Tuesday, 8 March 2022

ಮುಹಿಮ್ಮಾತ್; ಸಯ್ಯಿದ್ ತ್ವಾಹಿರುಲ್ ಅಹ್ದಲ್ ತಂಙಳ್ 16 ನೇ ಉರೂಸ್ ಮುಬಾರಕ್: ಝಿಯಾರತಿನೊಂದಿಗೆ ವಿಜೃಂಭಣೆಯ ಪ್ರಾರಂಭ


ಮುಹಿಮ್ಮಾತ್; ಸಯ್ಯಿದ್ ತ್ವಾಹಿರುಲ್ ಅಹ್ದಲ್ ತಂಙಳ್ 16 ನೇ ಉರೂಸ್ ಮುಬಾರಕ್:  ಝಿಯಾರತಿನೊಂದಿಗೆ ವಿಜೃಂಭಣೆಯ ಪ್ರಾರಂಭ 

ಕಾಸರಗೋಡು: ಸುಪ್ರಸಿದ್ಧ ಆಧ್ಯಾತ್ಮಿಕ ವಿದ್ವಾಂಸ ಮತ್ತು ಮುಹಿಮ್ಮಾತ್ ಸ್ಥಾಪಕರಾಗಿರುವ ಸಯ್ಯಿದ್ ತ್ವಾಹಿರುಲ್ ಅಹ್ದಲ್ ತಂಙಳ್ ರವರ ಹದಿನಾರನೀ ಉರೂಸ್ ಮುಬಾರಕಿಗೆ ವಿವಿಧ ಕೇಂದ್ರಗಳಲ್ಲಿ ನಡೆದ ಝಿಯಾರತಿನೊಂದಿಗೆ ಬಹಳ ವಿಜೃಂಭಣೆಯಿಂದ ಚಾಲನೆಯಾಯಿತು.

ಐದು ದಿನಗಳಲ್ಲಿ ನಡೆಯುವ ಮತ ಪ್ರಭಾಷಣ ಕಾರ್ಯಕ್ರಮ ಆರಂಭವಾಯಿತು.

ಬೆಳಗ್ಗೆ ಜಾಮಿಅ ಸಅದಿಯ್ಯಾದಲ್ಲಿ ನೂರುಲ್ ಉಲಮ ಮಖಾಂ, ಎಟ್ಟಿಕ್ಕುಳದಲ್ಲಿ ತಾಜುಲ್ ಉಲಮ ಮಖಾಂ, ಮಾಟೂಲ್ ನಲ್ಲಿ ಳಿಯಾವುಲ್ ಮುಸ್ತಫ ಮಖಾಂ ಮುಂತಾದ ಸ್ಥಳಗಳಲ್ಲಿ ಝಿಯಾರತ್ ಗಳಿಗೆ ಸಯ್ಯಿದ್ ಇಸ್ಮಾಯೀಲ್ ಹಾದಿ ಪಾನೂರ್, ಸಯ್ಯಿದ್ ಮುಹಮ್ಮದ್ ಜುನೈದುಲ್ ಬುಖಾರಿ, ಸಯ್ಯಿದ್ ಹಾಮಿದ್ ಅನ್ವರ್ ಅಹ್ದಲ್ ತಂಙಳ್ ನೇತೃತ್ವ ವಹಿಸಿದರು.  ಅಹ್ದಲ್ ಮಖಾಮಿನಲ್ಲಿ ಝಿಯಾರತಿಗೆ ಸಯ್ಯಿದ್ ಪಿ.ಎಸ್ ಆಟಕೋಯ ತಂಙಳ್ ಪಂಜಿಕ್ಕಲ್ ನೇತೃತ್ವ ವಹಿಸಿದರು. ಕಾರ್ಯಕ್ರಮಗಳಿಗೆ ಸ್ವಾಗತ ಸಮಿತಿ ಟ್ರಶರರ್ ಲಂಡನ್ ಮುಹಮ್ಮದ್ ಹಾಜಿ ಧ್ವಜಾರೋಹಣ ಮಾಡಿದರು.  ಖತಮುಲ್ ಕುರ್'ಆನ್ ಮಜ್ಲಿಸಿಗೆ ಸಯ್ಯಿದ್ ಆಟಕೋಯ ತಂಙಳ್ ನೇತೃತ್ವ ವಹಿಸಿದರು.

ಸಯ್ಯಿದ್ ಕೆ.ಎಸ್ ಆಟಕೋಯ ತಂಙಳ್ ಕುಂಬೋಲ್ ಉರೂಸ್ ಕಾರ್ಯಕ್ರಮ ಉದ್ಘಾಟಿಸಿದರು. ಸ್ವಾಗತ ಸಮಿತಿ ಚೆಯರ್ಮ್ಯಾನ್ ಪಳ್ಳಂಗೋಡು ಅಬ್ದುಲ್ ಖಾದರ್ ಮದನಿ ಅಧ್ಯಕ್ಷತೆ ವಹಿಸಿದರು. ಸಯ್ಯಿದ್ ಜಲಾಲುದ್ದೀನ್ ಬುಖಾರಿ ಭಾಷಣ ಮಾಡಿದರು. ಸಯ್ಯಿದ್ ಹಬೀಬುಲ್ ಅಹ್ದಲ್ ತಂಙಳ್, ಸಯ್ಯಿದ್ ಅಬ್ದುಲ್ ಅಲ್ ಹೈದರೂಸಿ, ಅಲವಿ ತಂಙಳ್ ಚೆಟ್ಟುಂಕುಝಿ, ಬಿ.ಎಸ್ ಅಬ್ದುಲ್ಲಾ ಕುಞ್ಞಿ ಫೈಝಿ, ಅಮೀರಲಿ ಚೂರಿ, ಕೆ.ಪಿ ಹುಸೈನ್ ಸಅದಿ ಕೆ.ಸಿ ರೋಡ್, ಸಿ.ಎನ್ ಅಬ್ದುಲ್ ಖಾದರ್ ಮಾಸ್ಟರ್, ಕೊಲ್ಲಂಬಾಡಿ ಅಬ್ದುಲ್ ಖಾದರ್ ಸಅದಿ, ಅಬ್ದುಲ್ ಮಜೀದ್ ಕೊಡಿಯಮ್ಮ, ಮುಹಮ್ಮದ್ ಮುಸ್ಲಿಯಾರ್ ಬಾಯಾರ್, ಮುಹಮ್ಮದ್ ಸಖಾಫಿ ಪಾತೂರ್, ಅಬ್ಬಾಸ್ ಮುಸ್ಲಿಯಾರ್ ಚೇರೂರ್, ಸುಲೈಮಾನ್ ಕರಿವೆಳ್ಳೂರ್, ಅಬ್ದುಲ್ ಕರೀಂ ಸಅದಿ ಏಣಿಯಾಡಿ, ಮುಹಮ್ಮದ್ ರಫೀಕ್ ಸಅದಿ ದೇಲಂಪಾಡಿ, ಸಿ.ಎಲ್ ಹಮೀದ್, ಸಿ.ಹೆಚ್ ಮುಹಮ್ಮದ್ ಪಟ್ಲ, ಅಡ್ವ. ಶಾಕಿರ್ ಹಾಜಿ ಮಿತ್ತೂರ್, ಸತ್ತಾರ್ ಚೆಂಬರಿಕ, ಇಬ್ರಾಹೀಂ ದಾರಿಮಿ ಗುಣಾಜೆ, ವಿ ಪಿ ಅಬ್ದುಲ್ಲಾ ಫೈಝಿ ಮೊಗ್ರಾಲ್, ಎಸ್.ಎ ಅಬ್ದುಲ್ ಹಮೀದ್ ಮೌಲವಿ ಆಲಂಪಾಡಿ, ಉಮರ್ ಸಖಾಫಿ ಕರ್ನೂರ್, ವೈ.ಎಂ ಅಬ್ದುರ್ರಹ್ಮಾನ್ ಅಹ್ಸನಿ, ಅಬ್ದುಲ್ ಖಾದರ್ ಸಖಾಫಿ ಮೊಗ್ರಾಲ್, ಮೂಸ ಸಖಾಫಿ ಕಳತ್ತೂರ್ ಮುಂತಾದವರು ಭಾಗವಹಿಸಿದರು.


SHARE THIS

Author:

0 التعليقات: