ಕೆಲವೇ ಗಂಟೆಗಳಲ್ಲಿ ಪಿಸೋಚಿನ್, ಖಾರ್ಕಿವ್ ನಗರದಲ್ಲಿ ಸಿಲುಕಿರುವ ಭಾರತೀಯರ ಸ್ಥಳಾಂತರ: ಸರ್ಕಾರ ಭರವಸೆ
ಹೊಸದಿಲ್ಲಿ: ಉಕ್ರೇನ್ನ ಪಿಸೋಚಿನ್ ಮತ್ತು ಖಾರ್ಕಿವ್ನಲ್ಲಿ ಸಿಲುಕಿರುವ ಎಲ್ಲಾ ಭಾರತೀಯರನ್ನು ಮುಂದಿನ ಕೆಲವೇ ಗಂಟೆಗಳಲ್ಲಿ ಸ್ಥಳಾಂತರಿಸಲಾಗುವುದು ಎಂದು ಸರ್ಕಾರ ತಿಳಿಸಿದೆ.
ಮೂರು ಬಸ್ಗಳು ಪಿಸೊಚಿನ್ ಪಟ್ಟಣಕ್ಕೆ ತಲುಪಿವೆ, ಹಾಗೂ ಅದು ಶೀಘ್ರದಲ್ಲೇ ಪಶ್ಚಿಮ ಉಕ್ರೇನ್ಗೆ ತೆರಳಲಿವೆ, ಅಲ್ಲಿಂದ ಯುದ್ಧಭೂಮಿಯಲ್ಲಿ ಸಿಲುಕಿದ ವಿದ್ಯಾರ್ಥಿಗಳನ್ನು ಹೊತ್ತು ಬರಲಿದೆ ಎಂದು ವಿದೇಶಾಂಗ ಸಚಿವಾಲಯ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದೆ.
ರಷ್ಯಾದ ಮತ್ತು ಉಕ್ರೇನಿಯನ್ ಸಂಘರ್ಷದ ವಲಯಗಳಲ್ಲಿ ಒಂದಾದ ಪೂರ್ವ ಉಕ್ರೇನಿಯನ್ ನಗರ ಸುಮಿಯಲ್ಲಿ ನೂರಾರು ವಿದ್ಯಾರ್ಥಿಗಳು ಸಿಲುಕಿಕೊಂಡಿರುವ ಹಿನ್ನೆಲೆಯಲ್ಲಿ ಸರ್ಕಾರದ ಹೇಳಿಕೆ ಬಂದಿದೆ.
ಶೆಲ್ ದಾಳಿ, ಹಿಂಸಾಚಾರ ಮತ್ತು ಸಾರಿಗೆ ಕೊರತೆ ಸುಮಿಯಿಂದ ಭಾರತೀಯರನ್ನು ಸ್ಥಳಾಂತರಿಸುವಲ್ಲಿ ಪ್ರಮುಖ ಸವಾಲುಗಳಾಗಿವೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಹೇಳಿದ್ದಾರೆ.
0 التعليقات: