾಫಿ ಕಾಟಿಪ್ಪಾರ ಭಾಷಣ ಮಾಡಿದರು. 

    ರಾತ್ರಿ ನಡೆದ ಮತ ಪ್ರಭಾಷಣ ವೇದಿಕೆಯಲ್ಲಿ  ಸುಪ್ರಸಿದ್ಧ ಭಾಷಣಗಾರ ಅನಸ್ ಅಮಾನಿ ಪುಷ್ಪಗಿರಿ ಮುಖ್ಯ ಪ್ರಭಾಷಣ ಮಾಡಿದರು. 

     ಮಾರ್ಚ್ 13 ಆದಿತ್ಯವಾರ ಉರೂಸ್ ಸಮಾರೋಪ ಸಮಾರಂಭ ನಡೆಯುವುದರಿಂದ ಪ್ರತಿ ದಿನವೂ ಸಾವಿರಾರು ಜನರು ಮುಹಿಮ್ಮಾತ್ ಸಂದರ್ಶಿಸುತ್ತಿದ್ದಾರೆ. ಸಂದರ್ಶಕರನ್ನು ಸ್ವೀಕರಿಸಲು ಉರೂಸ್ ನಡೆಯುವ ಮುಹಿಮ್ಮಾತ್ ಕ್ಯಾಂಪಸ್ ನಲ್ಲಿ ವಿಶಾಲವಾದ ಸೌಕರ್ಯ ಏರ್ಪಡಿಸಲಾಗಿದೆ. ಎಲ್ಲಾ ಸಮಯದಲ್ಲೂ ತಂಪು ಪಾನಿಯ, ಸಂಜೆ ಚಹಾ ಮತ್ತು ತಿಂಡಿ, ಊಟ ಮುಂತಾದ ಎಲ್ಲಾ ಸೌಕರ್ಯಗಳು ಉರೂಸ್ ಮುಬಾರಕಿಗೆ ಆಗಮಿಸುವವರನ್ನು ಸಂತೋಷ ಪಡಿಸುತ್ತಿದೆ.
SHARE THIS

Author:

0 التعليقات: