ಎಸ್ಸೆಸ್ಸೆಫ್ ದ.ಕ.ಜಿಲ್ಲಾ ಈಸ್ಟ್: ವಾರ್ಷಿಕ ಅವಲೋಕನ ಸಭೆ
ವಿಟ್ಲ: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ (ರಿ.) ಎಸ್ಸೆಸ್ಸೆಫ್ ದ.ಕ.ಜಿಲ್ಲಾ (ಈಸ್ಟ್) ವಾರ್ಷಿಕ ಅವಲೋಕನ ಸಭೆಯು ಅಧ್ಯಕ್ಷರಾದ ಇಬ್ರಾಹಿಂ ಅಮ್ಜದಿ ಯವರ ಅಧ್ಯಕ್ಷತೆಯಲ್ಲಿ ದಾರನ್ನಾಜಾತ್ ಎಜುಕೇಶನ್ ಸೆಂಟರ್ ಟಿಪ್ಪು ನಗರ ಕೊಡುಂಗಾಯಿಯಲ್ಲಿ ನಡೆಯಿತು.
ಎಸ್.ವೈ.ಎಸ್ ನಾಯಕ ಸಲೀಂ ಹಾಜಿ ಬೈರಿಕಟ್ಟೆ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಅಲೀ ತುರ್ಕಲಿಕೆ ವರದಿಯನ್ನು ಮಂಡಿಸಿದರು. ವಿಭಾಗವಾರು ವರದಿಯನ್ನು ಅಯಾ ವಿಭಾಗದ 7 ಕಾರ್ಯದರ್ಶಿಗಳು ಮಂಡಿಸಿದರು.
ಕೋಶಾಧಿಕಾರಿ ಎಂ.ಶರೀಫ್ ಬೆರ್ಕಳ ಲೆಕ್ಕಪತ್ರವನ್ನು ಮಂಡಿಸಿದರು.
ದಾರನ್ನಾಜಾತ್ ಎಜುಕೇಶನ್ ಸೆಂಟರ್ ಮ್ಯಾನೇಜರ್ ಹಮೀದ್ ಹಾಜಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು.
ಎಸ್ ವೈ ಎಸ್ ರಾಜ್ಯ ನಾಯಕರಾದ ಜಿ.ಎಂ ಕಾಮಿಲ್ ಸಖಾಫಿ ಸಾಂಘಿಕ ತರಗತಿಯನ್ನು ನಡೆಸಿದರು. ಎಸ್ಸೆಸ್ಸೆಪ್ ರಾಜ್ಯ ವಿಸ್ಡಂ ಕಾರ್ಯದರ್ಶಿ ರಹೀಂ ಹೊಸ್ಮಾರ್ ಸಭೆಯ ವೀಕ್ಷಕರಾಗಿದ್ದರು.
ಅಧ್ಯಕ್ಷರಾಗಿ ಇಬ್ರಾಹಿಂ ಅಮ್ಜದಿ, ಪ್ರ.ಕಾರ್ಯದರ್ಶಿಯಾಗಿ ಶಫೀಕ್ ಮಾಸ್ಟರ್ ಪುತ್ತೂರು, ಕೋಶಾಧಿಕಾರಿಯಾಗಿ ಸಿದ್ದೀಕ್ ಸುಳ್ಯ, ಕಾರ್ಯದರ್ಶಿಗಳಾಗಿ ಇಕ್ಬಾಲ್ ಮಾಚಾರ್, ಹಕೀಂ ಕಳಂಜಿಬೈಲ್ ,ರಶೀದ್ ಮಡಂತ್ಯಾರ್,ರಝಾಕ್ ಸಅದಿ,ಶರೀಪ್ ನಾವೂರು, ಮಸ್ಹೂದ್ ಸಅದಿ,ಪೈಝಲ್ ಝುಹ್ರಿ ಸುಳ್ಯ,ಅಶ್ಪಾಖ್ ಕೊಡುಂಗಾಯಿ,ಮಸ್ತಫ ಉರುವಾಲುಪದವು,ಹಾಗೂ 14 ಕಾರ್ಯಕಾರಿಣಿ ಸಮಿತಿ ಸದಸ್ಯರನ್ನು ಆಯ್ಕೆಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ಮುಹಮ್ಮದ್ ಮುಸ್ಲಿಯಾರ್ ಗೌರವಾದ್ಯಕ್ಷರು ದಾರನ್ನಾಜಾತ್ ಎಜುಕೇಶನ್ ಸೆಂಟರ್,ಇಬ್ರಾಹಿಂ ಮುಸ್ಲಿಯಾರ್, ಜಿಲ್ಲಾ ವ್ಯಾಪ್ತಿಯ 5 ಡಿವಿಷನ್ ಗಳಿಂದ ಆಯ್ಕೆಯಾದ ಕೌನ್ಸಿಲರ್ಗಳು ಉಪಸ್ಥಿತರಿದ್ದರು.
ಪ್ರ. ಕಾರ್ಯದರ್ಶಿ ಮುಹಮ್ಮದ್ ಅಲಿ ತುರ್ಕಳಿ ಸ್ವಾಗತಿಸಿ ನೂತನ ಕಾರ್ಯದರ್ಶಿ ಶಫೀಕ್ ಪುತ್ತೂರು ಕೊನೆಯಲ್ಲಿ ವಂದಿಸಿದರು.
0 التعليقات: