Thursday, 10 March 2022

ಗೋವಾ: ಮೂವರು ಪಕ್ಷೇತರರ ಬೆಂಬಲವಿದೆ ಎಂದ ಬಿಜೆಪಿ, ಇಂದು ಸಂಜೆ ರಾಜ್ಯಪಾಲರ ಭೇಟಿಗೆ ನಿರ್ಧಾರ


 ಗೋವಾ: ಮೂವರು ಪಕ್ಷೇತರರ ಬೆಂಬಲವಿದೆ ಎಂದ ಬಿಜೆಪಿ, ಇಂದು ಸಂಜೆ ರಾಜ್ಯಪಾಲರ ಭೇಟಿಗೆ ನಿರ್ಧಾರ

ಹೊಸದಿಲ್ಲಿ: ಸರಕಾರ ರಚನೆಗೆ ಹಕ್ಕು ಮಂಡಿಸಲು ಗುರುವಾರ  ಸಂಜೆ ರಾಜ್ಯಪಾಲರನ್ನು ಭೇಟಿ ಮಾಡುವುದಾಗಿ ಗೋವಾ ಬಿಜೆಪಿ ಹೇಳಿದೆ.

 ಗೋವಾ ಚುನಾವಣಾ ಫಲಿತಾಂಶದ ಆರಂಭಿಕ ಟ್ರೆಂಡ್‌ಗಳ ಪ್ರಕಾರ 40 ಸದಸ್ಯ ಬಲದ ವಿಧಾನಸಭೆಯಲ್ಲಿ ಬಿಜೆಪಿ 18 ಸ್ಥಾನಗಳಲ್ಲಿ ಮುನ್ನಡೆಯಲ್ಲಿದ್ದು, ಕಾಂಗ್ರೆಸ್ 10 ಸ್ಥಾನಗಳಲ್ಲಿ ಹಿನ್ನಡೆಯಲ್ಲಿದೆ. ಬಿಜೆಪಿ ತನಗೆ ಮೂವರು ಪಕ್ಷೇತರ ಅಭ್ಯರ್ಥಿಗಳ ಬೆಂಬಲವಿದೆ ಎಂದು ಹೇಳಿಕೊಂಡಿದೆ. ಆರಂಭಿಕ ಟ್ರೆಂಡ್ ನಲ್ಲಿ ಮೂವರು ಪಕ್ಷೇತರ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದಾರೆ.

ಸರಕಾರ ರಚನೆಯಲ್ಲಿ ಪ್ರಮುಖವಾಗಬಹುದಾದ ಮಹಾರಾಷ್ಟ್ರವಾದಿ ಗೋಮಾಂತಕ್ ಪಾರ್ಟಿ (ಎಂಜಿಪಿ) ಮೂರು ಸ್ಥಾನಗಳಲ್ಲಿ ಮುಂದಿದೆ. ಗೋವಾ ಫಾರ್ವರ್ಡ್ ಪಾರ್ಟಿ (ಜಿಎಫ್‌ಪಿ) 1 ಸ್ಥಾನದಲ್ಲಿ ಹಾಗೂ  ಆಮ್ ಆದ್ಮಿ ಪಕ್ಷ (ಎಎಪಿ) 2 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.


SHARE THIS

Author:

0 التعليقات: