Sunday, 20 March 2022

ಮಹಾರಾಷ್ಟ್ರ ಯುನಿಕಾರ್ನ್ ಸ್ಟಾರ್ಟ್ ಅಪ್ ಗುಂಪಿನ ಮೇಲೆ ಐಟಿ ದಾಳಿ: ರೂ. 224 ಕೋಟಿ ಅಘೋಷಿತ ಆದಾಯ ಪತ್ತೆ


ಮಹಾರಾಷ್ಟ್ರ ಯುನಿಕಾರ್ನ್ ಸ್ಟಾರ್ಟ್ ಅಪ್ ಗುಂಪಿನ ಮೇಲೆ ಐಟಿ ದಾಳಿ: ರೂ. 224 ಕೋಟಿ ಅಘೋಷಿತ ಆದಾಯ ಪತ್ತೆ

ಹೊಸದಿಲ್ಲಿ: ಮಹಾರಾಷ್ಟ್ರದ ಪುಣೆ ಹಾಗೂ  ಥಾಣೆ ಮೂಲದ ಯುನಿಕಾರ್ನ್ ಸ್ಟಾರ್ಟ್ ಅಪ್ ಗ್ರೂಪ್ ನ  ಮೇಲೆ ಇತ್ತೀಚೆಗೆ ದಾಳಿ ನಡೆಸಿದ ಆದಾಯ ತೆರಿಗೆ ಇಲಾಖೆಯು ಸುಮಾರು ರೂ. 224 ಕೋಟಿ ಅಘೋಷಿತ ಆದಾಯವನ್ನು ಪತ್ತೆ ಮಾಡಿದೆ ಎಂದು ಸಿಬಿಡಿಟಿ ರವಿವಾರ ತಿಳಿಸಿದೆ.

ಮಹಾರಾಷ್ಟ್ರ, ಕರ್ನಾಟಕ, ಆಂಧ್ರಪ್ರದೇಶ, ಉತ್ತರ ಪ್ರದೇಶ ಹಾಗೂ  ಮಧ್ಯಪ್ರದೇಶದ 23 ಸ್ಥಳಗಳಲ್ಲಿ ಮಾರ್ಚ್ 9 ರಂದು ಶೋಧ ನಡೆಸಲಾಗಿತ್ತು.

ಸ್ಟಾರ್ಟ್ ಅಪ್ ಗ್ರೂಪ್ ನಿರ್ಮಾಣ ಸಾಮಗ್ರಿಗಳ ಸಗಟು ಮತ್ತು ಚಿಲ್ಲರೆ ವ್ಯಾಪಾರದಲ್ಲಿ ತೊಡಗಿಸಿಕೊಂಡಿದೆ ಹಾಗೂ  ವಾರ್ಷಿಕ ರೂ. 6,000 ಕೋಟಿಗೂ ಅಧಿಕ ವಹಿವಾಟು ಹೊಂದಿದ್ದು, ಪ್ಯಾನ್-ಇಂಡಿಯಾದಲ್ಲಿ  ಅಸ್ತಿತ್ವವನ್ನು ಹೊಂದಿದೆ ಎಂದು ತೆರಿಗೆ ಇಲಾಖೆಯ ನೀತಿ-ನಿರೂಪಣಾ ಸಂಸ್ಥೆಯಾದ ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸ್ ಹೇಳಿಕೆಯಲ್ಲಿ ತಿಳಿಸಿದೆ.

ಲೆಕ್ಕಕ್ಕೆ ಸಿಗದ  1 ಕೋಟಿ ಮೌಲ್ಯದ ನಗದು ಮತ್ತು ರೂ. 22 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಇಲ್ಲಿಯವರೆಗೆ ವಶಪಡಿಸಿಕೊಳ್ಳಲಾಗಿದೆ ಎಂದು ಅದು ಹೇಳಿದೆ.


SHARE THIS

Author:

0 التعليقات: