Thursday, 17 March 2022

ಗುಜರಾತ್‌ನಲ್ಲಿ 2 ವರ್ಷಗಳಲ್ಲಿ 188 ಕಸ್ಟಡಿ ಸಾವಿನ ಪ್ರಕರಣಗಳು ದಾಖಲಾಗಿವೆ ಎಂದ ಸರಕಾರ


 ಗುಜರಾತ್‌ನಲ್ಲಿ 2 ವರ್ಷಗಳಲ್ಲಿ 188 ಕಸ್ಟಡಿ ಸಾವಿನ ಪ್ರಕರಣಗಳು ದಾಖಲಾಗಿವೆ ಎಂದ ಸರಕಾರ

ಗಾಂಧಿನಗರ: ಕಳೆದ ಎರಡು ವರ್ಷಗಳಲ್ಲಿ ರಾಜ್ಯದಲ್ಲಿ 188 ಕಸ್ಟಡಿ ಸಾವಿನ ಪ್ರಕರಣಗಳು ವರದಿಯಾಗಿವೆ ಎಂದು ಗುಜರಾತ್ ಸರಕಾರ ಗುರುವಾರ ಹೇಳಿದೆ.

ರಾಜ್ಯ ವಿಧಾನಸಭೆಯಲ್ಲಿ ಲಿಖಿತ ಉತ್ತರದಲ್ಲಿ ಸರಕಾರವು ಈ ಕುರಿತು ಮಾಹಿತಿ ನೀಡಿದೆ.

ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ ಶಾಸಕ ಪರೇಶ್ ಧನಾನಿ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಗೃಹ ಖಾತೆಯನ್ನೂ  ಹೊಂದಿರುವ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ 2020 ರಲ್ಲಿ 88 ಕಸ್ಟಡಿ ಸಾವಿನ ಘಟನೆಗಳು ನಡೆದಿದ್ದರೆ, 2021 ರಲ್ಲಿ 100 ಪ್ರಕರಣಗಳು ವರದಿಯಾಗಿವೆ ಎಂದು ಸದನಕ್ಕೆ ತಿಳಿಸಿದರು.

ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳ ವಿರುದ್ಧ ಸರಕಾರ ಕೈಗೊಂಡ ಕ್ರಮಗಳ ಕುರಿತ ಉಪ-ಪ್ರಶ್ನೆಗೆ ಉತ್ತರಿಸಿದ ಪಟೇಲ್, ರಾಜ್ಯ ಸರಕಾರವು ಎಫ್‌ಐಆರ್‌ಗಳನ್ನು ದಾಖಲಿಸಿದೆ, ಇಲಾಖಾ ವಿಚಾರಣೆಗಳನ್ನು ಆರಂಭಿಸಿದೆ, ಅಮಾನತು ಆದೇಶಗಳನ್ನು ನೀಡಿದೆ ಮತ್ತು ಅಂತಹ ಅಧಿಕಾರಿಗಳಿಗೆ ನಗದು ದಂಡವನ್ನು ವಿಧಿಸಿದೆ ಎಂದು ಹೇಳಿದರು.

ಮೃತರ ಕುಟುಂಬಕ್ಕೆ ಸರಕಾರ ತಲಾ 6 ಲಕ್ಷ ರೂಪಾಯಿ ಪರಿಹಾರ ನೀಡಿದೆ ಎಂದು ಸಿಎಂ ಪಟೇಲ್ ಸದನಕ್ಕೆ ತಿಳಿಸಿದರು.


SHARE THIS

Author:

0 التعليقات: