ಬುರ್ದ ಮಜ್ಲಿಸಿನ ಆಧ್ಯಾತ್ಮಿಕ ಕಾರ್ಯಕ್ರಮದೊಂದಿಗೆ ಅಹ್ದಲ್ ತಂಙಳ್ ಉರೂಸ್ ಮುಬಾರಕಿನ ಎರಡನೇ ದಿನ
ಕಾಸರಗೋಡು: ಮುಹಿಮ್ಮಾತ್ ಸ್ಥಾಪಕ ಸಯ್ಯಿದ್ ತ್ವಾಹಿರುಲ್ ಅಹ್ದಲ್ ತಂಙಳ್ ರವರ ಉರೂಸ್ ಮುಬಾರಕಿನ ಎರಡನೇ ದಿನ ಖಸೀದತುಲ್ ಬುರ್ದಾದ ವಾರ್ಷಿಕ ನಡೆಯಿತು. ಪ್ರವಾದಿ ಪ್ರಕೀರ್ತನೆಯ ಆಧ್ಯಾತ್ಮಿಕತೆಯಲ್ಲಿ ಯಶಸ್ವಿಯಾದ ಬುರ್ದಾ ಮಜ್ಲಿಸ್ ಪ್ರವಾದಿಯವರೊಂದಿಗಿನ ಪ್ರೀತಿಗೆ ಕಾರಣವಾಯಿತು.
ಬುರ್ದಾ ಮಜ್ಲಿಸಿಗೆ ಸಯ್ಯಿದ್ ಹಾಮಿದ್ ಅನ್ವರ್ ಅಹ್ದಲ್ ತಂಙಳ್, ಬಿ.ಎಸ್ ಅಬ್ದುಲ್ಲಾ ಕುಂಞಿ ಫೈಝಿ , ಮೂಸ ಸಖಾಫಿ ಕಳತ್ತೂರು, ಸಯ್ಯಿದ್ ಜುನೈದ್ ಅಲ್ ಹಾದಿ ಹಿಮಮಿ, ಅಶ್ರಫ್ ಹಿಮಮಿ ಉಳುವಾರ್ ಮುಂತಾದವರು ನೇತೃತ್ವ ವಹಿಸಿದರು. ಅಬ್ಬಾಸ್ ಸಖಾಫಿ ಕಾವುಂಪುರಂ ಭಾಷಣ ಮಾಡಿದರು. ಮುನೀರ್ ಹಿಮಮಿ ಮಾಣಿಮೂಲ, ಮೊಯ್ದು ಹಿಮಮಿ ಚೇರೂರ್, ಬಶೀರ್ ಹಿಮಮಿ ಪೆರುಂಬಳ, ಎ.ಕೆ.ಜಿ ನಗರ್, ಝುಬೈರ್ ಬಾಡೂರ್, ಲತೀಫ್ ಕಳತ್ತೂರ್, ನಝೀರ್ ಹಿಮಮಿ ಶಾಂತಿಪ್ಪಳ್ಳ, ಸಿದ್ದೀಕ್ ಪೂತಪ್ಪಲಂ, ಬಶೀರ್ ಸಅದಿ ಉಪ್ಪಿನ ಮುಂತಾದವರು ಭಾಗವಹಿಸಿದರು.
ವಿವಿಧ ಉಸ್ತಾದರುಗಳ ನೇತೃತ್ವದಲ್ಲಿ ಬೆಳಗ್ಗಿನಿಂದ ನಡೆಯುತ್ತಿರುವ ಝಿಯಾರತ್ ಗಳು, ಹಾಫಿಳ್ ಗಳ ನೇತೃತ್ವದಲ್ಲಿ ನಡೆಯುತ್ತಿರುವ ಖತ್ಮುಲ್ ಕುರ್ಆನ್ ಮಜ್ಲಿಸ್, ಪ್ರಾರ್ಥನಾ ಮಜ್ಲಿಸ್ ಗಳು ಮುಂತಾದ ಉರೂಸಿನ ಕಾರ್ಯಕ್ರಮಗಳಲ್ಲಿ ಹತ್ತಿರದ ಹಲವಾರು ಮೊಹಲ್ಲಾಗಳ ಕಾರ್ಯಕರ್ತರ ಮತ್ತು ಸಾಮಾನ್ಯ ಜನರ ಸೇವೆ ಅಭಿನಂದನಾರ್ಹವಾದದ್ದು.
ಉರೂಸಿನ ಮೊದಲ ಎರಡು ದಿನಗಳಲ್ಲಿ ಪ್ರಸಿದ್ಧ ಧಾರ್ಮಿಕ ವಿದ್ವಾಂಸರ ಮತ ಪ್ರಭಾಷಣ ಆಲಿಸಲು ಊರಿನ ವಿವಿಧೆಡೆಗಳಿಂದ ಸಹಸ್ರಾರು ವಿಶ್ವಾಸಿಗಳು ಮುಹಿಮ್ಮಾತ್ ಉರೂಸ್ ಕಾರ್ಯಕ್ರಮಕ್ಕೆ ತಲುಪಿದ್ದರು.
0 التعليقات: