Wednesday, 16 March 2022

ಜಪಾನ್ ನಲ್ಲಿ ಪ್ರಬಲ ಭೂಕಂಪ: ನಾಲ್ವರು ಬಲಿ, 126 ಮಂದಿಗೆ ಗಾಯ


ಜಪಾನ್ ನಲ್ಲಿ ಪ್ರಬಲ ಭೂಕಂಪ: ನಾಲ್ವರು ಬಲಿ, 126 ಮಂದಿಗೆ ಗಾಯ

ಟೋಕಿಯೊ: ಉತ್ತರ ಜಪಾನ್‌ನ ಫುಕುಶಿಮಾ ಕರಾವಳಿಯಲ್ಲಿ ಬುಧವಾರ ರಾತ್ರಿ 7.4 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಜಪಾನ್ ಹವಾಮಾನ ಸಂಸ್ಥೆಯು ತಿಳಿಸಿದೆ.

ಪ್ರಬಲ ಭೂಕಂಪದಲ್ಲಿ ನಾಲ್ಕು ಜನರು ಸಾವನ್ನಪ್ಪಿದ್ದಾರೆ  ಹಾಗೂ  126 ಮಂದಿ ಗಾಯಗೊಂಡಿದ್ದಾರೆ. 7.3 ತೀವ್ರತೆಯ ಭೂಕಂಪವು ಈ ಪ್ರದೇಶದಲ್ಲಿ ಒಂದು ಮೀಟರ್ ಸುನಾಮಿಯನ್ನೂ ಉಂಟುಮಾಡಿದೆ.

ಫೂಕುಶಿಮಾ ನಗರದ ಒಳನಾಡಿನ ಪ್ರಿಫೆಕ್ಚರಲ್ ರಾಜಧಾನಿಯಲ್ಲಿನ ಮುಖ್ಯ ರೈಲು ನಿಲ್ದಾಣದ ಬಳಿ ರಸ್ತೆಯಲ್ಲಿ ಡಿಪಾರ್ಟ್‌ಮೆಂಟ್ ಸ್ಟೋರ್ ಕಟ್ಟಡದ ಗೋಡೆಗಳು  ಹಾಗೂ ಕಿಟಕಿಗಳ ಚೂರುಗಳು ನೆಲಕ್ಕೆ ಬಿದ್ದಿರುವುದನ್ನು ಈ ದೃಶ್ಯಗಳು ತೋರಿಸಿವೆ. ರಸ್ತೆಗಳು ಬಿರುಕು ಬಿಟ್ಟಿದ್ದು, ನೆಲದಡಿ ಪೈಪ್‌ಗಳಿಂದ ನೀರು ಹೊರಗೆ ಹರಿಯುತ್ತಿದೆ.SHARE THIS

Author:

0 التعليقات: