ಪಂಜಾಬ್: ಆಮ್ ಆದ್ಮಿ ಪಕ್ಷದ 10 ಶಾಸಕರು ಸಂಪುಟ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ
ಚಂಡಿಗಡ: ಈ ತಿಂಗಳ ಆರಂಭದಲ್ಲಿ ಪಂಜಾಬ್ನಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷವು ಭಾರೀ ಬಹುಮತ ಪಡೆದ ನಂತರ ಪಕ್ಷದ ಹತ್ತು ಶಾಸಕರು ಶನಿವಾರ ರಾಜ್ಯದಲ್ಲಿ ಸಂಪುಟ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಪಂಜಾಬ್ನ ನೂತನ ಮುಖ್ಯಮಂತ್ರಿಯಾಗಿ ಭಗವಂತ್ ಮಾನ್ ಪ್ರಮಾಣ ವಚನ ಸ್ವೀಕರಿಸಿದ ಕೆಲವೇ ದಿನಗಳಲ್ಲಿ ನೂತನ ಸಂಪುಟ ರಚನೆಯಾಗಿದೆ.
ಸಿಎಂ ಭಗವಂತ್ ಮಾನ್ ಅವರು ಇಂದು ಹೊಸದಾಗಿ ಸೇರ್ಪಡೆಗೊಂಡ ಸಚಿವರೊಂದಿಗೆ ತಮ್ಮ ಮೊದಲ ಸಂಪುಟ ಸಭೆಯನ್ನು ನಡೆಸಲಿದ್ದಾರೆ.
ಶನಿವಾರ ಪ್ರಮಾಣ ವಚನ ಸ್ವೀಕರಿಸಿದ ಹತ್ತು ಸಚಿವರುಗಳೆಂದರೆ: ಹರ್ಪಾಲ್ ಸಿಂಗ್ ಚೀಮಾ, ಡಾ ಬಲ್ಜಿತ್ ಕೌರ್, ಹರ್ಭಜನ್ ಸಿಂಗ್, ಡಾ.ವಿಜಯ್ ಸಿಂಗ್ಲಾ, ಲಾಲ್ ಚಂದ್ ಕತರುಚಕ್, ಗುರ್ಮೀತ್ ಸಿಂಗ್ , ಕುಲದೀಪ್ ಸಿಂಗ್ ಧಲಿವಾಲ್, ಲಾಲ್ಜಿತ್ ಸಿಂಗ್ ಭುಲ್ಲರ್, ಬ್ರಹ್ಮ ಶಂಕರ್ (ಜಿಂಪಾ), ಹರ್ಜೋತ್ ಸಿಂಗ್ ಬೈನ್ಸ್.
ಚಂಡೀಗಢದ ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಿತು.
ಪಂಜಾಬ್ ಸಂಪುಟವು ಮುಖ್ಯಮಂತ್ರಿ ಸೇರಿದಂತೆ ಒಟ್ಟು 18 ಮಂತ್ರಿಗಳನ್ನು ಹೊಂದಬಹುದು. ಆದ್ದರಿಂದ, ರಾಜ್ಯ ಸರಕಾರವು ತನ್ನ ಸಚಿವ ಸಂಪುಟವನ್ನು ವಿಸ್ತರಿಸಬಹುದು ಹಾಗೂ ಮುಂದಿನ ದಿನಗಳಲ್ಲಿ ಇನ್ನೂ ಕೆಲವು ಸದಸ್ಯರನ್ನು ಸೇರಿಸಿಕೊಳ್ಳಬಹುದು.
0 التعليقات: