Monday, 14 March 2022

ಕರ್ಮ ರಂಗಕ್ಕೆ 116 ಹಿಮಮಿ ಪಂಡಿತರು ಮತ್ತು 27 ಹಾಫಿಳ್ ಗಳು


 ಕರ್ಮ ರಂಗಕ್ಕೆ 116 ಹಿಮಮಿ ಪಂಡಿತರು ಮತ್ತು 27 ಹಾಫಿಳ್ ಗಳು

ಕಾಸರಗೋಡು- ಕುಂಬಳೆ: ಮುಹಿಮ್ಮಾತಿನಿಂದ ಪ್ರಬೋಧನ ಕ್ಷೇತ್ರಕ್ಕೆ 116 ಯುವ ವಿದ್ವಾಂಸರನ್ನು ಸಮರ್ಪಿಸಲಾಯಿತು. ಜೊತೆಗೆ

ಪವಿತ್ರ ಕುರ್'ಆನ್ ಕಂಠಪಾಠ ಮಾಡಿದ 27 ಹಾಫಿಳ್' ಗಳು ಕೂಡ ಸಯ್ಯಿದ್ ತ್ವಾಹಿರುಲ್ ಅಹ್ದಲ್ ತಂಙಳ್ ರವರ 16ನೇ ಉರೂಸ್‌ ಮುಬಾರಕ್ ಸಮಾರೋಪ ಸಮಾರಂಭದ ವೇದಿಕೆಯಲ್ಲಿ ಸನದ್ ಸ್ವೀಕರಿಸಿದರು.

ಸಾವಿರದಷ್ಟು ವಿದ್ಯಾರ್ಥಿಗಳು ಕಲಿಯುತ್ತಿರುವ ಮುಹಿಮ್ಮಾತ್ ಶರೀಅ, ದಅವಾ ಸಂಸ್ಥೆಗಳಿಂದ ಡಿಗ್ರಿ ಕಲಿಕೆ ಪೂರ್ತಿ ಮಾಡಿದವರಿಗೆ ಹಿಮಮಿ ಪಂಡಿತ ಟೈಟಲ್ ನೀಡಲಾಗುತ್ತಿದೆ.  ಇವರಿಗೆ ಮರ್ಕಝ್ ನಂತಹ ವಿದ್ಯಾಕೇಂದ್ರಗಳಲ್ಲಿ ಉನ್ನತ ವಿದ್ಯಾಭ್ಯಾಸಕ್ಕೆ ಅವಕಾಶ ನೀಡಲಾಗುತ್ತದೆ. 

  ಇದೀಗ ಈ ಸಂಸ್ಥೆಯಿಂದ ಕಲಿಕೆ ಪೂರ್ತಿ ಮಾಡಿದ ಹಲವಾರು ಹಿಮಮಿ ಪಂಡಿತರು  ರಾಷ್ಟ್ರದ ವಿವಿಧ ಕ್ಷೇತ್ರಗಳಲ್ಲಿ ಪ್ರಬೋಧನ ಕಾರ್ಯಾಚರಣೆಯಲ್ಲಿ ಸಕ್ರಿಯರಾಗಿದ್ದಾರೆ.  ಕರ್ನಾಟಕ, ತಮಿಳುನಾಡು, ಆಗ್ರ, ಮಹಾರಾಷ್ಟ್ರ ಮುಂತಾದ ಸ್ಥಳಗಳಲ್ಲಿ ಹಿಮಮಿಗಳ ನಾಯಕತ್ವದಲ್ಲಿ ವಿವಿಧ ವಿಜ್ಞಾನ ಪ್ರಬೋಧನಾ ಕಾರ್ಯಗಳು ನಡೆಯುತ್ತಿವೆ. ಬಹುಭಾಷಾ ಪರಿಶೀಲನೆ, ಧಾರ್ಮಿಕ ವಿಷಯಗಳಲ್ಲಿ ಮತ್ತು ಇನ್ನಿತರ ವಿಷಯಗಳಲ್ಲಿ ಒಂದೇ ಸಮಯದಲ್ಲಿ ಸಮಗ್ರವಾಗಿ ಕಲಿಯಲು ಅವಕಾಶ ಲಭಿಸುವ "ಹಿಮಮಿ"  ಕೋರ್ಸಿಗೆ ಪ್ರಮುಖ ವಿದ್ವಾಂಸರು ನಾಯಕತ್ವ ವಹಿಸುತ್ತಿದ್ದಾರೆ. ಜಾಮಿಅತುಲ್ ಹಿಂದ್ ಯುನಿವರ್ಸಿಟಿಯೊಂದಿಗೆ ಅಫಿಲಿಯೇಟ್ ಮಾಡಿದ ಕೋರ್ಸುಗಳು ಕೂಡ ನಡೆಯುತ್ತಿವೆ. ಶಾಲಾ ಕಲಿಕೆಯೊಂದಿಗೆ ಪವಿತ್ರ ಕುರ್'ಆನ್ ನಿಯಮಾನುಸಾರ ಕಂಠಪಾಠ ಮಾಡಲು ಬೇಕಾಗಿರುವ ಒಂದು ವ್ಯವಸ್ಥೆಯಾಗಿದೆ ಮುಹಿಮ್ಮಾತ್ ತಹ್ಫೀಳುಲ್ ಕುರ್'ಆನಿನಲ್ಲಿ ಇರುವುದು. ರಾಷ್ಟ್ರದ ಒಳಗೂ-ಹೊರಗೂ ಇಮಾಮುಗಳು ಮತ್ತು ಇನ್ನಿತರ ಕ್ಷೇತ್ರಗಳಲ್ಲಿ ಮುಹಿಮ್ಮಾತಿನಿಂದ ಕಲಿತು ಹೋದ ಹಲವಾರು ಹಾಫಿಳ್ ಗಳಿದ್ದಾರೆ. ಮುಹಿಮ್ಮಾತ್ ಅಧ್ಯಕ್ಷರು ಮತ್ತು ಪ್ರಿನ್ಸಿಪಾಲ್ ಆಗಿರುವ ಸುಲ್ತಾನುಲ್ ಉಲಮ ಅವರು ಯುವ ವಿದ್ವಾಂಸರುಗಳಿಗೆ ಸನದ್ ನೀಡಿದರು. ಸಯ್ಯಿದ್ ಹಸನುಲ್ ಅಹ್ದಲ್ ತಂಙಳ್ ಸ್ಥಾನ ವಸ್ತ್ರ ವಿತರಣೆ ಮಾಡಿದರು.


SHARE THIS

Author:

0 التعليقات: