ಮಣಿಪುರ ವಿಧಾನಸಭೆ ಚುನಾವಣೆ: ಇಂದು 2ನೇ ಹಂತದ ಮತದಾನ
ಇಂಫಾಲ: ಮಣಿಪುರ ವಿಧಾನಸಭೆ ಚುನಾವಣೆಯ ಎರಡನೇ ಮತ್ತು ಕೊನೆಯ ಹಂತದ ಚುನಾವಣೆ ಶನಿವಾರ ನಡೆಯುತ್ತಿದ್ದು, 10 ಜಿಲ್ಲೆಗಳ 22 ಕ್ಷೇತ್ರಗಳಲ್ಲಿ 92 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಈ ಬಾರಿ ಕೇಂದ್ರೀಕೃತವಾಗಿರುವ ಕ್ಷೇತ್ರಗಳಲ್ಲಿ ತೌಬಲ್ ಜಿಲ್ಲೆ ಸೇರಿದ್ದು, ನಾಗಾ ಪ್ರಾಬಲ್ಯದ ಪ್ರದೇಶಗಳಲ್ಲಿ ಆಡಳಿತಾರೂಢ ಬಿಜೆಪಿ ಕಠಿಣ ಸವಾಲನ್ನು ಎದುರಿಸುತ್ತಿದೆ.
ರಾಜ್ಯದ ಹೊರ ವಲಯದಲ್ಲಿರುವ ಜಿಲ್ಲೆಗಳು ನಾಗಾ ಪೀಪಲ್ಸ್ ಫ್ರಂಟ್ (ಎನ್ಪಿಎಫ್) ಹಾಗೂ ಕಾಂಗ್ರೆಸ್ನ ಭದ್ರಕೋಟೆಯಾಗಿವೆ.
ಮಣಿಪುರದಲ್ಲಿ ಈ ಬಾರಿಯ ಚುನಾವಣೆಗಳು ಬಹುಕೋನದ ಸ್ಪರ್ಧೆಯಾಗಿದ್ದು, ಬಿಜೆಪಿ ಏಕಾಂಗಿಯಾಗಿ ಸ್ಪರ್ಧಿಸುತ್ತಿದೆ ಹಾಗೂ ಪ್ರಸ್ತುತ ಸರಕಾರದಲ್ಲಿ ಅದರ ಪಾಲುದಾರರ ವಿರುದ್ಧವೂ ಎಲ್ಲಾ ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ.
ಎರಡನೇ ಹಂತದಲ್ಲಿ ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳೆಂದರೆ: ಮಾಜಿ ಮೂರು ಬಾರಿಯ ಮುಖ್ಯಮಂತ್ರಿ ಒಕ್ರಾಮ್ ಇಬೋಬಿ ಸಿಂಗ್ ಮತ್ತು ಮಾಜಿ ಉಪಮುಖ್ಯಮಂತ್ರಿ ಗೈಖಾಂಗಮ್ ಗ್ಯಾಂಗ್ಮೇಯ್ ಸೇರಿದ್ದಾರೆ. ಇಬ್ಬರೂ ಕಾಂಗ್ರೆಸ್ ನಾಯಕರಾಗಿದ್ದಾರೆ.
ಸುಮಾರು 20,000 ಅರೆಸೇನಾ ಪಡೆಗಳು ಮತ್ತು ಸುಮಾರು 5,000 ಮತಗಟ್ಟೆ ಸಿಬ್ಬಂದಿಯೊಂದಿಗೆ ಬಿಗಿ ಭದ್ರತೆಯಲ್ಲಿ ಬೆಳಿಗ್ಗೆ 7 ಗಂಟೆಗೆ ಮತದಾನ ಆರಂಭವಾಗಿದ್ದು ಸಂಜೆ 4 ರವರೆಗೆ ಮುಂದುವರಿಯುತ್ತದೆ.
0 التعليقات: