Saturday, 5 March 2022

ಮೊದಲ ಟೆಸ್ಟ್: ರವೀಂದ್ರ ಜಡೇಜ ಭರ್ಜರಿ ಶತಕ, ಭಾರತ 574 ರನ್ ಗಳಿಸಿ ಇನಿಂಗ್ಸ್ ಡಿಕ್ಲೇರ್


 ಮೊದಲ ಟೆಸ್ಟ್: ರವೀಂದ್ರ ಜಡೇಜ ಭರ್ಜರಿ ಶತಕ, ಭಾರತ 574 ರನ್ ಗಳಿಸಿ ಇನಿಂಗ್ಸ್ ಡಿಕ್ಲೇರ್

ಮೊಹಾಲಿ: ಆಲ್ ರೌಂಡರ್ ರವೀಂದ್ರ ಜಡೇಜ ಭರ್ಜರಿ ಶತಕದ ಸಹಾಯದಿಂದ ಭಾರತ ಕ್ರಿಕೆಟ್ ತಂಡ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ 8 ವಿಕೆಟ್ ನಷ್ಟಕ್ಕೆ 574 ರನ್ ಗಳಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿದೆ.  

 2ನೇ ದಿನವಾದ ಶನಿವಾರ 6 ವಿಕೆಟ್ ನಷ್ಟಕ್ಕೆ 357 ರನ್ ನಿಂದ ಮೊದಲ ಇನಿಂಗ್ಸ್ ಮುಂದುವರಿಸಿದ ಭಾರತ 129.2 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 574 ರನ್ ಗಳಿಸಿತು. ಜಡೇಜ (175 ರನ್ ,228 ಎಸೆತ, 17 ಬೌಂಡರಿ, 3 ಸಿಕ್ಸರ್) ಹಾಗೂ ಮುಹಮ್ಮದ್ ಶಮಿ(20, 34 ಎಸೆತ)  ಔಟಾಗದೆ ಉಳಿದರು.

ಲಂಕಾದ ಪರ ಸುರಂಗ ಲಕ್ಮಲ್(2-90), ಲಸಿತ್ ಎಂಬುಲ್ಡೇನಿಯ(2-188) ಹಾಗೂ ವಿಶ್ವ ಫೆರ್ನಾಂಡೊ(2-135) ತಲಾ 2 ವಿಕೆಟ್ ಪಡೆದರು.


SHARE THIS

Author:

0 التعليقات: