Tuesday, 29 March 2022

 ಕೇಂದ್ರ ಸಚಿವರ ಪುತ್ರನ ಜಾಮೀನು ಅರ್ಜಿಗೆ ಕಟುವಾಗಿ ವಿರೋಧಿಸಲಾಗಿದೆ: ಸುಪ್ರೀಂ ಕೋರ್ಟ್‌ಗೆ ತಿಳಿಸಿದ ಉತ್ತರಪ್ರದೇಶ

ಕೇಂದ್ರ ಸಚಿವರ ಪುತ್ರನ ಜಾಮೀನು ಅರ್ಜಿಗೆ ಕಟುವಾಗಿ ವಿರೋಧಿಸಲಾಗಿದೆ: ಸುಪ್ರೀಂ ಕೋರ್ಟ್‌ಗೆ ತಿಳಿಸಿದ ಉತ್ತರಪ್ರದೇಶ


 ಕೇಂದ್ರ ಸಚಿವರ ಪುತ್ರನ ಜಾಮೀನು ಅರ್ಜಿಗೆ ಕಟುವಾಗಿ ವಿರೋಧಿಸಲಾಗಿದೆ: ಸುಪ್ರೀಂ ಕೋರ್ಟ್‌ಗೆ ತಿಳಿಸಿದ ಉತ್ತರಪ್ರದೇಶ

ಹೊಸದಿಲ್ಲಿ : ಲಖಿಂಪುರ ಖೇರಿಯಲ್ಲಿ ಪ್ರತಿಭಟನಾ ನಿರತ ರೈತರ ಮೇಲೆ ಕಾರನ್ನು ಹರಿಸಿದ್ದ ಕೇಂದ್ರ ಸಚಿವ ಅಜಯ್ ಮಿಶ್ರಾ ಟೆನಿ ಅವರ ಪುತ್ರ ಆಶಿಶ್ ಮಿಶ್ರಾ ಜಾಮೀನು ಅರ್ಜಿಯನ್ನು "ಕಟುವಾಗಿ ವಿರೋಧಿಸಲಾಗಿದೆ" ಎಂದು ಸುಪ್ರೀಂಕೋರ್ಟ್ ಗೆ ಇಂದು ತಿಳಿಸಿರುವ ಉತ್ತರ ಪ್ರದೇಶ ಸರಕಾರ, ಆರೋಪಿಗೆ ವಿಶೇಷ ಆತಿಥ್ಯ ನೀಡಲಾಗುತ್ತಿದೆ. ಸಾಕ್ಷಿಗೆ ಬೆದರಿಕೆ ಹಾಕಲಾಗುತ್ತಿದೆ ಎಂಬ  ಸಂತೃಸ್ತ ಕುಟುಂಬಗಳ ಆರೋಪಗಳನ್ನು ತಳ್ಳಿ ಹಾಕಿದೆ.

ಲಖಿಂಪುರ ಖೇರಿ ಪ್ರಕರಣದಲ್ಲಿ ಆಶೀಷ್  ಮಿಶ್ರಾ ಜಾಮೀನನ್ನು ಪ್ರಶ್ನಿಸುವ ಮನವಿಗೆ ಪ್ರತಿಕ್ರಿಯೆಯಾಗಿ, ಉತ್ತರ ಪ್ರದೇಶ ಸರಕಾರವು ಇಂದು ಸುಪ್ರೀಂ ಕೋರ್ಟ್‌ನಲ್ಲಿ ತನ್ನ ಉತ್ತರವನ್ನು ಸಲ್ಲಿಸಿತು. ಜಾಮೀನಿನ ವಿರುದ್ಧ ಮೇಲ್ಮನವಿ ಸಲ್ಲಿಸುವ ನಿರ್ಧಾರವು "ಸಂಬಂಧಿತ ಅಧಿಕಾರಿಗಳ ಮುಂದೆ ಪರಿಗಣನೆಗೆ ಬಾಕಿಯಿದೆ" ಎಂದು ಹೇಳಿದೆ.

ಅಲಹಾಬಾದ್ ಹೈಕೋರ್ಟ್‌ನಲ್ಲಿ ಉತ್ತರಪ್ರದೇಶ ಸರಕಾರ ಆಶಿಶ್ ಮಿಶ್ರಾಗೆ ಜಾಮೀನು ನೀಡುವುದನ್ನು ವಿರೋಧಿಸಿಲ್ಲ ಎಂಬ ಆರೋಪಗಳು ಸಂಪೂರ್ಣವಾಗಿ ಸುಳ್ಳು... ಜಾಮೀನು ಅರ್ಜಿಯನ್ನು ಉತ್ತರಪ್ರದೇಶ ಸರಕಾರ ತೀವ್ರವಾಗಿ ವಿರೋಧಿಸಿತು ಎಂದು ಅದು ಹೇಳಿದೆ.

ಲಖಿಂಪುರ ಖೇರಿ ಪ್ರಕರಣದಲ್ಲಿ ಸಾಕ್ಷಿಯೊಬ್ಬರ ಮೇಲೆ ಹಲ್ಲೆ ನಡೆದಿದೆ ಎಂಬ ಆರೋಪವನ್ನು ನಿರಾಕರಿಸಿರುವ ಉತ್ತರ ಪ್ರದೇಶ ಸರಕಾರ, ಹೋಳಿ ಹಬ್ಬದಂದು ಬಣ್ಣ ಎರಚುವ ವೈಯಕ್ತಿಕ ಗಲಾಟೆಯ ವೇಳೆ  ಅಲ್ಲಿ  ಹಲ್ಲೆ ನಡೆದಿದೆ ಎಂದು ಹೇಳಿದೆ.

 ಟಿಪ್ಪುವಿಗೆ ಮೈಸೂರು ಹುಲಿ ಎಂದು ಬಿರುದು ಕೊಟ್ಟಿದ್ದು ಬ್ರಿಟಿಷರು: ಡಿ.ಕೆ ಶಿವಕುಮಾರ್

ಟಿಪ್ಪುವಿಗೆ ಮೈಸೂರು ಹುಲಿ ಎಂದು ಬಿರುದು ಕೊಟ್ಟಿದ್ದು ಬ್ರಿಟಿಷರು: ಡಿ.ಕೆ ಶಿವಕುಮಾರ್


 ಟಿಪ್ಪುವಿಗೆ ಮೈಸೂರು ಹುಲಿ ಎಂದು ಬಿರುದು ಕೊಟ್ಟಿದ್ದು ಬ್ರಿಟಿಷರು: ಡಿ.ಕೆ ಶಿವಕುಮಾರ್

ಬೆಂಗಳೂರು: ' ಟಿಪ್ಪುವಿಗೆ ಮೈಸೂರು ಹುಲಿ ಎಂದು ಬಿರುದು ಕೊಟ್ಟಿದ್ದು ಬ್ರಿಟಿಷರು. ನಾನಲ್ಲ, ಕಾಂಗ್ರೆಸ್, ಬಿಜೆಪಿಯವರೂ ಅಲ್ಲ. ಹೋಗಿ ಲಂಡನ್ ಮ್ಯೂಸಿಯಂ ನಲ್ಲಿ ಇರುವ ದಾಖಲೆ ನೋಡಲಿ' ಎಂದು ಕೆಪಿಸಿಸಿ ಅದ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ. 

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಈ  ಹಿಂದೆ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರೇ ಟಿಪ್ಪು ಅವರನ್ನು ಹೊಗಳಿದ್ದರು.  ನಮಗೆ ಟಿಪ್ಪು ಬಗ್ಗೆ ಏನು ಪಾಠ ಮಾಡಬೇಕೋ ಮಾಡಿದ್ದಾರೆ. ಅದನ್ನು ನೋಡಲಿ. ನಾವು ಈ ವಿಚಾರದ ಬಗ್ಗೆ ಆಮೇಲೆ ಮಾತನಾಡೋಣ' ಎಂದರು.

ಪಠ್ಯ ಪುಸ್ತಕ ಪರಿಶೀಲನೆ ಸಮಿತಿಯಲ್ಲಿ ಸಮಿತಿಯಲ್ಲಿ ವಿದ್ಯಾವಂತರು, ಬುದ್ಧಿವಂತರು, ಪ್ರಜ್ಞಾವಂತರು ಇದ್ದಾರೆ ಎಂದು ಭಾವಿಸಿದ್ದೇನೆ. ಅವರು ಕುಲಂಕಷವಾಗಿ ಇವೆಲ್ಲವನ್ನೂ ನೋಡುತ್ತಾರೆ ಎಂಬ ಭರವಸೆ ಇದೆ. ಇತಿಹಾಸವನ್ನು ಯಾರಿಗೂ ತಿರುಚಲು ಸಾಧ್ಯವಿಲ್ಲ. ಟಿಪ್ಪು ಬ್ರಿಟಿಷರ ಜತೆ ಹೋರಾಡಿದ್ದು, ಕೊಲ್ಲೂರು, ಶೃಂಗೇರಿ ಮಠಗಳಿಗೆ ಏನೇನು ಮಾಡಿದ್ದ ಎಂಬುದು ಇತಿಹಾಸದಲ್ಲಿ ದಾಖಲಾಗಿದೆ. ಅದನ್ನು ಯಾರೂ ಸೃಷ್ಟಿಸಲು, ತಿರುಚಲು ಆಗದು ಎಂದು ತಿಳಿಸಿದರು.

ಸಮಿತಿಯವರು ಏನು ಮಾಡುತ್ತಾರೆ, ಸರಕಾರ ಏನು ಮಾಡುತ್ತದೆ ನೋಡಿ ಆಮೇಲೆ ಏನು ಮಾಡಬೇಕೋ ತೀರ್ಮಾನ ಮಾಡುತ್ತೇವೆ ಎಂದರು.

Monday, 28 March 2022

 ರಾಜ್ಯದಲ್ಲಿ ಧರ್ಮದ್ವೇಷವನ್ನು ನಿಯಂತ್ರಿಸುವಂತೆ ಮುಖ್ಯಮಂತ್ರಿಗೆ ಸಾಹಿತಿಗಳು, ಕಲಾವಿದರಿಂದ ಬಹಿರಂಗ ಪತ್ರ

ರಾಜ್ಯದಲ್ಲಿ ಧರ್ಮದ್ವೇಷವನ್ನು ನಿಯಂತ್ರಿಸುವಂತೆ ಮುಖ್ಯಮಂತ್ರಿಗೆ ಸಾಹಿತಿಗಳು, ಕಲಾವಿದರಿಂದ ಬಹಿರಂಗ ಪತ್ರ


 ರಾಜ್ಯದಲ್ಲಿ ಧರ್ಮದ್ವೇಷವನ್ನು ನಿಯಂತ್ರಿಸುವಂತೆ ಮುಖ್ಯಮಂತ್ರಿಗೆ ಸಾಹಿತಿಗಳು, ಕಲಾವಿದರಿಂದ ಬಹಿರಂಗ ಪತ್ರ

ಬೆಂಗಳೂರು: ಎಸೆಸೆಲ್ಸಿ ಪರೀಕ್ಷೆಯ ಹಿಂದಿನ ದಿನ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ವಸ್ತ್ರ ಸಂಹಿತೆಯನ್ನು ವಿಧಿಸಿ ಏಕಾಏಕಿ ಹೊರಡಿಸಿದ ಅವೈಜ್ಞಾನಿಕ ಸುತ್ತೋಲೆಯನ್ನು ಹಿಂತೆಗೆದುಕೊಳ್ಳಬೇಕು ಎಂದು ರಾಜ್ಯದ ಪ್ರಗತಿಪರ ಚಿಂತಕರಾದ ಡಾ. ಕೆ.ಮರುಳಸಿದ್ದಪ್ಪ, ಡಾ. ವಿಜಯಾ, ಎಸ್.ಜಿ. ಸಿದ್ಧರಾಮಯ್ಯ, ಬೊಳುವಾರ ಮಹ್ಮದ್ ಕುಂಞ ಸೇರಿದಂತೆ 60ಕ್ಕೂ ಹೆಚ್ಚಿನ ಬರಹಗಾರರು, ಸಾಹಿತಿಗಳು, ಕಲಾವಿದರು ಮುಖ್ಯಮಂತ್ರಿ ಬಸವರಾಜ ಬೊಮಮ್ಮಾಯಿ ಅಬವರಿಗೆ ಬಹಿರಂಗ ಪತ್ರವನ್ನು ಬರೆದಿದ್ದಾರೆ. 

ಶೈಕ್ಷಣಿಕ ವರ್ಷಾಂತ್ಯದಲ್ಲಿ ಅನಗತ್ಯವಾಗಿ ಎದ್ದ ಶಿರವಸ್ತ್ರ ವಿವಾದದಿಂದ ತೊಂದರೆಗೊಳಗಾದ ಮುಸ್ಲಿಂ ಹೆಣ್ಣು ಮಕ್ಕಳಿಗೆ ಸಾಂವಿಧಾನಿಕ ಶಿಕ್ಷಣದ ಹಕ್ಕನ್ನು ನಿರಾಕರಿಸದೇ ಸಮವಸ್ತ್ರ ಭಾಗವಾಗಿ ಶಿರವಸ್ತ್ರ ಧರಿಸಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಬೇಕು. ಇದು ಮಕ್ಕಳ ಭವಿಷ್ಯದ ಪ್ರಶ್ನೆಯಾಗಿದ್ದು, ಅದಕ್ಕೆ ಅಗತ್ಯವಾದ ಸೂಚನೆಯನ್ನು ಅಧಿಕೃತವಾಗಿ ಸರಕಾರವು ನೀಡಬೇಕು ಎಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ. 

ರಾಜ್ಯದ ವಿವಿಧ ಕಡೆಗಳಲ್ಲಿ ನಡೆಯುತ್ತಿರುವ ಜಾತ್ರೆಗಳಲ್ಲಿ ಧರ್ಮ ಭೇದವಿಲ್ಲದೇ ಈ ಮೊದಲು ನಡೆಯುತ್ತಿದ್ದ ಸಾಮರಸ್ಯ ಪರಂಪರೆಯ ಚಟುವಟಿಕೆಗಳು ವ್ಯಾಪಾರ ವಹಿವಾಟುಗಳಿಗೆ ಅವಕಾಶ ನೀಡಬೇಕು. ದುರುದ್ದೇಶಪೂರ್ವಕವಾಗಿ ಅದನ್ನು ಹಾಳುಗೆಡಹುತ್ತಿರುವವರ ಮೇಲೆ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. 

ಧರ್ಮ ಮತ್ತು ಮತಾಂಧತೆಯ ಅಮಲೇರಿಸಿಕೊಂಡು ಶಾಂತಿ ನೆಮ್ಮದಿಗೆ ಭಂಗ ತರುತ್ತಿರುವವರ ಮೇಲೆ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಬೇಕು. ಭಗವದ್ಗೀತೆಯನ್ನು ಪ್ರಸ್ತಾಪವನ್ನು ಕೈಬಿಡಬೇಕು. ಕನ್ನಡ ನೆಲದ ಸಾಮರಸ್ಯ ಪರಂಪರೆಗೆ ಯಾವುದೇ ಕುತ್ತು ಬಾರದಂತೆ ಸರಕಾರವು ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

 ತಾಯಿಗೆ ಐಟಿ ನೋಟಿಸ್ ನೀಡಿರುವ ಬಗ್ಗೆ ಆತಂಕ ಇಲ್ಲ: ಎಚ್.ಡಿ.ಕುಮಾರಸ್ವಾಮಿ

ತಾಯಿಗೆ ಐಟಿ ನೋಟಿಸ್ ನೀಡಿರುವ ಬಗ್ಗೆ ಆತಂಕ ಇಲ್ಲ: ಎಚ್.ಡಿ.ಕುಮಾರಸ್ವಾಮಿ


 ತಾಯಿಗೆ ಐಟಿ ನೋಟಿಸ್ ನೀಡಿರುವ ಬಗ್ಗೆ ಆತಂಕ ಇಲ್ಲ: ಎಚ್.ಡಿ.ಕುಮಾರಸ್ವಾಮಿ

ಬೆಂಗಳೂರು: ‘ತಮ್ಮ ತಾಯಿ ಚನ್ನಮ್ಮ ಅವರಿಗೆ ಆದಾಯ ತೆರಿಗೆ ನೋಟಿಸ್ ನೀಡಿರುವ ಬಗ್ಗೆ ತಮಗೆ ಮಾಹಿತಿ ಇಲ್ಲ. ನಮ್ಮ ಕುಟುಂಬದ ವ್ಯವಹಾರ ತೆರೆದ ಪುಸ್ತಕ' ಎಂದು ಜೆಡಿಎಸ್ ಶಾಸಕಾಂಗ ಪಕ್ಷ ನಾಯಕ ಹಾಗೂ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ಸೋಮವಾರ ವಿಧಾನಸೌಧದ ಬಳಿ ಈ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ‘ನೋಟಿಸ್ ನೀಡಿರುವ ಬಗ್ಗೆ ತಲೆ ಕೆಡಿಸಿಕೊಳ್ಳುವ ಅಗತ್ಯ ಇಲ್ಲ. ಆತಂಕಪಡುವ ಅಗತ್ಯವೂ ಇಲ್ಲ. ಮಾಜಿ ಪ್ರಧಾನಿ ದೇವೆಗೌಡ ಅವರ ರಾಜಕೀಯ ಜೀವನದಲ್ಲಿ ಹಣಕ್ಕೆ ಎಂದು ಮಹತ್ವ ಕೊಟ್ಟಿಲ್ಲ. ನಾವು ನಮ್ಮ ರಾಜಕೀಯ ಜೀವನದಲ್ಲಿ ಹಣಕ್ಕೆ ಎಂದೂ ಪ್ರಾಮುಖ್ಯತೆ ಕೊಟ್ಟವರಲ್ಲ' ಎಂದು ಹೇಳಿದರು.

‘ನಾವು ಪರಿಶುದ್ಧವಾಗಿರಬೇಕು ಅಷ್ಟೇ. ನೋಟಿಸ್ ಕೊಟ್ಟಿದ್ದಾರೆ, ಅದಕ್ಕೆ ಏನು ಉತ್ತರ ಕೊಡಬೇಕೋ ಕೊಟ್ಟರಾಯಿತು. ನನ್ನ ಸಹೋದರ ಹಾಗೂ ಮಾಜಿ ಸಚಿವ ರೇವಣ್ಣ ಅವರಿಗೂ ಇದನ್ನೇ ಹೇಳಿದ್ದೇನೆ. ಇದನ್ನು ರಾಜಕೀಯವಾಗಿ ಬಳಸಿಕೊಳ್ಳುವ ಅವಶ್ಯಕತೆ ಇಲ್ಲ. ಆದಾಯ ತೆರಿಗೆ ಬಗ್ಗೆ ಕಾನೂನಾತ್ಮಕವಾಗಿ ಆಸ್ತಿ ವಿಚಾರವಾಗಿ ಕೇಳಿರುತ್ತಾರೆ. ಆ ವಿವರಗಳನ್ನು ಸಲ್ಲಿಕೆ ಮಾಡಿದರೆ ಆಯಿತು' ಎಂದು ಅವರು ತಿಳಿಸಿದರು.

 ಎಸೆಸೆಲ್ಸಿ ಪರೀಕ್ಷೆ: ರಾಜ್ಯಾದ್ಯಂತ ಮೊದಲ ದಿನ 20 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಗೈರು

ಎಸೆಸೆಲ್ಸಿ ಪರೀಕ್ಷೆ: ರಾಜ್ಯಾದ್ಯಂತ ಮೊದಲ ದಿನ 20 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಗೈರು


 ಎಸೆಸೆಲ್ಸಿ ಪರೀಕ್ಷೆ: ರಾಜ್ಯಾದ್ಯಂತ ಮೊದಲ ದಿನ 20 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಗೈರು

ಬೆಂಗಳೂರು: ರಾಜ್ಯಾದ್ಯಂತ 2021-22ನೇ ಸಾಲಿನಲ್ಲಿ ಎಸೆಸೆಲ್ಸಿಯ ಪ್ರಥಮ ಭಾಷೆ ವಿಷಯದ ಪರೀಕ್ಷೆಯು ಸೋಮವಾರ ನಡೆಯಿತು. ಮೊದಲ ದಿನವೇ 20,994 ವಿದ್ಯಾರ್ಥಿಗಳು ಪರೀಕ್ಷೆಗೆ ಗೈರು ಹಾಜರಾಗಿದ್ದಾರೆ ಎಂದು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ಅಂಕಿ-ಅಂಶಗಳನ್ನು ಬಿಡುಗಡೆ ಮಾಡಿದೆ.

ಎಸೆಸೆಲ್ಸಿಯ ಮೊದಲ ದಿನದ ಪರೀಕ್ಷೆಗೆ 8,69,399 ವಿದ್ಯಾರ್ಥಿಗಳು ದಾಖಲಾತಿ ಪಡೆದಿದ್ದು, 8,48,405 ವಿದ್ಯಾರ್ಥಿಗಳು ಹಾಜರಾಗಿದ್ದರು. 2020-21ನೇ ಸಾಲಿನಲ್ಲಿ 8,19,398 ವಿದ್ಯಾರ್ಥಿಗಳು ದಾಖಲಾಗಿದ್ದು, ಪರೀಕ್ಷೆಗೆ ಕೇವಲ 3,769 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದರು. ಈ ವರ್ಷ ಪರೀಕ್ಷೆ ಬರೆದವರ ಸಂಖ್ಯೆ ಶೇ.97.59 ಕುಸಿದಿದ್ದು, ಕಳೆದ ವರ್ಷ ಶೇ.99.54 ರಷ್ಟು ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆದಿದ್ದರು. 

ಈ ವರ್ಷ ಪರೀಕ್ಷೆ ಬರೆದ ಅಭ್ಯರ್ಥಿಗಳ ಪೈಕಿ, 8,11,195 ವಿದ್ಯಾರ್ಥಿಗಳು ಮೊದಲಬಾರಿಗೆ ಪರೀಕ್ಷೆಯನ್ನು ಬರೆದಿದ್ದು, ಖಾಸಗಿ ನೋಂದಣಿ ಮಾಡಿಕೊಂಡ 35,509 ವಿದ್ಯಾರ್ಥಿಗಳು, 1,701 ಪುನರಾವರ್ತಿತ ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆದರು ಎಂದು ಮಂಡಳಿ ತಿಳಿಸಿದೆ.


 ಕಾರ್ಮಿಕ ಸಂಘಟನೆಗಳಿಂದ ಎರಡು ದಿನ ಭಾರತ್ ಬಂದ್: ಹಲವು ರಾಜ್ಯಗಳಲ್ಲಿ ಅಗತ್ಯ ಸೇವೆಗಳು ಸ್ಥಗಿತ

ಕಾರ್ಮಿಕ ಸಂಘಟನೆಗಳಿಂದ ಎರಡು ದಿನ ಭಾರತ್ ಬಂದ್: ಹಲವು ರಾಜ್ಯಗಳಲ್ಲಿ ಅಗತ್ಯ ಸೇವೆಗಳು ಸ್ಥಗಿತ


 ಕಾರ್ಮಿಕ ಸಂಘಟನೆಗಳಿಂದ ಎರಡು ದಿನ ಭಾರತ್ ಬಂದ್: ಹಲವು ರಾಜ್ಯಗಳಲ್ಲಿ ಅಗತ್ಯ ಸೇವೆಗಳು ಸ್ಥಗಿತ

ಹೊಸದಿಲ್ಲಿ: ಆರೆಸ್ಸೆಸ್ ಸಂಯೋಜಿತ ಬಿಎಂಎಸ್ ಹೊರತುಪಡಿಸಿ ಹಲವಾರು ಕೇಂದ್ರ ಕಾರ್ಮಿಕ ಸಂಘಟನೆಗಳು ಸೋಮವಾರ ಎರಡು ದಿನಗಳ ಭಾರತ್ ಬಂದ್ ಘೋಷಿಸಿದ್ದರಿಂದ ಸಾರಿಗೆ ಹಾಗೂ  ಬ್ಯಾಂಕಿಂಗ್ ಸೇರಿದಂತೆ ಅಗತ್ಯ ಸೇವೆಗಳು ಹಲವಾರು ರಾಜ್ಯಗಳಲ್ಲಿ ಸ್ಥಗಿತಗೊಂಡಿವೆ.

2019 ರಲ್ಲಿ ನರೇಂದ್ರ ಮೋದಿ ಸರಕಾರವು ಕೇಂದ್ರದಲ್ಲಿ ಅಧಿಕಾರಕ್ಕೆ ಮರಳಿದ ನಂತರ ಕಾರ್ಮಿಕ ಸಂಘಟನೆಗಳು ಕರೆ ನೀಡಿದ ಎರಡನೇ ರಾಷ್ಟ್ರವ್ಯಾಪಿ ಬಂದ್ ಇದಾಗಿದೆ.

ಕೊರೋನವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಹೇರಲಾದ ಲಾಕ್‌ಡೌನ್‌ ನಿಂದ ಹದಗೆಟ್ಟಿದ್ದ ಆರ್ಥಿಕತೆಯು ನಿಧಾನವಾಗಿ ಚೇತರಿಸಿಕೊಳ್ಳುತ್ತಿರುವ ಸಮಯದಲ್ಲಿ ಕೇಂದ್ರ ಕಾರ್ಮಿಕ ಸಂಘಟನೆಗಳು  ಮುಷ್ಕರ ಘೋಷಿಸಿವೆ.  

ಮೂರು ಕೇಂದ್ರ ಕೃಷಿ ಕಾನೂನುಗಳ ವಿರುದ್ಧ ಆಂದೋಲನವನ್ನು ಮುನ್ನಡೆಸಿದ್ದ ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ನಾಯಕತ್ವದೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಮುಷ್ಕರಕ್ಕೆ ಕರೆ ನೀಡಲಾಗಿದೆ.

 ಜೂ.16ರಿಂದ ಸಿಇಟಿ ಪರೀಕ್ಷೆ, ಎ.5ರಿಂದ ಅರ್ಜಿ ಸಲ್ಲಿಕೆ ಆರಂಭ: ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ

ಜೂ.16ರಿಂದ ಸಿಇಟಿ ಪರೀಕ್ಷೆ, ಎ.5ರಿಂದ ಅರ್ಜಿ ಸಲ್ಲಿಕೆ ಆರಂಭ: ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ

 

ಜೂ.16ರಿಂದ ಸಿಇಟಿ ಪರೀಕ್ಷೆ, ಎ.5ರಿಂದ ಅರ್ಜಿ ಸಲ್ಲಿಕೆ ಆರಂಭ: ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ

ಬೆಂಗಳೂರು: 'ವೃತ್ತಿಶಿಕ್ಷಣಕ್ಕೆ ಪ್ರವೇಶಾವಕಾಶ ಕಲ್ಪಿಸುವ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು (CET)  ಈ ಬಾರಿ ಜೂನ್ 16, 17 ಮತ್ತು 18ರಂದು ನಡೆಸಲು ಉದ್ದೇಶಿಸಲಾಗಿದೆ' ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ.

ಈ ಕುರಿತು ಟ್ವೀಟ್ ಮೂಲಕ ಮಾಹಿತಿ ನೀಡಿರುವ ಸಚಿವರು, 16/06/2022 - ಜೀವಶಾಸ್ತ್ರ, ಗಣಿತ 17/06/2022 - ಭೌತಶಾಸ್ತ್ರ, ರಸಾಯನಶಾಸ್ತ್ರ 18/06/2022 - ಹೊರನಾಡು ಮತ್ತು ಗಡಿನಾಡ ಕನ್ನಡಿಗರಿಗೆ ಪರೀಕ್ಷೆ ನಡೆಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.

ಎಪ್ರಿಲ್‌ 05ರಿಂದ CET-2022ರ ನೋಂದಣಿ, ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಲಿದೆ ಎಂದು ಮಾಹಿತಿ ನೀಡಿದ್ದಾರೆ.

 ಆಸ್ಕರ್ಸ್ ವೇದಿಕೆಯಲ್ಲಿಯೇ ಕ್ರಿಸ್ ರಾಕ್ ಕೆನ್ನೆಗೆ ಬಾರಿಸಿದ ವಿಲ್ ಸ್ಮಿತ್

ಆಸ್ಕರ್ಸ್ ವೇದಿಕೆಯಲ್ಲಿಯೇ ಕ್ರಿಸ್ ರಾಕ್ ಕೆನ್ನೆಗೆ ಬಾರಿಸಿದ ವಿಲ್ ಸ್ಮಿತ್


ಆಸ್ಕರ್ಸ್ ವೇದಿಕೆಯಲ್ಲಿಯೇ ಕ್ರಿಸ್ ರಾಕ್ ಕೆನ್ನೆಗೆ ಬಾರಿಸಿದ ವಿಲ್ ಸ್ಮಿತ್

ಹೊಸದಿಲ್ಲಿ: ಲಾಸ್ ಏಂಜಲಿಸ್‍ನ ಡಾಲ್ಬಿ ಥಿಯೇಟರಿನಲ್ಲಿ ನಡೆದ 94ನೇ ಅಕಾಡೆಮಿ ಅವಾಡ್ರ್ಸ್ ಸಮಾರಂಭದಲ್ಲಿ ಅತ್ಯುತ್ತಮ ನಟ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿ ಗೆದ್ದ ಬೆನ್ನಲ್ಲೇ ಖ್ಯಾತ ನಟ ವಿಲ್ ಸ್ಮಿತ್ ಅವರು ಕಾರ್ಯಕ್ರಮದ ನಿರೂಪಕ ಕ್ರಿಸ್ ರಾಕ್ ಅವರ ಕೆನ್ನೆಗೆ ಬಾರಿಸಿ ಅವರನ್ನು ನಿಂದಿಸಿದ ಘಟನೆ ನಡೆದಿದೆ. ತಮ್ಮ ಪತ್ನಿ ಜಡಾ ಪಿಂಕೆಟ್ ಬಗ್ಗೆ ಕ್ರಿಸ್ ರಾಕ್ ಹಾರಿಸಿದ ಹಾಸ್ಯ ಚಟಾಕಿಯೊಂದು ವಿಲ್ ಸ್ಮಿತ್ ಅವರ ಕೋಪಕ್ಕೆ ಕಾರಣವಾಯಿತು ಎಂದು ವರದಿಯಾಗಿದೆ.

ಆದರೆ ಈ ಘಟನೆ ನಡೆದ ಕೆಲವೇ ಕ್ಷಣಗಳಲ್ಲಿ ವಿಲ್ ಸ್ಮಿತ್ ಕಣ್ಣೀರು ಸುರಿಸಿ ತಮ್ಮ ವರ್ತನೆಗೆ ಕ್ಷಮೆ ಯಾಚಿಸಿದರಾದೂ ಕ್ರಿಸ್ ರಾಕ್ ಅವರ ಬಳಿ ಕ್ಷಮೆ ಕೋರಲಿಲ್ಲ.

"ನಾನು ಅಕಾಡೆಮಿಗೆ ಕ್ಷಮೆ ಕೋರುತ್ತಿದ್ದೇನೆ. ನನ್ನೊಂದಿಗೆ ಪ್ರಶಸ್ತಿ ಪಡೆದ ಎಲ್ಲರಿಂದಲೂ ಕ್ಷಮೆಕೋರುತ್ತೇನೆ. ಇದೊಂದು ಸುಂದರ ಕ್ಷಣ ಆದರೆ ನಾನು ಪ್ರಶಸ್ತಿ ದೊರಕಿದೆ ಎಂಬ ಕಾರಣಕ್ಕೆ ಅಳುತ್ತಿಲ್ಲ,'' ಎಂದರು.

ವಿಲ್ ಸ್ಮಿತ್ ಅವರ ಪತ್ನಿ ಜಡಾ ಪಿಂಕೆಟ್ ಅವರ ಬೋಳು ತಲೆಯನ್ನು ಉಲ್ಲೇಖಿಸಿ ಕ್ರಿಸ್ ರಾಕ್ ಅವರು ಜಿಐ ಜೇನ್ ಹಾಸ್ಯ ಮಾಡಿದ್ದೇ ಈ ಘಟನೆಗೆ ಕಾರಣವೆನ್ನಲಾಗಿದೆ. ಜಡಾ ಪಿಂಕೆಟ್ ಅವರು ಅಲೋಪೇಶಿಯಾದಿಂದ ಬಳಲುತ್ತಿದ್ದಾರೆ. ಕ್ರಿಸ್ ರಾಕ್ ಅವರ ಮಾತುಗಳನ್ನು ಕೇಳುತ್ತಿದ್ದಂತೆ ಜಡಾ ಆಘಾತಗೊಂಡರು. ಆಗ ವಿಲ್ ಸ್ಮಿತ್ ಅವರು ವೇದಿಕೆಯೇರಿ ಕ್ರಿಸ್ ಅವರ ಕಪಾಳಕ್ಕೆ ಬಾರಿಸಿ ನಂತರ ತಮ್ಮ ಸ್ಥಾನಕ್ಕೆ ಹಿಂತಿರುಗಿ "ನನ್ನ ಪತ್ನಿಯನ್ನು ನಿನ್ನ ಕೆಟ್ಟ ಬಾಯಿಯಿಂದ ಹೊರಗಿಡು,'' ಎಂದು ಹೇಳಿದರು.

ಇದು ನಿಜವಾಗಿಯೂ ನಡೆದ ಒಂದು ಜಗಳವೇ ಅಥವಾ ಪೂರ್ವಯೋಜಿತ ನಾಟಕವೇ ಎಂಬ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾದರೂ ಅಂತಿಮವಾಗಿ ಇವುಗಳು ನಾಟಕವಲ್ಲ ಎಂದು ತಿಳಿದು ಬಂತು.

Sunday, 27 March 2022

 ಎಸೆಸೆಲ್ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಶುಭಾಶಯ, ಧೈರ್ಯ-ಆತ್ಮ ಸ್ಥೈರ್ಯದಿಂದ ಪರೀಕ್ಷೆ ಬರೆಯಿರಿ: ಯು.ಟಿ.ಖಾದರ್

ಎಸೆಸೆಲ್ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಶುಭಾಶಯ, ಧೈರ್ಯ-ಆತ್ಮ ಸ್ಥೈರ್ಯದಿಂದ ಪರೀಕ್ಷೆ ಬರೆಯಿರಿ: ಯು.ಟಿ.ಖಾದರ್

 

ಎಸೆಸೆಲ್ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಶುಭಾಶಯ, ಧೈರ್ಯ-ಆತ್ಮ ಸ್ಥೈರ್ಯದಿಂದ ಪರೀಕ್ಷೆ ಬರೆಯಿರಿ: ಯು.ಟಿ.ಖಾದರ್

ಮಂಗಳೂರು : ರಾಜ್ಯಾದ್ಯಂತ ಮಾ.28ರಿಂದ ಎಸೆಸೆಲ್ಸಿ ಪರೀಕ್ಷೆ ಆರಂಭವಾಗುತ್ತಿದ್ದು, ಪ್ರತಿಯೊಬ್ಬ ವಿದ್ಯಾರ್ಥಿಗೂ ಶುಭಾಶಯ ಸಲ್ಲಿಸುತ್ತಿದ್ದೇನೆ. ಧೈರ್ಯ ಮತ್ತು ಆತ್ಮ ಸ್ಥೈರ್ಯದಿಂದ ಪರೀಕ್ಷೆ ಬರೆದು ಉತ್ತಮ ಅಂಕ ಪಡೆದು ತಮ್ಮ ಭವಿಷ್ಯ ರೂಪಿಸಿಕೊಳ್ಳಿ, ಹೆತ್ತವರು ತಮ್ಮ ಮಕ್ಕಳಿಗೆ ಪ್ರೋತ್ಸಾಹ ನೀಡಿ ಸುಗಮವಾಗಿ ಪರೀಕ್ಷೆ ಬರೆಯುವಂತೆ ನೋಡಿಕೊಳ್ಳಿ ಎಂದು ಯು.ಟಿ.ಖಾದರ್ ತಿಳಿಸಿದರು.

ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ಗಮನಕ್ಕೆ

▪️ಸರಕಾರಿ ಶಾಲೆಗಳಿಗೆ ಸಂಬಂಧಿಸಿದ ವಿದ್ಯಾರ್ಥಿಗಳು ಸರಕಾರ ನಿಗದಿಪಡಿಸಿದ ಸಮವಸ್ತ್ರದೊಂದಿಗೆ ಪರೀಕ್ಷೆ ಬರೆಯಬಹುದು.

▪️ಖಾಸಗಿ ವಿದ್ಯಾ ಸಂಸ್ಥೆಗಳು ತಮ್ಮ ತಮ್ಮ ಆಡಳಿತ ಮಂಡಳಿ ನಿಗದಿಪಡಿಸಿದ ವಸ್ತ್ರ ಸಂಹಿತೆಯ ಪ್ರಕಾರ ಪರೀಕ್ಷೆ ಬರೆಯಬಹುದು.

▪️ಖಾಸಗಿ ಶಾಲೆಗಳ ವಿದ್ಯಾರ್ಥಿಗಳು ತಮ್ಮ ಪರೀಕ್ಷೆ ಬರೆಯಲು ಇತರ ಕೇಂದ್ರಗಳಿಗೆ ಹೋಗುವಾಗ ತಾವು ಕಲಿಯುತ್ತಿರುವ ಶಾಲೆ ಸೂಚಿಸಿರುವ ವಸ್ತ್ರಗಳನ್ನು ಹಾಕಿ ಪರೀಕ್ಷೆ ಬರೆಯಲು ಅವಕಾಶವಿದೆ. ಅದಕ್ಕಾಗಿ ಖಾಸಗಿ ವಿದ್ಯಾ ಸಂಸ್ಥೆಯ, ಶಾಲೆಯ ಮುಖ್ಯಸ್ಥರು ತಮ್ಮ ವಿದ್ಯಾರ್ಥಿಗಳ ಪಟ್ಟಿಯ ಜೊತೆಗೆ ತಮ್ಮ ಸಂಸ್ಥೆ ನಿಗದಿಪಡಿಸಿದ ಸಮವಸ್ತ್ರ ಶೈಲಿಯ ವಿವರವನ್ನು ಪರೀಕ್ಷಾ ಕೇಂದ್ರದ ಮುಖ್ಯ ಶಿಕ್ಷಕರಿಗೆ ನೀಡತಕ್ಕದ್ದು.

▪️ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯಲ್ಲಿ ಪರೀಕ್ಷೆ ಬರೆಯಲು ತೊಂದರೆಯಾಗದಂತೆ ಕ್ರಮ ಕೈಗೊಳ್ಳಲು ಸಿ.ಆರ್.ಪಿ (ಸಮೂಹ ಸಂಪನ್ಮೂಲ ವ್ಯಕ್ತಿ)ಗಳಿಗೆ ಸೂಚನೆ ನೀಡಲಾಗಿದೆ.

ಈ ನಿಯಮವು ರಾಜ್ಯಾದ್ಯಂತ ಎಲ್ಲಾ ವಿದ್ಯಾರ್ಥಿಗಳಿಗೆ ಅನ್ವಯಿಸುತ್ತಿದ್ದು ಕ್ರಮಬದ್ಧವಾಗಿ ಅನುಷ್ಠಾನಗೊಳಿಸಲು ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳು ಹಾಗೂ ಶಿಕ್ಷಣಾಧಿಕಾರಿಗಳು ಕ್ರಮ ಕೈಗೊಳ್ಳಬೇಕು. ರಾಜ್ಯದಾದ್ಯಂತ ಈ ವ್ಯವಸ್ಥೆಗೆ ಅವಕಾಶ ಕಲ್ಪಿಸಿದ ಶಿಕ್ಷಣ ಸಚಿವರಿಗೆ, ಇಲಾಖೆಗೆ ಹಾಗೂ ಪ್ರತೀ ಜಿಲ್ಲೆಯ ಜಿಲ್ಲಾಡಳಿತಕ್ಕೆ ಕೃತಜ್ಞತೆ ಸಲ್ಲಿಸುತ್ತಿದ್ದೇನೆ ವಿಪಕ್ಷ ಉಪ ನಾಯಕರಾದ ಯು.ಟಿ.ಖಾದರ್ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

 ಎಸೆಸೆಲ್ಸಿ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಸಮವಸ್ತ್ರ ಕಡ್ಡಾಯ: ಸಚಿವ ಬಿ.ಸಿ. ನಾಗೇಶ್

ಎಸೆಸೆಲ್ಸಿ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಸಮವಸ್ತ್ರ ಕಡ್ಡಾಯ: ಸಚಿವ ಬಿ.ಸಿ. ನಾಗೇಶ್


 ಎಸೆಸೆಲ್ಸಿ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಸಮವಸ್ತ್ರ ಕಡ್ಡಾಯ: ಸಚಿವ ಬಿ.ಸಿ. ನಾಗೇಶ್

ಬಾಗಲಕೋಟೆ: ‘2021-22ನೆ ಸಾಲಿನ ಎಸೆಸೆಲ್ಸಿ ಮುಖ್ಯ ಪರೀಕ್ಷೆಗಳು ನಾಳೆ(ಮಾ.28) ಸೋಮವಾರದಿಂದ ಎ.11ರ ವರೆಗೆ ನಡೆಯಲ್ಲಿದ್ದು, ವಿದ್ಯಾರ್ಥಿಗಳು ಸಮವಸ್ತ್ರವನ್ನು ಕಡ್ಡಾಯವಾಗಿ ಧರಿಸಬೇಕಾಗಿದ್ದು, ಯಾವುದೇ ಧಾರ್ಮಿಕ ಭಾವನೆ ಪ್ರತಿನಿಧಿಸುವ ವಸ್ತ್ರಧರಿಸಿ ಬರಲು ಅವಕಾಶವಿಲ್ಲ. ಪುನರಾವರ್ತಿತ ವಿದ್ಯಾರ್ಥಿಗಳು ಹಾಗೂ ಖಾಸಗಿ ವಿದ್ಯಾರ್ಥಿಗಳಾಗಿ ನೋಂದಾಯಿಸಿ ಪರೀಕ್ಷೆಗೆ ಹಾಜರಾಗುವವರು ಸಮವಸ್ತ್ರವನ್ನು ಧರಿಸುವಂತಿಲ್ಲ' ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಸ್ಪಷ್ಟಪಡಿಸಿದ್ದಾರೆ.

ರವಿವಾರ ಜಿಲ್ಲೆಯ ಜಮಖಂಡಿ ಸರಕಾರಿ ಬಾಲಕರ ಪದವಿ ಪೂರ್ವ ಕಾಲೇಜಿಗೆ ಭೇಟಿ ನೀಡಿ ಎಸೆಸೆಲ್ಸಿ ಪರೀಕ್ಷಾ ಕೇಂದ್ರದಲ್ಲಿ ಸಿದ್ದತೆಗಳನ್ನು ಪರಿಶೀಲಿಸಿ ಮಾತನಾಡಿದ ಅವರು, ‘ರಾಜ್ಯದಲ್ಲಿ ಒಟ್ಟು 3,444 ಪರೀಕ್ಷಾ ಕೇಂದ್ರಗಳಲ್ಲಿ 8,73,846 ಮಕ್ಕಳು ಪರೀಕ್ಷೆ ಬರೆಯಲಿದ್ದಾರೆ. ಎಲ್ಲ ಕೇಂದ್ರಗಳಲ್ಲಿ ವಿವಿಧ ಸ್ತರದ ಅಧಿಕಾರಿಗಳು, ಶಿಕ್ಷಕರು, ಸಿಬ್ಬಂದಿ ನಿಯೋಜನೆ ಮಾಡಲಾಗಿದೆ' ಎಂದರು.

‘ಸರಕಾರದ ನಿಯಮಗಳ ಪ್ರಕಾರ, ಹೈಕೋರ್ಟ್ ತೀರ್ಪಿನಂತೆ ಆಯಾ ಶಾಲೆಯ ಸಮವಸ್ತ್ರವನ್ನು ಧರಿಸಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಾರೆ ಎಂಬ ವಿಶ್ವಾಸವಿದೆ. ಸಾಕಷ್ಟು ವಿದ್ಯಾರ್ಥಿಗಳು ಹೈಕೋರ್ಟ್ ಆದೇಶ ಹಾಗೂ ಸರಕಾರದ ಅಧಿಸೂಚನೆಯನ್ನು ತುಂಬಾ ಶಿಸ್ತಿನಿಂದ ಅನುಸರಿಸಿದ್ದಾರೆ. ಆದರೆ ಸರಕಾರದ ಆದೇಶವನ್ನು ವಿರೋಧಿಸಿದ ಕೆಲವು ವಿದ್ಯಾರ್ಥಿಗಳು ಪರೀಕ್ಷೆಯ ಅನಿವಾರ್ಯತೆ ಅರ್ಥ ಮಾಡಿಕೊಂಡು ಪರೀಕ್ಷೆಗೆ ಹಾಜರಾಗುತ್ತಾರೆ ಎಂದು ನಾಗೇಶ್ ವಿಶ್ವಾಸ ವ್ಯಕ್ತಪಡಿಸಿದರು.

‘ಎಸೆಸೆಲ್ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ಪೈಕಿ, ನೂರು ಮಕ್ಕಳು ಶಾಲೆ ಬಹಿಷ್ಕಾರ ಮಾಡಿರಬಹುದು. ಪರೀಕ್ಷೆಗೆ ಎಲ್ಲ ವಿದ್ಯಾರ್ಥಿಗಳು ಹಾಜರಾಗುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಎಲ್ಲರೂ ಸಾಕಷ್ಟು ಮನವಿ ಮಾಡಿದ್ದೇವೆ. ಕುದುರೆಯನ್ನು ಎಳೆದುಕೊಂಡು ಹೋಗಬಹುದು. ಆದರೆ, ನೀರು ಕುಡಿಸುವುದಕ್ಕೆ ಆಗುವುದಿಲ್ಲ. ಗೈರಾದವರಿಗೆ ಮರು ಪರೀಕ್ಷೆಯನ್ನು ನಡೆಸುವುದಿಲ್ಲ, ಬದಲಾಗಿ ಒಂದು ತಿಂಗಳ ನಂತರ ಪೂರಕ ಪರೀಕ್ಷೆ ನಡಿಯುತ್ತದೆ. ಅದನ್ನು ಬೇಕಾದರೆ ತೆಗೆದುಕೊಳ್ಳಬಹುದು. ಅದನ್ನು ಹೊರತುಪಡಿಸಿ ಬೇರೆ ಅವಕಾಶ ಇರುವುದಿಲ್ಲ. ಬೇರೆಯವರಿಗಾಗಿ ನೀವು ಬಲಿಪಶು ಆಗಬೇಡಿ. ಅಹಂ ಬಿಟ್ಟು ಪರೀಕ್ಷೆಗೆ ಹಾಜರಾಗಿ' ಎಂದು ಅವರು ಮನವಿ ಮಾಡಿದರು.

ಈ ಬಾರಿ ಪ್ರಶ್ನೆ ಪತ್ರಿಕೆಗಳಲ್ಲಿ ಪರ್ಯಾಯ ಪ್ರಶ್ನೆಗಳನ್ನು ಹೆಚ್ಚಿಸಲಾಗಿದ್ದು, ವಿದ್ಯಾರ್ಥಿಗಳು ಧೈರ್ಯವಾಗಿ ಪರೀಕ್ಷೆ ಬರೆಯಬೇಕು. ಅವರಿಗೆಲ್ಲ ಒಳ್ಳೆಯದಾಗುತ್ತದೆ ಎಂದು ಶಿಕ್ಷಣ ಸಚಿವ ನಾಗೇಶ್ ಅವರು ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಪರೀಕ್ಷಾ ಕೇಂದ್ರದ ಸುತ್ತ ನಿಷೇಧಾಜ್ಞೆ: ‘ಎಸೆಸೆಲ್ಸಿ ಪರೀಕ್ಷೆಯ ಪ್ರವೇಶ ಪತ್ರವನ್ನು ಅಥವಾ ವಿದ್ಯಾರ್ಥಿ ಪಾಸನ್ನು ತೋರಿಸಿಕೊಂಡು ಕೆಎಸ್ಸಾರ್ಟಿಸಿ ಮತ್ತು ಬಿಎಂಟಿಸಿ ಬಸ್‍ಗಳಲ್ಲಿ ಮನೆಯಿಂದ ಪರೀಕ್ಷಾ ಕೇಂದ್ರಗಳಿಗೆ ವಿದ್ಯಾರ್ಥಿಗಳು ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ. ಎಸೆಸೆಲ್ಸಿ ಪರೀಕ್ಷೆ ದೋಷರಹಿತ ಹಾಗೂ ಸುಸೂತ್ರವಾಗಿ ನಡೆಬೇಕೆಂದು ಪರೀಕ್ಷೆ ನಡೆಯುವ ಸಮಯದಲ್ಲಿ ಪರೀಕ್ಷಾ ಕೇಂದ್ರಗಳ 200 ಮೀ. ವ್ಯಾಪ್ತಿಯ ಪ್ರದೇಶವನ್ನು ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಈ ವ್ಯಾಪ್ತಿಯಲ್ಲಿ ಬರುವ ಎಲ್ಲ ಜೆರಾಕ್ಸ್, ಸೈಬರ್, ಕಂಪ್ಯೂಟರ್ ಸೆಂಟರ್‍ಗಳನ್ನು ಮುಚ್ಚಲು ಈಗಾಗಲೇ ಆದೇಶಿಸಲಾಗಿದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.

 ಕರ್ನಾಟಕದ ದುಃಸ್ಥಿತಿಗೆ ಸಿದ್ದರಾಮಯ್ಯ ಮೂಲ ಕಾರಣ: ಕುಮಾರಸ್ವಾಮಿ ಆರೋಪ

ಕರ್ನಾಟಕದ ದುಃಸ್ಥಿತಿಗೆ ಸಿದ್ದರಾಮಯ್ಯ ಮೂಲ ಕಾರಣ: ಕುಮಾರಸ್ವಾಮಿ ಆರೋಪ


 ಕರ್ನಾಟಕದ ದುಃಸ್ಥಿತಿಗೆ ಸಿದ್ದರಾಮಯ್ಯ ಮೂಲ ಕಾರಣ: ಕುಮಾರಸ್ವಾಮಿ ಆರೋಪ

ಕೋಲಾರ: ರಾಜ್ಯದಲ್ಲಿ ಉಂಟಾಗಿರುವ ಅಶಾಂತಿಯ ವಾತಾವರಣ ಮತ್ತು ಎಲ್ಲ ಅಹಿತಕರ ಘಟನೆಗಳಿಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರೇ ಮೂಲ ಕಾರಣ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಆರೋಪ ಮಾಡಿದರು.

ಕೋಲಾರದಲ್ಲಿಂದು ಮಾಧ್ಯಮಗಳ ಜತೆ ಮಾತುನಾಡುತ್ತಾ ಪ್ರತಿಪಕ್ಷ ನಾಯಕರ ವಿರುದ್ಧ ಟೀಕಾಪ್ರಹಾರ ನಡೆಸಿದ ಅವರು; “ಧಾರ್ಮಿಕ ಸ್ಥಳಗಳಲ್ಲಿ, ಜಾತ್ರೆಗಳಲ್ಲಿ ಒಂದು ಧರ್ಮದ ಜನರಿಗೆ ವ್ಯಾಪಾರ ಮಾಡಲು ಬಿಡುತ್ತಿಲ್ಲ, ಹಿಜಾಬ್‌ ಕೇಸರಿ ಶಾಲು ಅಂತ ಹೇಳಿ ಶಾಲೆ ಕಾಲೇಜುಗಳಲ್ಲಿ ಸಂಘರ್ಷ ಉಂಟು ಮಾಡಲಾಯಿತು. ಇದೆಲ್ಲಕ್ಕೂ ಕಾರಣ ಆ ಮಹಾನುಭಾವವರೇ (ಸಿದ್ದರಾಮಯ್ಯ) ಕಾರಣ ಎಂದು ದೂರಿದರು.

2018ರಲ್ಲಿ ರಚನೆಯಾದ ಮೈತ್ರಿ ಸರಕಾರದ ಪತನಕ್ಕೆ ಕಾರಣರಾದ ಸಿದ್ದರಾಮಯ್ಯ ಬಿಜೆಪಿ ಸರಕಾರ ಬರಲು ಸಹಕಾರ ನೀಡಿದರು ಎಂದು ಕುಮಾರಸ್ವಾಮಿ ಅವರು ಆರೋಪಿಸಿದರು.

ರಾಜ್ಯದ ಹಿತದೃಷ್ಟಿಯಿಂದ ನಮಗೆ ಇಷ್ಟವಿಲ್ಲದಿದ್ದರೂ ಕಾಂಗ್ರೆಸ್ ಜತೆ ಸರಕಾರ ಮಾಡಲು ಒಪ್ಪಿಕೊಂಡೆವು. ಎರಡೂ ರಾಷ್ಟ್ರೀಯ ಪಕ್ಷಗಳ ವಿರುದ್ಧ ಹೋರಾಟ ನಡೆಸುತ್ತಿದ್ದ ನಾವು ಅವರ ಜತೆ ಕೈಜೋಡಿಸಿದೆವು. 2004ರಲ್ಲೂ ನಾವು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿದ್ದೆವು. ಆಗ ನಮ್ಮನ್ನು ಅಪಮಾನಿಸಿ ಚಿತ್ರಹಿಂಸೆ ನೀಡಿದರು. ಆಗ ಅನಿವಾರ್ಯವಾಗಿ ನಾವು ಬೇರೆ ತೀರ್ಮಾನಗಳನ್ನು ಮಾಡಬೇಕಾಯಿತು. ಅದಕ್ಕೂ ಸಿದ್ದರಾಮಯ್ಯನವರೇ ಮೂಲ ಕಾರಣ ಎಂದು ಅವರು ಹೇಳಿದರು.

2018ರ ವಿಧಾನಸಭೆ ಚುನಾವಣೆ ವೇಳೆ ಜೆಡಿಎಸ್ ಪಕ್ಷವೂ ಬಿಜೆಪಿಯ ಬೀ ಟೀಂ ಎಂದು ದುಪ್ಷ್ರಚಾರ ಮಾಡಿದರು. ಹೀಗಾಗಿ ಬಿಜೆಪಿ 105 ಕ್ಷೇತ್ರಗಳಲ್ಲಿ ಗೆದ್ದಿತು. ಇಲ್ಲವಾಗಿದ್ದಿದ್ದರೆ ಅವರು 75 ಸ್ಥಾನಗಳ ಒಳಗೇ ಇರುತ್ತಿದ್ದರು. ಈಗ ಅವರು ಇದೇ ಮಹಾನುಭಾವರ ಸಹಕಾರದಿಂದ ಅಧಿಕಾರಕ್ಕೆ ಬಂದು ರಾಜ್ಯದಲ್ಲಿ ಅಶಾಂತಿ ಉಂಟು ಮಾಡುತ್ತಿದ್ದಾರೆ. ಅದಕ್ಕೆ ಮೂಲ ಕಾರಣ ಇವರೇ ಅಲ್ಲವೇ ಎಂದು ಕುಮಾರಸ್ವಾಮಿ ಅವರು ಕಿಡಿಕಾರಿದರು.

ಈಗ ಜೆಡಿಎಸ್, ಬಿಜೆಪಿಯೊಂದಿಗೆ ಅಡ್ಜಸ್ಟಮೆಂಟ್ ಮಾಡಿಕೊಂಡಿದೆ ಎಂದು ಸಿದ್ದರಾಮಯ್ಯ ಅಪಪ್ರಚಾರ ಮಾಡುತ್ತಿದ್ದಾರೆ. ಇದೊಂದೇ ಈಗ ಬಾಕಿ ಉಳಿದಿರೋದು. ಅವರು ಬಿಜೆಪಿ ಜತೆ ಏನೆಲ್ಲ ಒಳ ಸಂಬಂಧ ಹೊಂದಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ. 2018ರಲ್ಲಿ ನಡೆದ ಇವರ ಆಟ ಇನ್ನು ಮುಂದೆ ನಡೆಯಲ್ಲ. ಅವರ ತಲೆಯಲ್ಲಿ ಸರಕಿಲ್ಲ, ಅದಕ್ಕೆ ಜೆಡಿಎಸ್ ಜಪ ಮಾಡುತ್ತಿದ್ದಾರೆ ಎಂದು ಕುಮಾರಸ್ವಾಮಿ ಅವರು ಛೇಡಿಸಿದರು.

ರಾಜ್ಯದಲ್ಲಿ ಜನರು ಶಾಂತಿಯುತವಾಗಿ ಬಾಳ್ವೆ ಮಾಡುವ, ನೆಮ್ಮದಿಯ ಜೀವನ ನಡೆಸುವುದು ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳಿಗೆ ಬೇಕಿಲ್ಲ. ಅವರಿಗೆ ಬೇಕಿರುವುದು ಕೇವಲ ಅಧಿಕಾರ ಮಾತ್ರ. ಅಧಿಕಾರಕ್ಕಾಗಿ ಅವರು ಏನನ್ನು ಮಾಡಲಿಕ್ಕೂ  ಹೇಸುವುದಿಲ್ಲ. ರಾಜ್ಯದ ಭಾವೈಕ್ಯತೆಯನ್ನು ಎರಡೂ ಪಕ್ಷಗಳು ಹಾಳು ಮಾಡುತ್ತಿವೆ. ಧರ್ಮದ ಧರ್ಮದ ನಡುವೆ ಸಂಘರ್ಷ ಉಂಟು ಮಾಡಿ ಶಾಂತಿ ಹಾಳು ಮಾಡುವುದೇ ಇವರ ಉದ್ದೇಶ. ಬಿಜೆಪಿ-ಕಾಂಗ್ರೆಸ್ ಪಕ್ಷಗಳು ಒಂದೇ ನಾಣ್ಯದ ಎರಡು ಮುಖಗಳು ಎಂದು ಆರೋಪಿಸಿದರು.

 ಜಮ್ಮು-ಕಾಶ್ಮೀರ: ವಿಶೇಷ ಪೊಲೀಸ್ ಅಧಿಕಾರಿ, ಅವರ ಸಹೋದರನನ್ನು ಹತ್ಯೆಗೈದ ಉಗ್ರರು

ಜಮ್ಮು-ಕಾಶ್ಮೀರ: ವಿಶೇಷ ಪೊಲೀಸ್ ಅಧಿಕಾರಿ, ಅವರ ಸಹೋದರನನ್ನು ಹತ್ಯೆಗೈದ ಉಗ್ರರು


 ಜಮ್ಮು-ಕಾಶ್ಮೀರ: ವಿಶೇಷ ಪೊಲೀಸ್ ಅಧಿಕಾರಿ, ಅವರ ಸಹೋದರನನ್ನು ಹತ್ಯೆಗೈದ ಉಗ್ರರು

ಶ್ರೀನಗರ: ಜಮ್ಮು-ಕಾಶ್ಮೀರದ ಬುದ್ಗಾಮ್ ಜಿಲ್ಲೆಯಲ್ಲಿ ಉಗ್ರರು ಗುಂಡಿನ ದಾಳಿ ನಡೆಸಿದ ನಂತರ ವಿಶೇಷ ಪೊಲೀಸ್ ಅಧಿಕಾರಿ ಮತ್ತು ಅವರ ಸಹೋದರ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಉಗ್ರರು ಅಧಿಕಾರಿ ಇಶ್ಫಾಕ್ ಅಹ್ಮದ್ ಅವರನ್ನು ಬುದ್ಗಾಮ್‌ನ ಚಾದ್‌ಬುಗ್ ಗ್ರಾಮದ ಅವರ ಮನೆಯಲ್ಲಿ ಗುಂಡಿಕ್ಕಿ ಕೊಂದಿದ್ದಾರೆ ಎಂದು ಜಮ್ಮು-ಕಾಶ್ಮೀರ ಪೊಲೀಸರು ತಿಳಿಸಿದ್ದಾರೆ.

ಉಗ್ರರು ಇಶ್ಫಾಕ್ ಅಹ್ಮದ್ ಅವರ ಸಹೋದರ ಉಮರ್ ಜಾನ್‌ನ ಮೇಲೂ ಗುಂಡು ಹಾರಿಸಿದ್ದು ತೀವ್ರ ಗಾಯಗೊಂಡಿದ್ದ ವಿದ್ಯಾರ್ಥಿ  ಉಮರ್ ಜಾನ್ ಶ್ರೀನಗರದ ಶೇರ್-ಇ-ಕಾಶ್ಮೀರ್ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಮೃತಪಟ್ಟಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.

ದಾಳಿ ನಡೆದ ಪ್ರದೇಶವನ್ನು ಸುತ್ತುವರಿದಿದ್ದು, ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

ಎನ್‌ಡಿಟಿವಿ ಪ್ರಕಾರ, ಕಳೆದೊಂದು ತಿಂಗಳಲ್ಲಿ ಬುದ್ಗಾಮ್‌ನಲ್ಲಿ ಉಗ್ರರು ನಡೆಸಿದ ಮೂರನೇ ದಾಳಿ ಇದಾಗಿದೆ.

 ಉತ್ತರಪ್ರದೇಶ ಚುನಾವಣೆಯಲ್ಲಿ ಪಕ್ಷದ ಹೀನಾಯ ಸೋಲು: ಸಂಪೂರ್ಣ ಕಾರ್ಯಕಾರಿ ಮಂಡಳಿ ವಿಸರ್ಜಿಸಿದ ಬಿಎಸ್ಪಿ

ಉತ್ತರಪ್ರದೇಶ ಚುನಾವಣೆಯಲ್ಲಿ ಪಕ್ಷದ ಹೀನಾಯ ಸೋಲು: ಸಂಪೂರ್ಣ ಕಾರ್ಯಕಾರಿ ಮಂಡಳಿ ವಿಸರ್ಜಿಸಿದ ಬಿಎಸ್ಪಿ


 ಉತ್ತರಪ್ರದೇಶ ಚುನಾವಣೆಯಲ್ಲಿ ಪಕ್ಷದ ಹೀನಾಯ ಸೋಲು: ಸಂಪೂರ್ಣ ಕಾರ್ಯಕಾರಿ ಮಂಡಳಿ ವಿಸರ್ಜಿಸಿದ ಬಿಎಸ್ಪಿ

ಲಕ್ನೊ: ಉತ್ತರಪ್ರದೇಶ ಚುನಾವಣೆಯಲ್ಲಿ ಬಹುಜನ ಸಮಾಜ ಪಕ್ಷದ(ಬಿಎಸ್ ಪಿ)  ಹೀನಾಯ ಸೋಲಿನ ಹಿನ್ನೆಲೆಯಲ್ಲಿ ಬಿಎಸ್ಪಿ  ರಾಜ್ಯಾಧ್ಯಕ್ಷ, ವಿಧಾನಸಭಾ ಸ್ಪೀಕರ್ ಹಾಗೂ  ಜಿಲ್ಲಾಧ್ಯಕ್ಷ ಹುದ್ದೆಗಳನ್ನು ಹೊರತುಪಡಿಸಿ ಪಕ್ಷದ ಕಾರ್ಯಕಾರಿಣಿಯನ್ನು ರವಿವಾರ ವಿಸರ್ಜಿಸಲಾಯಿತು.

ವಿಧಾನಸಭಾ ಚುನಾವಣೆಯ ಸೋಲಿನ ನಂತರ ಮಾರ್ಚ್ 27 ರಂದು ಲಕ್ನೋದಲ್ಲಿ ಪಕ್ಷವು ಪರಿಶೀಲನಾ ಸಭೆಗೆ ಕರೆದಿದೆ.

ಅನೇಕ ಪ್ರಮುಖ ಪುನರ್ರಚನೆಗಳನ್ನು ನಿರೀಕ್ಷಿಸಲಾಗಿದೆ. ಹೊಸ ಮುಖಗಳಿಗೆ ವಿಭಾಗೀಯ ಮಟ್ಟದಲ್ಲಿ ಸ್ಥಾನ ಸಿಗಬಹುದು.

 ಕೇರಳ: ಜನರ ಮೇಲೆ ಗುಂಡು ಹಾರಿಸಿದ ಪಾನಮತ್ತ ವ್ಯಕ್ತಿ, ಓರ್ವ ಮೃತ್ಯು

ಕೇರಳ: ಜನರ ಮೇಲೆ ಗುಂಡು ಹಾರಿಸಿದ ಪಾನಮತ್ತ ವ್ಯಕ್ತಿ, ಓರ್ವ ಮೃತ್ಯು


 ಕೇರಳ: ಜನರ ಮೇಲೆ ಗುಂಡು ಹಾರಿಸಿದ ಪಾನಮತ್ತ ವ್ಯಕ್ತಿ, ಓರ್ವ ಮೃತ್ಯು

ಇಡುಕ್ಕಿ: ಮೂಲಮಟ್ಟಂನಲ್ಲಿ ಮದ್ಯದ ಅಮಲಿನಲ್ಲಿದ್ದ ವ್ಯಕ್ತಿಯೋರ್ವ ದೇಶಿ ನಿರ್ಮಿತ ಬಂದೂಕಿನಿಂದ ಜನರ ಮೇಲೆ ಗುಂಡು ಹಾರಿಸಿದ ಪರಿಣಾಮ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಮತ್ತೋರ್ವ ಗಾಯಗೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಇಡುಕ್ಕಿ ನಿವಾಸಿ ಸನಲ್ ಬಾಬು (33 ವರ್ಷ) ಗುಂಡಿನ ದಾಳಿಯಲ್ಲಿ ಪ್ರಾಣ ಕಳೆದುಕೊಂಡಿದ್ದಾನೆ. ಸನಿಲ್ ಬಾಬು ಸ್ನೇಹಿತ ಪ್ರದೀಪ್ ಗಾಯಗೊಂಡಿದ್ದು, ಆತನನ್ನು ಕೋಳಂಚೇರಿ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ.

ಗುಂಪಿನ ಮೇಲೆ ಗುಂಡು ಹಾರಿಸಿದ ಫಿಲಿಪ್ ಮಾರ್ಟಿನ್ (33) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಶನಿವಾರ ತಡರಾತ್ರಿ ಈ ಘಟನೆ ನಡೆದಿದ್ದು, ಮಾರ್ಟಿನ್ ಹಾಗೂ  ಆತನ ಸ್ನೇಹಿತ ದಾರಿಬದಿಯ ಉಪಾಹಾರ ಗೃಹಕ್ಕೆ ಬಂದು ಆಹಾರ ಕೇಳಿದ್ದಾರೆ.

"ಊಟವಿಲ್ಲ ಎಂಬ ಕಾರಣಕ್ಕೆ  ಇಬ್ಬರೂ ಉಪಾಹಾರ ಗೃಹದ ಮಾಲಿಕರನ್ನು ನಿಂದಿಸಲಾರಂಭಿಸಿದರು. ಉಪಾಹಾರ ಗೃಹದಲ್ಲಿದ್ದವರು ಅದನ್ನು ವಿರೋಧಿಸಿದರು. ಕೋಪಗೊಂಡ ಮಾರ್ಟಿನ್, ಹತ್ತಿರದ ತನ್ನ ಮನೆಗೆ ಹೋಗಿ ಬಂದೂಕು ತಂದು  ಗಾಳಿಯಲ್ಲಿ ಗುಂಡು ಹಾರಿಸಿದ್ದಾನೆ" ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಗಾಳಿಯಲ್ಲಿ ಗುಂಡು ಹಾರಿಸಿದ ನಂತರ, ಮಾರ್ಟಿನ್ ಹೊರಡಲು ಕಾರನ್ನು ಹತ್ತಿದ್ದ. ಆದರೆ ಜನಸಂದಣಿಯನ್ನು ನೋಡಿ ವಾಹನದಿಂದ ಹೊರಬಂದ ಹಾಗೂ  ಮತ್ತೆ ಗುಂಡು ಹಾರಿಸಿದ. ಈ ಸಮಯದಲ್ಲಿ ಆ ಪ್ರದೇಶದ ಮೂಲಕ ಪ್ರಯಾಣಿಸುತ್ತಿದ್ದ ಇಬ್ಬರಿಗೆ ಗುಂಡು ತಗಲಿದೆ. ಒಬ್ಬರು ಸ್ಥಳದಲ್ಲೇ ಸಾವನ್ನಪ್ಪಿದರೆ, ಇನ್ನೊಬ್ಬ ಗಾಯಗೊಂಡಿದ್ದಾರೆ" ಎಂದು ಅಧಿಕಾರಿ ಹೇಳಿದರು.

Saturday, 26 March 2022

 ಯಾವುದೇ ಕಾರಣಕ್ಕೂ ನಮ್ಮ ಸಮುದಾಯ ಶಿಕ್ಷಣದಿಂದ ವಂಚಿತರಾಗಬಾರದು: ಖಾಝಿ ಝೈನುಲ್ ಉಲಮಾ ಎಂ.ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ

ಯಾವುದೇ ಕಾರಣಕ್ಕೂ ನಮ್ಮ ಸಮುದಾಯ ಶಿಕ್ಷಣದಿಂದ ವಂಚಿತರಾಗಬಾರದು: ಖಾಝಿ ಝೈನುಲ್ ಉಲಮಾ ಎಂ.ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ


 ಯಾವುದೇ ಕಾರಣಕ್ಕೂ ನಮ್ಮ ಸಮುದಾಯ ಶಿಕ್ಷಣದಿಂದ ವಂಚಿತರಾಗಬಾರದು: ಖಾಝಿ ಝೈನುಲ್ ಉಲಮಾ ಎಂ.ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ

ಉಡುಪಿ : ಎಸೆಸೆಲ್ಸಿ ವಿದ್ಯಾರ್ಥಿಗಳ ವಾರ್ಷಿಕ ಪರೀಕ್ಷೆ ಸೋಮವಾರದಿಂದ ಆರಂಭವಾಗಲಿದ್ದು, ನಂತರದ ದಿನಗಳಲ್ಲಿ ಪದವಿ ಪೂರ್ವ ವಾರ್ಷಿಕ ಪರೀಕ್ಷೆಗಳು ನಡೆಯಲಿವೆ. ಹೆತ್ತವರು ತಮ್ಮ ಮಕ್ಕಳ ಪರೀಕ್ಷೆಯ ವಿಷಯದಲ್ಲಿ ಗಮನಹರಿಸಬೇಕು. ಸೂಕ್ಷ್ಮ ವಿಷಯಗಳನ್ನು ದೀರ್ಘ ದೃಷ್ಠಿಯಿಂದ ನೋಡಬೇಕು. ದೇಶದಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆ ತರುವ ಕಾರ್ಯ ನಮ್ಮಿಂದ ಆಗಬಾರದು ಎಂದು ಉಡುಪಿ ಜಿಲ್ಲಾ ಸಂಯುಕ್ತ ಜಮಾಅತ್ ಖಾಝಿ ಝೈನುಲ್ ಉಲಮಾ ಎಂ.ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ತಿಳಿಸಿದ್ದಾರೆ.

ವಿದ್ಯಾರ್ಥಿನಿಯರ ಶಿರವಸ್ತ್ರ ಸಮಸ್ಯೆ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದು, ಸುಪ್ರೀಂ ಕೋರ್ಟ್‌ ಮೇಲೆ ನಮಗೆ ಸಂಪೂರ್ಣ ವಿಶ್ವಾಸವಿದೆ. ಯಾವುದೇ ಕಾರಣಕ್ಕೂ ನಮ್ಮ ಸಮುದಾಯ ಶಿಕ್ಷಣದಿಂದ ವಂಚಿತರಾಗಬಾರದು. ಜಾತ್ಯತೀತ ರಾಷ್ಟ್ರವಾದ ಈ ಭಾರತದ ಸಂವಿಧಾನವು ಅವರವರ ಧರ್ಮದ ಆಚರಣೆಗಳನ್ನು ಮಾಡಲು ಅವಕಾಶವನ್ನು ನೀಡಿದೆ. ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಮಾಡುವ ತಪ್ಪು ಮಾಹಿತಿಗಳೇ ಇಷ್ಟೊಂದು ಸಮಸ್ಯೆಗಳು ಬಿಗಡಾಯಿಸಲು ಪ್ರಮುಖ ಕಾರಣವಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 ವಿಧಾನಸಭೆ ಚುನಾವಣೆ: ಶಿಗ್ಗಾಂವಿ ಕ್ಷೇತ್ರದಿಂದಲೇ ಸ್ಪರ್ಧಿಸುತ್ತೇನೆ; ಸಿಎಂ ಬೊಮ್ಮಾಯಿ

ವಿಧಾನಸಭೆ ಚುನಾವಣೆ: ಶಿಗ್ಗಾಂವಿ ಕ್ಷೇತ್ರದಿಂದಲೇ ಸ್ಪರ್ಧಿಸುತ್ತೇನೆ; ಸಿಎಂ ಬೊಮ್ಮಾಯಿ


 ವಿಧಾನಸಭೆ ಚುನಾವಣೆ: ಶಿಗ್ಗಾಂವಿ ಕ್ಷೇತ್ರದಿಂದಲೇ ಸ್ಪರ್ಧಿಸುತ್ತೇನೆ; ಸಿಎಂ ಬೊಮ್ಮಾಯಿ

ಹಾವೇರಿ:  ‘ಮೂರು ಬಾರಿ ಶಿಗ್ಗಾಂವಿ ಕ್ಷೇತ್ರದ ಜನ ಗೆಲುವು ನೀಡಿದ್ದಾರೆ. ಈ ಬಾರಿಯೂ ಶಿಗ್ಗಾಂವಿ ಕ್ಷೇತ್ರದಿಂದಲೇ ಸ್ಪರ್ಧಿಸುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

‘ಮುಂಬರಲಿರುವ 2023ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸ್ವಂತ ಶಕ್ತಿಯಿಂದ ಸಂಪೂರ್ಣ ಬಹುಮತದಿಂದ ಜನರ ಆಶೀರ್ವಾದದೊಂದಿಗೆ ಆಡಳಿತ ಚುಕ್ಕಾಣಿಯನ್ನು ಹಿಡಿಯಲು ಯಶಸ್ವಿಯಾಗುತ್ತೇವೆ ಎಂಬ ಸಂಪೂರ್ಣ ವಿಶ್ವಾಸವಿದೆ' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ವ್ಯಕ್ತಪಡಿಸಿದ್ದಾರೆ.

ಶನಿವಾರಜಿಲ್ಲೆಯ ಸವಣೂರಿನ ಹೆಸ್ಕಾಂ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಉತ್ತರಪ್ರದೇಶದ ಚುನಾವಣೆಯ ನಂತರ ಯೋಗಿ ಆದಿತ್ಯನಾಥ 2ನೆ ಬಾರಿ ಮುಖ್ಯಮಂತ್ರಿಯಾಗಿ ಪದಗ್ರಹಣ ಸಮಾರಂಭದಲ್ಲಿ ಪಾಲ್ಗೊಂಡಿದ್ದೇನೆ. ಚುನಾವಣೆಯ ನಂತರ ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಗೆಲುವು ಇಡೀ ದೇಶದಲ್ಲಿ ಹೊಸ ರಾಜಕೀಯ ಸಂಚಲನ ಪ್ರಾರಂಭವಾಗಿದೆ ಎಂದರು.

‘ಉತ್ತರಾಖಂಡ್, ಮಣಿಪುರ, ಗೋವಾ ಮತ್ತು ಉತ್ತರ ಪ್ರದೇಶ ಗೆಲುವು 2024ರ ಲೋಕಸಭಾ ಚುನಾವಣೆಯ ದಿಕ್ಸೂಚಿಯನ್ನು ಸ್ಪಷ್ಟವಾಗಿದೆ. ಕರ್ನಾಟಕದಲ್ಲಿಯೂ ದೊಡ್ಡ ಪ್ರಮಾಣ ಬೆಂಬಲ ವ್ಯಕ್ತವಾಗುತ್ತಿದೆ. 2023ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ತಿಳಿಸಿದರು.

ಶಿಗ್ಗಾಂವಿ ಕ್ಷೇತ್ರದಿಂದಲೇ ಸ್ಪರ್ಧೆ: 2023ರ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿಯವರು ಎರಡು ಕ್ಷೇತ್ರಗಳಿಂದ ಸ್ಪರ್ಧಿಸುವ ಸಾಧ್ಯತೆ ಇದೆಯೇ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು,

ತೀರ್ಪಿನ ಪಾಲನೆ ಆಗಬೇಕು: ಬಹಳ ವರ್ಷಗಳಿಂದ ಶಾಲೆಗಳಲ್ಲಿ ಶಾಲಾ ಸಮವಸ್ತ್ರ ನಿಯಮವನ್ನು ಪಾಲಿಸಲಾಗುತ್ತಿದೆ. ಕೆಲವು ಶಕ್ತಿಗಳ ಪ್ರಚೋದನೆಯಿಂದ ಹೈಕೋರ್ಟ್ ತೀರ್ಪಿನ ನಂತರವೂ ಗೊಂದಲವೆದ್ದಿದೆ. ಆದಾಗ್ಯೂ ರಾಜ್ಯದಲ್ಲಿ ಶಾಂತಿ, ಕಾನೂನು ಸುವ್ಯವಸ್ಥೆ ಕಾಪಾಡಲಾಗಿದೆ. ತೀರ್ಪಿನ ಪಾಲನೆ ಆಗಬೇಕು, ಪ್ರಚೋದನೆ ಮಾಡಬಾರದು ಎಂಬುದು ಜನಾಭಿಪ್ರಾಯ. ಈ ದೇಶದ ಕಾನೂನನ್ನು ಎಲ್ಲರೂ ಗೌರವಿಸಬೇಕು ಎಂದು ಹೇಳಿದರು.

ಶಾಂತಿ-ಸೌಹಾರ್ದತೆಯಿಂದ ಸಮಸ್ಯೆಗೆ ಪರಿಹಾರ: ದೇವಸ್ಥಾನದ ಬಳಿ ಅನ್ಯಧರ್ಮದವರ ವ್ಯಾಪಾರ ವಿವಾದದ ಬಗ್ಗೆ 2002ರಲ್ಲಿ ಧಾರ್ಮಿಕ ದತ್ತಿ ಇಲಾಖೆಯಲ್ಲಿ ಸ್ಪಷ್ಟ ಆದೇಶವಿದೆ. ಈ ಕಾನೂನು ಹೊಸದಾಗಿ ಆಗಿರುವುದಲ್ಲ. ಜಾತ್ರೆಯ ಸಂದರ್ಭದಲ್ಲಿ ದೇವಸ್ಥಾನದ ಪ್ರದೇಶದಲ್ಲಿ ಕಾಂಟ್ರಾಕ್ಟ್ ಸಬ್ ಲೀಸ್ ಆಗಿರುತ್ತದೆ. ಎಲ್ಲ ಜನರೂ ಶಾಂತಿ, ಸೌಹಾರ್ದತೆಯಿಂದ ಕುಳಿತು ಚರ್ಚಿಸಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದಾಗಿದೆ ಎಂದು ಅವರು ಪ್ರತಿಕ್ರಿಯೆ ನೀಡಿದರು.

ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಹೆಣ್ಣುಮಕ್ಕಳ ಶಿರವಸ್ತ್ರದ ಬಗ್ಗೆ ಮಾಡಿದ ವಿವಾದಿತ ಹೇಳಿಕೆ ಬಗ್ಗೆ ಅವರನ್ನೇ ಕೇಳಬೇಕು. ಆದರೆ, ಶಾಲಾ ಸಮವಸ್ತ್ರದ ನೀತಿಯ ಬಗ್ಗೆ ಹೈಕೋರ್ಟ್ ಸ್ಪಷ್ಟ ಆದೇಶವಿದೆ. ಈ ನಿಟ್ಟಿನಲ್ಲಿ ಪುನಃ ಪ್ರಚೋದನೆ ಕೊಡುವಂತಹ ಕೆಲಸ ಆಗಬಾರದು ಎಂದು ಬಸವರಾಜ ಬೊಮ್ಮಾಯಿ ಇದೇ ವೇಳೆ ತಿಳಿಸಿದರು.

 ಸರಕಾರದ ಜತೆ ಸಂಘರ್ಷಕ್ಕೆ ಇಳಿಯಬೇಡಿ: ಸಂಧಾನದ ಮೂಲಕ ಪರಿಹಾರದ ಭರವಸೆಯಿದೆ  -ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಕಾಂತಪುರಂ ಎ.ಪಿ.ಅಬೂಬಕರ್ ಮುಸ್ಲಿಯಾರ್

ಸರಕಾರದ ಜತೆ ಸಂಘರ್ಷಕ್ಕೆ ಇಳಿಯಬೇಡಿ: ಸಂಧಾನದ ಮೂಲಕ ಪರಿಹಾರದ ಭರವಸೆಯಿದೆ -ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಕಾಂತಪುರಂ ಎ.ಪಿ.ಅಬೂಬಕರ್ ಮುಸ್ಲಿಯಾರ್

 

ಸರಕಾರದ ಜತೆ ಸಂಘರ್ಷಕ್ಕೆ ಇಳಿಯಬೇಡಿ: ಸಂಧಾನದ ಮೂಲಕ ಪರಿಹಾರದ ಭರವಸೆಯಿದೆ 

-ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಕಾಂತಪುರಂ ಎ.ಪಿ.ಅಬೂಬಕರ್ ಮುಸ್ಲಿಯಾರ್ 

ಮುಸ್ಲಿಂ ಹೆಣ್ಮಕ್ಕಳಿಗೆ ಶಾಲಾ ಕಾಲೇಜು ತರಗತಿ ಕೊಠಡಿಗಳಲ್ಲಿ ಹಿಜಾಬ್ ನಿರ್ಬಂಧಿಸಿ ಕರ್ನಾಟಕ ಹೈ ಕೋರ್ಟ್‌ನಿಂದ ತೀರ್ಪು ಬಂದಿರುವ ಹಿನ್ನೆಲೆಯಲ್ಲಿ ಸಮುದಾಯದೊಳಗೆ ಗೊಂದಲದ ಪರಿಸ್ಥಿತಿ ನಿರ್ಮಾಣವಾಗಿದ್ದು,ವಿದ್ಯಾರ್ಥಿನಿಯರು ಶಿಕ್ಷಣದಿಂದ ವಂಚಿತರಾಗುವ ಹಂತಕ್ಕೆ ಬಂದು ನಿಂತಿದೆ.

ಈ ನಿಟ್ಟಿನಲ್ಲಿ ನಾವು ಸರಕಾರ ಮತ್ತು ನ್ಯಾಯಾಲಯದೊಂದಿಗೆ ಸಂಘರ್ಷಕ್ಕೆ ನಿಲ್ಲುವುದಿಲ್ಲ. ಸರಕಾರ ಮತ್ತು ನ್ಯಾಯಾಲಯದ ಕಡೆಯಿಂದ ಗೊಂದಲಕ್ಕೆ ತೆರೆ ಎಳೆದು ತಕ್ಷಣ ಸಂಧಾನದ ಮೂಲಕ ಸರ್ವರಿಗೂ ಸಮ್ಮತವಾಗುವ ರೀತಿಯ ಕ್ರಮವನ್ನು ನಿರೀಕ್ಷೆ ಮಾಡುವುದಾಗಿ ಗ್ರಾಂಡ್  ಮುಫ್ತಿ ಆಫ್ ಇಂಡಿಯಾ ಸುಲ್ತಾನುಲ್ ಉಲಮಾ ಎ.ಪಿ.ಅಬೂಬಕರ್ ಮುಸ್ಲಿಯಾರ್ ಕಾಂತಪುರಂ ಪ್ರಸ್ತಾಪಿಸಿದ್ದಾರೆ.

ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನ ಮೊರೆ ಹೋಗಲು ನಾವು ನಿರ್ಧರಿಸಿದ್ದೇವೆ. ಮರ್ಕಝ್  ಲಾ ಕಾಲೇಜಿನ ಪ್ರಗಲ್ಭ ವಕೀಲರ ತಂಡ ಈ ಬಗ್ಗೆ ಕಾರ್ಯ ಪ್ರವೃತ್ತವಾಗಿದೆ. ಹಿಜಾಬ್ ವಿಚಾರವನ್ನು ಕಾನೂನಿನ ಮೂಲಕ ಎದುರಿಸಲು ಅವಕಾಶ ಮುಕ್ತವಾಗಿದೆ. ಆ ಬಗ್ಗೆ ಸಂವಿಧಾನ ನೀಡಿದ ಅವಕಾಶವನ್ನು ಬಳಸಿ ನಾವು ಮುಂದಡಿ ಇಡುತ್ತೇವೆ. ಆದರೆ ಸರಕಾರ ಮತ್ತು ಕೋರ್ಟ್ ನೊಂದಿಗೆ ಸಂಘರ್ಷಕ್ಕೆ ನಿಲ್ಲುವುದಿಲ್ಲ ಎಂದು ಅವರು ಸ್ಪಷ್ಟ ಪಡಿಸಿದರು. ಕರ್ನಾಟಕದ ವಿವಿಧ ಕಡೆಗಳಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರ ಮಧ್ಯೆ ಮೂಡುಬಿದಿರೆ ಝಿಕ್ರಾ ಅಕಾಡೆಮಿಯಲ್ಲಿ ಏರ್ಪಡಿಸಿದ  ಸಮಾವೇಶದಲ್ಲಿ ಅವರು ಮಾತನಾಡುತ್ತಿದ್ದರು

ಸೋಮವಾರದಿಂದ ಪ್ರಾರಂಭವಾಗುವ ಎಸ್ಸೆಸ್ಸೆಲ್ಲಿ ಪರೀಕ್ಷೆಯಲ್ಲಿ ಹಿಜಾಬ್‌ಗೆ ನಿಷೇಧವಿರುವ ಬಗ್ಗೆ ಗಮನ ಸೆಳೆದಾಗ ಎಸ್ಸೆಸ್ಸೆಲ್ಸಿ ಪರೀಕ್ಷೆಯು ವಿದ್ಯಾರ್ಥಿ ಜೀವನದಲ್ಲಿ ಮಹತ್ತರವಾದ ಒಂದು ಹಂತವಾಗಿದ್ದು ಯಾರೂ ಪರೀಕ್ಷೆಗಳನ್ನು ಕಳೆದುಕೊಳ್ಳಬಾರದು. ಗರಿಷ್ಠ ಅನುಕೂಲತೆಗಳನ್ನು ಬಳಸಿ ಪರೀಕ್ಷೆಗೆ ಹಾಜರಾಗಬೇಕು. ಸುಪ್ರೀಂ ಕೋರ್ಟ್‌ನಲ್ಲಿ ಈ ಪ್ರಕರಣ ಇತ್ಯರ್ಥಗೊಂಡು ಶೀಘ್ರವಾಗಿ ನಮಗೆ ನ್ಯಾಯ ಸಿಗುವ ಭರವಸೆಯಿದೆ. ಧಾರ್ಮಿಕ ಸ್ವಾತಂತ್ರ್ಯವನ್ನು ಖಾತರಿ ಪಡಿಸುವ ಬಲಿಷ್ಠ ಸಂವಿಧಾನ ಹೊಂದಿರುವ ಭಾರತದಲ್ಲಿ ಸಾಮರಸ್ಯ ಮತ್ತು ಸಹಿಷ್ಣುತೆಗೆ ಧಕ್ಕೆಯಾಗದಂತೆ ನಡೆದುಕೊಳ್ಳುವುದು ದೇಶದ ಎಲ್ಲ ಪ್ರಜ್ಞಾವಂತ ನಾಗರಿಕರ ಜವಾಬ್ದಾರಿಯಾಗಿದೆಯೆಂದು ಅವರು ಹೇಳಿದರು.

ಸಮಾವೇಶದಲ್ಲಿ ಸಯ್ಯಿದ್ ಸಾದಾತ್ ತಂಙಳ್ ಗುರುವಾಯನಕೆರೆ, ಎಸ್.ವೈ.ಎಸ್.ಕರ್ನಾಟಕ ರಾಜ್ಯಾಧ್ಯಕ್ಷ ಡಾ.ಎಮ್ಮೆಸ್ಸೆಂ. ಝೈನೀ ಕಾಮಿಲ್, ಪಿ.ಪಿ.ಅಹ್ಮದ್ ಸಖಾಫಿ ಕಾಶಿಪಟ್ನ, ಕೆಕೆಎಂ ಕಾಮಿಲ್ ಸಖಾಫಿ ಕೃಷ್ಣಾಪುರ ಮುಂತಾದವರು ಮಾತನಾಡಿದರು.

ಝಿಕ್ರಾ ಅಕಾಡೆಮಿ ಅಧ್ಯಕ್ಷ ನೌಫಲ್ ಸಖಾಫಿ ಕಳಸ ಸ್ವಾಗತಿಸಿದರು.

 ದ್ವೇಷದ ಭಾಷಣ: ನಗುವಿನೊಂದಿಗೆ ಹೇಳಿದರೆ ಅಪರಾಧವಾಗದು ಎಂದ ನ್ಯಾಯಾಲಯ !

ದ್ವೇಷದ ಭಾಷಣ: ನಗುವಿನೊಂದಿಗೆ ಹೇಳಿದರೆ ಅಪರಾಧವಾಗದು ಎಂದ ನ್ಯಾಯಾಲಯ !

 

ದ್ವೇಷದ ಭಾಷಣ: ನಗುವಿನೊಂದಿಗೆ ಹೇಳಿದರೆ ಅಪರಾಧವಾಗದು ಎಂದ ನ್ಯಾಯಾಲಯ !

ಹೊಸದಿಲ್ಲಿ: ಚುನಾವಣೆ ಸಂದರ್ಭ ನೀಡುವ ಭಾಷಣಗಳು ಇತರ ಸಂದರ್ಭಗಳಲ್ಲಿ ನೀಡಲಾಗುವ ಭಾಷಣಗಳಿಗಿಂತ ಭಿನ್ನವಾಗಿದೆ ಹಾಗೂ ಉದ್ದೇಶವಿಲ್ಲದೇ ಇದ್ದರೂ ಕೆಲವೊಮ್ಮೆ ಅವುಗಳನ್ನು ಮಹೌಲ್ (ವಾತಾವರಣ) ನಿರ್ಮಿಸಲು ಹೇಳಲಾಗುತ್ತದೆ, ಎಂದು ಈಶಾನ್ಯ ದಿಲ್ಲಿ ಹಿಂಸಾಚಾರಗಳಿಗೆ ಸಂಬಂಧಿಸಿದ ದ್ವೇಷದ ಭಾಷಣಗಳಿಗೆ ಸಂಬಂಧಿಸಿದ ಪ್ರಕರಣದ ವಿಚಾರಣೆ ವೇಳೆ ಶುಕ್ರವಾರ ದಿಲ್ಲಿ ಹೈಕೋರ್ಟ್ ಹೇಳಿದೆ ಎಂದು indianexpress.com ವರದಿ ಮಾಡಿದೆ.

"ಏನನ್ನಾದರೂ ನಗುವಿನೊಂದಿಗೆ ಹೇಳಿದರೆ ಅಲ್ಲಿ ಅಪರಾಧವಿರುವುದಿಲ್ಲ, ಆದರೆ ಏನನ್ನಾದರೂ ನಿಂದನಾತ್ಮಕವಾಗಿ ಹೇಳಿದ್ದರೆ ಅಲ್ಲಿ ಅಪರಾಧದ ಉದ್ದೇಶವಿರಬಹುದು,'' ಎಂದು ವಿಚಾರಣೆ ವೇಳೆ ಜಸ್ಟಿಸ್ ಚಂದ್ರ ಧಾರಿ ಸಿಂಗ್ ಹೇಳಿದರು.

ಕೇಂದ್ರ ಸಚಿವ ಅನುರಾಗ್ ಠಾಕುರ್ ಮತ್ತು ಸಂಸದ ಪರ್ವೇಶ್ ವರ್ಮ ಅವರು ನೀಡಿದ್ದರೆನ್ನಲಾದ ದ್ವೇಷದ ಭಾಷಣ ಸಂಬಂಧ ಎಫ್‍ಐಆರ್ ದಾಖಲಿಸಬೇಕೆಂದು ಕೋರಿ  ಸಿಪಿಐ(ಎಂ) ನಾಯಕಿ ಬೃಂದಾ ಕಾರಟ್ ಅವರು ಸಲ್ಲಿಸಿದ್ದ ಅರ್ಜಿಯನ್ನು ಕೆಳಗಿನ ಹಂತದ ನ್ಯಾಯಾಲಯ ತಿರಸ್ಕರಿಸಿದ್ದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿಯನ್ನು ನ್ಯಾಯಾಲಯ ವಿಚಾರಣೆ ನಡೆಸುತ್ತಿತ್ತು.

"ಅದು ಚುನಾವಣಾ ಭಾಷಣವಾಗಿತ್ತೇ ಅಥವಾ ಇತರ ಸಮಯ ನೀಡಲಾದ ಭಾಷಣವೇ? ಚುನಾವಣೆ ಸಂದರ್ಭ ಯಾವುದಾದರೂ ಭಾಷಣ ನೀಡಲಾಗಿದ್ದರೆ ಅದು ಬೇರೆ ವಿಚಾರ. ಸಾಮಾನ್ಯ ಸಂದರ್ಭಗಳಲ್ಲಿ ಭಾಷಣ ನೀಡುತ್ತಿದ್ದರೆ ಅದು ಏನನ್ನೋ ಪ್ರಚೋದಿಸಿದಂತೆ,'' ಎಂದು ನ್ಯಾಯಾಲಯ ಹೇಳಿದೆ

"ನಾವು ಕೂಡ ಪ್ರಜಾಪ್ರಭುತ್ವವಾಗಿರುವುದರಿಂದ ನೀವು ಕೂಡ ವಾಕ್‍ಸ್ವಾತಂತ್ರ್ಯ ಹೊಂದಿದ್ದೀರಿ,'' ಎಂದು ಹೇಳಿದ ನ್ಯಾಯಾಲಯ ತನ್ನ ತೀರ್ಪನ್ನು ಕಾಯ್ದಿರಿಸಿದೆ.

 ಉಚಿತ ಪಡಿತರ ಯೋಜನೆ ಇನ್ನೂ 3 ತಿಂಗಳು ವಿಸ್ತರಿಸಲು ಉತ್ತರಪ್ರದೇಶ ಸರಕಾರ ನಿರ್ಧಾರ

ಉಚಿತ ಪಡಿತರ ಯೋಜನೆ ಇನ್ನೂ 3 ತಿಂಗಳು ವಿಸ್ತರಿಸಲು ಉತ್ತರಪ್ರದೇಶ ಸರಕಾರ ನಿರ್ಧಾರ


 ಉಚಿತ ಪಡಿತರ ಯೋಜನೆ ಇನ್ನೂ 3 ತಿಂಗಳು ವಿಸ್ತರಿಸಲು ಉತ್ತರಪ್ರದೇಶ ಸರಕಾರ ನಿರ್ಧಾರ

ಲಕ್ನೋ: ಉತ್ತರ ಪ್ರದೇಶದ  ಆದಿತ್ಯನಾಥ್ ಸರಕಾರ ತನ್ನ ಉಚಿತ ಪಡಿತರ ಯೋಜನೆಯನ್ನು ಮೂರು ತಿಂಗಳವರೆಗೆ ವಿಸ್ತರಿಸಲು ನಿರ್ಧರಿಸಿದೆ. ನಿನ್ನೆ ಎರಡನೇ ಬಾರಿಗೆ ಉತ್ತರಪ್ರದೇಶ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಆದಿತ್ಯನಾಥ್ ಅವರ ಅಧ್ಯಕ್ಷತೆಯಲ್ಲಿ ನಡೆದ ಮೊದಲ ಸಂಪುಟ ಸಭೆಯಲ್ಲಿ ಶನಿವಾರ  ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

ಶನಿವಾರ  ನಡೆದ ಸಚಿವ ಸಂಪುಟ ಸಭೆಯಲ್ಲಿ ಉಚಿತ ಪಡಿತರ ಯೋಜನೆಯನ್ನು ಮುಂದಿನ 3 ತಿಂಗಳವರೆಗೆ ವಿಸ್ತರಿಸಲು ನಿರ್ಧರಿಸಿದ್ದೇವೆ. ಇದರಿಂದ ರಾಜ್ಯದ 15 ಕೋಟಿ ಜನರಿಗೆ ಅನುಕೂಲವಾಗಲಿದೆ ಎಂದು ಮುಖ್ಯಮಂತ್ರಿ ಹೇಳಿದರು.

ಈ ಯೋಜನೆಗಾಗಿ ಸರಕಾರ 3,270 ಕೋಟಿ ರೂ. ವೆಚ್ಚ ಮಾಡಲಿದೆ ಎಂದು ಉಪಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ಹೇಳಿದರು.

ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಆರಂಭಿಸಲಾದ ಉಚಿತ ಪಡಿತರ ಯೋಜನೆಯು ಮಾರ್ಚ್‌ನಲ್ಲಿ ಮುಕ್ತಾಯಗೊಳ್ಳಬೇಕಿತ್ತು.

Friday, 25 March 2022

 ಕೈಗಾರಿಕೆಗಳಿಗೆ ಸಾಲ ಕೊಡಲು ಬ್ಯಾಂಕುಗಳಿಗೆ ಸೂಚನೆ: ಸಚಿವ ಎಂಟಿಬಿ ನಾಗರಾಜ್

ಕೈಗಾರಿಕೆಗಳಿಗೆ ಸಾಲ ಕೊಡಲು ಬ್ಯಾಂಕುಗಳಿಗೆ ಸೂಚನೆ: ಸಚಿವ ಎಂಟಿಬಿ ನಾಗರಾಜ್

 

ಕೈಗಾರಿಕೆಗಳಿಗೆ ಸಾಲ ಕೊಡಲು ಬ್ಯಾಂಕುಗಳಿಗೆ ಸೂಚನೆ: ಸಚಿವ ಎಂಟಿಬಿ ನಾಗರಾಜ್

ಬೆಂಗಳೂರು: ‘ರಾಜ್ಯದಲ್ಲಿ ಒಂದು ಕೋಟಿ ರೂಪಾಯಿಯಷ್ಟು ಮೊತ್ತದ ಬಂಡವಾಳ ಹೂಡಿಕೆ ಮಾಡುವ ಸಣ್ಣ ಕೈಗಾರಿಕೆಗಳಿಗೆ ಶೇ.35ರಷ್ಟು ವೆಚ್ಚ ಸಹಾಯಧನ ದೊರೆಯಲಿದೆ' ಎಂದು ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಸಚಿವ ಎಂ.ಟಿ.ಬಿ.ನಾಗರಾಜ್ ತಿಳಿಸಿದ್ದಾರೆ.

ಶುಕ್ರವಾರ ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ವಿಪಕ್ಷ ಉಪನಾಯಕ ಯು.ಟಿ.ಖಾದರ್ ಅವರು ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, ‘ಕೈಗಾರಿಕೆಗಳಿಗೆ ನಿಗದಿತ ಸಮಯದಲ್ಲಿ ಸಾಲ ಕೊಡಲು ಬ್ಯಾಂಕುಗಳಿಗೆ ಸೂಚನೆ ನೀಡಲಾಗುವುದು. ಸಣ್ಣ ಕೈಗಾರಿಕೆಗಳ ಸ್ಥಾಪನೆಗೆ ಸಹಾಯಧನ ಪಡೆಯಲು ಆದಾಯ ಮಿತಿ ವಿಧಿಸುವ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು' ಎಂದು ಹೇಳಿದರು.

‘2021-22ನೆ ಸಾಲಿನಲ್ಲಿ ಪ್ರಧಾನಿಯವರ ಉದ್ಯೋಗ ಸೃಜನೆ ಯೋಜನೆಯಡಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 298 ಫಲಾನುಭವಿಗಳು ಸೌಲಭ್ಯ ಪಡೆದಿದ್ದಾರೆ. ಅದೇ ರೀತಿಯಲ್ಲಿ 2020-21ನೆ ಸಾಲಿನಲ್ಲಿ 387 ಜನರು ಸೌಲಭ್ಯ ಪಡೆದಿದ್ದಾರೆ ಎಂದ ಅವರು, ಎಸ್ಸಿ-ಎಸ್ಟಿ ಉದ್ಯಮಶೀಲರಿಗೆ ವಿಶೇಷ ಘಟಕ ಉಪಯೋಜನೆಯಡಿ ಸ್ವಯಂ ಉದ್ಯೋಗ ಕೈಗೊಳ್ಳಲು ಸಾಲ ಒದಗಿಸಿ ಯೋಜನಾ ವೆಚ್ಚದ ಮೇಲೆ ಶೇ.60ರಷ್ಟು ಗರಿಷ್ಠ 5 ಲಕ್ಷ ರೂ. ಸಹಾಯಧನವನ್ನು ನೀಡಲಿದೆ' ಎಂದು ಅವರು ವಿವರ ನೀಡಿದರು.

ಆರಂಭಕ್ಕೆ ವಿಷಯ ಪ್ರಸ್ತಾಪಿಸಿದ ಯು.ಟಿ.ಖಾದರ್ ಅವರು, ‘ಸಣ್ಣ ಕೈಗಾರಿಕೆಗಳನ್ನು ಸ್ಥಾಪಿಸಲು ಬ್ಯಾಂಕುಗಳು ಸೂಕ್ತ ಸಮಯದಲ್ಲಿ ಸಾಲ ಸೌಲಭ್ಯ ನೀಡುವುದಿಲ್ಲ. ಈ ಬಗ್ಗೆ ಸರಕಾರ ಬ್ಯಾಂಕುಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿ ಸಾಲ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಬೇಕು. ಇದರಿಂದ ಒಂದು ಕೈಗಾರಿಕೆ ಸ್ಥಾಪನೆ, ಜೊತೆಗೆ ಉದ್ಯೋಗ ಸೃಜನೆಗೆ ಅನುಕೂವಾಗಲಿದೆ' ಎಂದು ಸಲಹೆ ನೀಡಿದರು.

ಗರ್ಭಿಣಿಯರು ಅಂಗನವಾಡಿಗೆ ಹೋಗಿ ಆಹಾರ ಸೇವಿಸುವ ನಿಯಮ ಬದಲಾವಣೆ ಮಾಡಿ: ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ

ಗರ್ಭಿಣಿಯರು ಅಂಗನವಾಡಿಗೆ ಹೋಗಿ ಆಹಾರ ಸೇವಿಸುವ ನಿಯಮ ಬದಲಾವಣೆ ಮಾಡಿ: ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ


ಗರ್ಭಿಣಿಯರು ಅಂಗನವಾಡಿಗೆ ಹೋಗಿ ಆಹಾರ ಸೇವಿಸುವ ನಿಯಮ ಬದಲಾವಣೆ ಮಾಡಿ: ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ

ಬೆಂಗಳೂರು: ‘ಗರ್ಭಿಣಿ ಮತ್ತು ಬಾಣಂತಿಯರು ಅಂಗನವಾಡಿಗೆ ಹೋಗಿ ಮಧ್ಯಾಹ್ನದ ಪೌಷ್ಟಿಕ ಬಿಸಿಯೂಟ ಮಾಡಬೇಕೆಂಬ ಸಾಮಾನ್ಯಜ್ಞಾನವಿಲ್ಲದೆ ರೂಪಿಸಿರುವ ಅವೈಜ್ಞಾನಿಕ ನಿಯಮವನ್ನು ಕೂಡಲೇ ಬದಲಾವಣೆ ಮಾಡಿ' ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಹಾಲಪ್ಪ ಆಚಾರ್ ಅವರಿಗೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸೂಚನೆ ನೀಡಿದ್ದಾರೆ.

ಶುಕ್ರವಾರ ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ ಸದಸ್ಯ ಟಿ.ಡಿ.ರಾಜೇಗೌಡ ಕೇಳಿದ ಪ್ರಶ್ನೆಗೆ ಸಚಿವ ಹಾಲಪ್ಪ ಆಚಾರ್ ಉತ್ತರಿಸುತ್ತಿದ್ದ ವೇಳೆ ಮಧ್ಯಪ್ರವೇಶಿಸಿದ ಸ್ಪೀಕರ್ ಕಾಗೇರಿ, ‘2017ರಲ್ಲಿ ಈ ನಿಯಮ ಜಾರಿ ಮಾಡಲಾಗಿದೆ. ಇದು ಅವೈಜ್ಞಾನಿಕವಾಗಿದ್ದು ಸರಿಪಡಿಸಿ, ಕೇಂದ್ರದ ಮಾರ್ಗಸೂಚಿ ಏನಾದರೂ ಇದ್ದರೆ ಕೇಂದ್ರ ಸರಕಾರಕ್ಕೆ ಕೂಡಲೇ ಪತ್ರ ಬರೆದು ಅದನ್ನು ಸರಿಪಡಿಸಲು ಕ್ರಮ ವಹಿಸಿ' ಎಂದು ಸಲಹೆ ನೀಡಿದರು.

‘ನಿಮ್ಮ ಇಲಾಖೆಯ ಅಧಿಕಾರಿಗಳು ಸರಿಯಾಗಿ ಕಾರ್ಯನಿರ್ವಹಿಸದಿದ್ದರೆ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಅವರನ್ನು ಬದಲಾಯಿಸಿ. ಇಲ್ಲದಿದ್ದರೆ ರಾಜ್ಯದ ಜನತೆ ನಿಮ್ಮನ್ನು ನಿಂದಿಸುತ್ತಾರೆ. ಗರ್ಭಿಣಿ ಮತ್ತು ಬಾಣಂತಿಯರು ಅಂಗನವಾಡಿಗೆ ಹೋಗಿ ಊಟ ಮಾಡಬೇಕು ಎಂದರೆ ಅದು ಹೇಗೆ ಸಾಧ್ಯ' ಎಂದು ಕಾಗೇರಿ ಪ್ರಶ್ನಿಸಿದರು.

‘ಪೌಷ್ಟಿಕಾಂಶವುಳ್ಳ ಪದಾರ್ಥಗಳನ್ನು ಮನೆಗೆ ಕೊಟ್ಟರೆ ಅದನ್ನು ಗಂಡ, ಮಕ್ಕಳು, ಅತ್ತೆ, ಮಾವ ಊಟ ಮಾಡುತ್ತಾರೆಂಬುದು ಅಧಿಕಾರಿಗಳ ಮನಸ್ಸಿನಲ್ಲಿರಬೇಕು. ಆಯಾ ಕಾಲಕ್ಕೆ ತಕ್ಕಂತೆ ಅಧಿಕಾರಿಗಳು ವರದಿ ಕೊಡುತ್ತಾರೆ. ಆದರೆ, ಗರ್ಭಿಣಿಯರಿಗೆ ಏನು ಕೊಡಬೇಕೆಂದು ಮನೆಯವರಿಗೆ ಅಷ್ಟು ಅರಿವು ಇಲ್ಲ ಎಂಬ ಭಾವನೆ ಸರಿಯಲ್ಲ' ಎಂದು ಸ್ಪೀಕರ್ ಅಸಮಾಧಾನ ವ್ಯಕ್ತಪಡಿಸಿದರು.

ಅಧಿಕಾರಿಗಳು ನಾಲಾಯಕ್ಕು: ‘ಕಾಂಗ್ರೆಸ್‍ಸದಸ್ಯರಾದ ಕೆ.ಆರ್.ರಮೇಶ್ ಕುಮಾರ್, ಅಂಜಲಿ ಲಿಂಬಾಳ್ಕರ್, ರೂಪಕಲಾ ಸೇರಿದಂತೆ ಇನ್ನಿತರರು, ‘ಗರ್ಭಿಣಿ ಮತ್ತು ಬಾಣಂತಿಯರಿಗೆ ನೀಡುವ ಪೌಷ್ಟಿಕ ಆಹಾರದ ನ್ಯೂನತೆಗಳನ್ನು ಸರಿಪಡಿಸಬೇಕು. ಇಲಾಖೆ ಅಧಿಕಾರಿಗಳು ಕಸಾಯಿಖಾನೆಯಲ್ಲಿ ಕೆಲಸ ಮಾಡಲೂ ಯೋಗ್ಯರಲ್ಲ' ಎಂದು ಟೀಕಿಸಿದರು.

ಬಳಿಕ ಉತ್ತರಿಸಿದ ಸಚಿವ ಹಾಲಪ್ಪ ಆಚಾರ್, ‘ಮಾತೃಪೂರ್ಣ ಯೋಜನೆಯಡಿ ಪ್ರತಿ ಫಲಾನುಭವಿಗೆ 21 ರೂ.ವೆಚ್ಚದಲ್ಲಿ ಪೌಷ್ಟಿಕ ಬಿಸಿಯೂಟವನ್ನು 2022ರ ಫೆ.14ರಿಂದ ನೀಡಲಾಗುತ್ತಿದೆ. ಅಂಗನವಾಡಿ ಕೇಂದ್ರದಲ್ಲಿ ಮಧ್ಯಾಹ್ನದ ಬಿಸಿಯೂಟ ನೀಡಲಾಗುತ್ತಿದೆ. ಕೋವಿಡ್ ಹಿನ್ನೆಲೆಯಲ್ಲಿ ಫೆಬ್ರವರಿವರೆಗೂ ಗರ್ಭಿಣಿ ಮತ್ತು ಬಾಣಂತಿಯರ ಮನೆಗೆ ಆಹಾರ ಸಾಮಗ್ರಿಗಳನ್ನು ನೀಡಲಾಗುತ್ತಿತ್ತು.

ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಸೇರಿದಂತೆ ಗುಡ್ಡಗಾಡು ಪ್ರದೇಶದಲ್ಲಿ ಬಿಸಿಯೂಟದ ಬದಲು ಆಹಾರ ಸಾಮಗ್ರಿಗಳು ತಿಂಗಳಿಗೊಮ್ಮೆ ವಿತರಿಸುವ ಬಗ್ಗೆ ಪರಿಶೀಲಿಸಲಾಗುವುದು. ಎಂದು ತಿಂಗಳು ತುಂಬಿದ ಗರ್ಭಿಣಿಯರಿಗೆ ಹಾಗೂ ಹೆರಿಗೆಯಾದ 45 ದಿನಗಳವರೆಗಿನ ಬಾಣಂತಿಯರಿಗೆ ಬಿಸಿಯೂಟವನ್ನು ಮನೆ ಬಾಗಿಲಿಗೆ ನೀಡುವ ಸೌಲಭ್ಯ ಕಲ್ಪಿಸಲಾಗಿದೆ' ಎಂದು ತಿಳಿಸಿದರು.

ಗರ್ಭಪಾತವಾಗಲಿದೆ: ಶೃಂಗೇರಿ ಕ್ಷೇತ್ರದಲ್ಲಿ ಅಂಗನವಾಡಿ ಕೇಂದ್ರಗಳು ನಾಲ್ಕೈದು ಕಿಲೋ ಮೀಟರ್‍ಗಳಷ್ಟು ದೂರದಲ್ಲಿದ್ದು, ಗರ್ಭಿಣಿ ಮಹಿಳೆಯರು ಅಂಗನವಾಡಿ ಕೇಂದ್ರಗಳಿಗೆ ಹೋಗಿ ಪೌಷ್ಟಿಕಾಂಶವುಳ್ಳ ಬಿಸಿಯೂಟ ಸೇವಿಸಲು ತೆರಳಿದರೆ ಹಿಂದಿರುಗುವ ವೇಳೆಗೆ ಅವರಿಗೆ ಗರ್ಭಪಾತ ಆಗುವುದು ನಿಶ್ಚಿತ. ಹೀಗಾಗಿ ಈ ಯೋಜನೆ ಬದಲಾವಣೆ ಮಾಡಬೇಕು' ಎಂದು ಸದಸ್ಯ ರಾಜೇಗೌಡ ಆಗ್ರಹಿಸಿದರು.

‘ಮಾತೃಪೂರ್ಣ ಯೋಜನೆ ಜಾರಿ ಹಿನ್ನೆಲೆಯಲ್ಲಿ 2015ರ ಈಚೆಗೆ ತಾಯಂದಿರ ಮರಣ ಪ್ರಮಾಣ ಇಳಿಕೆಯಾಗುತ್ತಾ ಬಂದಿದೆ. 750 ಅಮೃತ ಅಂಗನವಾಡಿಗಳ ಸ್ಥಾಪನೆಗೆ 7.50 ಕೋಟಿ ರೂ.ನೀಡಲಾಗಿದೆ. ಅಂಗನವಾಡಿಗಳ ನಿರ್ವಹಣೆಗೆ 35 ಕೋಟಿ ರೂ.ನೀಡಲಾಗಿದೆ ಎಂದು ಬಿಜೆಪಿ ಸದಸ್ಯ ಸಂಜೀವ ಮಠಂದೂರು ಕೇಳಿದ ಮತ್ತೊಂದು ಪ್ರಶ್ನೆಗೆ ಹಾಲಪ್ಪ ಆಚಾರ್ ಉತ್ತರಿಸಿದರು.

ಹೊಸದಾಗಿ ಅಂಗನವಾಡಿ ಯೋಜನೆಗಳನ್ನು ನರೇಗಾ ಜೊತೆಗೂಡಿ ಮಾಡಲು ಉದ್ದೇಶಿಸಲಾಗಿದೆ. ಅಂಗನವಾಡಿಗಳ ಅನುದಾನವನ್ನು ಹೆಚ್ಚಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗುವುದು. ಅಂಗನವಾಡಿ ಕಟ್ಟಡಗಳ ನಿರ್ವಹಣೆ ದುರಸ್ತಿಗೆ ಕ್ರಿಯಯೋಜನೆಗೆ ಎಪ್ರಿಲ್ ತಿಂಗಳಿನಲ್ಲಿ ಕ್ರಿಯಾಯೋಜನೆ ರೂಪಿಸಿ ಅನುದಾನ ಒದಗಿಸಲಾಗುವುದು ಎಂದು ಭರವಸೆ ನೀಡಿದರು.

 ಎರಡನೇ ಅವಧಿಗೆ ಉತ್ತರ ಪ್ರದೇಶ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಆದಿತ್ಯನಾಥ್

ಎರಡನೇ ಅವಧಿಗೆ ಉತ್ತರ ಪ್ರದೇಶ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಆದಿತ್ಯನಾಥ್


 ಎರಡನೇ ಅವಧಿಗೆ ಉತ್ತರ ಪ್ರದೇಶ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಆದಿತ್ಯನಾಥ್

ಲಕ್ನೋ : ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಎರಡನೇ ಅವಧಿಗೆ ಇಂದು ಆದಿತ್ಯನಾಥ್ ಕಿಕ್ಕಿರಿದು ತುಂಬಿದ ಲಕ್ನೋದ ಅಟಲ್ ಬಿಹಾರಿ ವಾಜಪೇಯಿ ಸ್ಟೇಡಿಯಂನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಸತತ ಎರಡನೇ ಬಾರಿಗೆ ರಾಜ್ಯದಲ್ಲಿ ಒಬ್ಬರು ಮುಖ್ಯಮಂತ್ರಿಯಾಗುತ್ತಿರುವುದು ರಾಜ್ಯದ ಕಳೆದ 37 ವರ್ಷಗಳ ಇತಿಹಾಸದಲ್ಲಿ ಇದು ಮೊದಲ ಬಾರಿಯಾಗಿದೆ. ಪ್ರಧಾನಿ ನರೇಂದ್ರ ಮೋದಿ, ಉನ್ನತ ಬಿಜೆಪಿ ನಾಯಕರು ಹಾಗೂ ಹಲವಾರು ಬಾಲಿವುಡ್ ನಟರು ಕೂಡ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಿದರು.

ಕಳೆದ ಬಾರಿಯಂತೆಯೇ ಈ ಬಾರಿ ಕೂಡ ಆದಿತ್ಯನಾಥ್  ಸರಕಾರದಲ್ಲಿ ಇಬ್ಬರು ಉಪಮುಖ್ಯಮಂತ್ರಿಗಳಿರಲಿದ್ದಾರೆ. ಚುನಾವಣೆ ಸೋತರೂ ಕೇಶವ್ ಪ್ರಸಾದ್ ಮೌರ್ಯ ಉಪಮುಖ್ಯಮಂತ್ರಿಯಾಗಿದ್ದಾರೆ.  ಈ ಹಿಂದಿನ ಇನ್ನೊಬ್ಬ ಡಿಸಿಎಂ ದಿನೇಶ್ ಅವರ ಸ್ಥಾನದಲ್ಲಿ ಈ ಬಾರಿ ಬ್ರಾಹ್ಮಣ ಸಮುದಾಯದ ಬೃಜೇಶ್ ಪಾಠಕ್ ಅಧಿಕಾರ ವಹಿಸಿಕೊಂಡಿದ್ದಾರೆ. ಇಂದು ಒಟ್ಟು 27 ಸಚಿವರು ಪ್ರಮಾಣವಚನ ಸ್ವೀಕರಿಸಿದ್ದಾರೆ.

ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 403 ಕ್ಷೇತ್ರಗಳ ಪೈಕಿ 255ರಲ್ಲಿ ಜಯಭೇರಿ ಬಾರಿಸಿತ್ತು.

ಚಿತ್ರನಟರಾದ ಅಕ್ಷಯ್ ಕುಮಾರ್, ಕಂಗನಾ ರಣಾವತ್, ಬೋನಿ ಕಪೂರ್ ಕೂಡ ಉಪಸ್ಥಿತರಿದ್ದರು.

'ನಯೇ ಭಾರತ್ ಕಾ ನಯಾ ಯುಪಿ' ಎಂದು ಬರೆಯಲಾಗಿದ್ದ ಪೋಸ್ಟರ್‍ಗಳು ಸ್ಟೇಡಿಯಂ ತುಂಬೆಲ್ಲಾ ರಾರಾಜಿಸುತ್ತಿತ್ತು.

 ಉಕ್ರೇನ್: ಮರಿಯುಪೋಲ್ ಥಿಯೇಟರ್ ಮೇಲೆ ರಷ್ಯಾ ದಾಳಿ; 300 ಮಂದಿ ಸಾವನ್ನಪ್ಪಿರುವ ಶಂಕೆ

ಉಕ್ರೇನ್: ಮರಿಯುಪೋಲ್ ಥಿಯೇಟರ್ ಮೇಲೆ ರಷ್ಯಾ ದಾಳಿ; 300 ಮಂದಿ ಸಾವನ್ನಪ್ಪಿರುವ ಶಂಕೆ

 

ಉಕ್ರೇನ್: ಮರಿಯುಪೋಲ್ ಥಿಯೇಟರ್ ಮೇಲೆ ರಷ್ಯಾ ದಾಳಿ; 300 ಮಂದಿ ಸಾವನ್ನಪ್ಪಿರುವ ಶಂಕೆ

ಕೀವ್: ಉಕ್ರೇನ್ ವಿರುದ್ಧ ದಾಳಿ ಮುಂದುವರೆಸಿರುವ ರಷ್ಯಾ ಶುಕ್ರವಾರ ಮರಿಯುಪೋಲ್ ಥಿಯೇಟರ್ ಮೇಲೆ ನಡೆಸಿರುವ ದಾಳಿಯಲ್ಲಿ 300 ಮಂದಿ ಸಾವನ್ನಪ್ಪಿದ್ದಾರೆಂದು ಶಂಕಿಸಲಾಗಿದೆ.

ಉಕ್ರೇನ್ ನ ಮರಿಯುಪೋಲ್ ಥಿಯೇಟರ್ ಮೇಲೆ ರಷ್ಯಾ ನಡೆಸಿರುವ ದಾಳಿಯಲ್ಲಿ 300 ಜನರು ಸಾವನ್ನಪ್ಪಿರುವ ಶಂಕೆ ಇದೆ ಎಂದು ಸಿಟಿ ಹಾಲ್ ಅನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಎಎಫ್ ಪಿ ವರದಿ ಮಾಡಿದೆ.

 ಏಕ ಕಾಲದಲ್ಲಿ 'ಆರೆಸ್ಸೆಸ್ ಮತ್ತು ದೇಶಪ್ರೇಮಿ' ಆಗಲು ಸಾಧ್ಯವಿಲ್ಲ: ಪ್ರಿಯಾಂಕ್ ಖರ್ಗೆ

ಏಕ ಕಾಲದಲ್ಲಿ 'ಆರೆಸ್ಸೆಸ್ ಮತ್ತು ದೇಶಪ್ರೇಮಿ' ಆಗಲು ಸಾಧ್ಯವಿಲ್ಲ: ಪ್ರಿಯಾಂಕ್ ಖರ್ಗೆ


 ಏಕ ಕಾಲದಲ್ಲಿ 'ಆರೆಸ್ಸೆಸ್ ಮತ್ತು ದೇಶಪ್ರೇಮಿ' ಆಗಲು ಸಾಧ್ಯವಿಲ್ಲ: ಪ್ರಿಯಾಂಕ್ ಖರ್ಗೆ

ಬೆಂಗಳೂರು: ಏಕ ಕಾಲದಲ್ಲಿ 'ಆರೆಸ್ಸೆಸ್ ಮತ್ತು ದೇಶಪ್ರೇಮಿ' ಆಗಲು ಸಾಧ್ಯವಿಲ್ಲ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. 

ಪ್ರಿಯಾಂಕ್ ಖರ್ಗೆ ಅವರ ಟ್ವೀಟ್ ಇಂತಿದೆ...

'ಸಾಂವಿಧಾನಿಕ ಸಭೆಯು ಸಂವಿಧಾನದ ಬಗ್ಗೆ ಚರ್ಚೆಗಳನ್ನು ನಡೆಸುವಾಗ, ಆರೆಸ್ಸೆಸ್ ಸಂವಿಧಾನದ ಪ್ರತಿಗಳನ್ನು ದಹಿಸಿತ್ತು ಹಾಗೂ ಮನುಸ್ಮೃತಿಯನ್ನು ಭಾರತದ ಸಂವಿಧಾವನ್ನಾಗಿ ಮಾಡಬೇಕೆಂದು ಬಯಸಿತ್ತು. ಸಭಾ ಅಧ್ಯಕ್ಷರು ಸಂವಿಧಾನದ ಬಗ್ಗೆ ಚರ್ಚೆಗಳನ್ನು ಮಾಡುತ್ತಾರೆ ಮತ್ತು ಸಂವಿಧಾನದ ಮೌಲ್ಯಗಳನ್ನು ಕಾಪಾಡುವುದಾಗಿ ಹೇಳುತ್ತಾರೆ. ಅದೇ ವೇಳೆ ಆರೆಸ್ಸೆಸ್ ಅನ್ನು ಹೊಗಳುತ್ತಾರೆ. ಏಕ ಕಾಲದಲ್ಲಿ ಆರೆಸ್ಸೆಸ್ ಮತ್ತು ದೇಶಪ್ರೇಮಿ ಆಗಲು ಸಾಧ್ಯವಿಲ್ಲ'. 

'ಪ್ರಧಾನಿ ಸೇರಿದಂತೆ ಪ್ರಸ್ತುತ ಹಿಂದುತ್ವದ ಐಕಾನ್‌ಗಳ ಗುರು ಎಂಎಸ್ ಗೋಲ್ವಾಲ್ಕರ್,  ಭಾರತೀಯ ಸಂವಿಧಾನವನ್ನು ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ. ನಾನು ಮೊದಲೇ ಹೇಳಿದಂತೆ, ಏಕ ಕಾಲದಲ್ಲಿ ಆರೆಸ್ಸೆಸ್ ಮತ್ತು ದೇಶಭಕ್ತರಾಗಲು ಸಾಧ್ಯವಿಲ್ಲ' ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ತನ್ನ ಇನ್ನೊಂದು ಟ್ವೀಟ್ ನಲ್ಲಿ ಬರೆದುಕೊಂಡಿದ್ದಾರೆ.

 ಮುಂದಿನ ಚುನಾವಣೆಯೇ ಕೊನೆ, ಮತ್ತೆ ಚುನಾವಣೆಗೆ ಸ್ಪರ್ಧಿಸಲ್ಲ: ಸಿದ್ದರಾಮಯ್ಯ

ಮುಂದಿನ ಚುನಾವಣೆಯೇ ಕೊನೆ, ಮತ್ತೆ ಚುನಾವಣೆಗೆ ಸ್ಪರ್ಧಿಸಲ್ಲ: ಸಿದ್ದರಾಮಯ್ಯ

 

ಮುಂದಿನ ಚುನಾವಣೆಯೇ ಕೊನೆ, ಮತ್ತೆ ಚುನಾವಣೆಗೆ ಸ್ಪರ್ಧಿಸಲ್ಲ: ಸಿದ್ದರಾಮಯ್ಯ

ಮೈಸೂರು: ಚುನಾವಣಾ ರಾಜಕೀಯ ನಿವೃತ್ತಿ ಬಗ್ಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.

ಗುರುವಾರ ಸ್ವಗ್ರಾಮ ಮೈಸೂರು ತಾಲೂಕಿನ ಸಿದ್ದರಾಮನಹುಂಡಿಯಲ್ಲಿ  ಜಾತ್ರಾ ಮಹೋತ್ಸವಕ್ಕೆ ಆಗಮಿಸಿದ ಸಿದ್ದರಾಮಯ್ಯ, ಶುಕ್ರವಾರ ಬೆಳಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದರು. 

ಮುಂದಿನ ಚುನಾವಣೆಯೇ ಕೊನೆ, ಮತ್ತೆ ಚುನಾವಣೆಗೆ ಸ್ಪರ್ಧಿಸಲ್ಲ.  ಆದರೆ ಸಕ್ರಿಯ ರಾಜಕೀಯದಲ್ಲಿ ಇರುತ್ತೇನೆ ಎಂದು ತಿಳಿಸಿದ್ದಾರೆ.

ವರುಣ, ಚಾಮುಂಡೇಶ್ವರಿ ಸೇರಿದಂತೆ ಹಲವು ಕ್ಷೇತ್ರಗಳ ಜನ ಸ್ಪರ್ಧೆಗೆ ಆಹ್ವಾನಿಸಿದ್ದಾರೆ. ಎಲ್ಲ ಕ್ಷೇತ್ರಗಳೂ ಆದ್ಯತೆ, ಆದರೆ ಚುನಾವಣೆಗೆ ಇನ್ನೂ ಒಂದು ವರ್ಷ ಬಾಕಿ ಇದೆಯಲ್ಲಾ, ಈ ಬಗ್ಗೆ ಮುಂದೆ ತೀರ್ಮಾನ ಕೈಗೊಳ್ಳುತ್ತೇನೆ ಎಂದು ಹೇಳಿದರು. 

Thursday, 24 March 2022

 ಪಾತಾಳಕ್ಕೆ ಕುಸಿದ ಅರ್ಥವ್ಯವಸ್ಥೆ: ಶ್ರೀಲಂಕಾದಲ್ಲಿ ಆಹಾರಕ್ಕೂ ತೀವ್ರ ಕೊರತೆ

ಪಾತಾಳಕ್ಕೆ ಕುಸಿದ ಅರ್ಥವ್ಯವಸ್ಥೆ: ಶ್ರೀಲಂಕಾದಲ್ಲಿ ಆಹಾರಕ್ಕೂ ತೀವ್ರ ಕೊರತೆ


 ಪಾತಾಳಕ್ಕೆ ಕುಸಿದ ಅರ್ಥವ್ಯವಸ್ಥೆ: ಶ್ರೀಲಂಕಾದಲ್ಲಿ ಆಹಾರಕ್ಕೂ ತೀವ್ರ ಕೊರತೆ

ಕೊಲಂಬೊ: ದಾಖಲೆ ಮಟ್ಟಕ್ಕೇರಿದ ಹಣದುಬ್ಬರ, ಗಗನಕ್ಕೇರಿದ ತೈಲ, ಆಹಾರ ಮತ್ತು ದಿನಬಳಕೆ ವಸ್ತುಗಳ ಬೆಲೆ ಹಾಗೂ ಪಾತಾಳಕ್ಕೆ ಕುಸಿದಿರುವ ಅರ್ಥವ್ಯವಸ್ಥೆಯಿಂದ ಕಂಗೆಟ್ಟಿರುವ ಶ್ರೀಲಂಕಾದ ಜನತೆ ಈಗ ಅರೆಹೊಟ್ಟೆಯಲ್ಲಿ ಜೀವನ ಸಾಗಿಸುವ ಪರಿಸ್ಥಿತಿ ಬಂದಿದೆ ಎಂದು ವರದಿಯಾಗಿದೆ.

ಅಂಗಡಿ, ಪೆಟ್ರೋಲ್ ಬಂಕ್ ಹೀಗೆ ಎಲ್ಲೆಡೆಯೂ ಮಾರುದ್ದದ ಸರತಿ ಸಾಲು ಕಂಡುಬರುತ್ತಿದೆ. ದಿನವಿಡೀ ಸರತಿ ಸಾಲಲ್ಲಿ ನಿಂತು ಅಂಗಡಿಯೊಳಗೆ ಪ್ರವೇಶಿಸಿದರೂ ಕೇಳಿದಷ್ಟು ವಸ್ತು ದೊರಕುತ್ತಿಲ್ಲ. ದೈನಂದಿನ ವಸ್ತುಗಳ ತೀವ್ರ ಕೊರತೆ ಇರುವುದರಿಂದ ಇರುವುದನ್ನು ಎಲ್ಲರಿಗೂ ಹಂಚುವ ಅನಿವಾರ್ಯತೆ ಎದುರಾಗಿದೆ. ಈ ಹಿಂದೆ ಮನೆಯಲ್ಲಿ ದಿನಾ ಮಾಡುತ್ತಿದ್ದ ಅಡುಗೆಯ 50%ದಷ್ಟು ಮಾತ್ರ ಮಾಡಲು ಈಗ ಸಾಧ್ಯವಾಗುತ್ತಿದೆ ಎಂದು ಜನತೆ ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ.

    ಆಹಾರ, ಔಷಧಿ, ದಿನಬಳಕೆಯ ವಸ್ತು, ತೈಲ, ಅಡುಗೆ ಅನಿಲ ಇತ್ಯಾದಿ ಎಲ್ಲದರ ಬೆಲೆಯೂ ಗಗನಕ್ಕೇರಿದೆ. ಜನರು ಜೀವನ ನಡೆಸುವುದೇ ದುಸ್ತರವಾಗಿದೆ .ಕೊರೋನ ಸಾಂಕ್ರಾಮಿಕ ವ್ಯಾಪಕವಾಗಿ ಹರಡಿದ ಸಂದರ್ಭದಲ್ಲಿ ಜಾರಿಗೊಂಡ ಲಾಕ್ ಡೌನ್ ನಿಂದಾಗಿ ಪ್ರವಾಸೋದ್ದಿಮೆಯೇ ಪ್ರಮುಖ ಆದಾಯ ಮೂಲವಾಗಿರುವ ದ್ವೀಪರಾಷ್ಟ್ರದ ಅರ್ಥವ್ಯವಸ್ಥೆ ಹದಗೆಟ್ಟಿದೆ. ಜತೆಗೆ ತೆರಿಗೆ ಕಡಿತದ ಕ್ರಮವೂ ಆರ್ಥಿಕ ಹೊರೆಯನ್ನು ಹೆಚ್ಚಿಸಿದೆ. ದೇಶದ ಸೆಂಟ್ರಲ್ ಬ್ಯಾಂಕ್ ನಲ್ಲಿ ವಿದೇಶಿ ವಿನಿಮಯದ ದಾಸ್ತಾನು ಕನಿಷ್ಟ ಮಟ್ಟದಲ್ಲಿರುವುದರಿಂದ ಅಗತ್ಯ ವಸ್ತುಗಳನ್ನು ಆಮದು ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅಂತರಾಷ್ಟ್ರೀಯ ಸಾಲದ ಹಲವು ಕಂತುಗಳು ಬಾಕಿಯಾಗಿರುವುದರಿಂದ ಮತ್ತಷ್ಟು ಸಾಲ ದೊರಕುವ ಭರವಸೆಯಿಲ್ಲ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ದೇಶದಲ್ಲಿ ಎದುರಾಗಿರುವ ಕೊರತೆಗೆ ಮೂಲಕಾರಣ ಡಾಲರ್ ನ ಕೊರತೆಯಾಗಿದೆ ಎಂದು ಕೊಲಂಬೊದ ಚಿಂತಕರ ವೇದಿಕೆ ಅಡ್ವೊಕಟ ಇನ್‌ಸ್ಟಿಟ್ಯೂಟ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಧನನಾಥ್ ಫೆರ್ನಾಂಡೊ ಹೇಳಿದ್ದಾರೆ. ಫೆಬ್ರವರಿಯಲ್ಲಿ ದೇಶದಲ್ಲಿನ ವಿದೇಶಿ ವಿನಿಮಯ ಸಂಗ್ರಹ ಕೇವಲ 2.31 ಬಿಲಿಯನ್ ಡಾಲರ್‌ನಷ್ಟಿದ್ದರೆ, ಈ ವರ್ಷದೊಳಗೆ ಸುಮಾರು 4 ಬಿಲಿಯನ್ ಡಾಲರ್‌ನಷ್ಟು ಅಂತರಾಷ್ಟ್ರೀಯ ಸಾಲ ಮರುಪಾವತಿಸಬೇಕಿದೆ. ಈ ನಿಟ್ಟಿನಲ್ಲಿ ಚೀನಾ ಮತ್ತು ಭಾರದ ನೆರವನ್ನು ಶ್ರೀಲಂಕಾ ಸರಕಾರ ಕೋರಿದೆ.

 ಆರ್ಥಿಕ ವಿಪತ್ತಿನಿಂದ ಪಾರಾಗಲು ತುರ್ತು ನೆರವು ಒದಗಿಸುವಂತೆ ಅಂತರಾಷ್ಟ್ರೀಯ ಹಣಕಾಸು ಸಂಸ್ಥೆ (ಐಎಂಎಫ್)ಗೆ ಮನವಿ ಮಾಡಿರುವುದಾಗಿ ಕಳೆದ ವಾರ ಶ್ರೀಲಂಕಾ ಸರಕಾರ ಹೇಳಿದೆ. ಆದರೆ ಜನಸಾಮಾನ್ಯರಿಗೆ ಜೀವನ ಸಾಗಿಸುವುದೇ ದುಸ್ತರವಾಗಿದೆ. ಅಡುಗೆ ಅನಿಲ ದರ ಹೆಚ್ಚಳದ ಜತೆ ಸೀಮೆಎಣ್ಣೆಯ ಕೊರತೆ ಗಾಯದ ಮೇಲೆ ಬರೆ ಎಳೆದಂತಾಗಿದೆ. 3 ತಿಂಗಳ ಹಿಂದಿನ ಅವಧಿಗೆ ಹೋಲಿಸಿದರೆ ಪೆಟ್ರೋಲ್ ಬೆಲೆ ಲೀಟರ್‌ಗೆ ದುಪ್ಪಟ್ಟಾಗಿದೆ. ಹಾಲಿನ ಪೌಡರ್ ಬೆಲೆ ಹೆಚ್ಚಿರುವುದರಿಂದ ಹೋಟೆಲ್‌ಗಳಲ್ಲಿ ಒಂದು ಕಪ್ ಚಹಾದ ಬೆಲೆ 100 ರೂ.ಗೆ ತಲುಪಿದೆ. ಆದ್ದರಿಂದ ಈ ಹಿಂದೆ ಸೇವಿಸುತ್ತಿದ್ದ ಆಹಾರದ 50% ಆಹಾರ ಸೇವಿಸುವ ಅನಿವಾರ್ಯತೆ ಬಂದಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

 ಇಶಾಅತುಸ್ಸುನ್ನ: ನವ ಸಾರಥಿಗಳ ಆಯ್ಕೆ

ಇಶಾಅತುಸ್ಸುನ್ನ: ನವ ಸಾರಥಿಗಳ ಆಯ್ಕೆ


 ಇಶಾಅತುಸ್ಸುನ್ನ: ನವ ಸಾರಥಿಗಳ ಆಯ್ಕೆ

ಮುಹಿಮ್ಮಾತ್: ಮುಹಿಮ್ಮಾತ್ ಕಾಲೇಜ್ ಆಫ್ ಇಸ್ಲಾಮಿಕ್ ಸಯನ್ಸ್ ನ ವಿದ್ಯಾರ್ಥಿ ಸಂಘಟನೆ ಆಗಿರುವ  ಇಶಾಅತುಸ್ಸುನ್ನಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.

 ಸಂಸ್ಥೆಯ ವೈಸ್ ಪ್ರಿನ್ಸಿಪಾಲ್ ಸಯ್ಯಿದ್ ಹಸನುಲ್ ಅಹ್ದಲ್ ತಂಙಳ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಅಬೂಬಕರ್ ಕಾಮಿಲ್ ಸಖಾಫಿ ಉದ್ಘಾಟನೆ ಮಾಡಿದರು. ಸಯ್ಯಿದ್ ಹಾಮಿದ್ ಅನ್ವರ್ ಅಲ್ ಅಹ್ದಲ್ ತಂಙಳ್ ಅವರು 2022-2023 ನೇ ಸಾಲಿಗೆ ನೂತನ ಪದಾಧಿಕಾರಿಗಳನ್ನು ಘೋಷಿಸಿದರು. ಅಧ್ಯಕ್ಷರಾಗಿ ಅಮೀನ್ ಕೊಳಕೆ, ಪ್ರಧಾನ ಕಾರ್ಯದರ್ಶಿಯಾಗಿ ಮಹ್ಶೂಕ್ ಚಿತ್ತಾರಿ, ಕೋಶಾಧಿಕಾರಿಯಾಗಿ ಶುಹೈಬ್ ಕಯ್ಯಾರ್ ಆಯ್ಕೆಯಾದರು. ಕಾರ್ಯದರ್ಶಿಗಳಾಗಿ ಬಾಖಿರ್ ನಾರಂಬಾಡಿ , ಸಲಾಹುದ್ದೀನ್ ಕುತ್ತಾರ್, ಹಾಫಿಳ್ ಸಲಾಹುದ್ದೀನ್  ಕಡಬ, ನೌಫಲ್ ಪೆರ್ನೆ,  ನೌಶಾದ್ ಹಸನ್ ನಗರ, ಶರೀಫ್ ಶೆಟ್ಟಿಕೊಪ್ಪ , ಹಾಫಿಳ್ ಆಶಿಕ್ ಉಳ್ಳಾಲ ,ಸ್ವಬಾಹ್ ಸುಳ್ಯ, ಕಿಸ್ಮತ್ ಮಲಿಕ್,ಹಾಫಿಳ್ ಖುಬೈಬ್ ಆಯ್ಕೆಯಾದರು.

 ಮಾಜಿ ಕಾರ್ಯದರ್ಶಿ ರಂಶಾದ್ ರವರ ಸ್ವಾಗತದಲ್ಲಿ ಆರಂಭಿಸಿದ ಕಾರ್ಯಕ್ರಮವು ನೂತನ ಪ್ರಧಾನ ಕಾರ್ಯದರ್ಶಿ ಮಹ್ಶೂಕ್ ಚಿತ್ತಾರಿಯ ವಂದನೆಗಳೊಂದಿಗೆ ಕೊನೆಗೊಂಡಿತು.

 ಶಾದಿ ಮಹಲ್ ಯೋಜನೆ ಕೈಬಿಡಲಾಗಿದೆ: ಮುಖ್ಯಮಂತ್ರಿ ಬೊಮ್ಮಾಯಿ

ಶಾದಿ ಮಹಲ್ ಯೋಜನೆ ಕೈಬಿಡಲಾಗಿದೆ: ಮುಖ್ಯಮಂತ್ರಿ ಬೊಮ್ಮಾಯಿ


 ಶಾದಿ ಮಹಲ್ ಯೋಜನೆ ಕೈಬಿಡಲಾಗಿದೆ: ಮುಖ್ಯಮಂತ್ರಿ ಬೊಮ್ಮಾಯಿ

ಬೆಂಗಳೂರು: ಮುಸ್ಲಿಮ್ ಸಮುದಾಯದ ವಿವಾಹ ಕಾರ್ಯಗಳಿಗೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಮೀಸಲಿಡುವ ಶಾದಿ ಮಹಲ್ ಯೋಜನೆ ಕೈಬಿಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಗುರುವಾರ ವಿಧಾನ ಪರಿಷತ್ತಿನ ಕಲಾಪದಲ್ಲಿ ಸಿ.ಎಂ.ಇಬ್ರಾಹಿಂ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಅಲ್ಪಸಂಖ್ಯಾತರ ಅಭಿವೃದ್ಧಿಗೆ ನಮ್ಮ ಸರಕಾರ ಎಲ್ಲ ರೀತಿಯ ಸಹಕಾರ ನೀಡಲಿದೆ. ಸದ್ಯ ಶಾದಿ ಮಹಲ್ ಯೋಜನೆ ಬಿಟ್ಟು ಇತರೆ ಯಾವುದೇ ಯೋಜನೆ ನಾವು ನಿಲ್ಲಿಸುವುದಿಲ್ಲ ಎಂದು ತಿಳಿಸಿದರು.

ಇದಕ್ಕೂ ಮೊದಲು ವಿಷಯ ಪ್ರಸ್ತಾಪಿಸಿದ ಸಿ.ಎಂ.ಇಬ್ರಾಹೀಂ, ಅಲ್ಪಸಂಖ್ಯಾತರಿಗೆ ಮೀಸಲಿಟ್ಟಿದ್ದ 77 ಯೋಜನೆಗಳಲ್ಲಿ ಈಗ 29 ಯೋಜನೆ ಮಾತ್ರ ಉಳಿದಿವೆ. ಅನೇಕ ಯೋಜನೆಗಳನ್ನು ಸರಕಾರ ರದ್ದುಗೊಳಿಸಿದೆ. ಅದರಲ್ಲೂ ಗಂಗಾ ಕಲ್ಯಾಣ ಯೋಜನೆ ರದ್ದು ಮಾಡಲಾಗಿದೆ. ಪಿಎಚ್‍ಡಿ ವಿದ್ಯಾರ್ಥಿಗಳಿಗೆ ಸಹಾಯ ಧನ 25 ಸಾವಿರ ನೀಡುತ್ತಿದ್ದರು ಎಂದು ಅಸಮಾಧಾನ ವ್ಯಕ್ತಪಡಿದರು.

ಅಷ್ಟೇ ಅಲ್ಲದೆ, ಹಣ್ಣು ವ್ಯಾಪಾರಿಗಳಿಗೆ ನೀಡಲಾಗುವ ಸಣ್ಣ ಪ್ರಮಾಣದ ಸಾಲ ಯೋಜನೆ ನಿಲ್ಲಿಸಲಾಗಿದೆ. ಬಹುತೇಕರು ಆರ್ಥಿಕ ಸಂಕಷ್ಟದಲ್ಲಿ ಇದ್ದಾರೆ. ಇಂತಹ ಸಂದರ್ಭದಲ್ಲಿ ಯೋಜನೆಗಳನ್ನು ಸರಕಾರ ಮುಂದುವರಿಸಬೇಕು ಎಂದು ಮನವಿ ಮಾಡಿದರು.

ಇದಕ್ಕೆ ಉತ್ತರಿಸಿದ ಬಸವರಾಜ ಬೊಮ್ಮಾಯಿ, ಗಂಗಾ ಕಲ್ಯಾಣ ಯೋಜನೆ ನಿಲ್ಲಿಸಿಲ್ಲ. ಪಿಎಚ್‍ಡಿ ವಿದ್ಯಾರ್ಥಿಗಳಿಗೆ ಅನುದಾನ ಮುಂದುವರಿಸುತ್ತೇವೆ. ಅರಿವು ಯೋಜನೆಗೆ ಹೆಚ್ಚು ಅನುದಾನ ನೀಡಿದ್ದೇವೆ. ಜಿಲ್ಲೆಗೊಂದು ಅಬ್ದುಲ್ ಕಲಾಂ ಶಾಲೆ ಅಭಿವೃದ್ಧಿ ಮಾಡುತ್ತಿದ್ದೇವೆ ಎಂದು ತಿಳಿಸಿದರು.

50 ಸಾವಿರ ಮಕ್ಕಳಿಗೆ ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ನೀಡಲು 110 ಕೋಟಿ ರೂ. ಹಣ ಇಟ್ಟಿದ್ದೇನೆ. ಅಲ್ಪಸಂಖ್ಯಾತರ ವಸತಿ ಗೃಹಗಳಲ್ಲಿ ವಿದ್ಯಾರ್ಥಿಗಳ ಸೇರ್ಪಡೆ ಹೆಚ್ಚಳ ಮಾಡಲಾಗಿದೆ. ಕಾಲನಿ ಅಭಿವೃದ್ಧಿಯನ್ನು ಸ್ಲಂ ಬೋರ್ಡ್ ಮೂಲಕ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದ್ದು, ಅಲ್ಪಸಂಖ್ಯಾತ ಅಭಿವೃದ್ಧಿಗೆ ಸರಕಾರ ಅನೇಕ ಕಾರ್ಯಕ್ರಮ ಜಾರಿ ಮಾಡಿದೆ ಎಂದು ಮಾಹಿತಿ ನೀಡಿದರು.


 "ಪೆಟ್ರೋಲ್ ಬೆಲೆ ನಿಯಂತ್ರಣದಲ್ಲಿಡಬೇಕಾದರೆ ಪ್ರತೀ ತಿಂಗಳು ಚುನಾವಣೆ ನಡೆಸಬೇಕು": ಸಂಸದೆ ಸುಪ್ರಿಯಾ ಸುಲೆ ವ್ಯಂಗ್ಯ

ಹೊಸದಿಲ್ಲಿ: ಪ್ರತಿ ತಿಂಗಳು ಚುನಾವಣೆ ನಡೆಸುವುದರಿಂದ ಇಂಧನ ಬೆಲೆ ಏರಿಕೆಗೆ ಕಡಿವಾಣ ಹಾಕಬಹುದು ಎಂದು ಎನ್‌ಸಿಪಿ ಸಂಸದೆ ಸುಪ್ರಿಯಾ ಸುಲೆ ಲೋಕಸಭೆಯಲ್ಲಿ ಬುಧವಾರ ಹೇಳಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.

ಅಡುಗೆ ಅನಿಲದ ಬೆಲೆ ಏರಿಕೆಯಿಂದ ಮಹಿಳೆಯರು ಎದುರಿಸುತ್ತಿರುವ ಸಂಕಷ್ಟಗಳ ಕುರಿತು ಲೋಕಸಭೆಯಲ್ಲಿ ಮಾತನಾಡಿದ ಸುಳೆ ಅವರು ವ್ಯಂಗ್ಯವಾಗಿ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದಿದ್ದಾರೆ.

ಇತ್ತೀಚೆಗೆ ಚುನಾವಣೆ ಮುಗಿದ ರಾಜ್ಯಗಳ ಪೈಕಿ ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಜಯಗಳಿಸಿದ ಕೂಡಲೇ ಇಂಧನ ಬೆಲೆಗಳನ್ನು ಹೆಚ್ಚಿಸಲಾಗಿದೆ ಎಂದು ಸುಲೆ ಹೇಳಿದ್ದಾರೆ.

"ಚುನಾವಣೆಗಳು ಮಾತ್ರ ಇಂಧನ ಬೆಲೆಗಳನ್ನು ನಿಯಂತ್ರಣದಲ್ಲಿಡಬಹುದು. ಚುನಾವಣೆಗಳು ಆಡಳಿತ ಪಕ್ಷವನ್ನು ಕಾರ್ಯನಿರತವಾಗಿಸುತ್ತದೆ, ಇಂಧನ ವಸ್ತುಗಳ ಬೆಲೆಗಳು ನಿಯಂತ್ರಣದಲ್ಲಿ ಇರಿಸುತ್ತದೆ" ಎಂದು ಅವರು ಹೇಳಿದ್ದಾರೆ.

 ಮಂಡ್ಯದಲ್ಲಿ 'ಕಾಶ್ಮೀರ್‌ ಫೈಲ್ಸ್‌' ಸಿನೆಮಾಕ್ಕೆ ಪ್ರೇಕ್ಷಕರಿಲ್ಲ: ಉಚಿತ ಪ್ರದರ್ಶನ ವ್ಯವಸ್ಥೆ ಮಾಡಿದ ಬಿಜೆಪಿ ಮುಖಂಡ!

ಮಂಡ್ಯದಲ್ಲಿ 'ಕಾಶ್ಮೀರ್‌ ಫೈಲ್ಸ್‌' ಸಿನೆಮಾಕ್ಕೆ ಪ್ರೇಕ್ಷಕರಿಲ್ಲ: ಉಚಿತ ಪ್ರದರ್ಶನ ವ್ಯವಸ್ಥೆ ಮಾಡಿದ ಬಿಜೆಪಿ ಮುಖಂಡ!

 

ಮಂಡ್ಯದಲ್ಲಿ 'ಕಾಶ್ಮೀರ್‌ ಫೈಲ್ಸ್‌' ಸಿನೆಮಾಕ್ಕೆ ಪ್ರೇಕ್ಷಕರಿಲ್ಲ: ಉಚಿತ ಪ್ರದರ್ಶನ ವ್ಯವಸ್ಥೆ ಮಾಡಿದ ಬಿಜೆಪಿ ಮುಖಂಡ!

ಮಂಡ್ಯ: ಪಾಂಡವಪುರ ಪಟ್ಟಣದ ಕೋಕಿಲ ಚಿತ್ರಮಂದಿರದಲ್ಲಿ ಪ್ರದರ್ಶಶಿಸಲ್ಪಡುತ್ತಿರುವ 'ದಿ ಕಾಶ್ಮೀರ್ ಫೈಲ್ಸ್' ಸಿನೆಮಾ  ವೀಕ್ಷಣೆಗೆ ಪ್ರೇಕ್ಷಕರಿಲ್ಲದ ಕಾರಣ ಬಿಜೆಪಿ ಮುಖಂಡರೊಬ್ಬರು ಉಚಿತ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಿದ್ದಾರೆ.

ಬಿಜೆಪಿ ಮುಖಂಡ, ಪರಿವರ್ತನಾ ಟ್ರಸ್ಟ್ ಅಧ್ಯಕ್ಷ ಡಾ.ಎನ್.ಎಸ್.ಇಂದ್ರೇಶ್ ಅಭಿಮಾನಿಗಳ ಬಳಗದ ವತಿಯಿಂದ ಬುಧವಾರ ಮತ್ತು ಗುರುವಾರ ಚಿತ್ರವನ್ನು ಸಾರ್ವಜನಿಕರಿಗೆ ಉಚಿತವಾಗಿ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ. ಅದರಂತೆ ಇಂದ್ರೇಶ್  ಅಭಿಮಾನಿಗಳು ಹಾಗೂ ಕೆಲವು ಸಾರ್ವಜನಿಕರು ಉಚಿತವಾಗಿ ಚಲನಚಿತ್ರ ವೀಕ್ಷಣೆ ಮಾಡುತ್ತಿದ್ದಾರೆ.

ಈ ಸಂದರ್ಭದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಡಾ.ಎನ್.ಎಸ್.ಇಂದ್ರೇಶ್, `ದಿ ಕಾಶ್ಮೀರ್ ಫೈಲ್ಸ್' ಚಲನಚಿತ್ರವು ಕಾಶ್ಮೀರದ ನೈಜತೆಯನ್ನು ಬಿಂಬಿಸಿದೆ. ಹೀಗಾಗಿ ಪ್ರತಿಯೊಬ್ಬ ಹಿಂದೂಗಳು ಹಾಗೂ ಇಡೀ ಭಾರತೀಯರು ನೋಡಲೇಬೇಕಾದ ಶ್ರೇಷ್ಟ ಚಿತ್ರವಾಗಿದೆ ಎಂದು  ಹೇಳಿದರು. 

ಕಾಶ್ಮೀರದ ಇತಿಹಾಸ ಹಾಗೂ ಹಿಂದುತ್ವವನ್ನು ತಿಳಿಸುವಂತಹ ಉತ್ತಮ ಚಿತ್ರ. ಯಾರಿಗೆ ರಾಷ್ಟ್ರೀಯತೆ, ಹಿಂದುತ್ವ ಹಾಗೂ ಈ ದೇಶದ ಬಗ್ಗೆ ಅಪಾರವಾದ ಅಭಿಮಾನ ಹಾಗೂ ದೇಶಭಕ್ತಿ ಇದೆಯೋ ಅವರು ತಪ್ಪದೇ ಈ ಚಲನಚಿತ್ರವನ್ನು ನೋಡುತ್ತಾರೆ ಎಂದರು.

  ಈ ವೇಳೆ ಬಿಜೆಪಿ ಮುಖಂಡರಾದ ಎಸ್‌ಎನ್‌ಟಿ ಸೋಮಶೇಖರ್, ಬಳಘಟ್ಟ ಅಶೋಕ, ರಾಜೀವ್ ತಮ್ಮಣ್ಣ, ಕೋಡಾಲ ಅಶೋಕ್, ಅರಕನಕೆರೆ ಪುರುಷೋತ್ತಮ್, ಕೋಕಿಲಾ ಚಿತ್ರಮಂದಿರದ ಸಿಬ್ಬಂದಿಯಾದ ಹಾರೋಹಳ್ಳಿ ನಾರಾಯಣಪ್ಪ, ಅಶೋಕಣ್ಣ ಸೇರಿದಂತೆ ಡಾ.ಎ.ಎನ್.ಇಂದ್ರೇಶ್ ಅಭಿಮಾನಿಗಳ ಬಳಗದವರು ಉಪಸ್ಥಿತರಿದ್ದರು.

10 ಟಿಕೆಟ್ ಖರೀದಿಸಿ ಒಬ್ಬನೇ ಸಿನೆಮಾ ವೀಕ್ಷಿಸಿದ್ದ!

ಮಂಗಳವಾರ(ಮಾ.22)ವೂ  ಕೋಕಿಲ ಚಿತ್ರಮಂದಿರದಲ್ಲಿ ಇದೇರೀತಿ 'ದಿ‌ ಕಾಶ್ಮೀರ ಫೈಲ್ಸ್' ಚಲನಚಿತ್ರಕ್ಕೆ ಪ್ರೇಕ್ಷಕರ ಕೊರತೆ ಸಮಸ್ಯೆ ಆದಾಗ ವ್ಯಕ್ತಿಯೋರ್ವ ಏಕಾಂಗಿಯಾಗಿ 10 ಟಿಕೆಟ್‍ ಖರೀದಿಸಿ ಒಬ್ಬನೇ ಸಿನೆಮಾ ವೀಕ್ಷಿಸಿದ್ದ!

ಪಾಂಡವಪುರ ಟೌನ್ ಹಾರೋಹಳ್ಳಿ ಗ್ರಾಮದ ನಿವಾಸಿ ಡೈಮೆಂಡ್ ರವಿ ಎಂಬವರು ಕೋಕಿಲ ಚಿತ್ರಮಂದಿರಕ್ಕೆ ತೆರಳಿದಾಗ, ಚಿತ್ರಮಂದಿರದಲ್ಲಿ ಚಲನಚಿತ್ರ ವೀಕ್ಷಿಸಲು ಯಾರೂ ಬಂದಿರಲಿಲ್ಲ. ಹಾಗಾಗಿ ಚಿತ್ರಮಂದಿರದ ವ್ಯವಸ್ಥಾಪಕರು ಚಲನಚಿತ್ರ ಪ್ರದರ್ಶನ ಇಲ್ಲವೆಂದು ಹೇಳಿದ್ದಾರೆ. ಈ ವೇಳೆ ಡೈಮೆಂಡ್ ರವಿ 10 ಟಿಕೆಟ್ ಖರೀದಿಸಿ ಒಬ್ಬನೇ ಚಿತ್ರ ವೀಕ್ಷಿಸಿದ್ದಾನೆ ಎಂದು ತಿಳಿದುಬಂದಿದೆ.

 ದಿಲ್ಲಿ ಗಲಭೆ ಪ್ರಕರಣ: ಉಮರ್‌ ಖಾಲಿದ್‌ ಗೆ ಜಾಮೀನು ನಿರಾಕರಿಸಿದ ನ್ಯಾಯಾಲಯ

ದಿಲ್ಲಿ ಗಲಭೆ ಪ್ರಕರಣ: ಉಮರ್‌ ಖಾಲಿದ್‌ ಗೆ ಜಾಮೀನು ನಿರಾಕರಿಸಿದ ನ್ಯಾಯಾಲಯ


 ದಿಲ್ಲಿ ಗಲಭೆ ಪ್ರಕರಣ: ಉಮರ್‌ ಖಾಲಿದ್‌ ಗೆ ಜಾಮೀನು ನಿರಾಕರಿಸಿದ ನ್ಯಾಯಾಲಯ

ಹೊಸದಿಲ್ಲಿ: ದಿಲ್ಲಿ ಗಲಭೆ ಪ್ರಕರಣದಲ್ಲಿ ಪಿತೂರಿ ಆರೋಪಿ ಹಾಗೂ ಜೆಎನ್‌ಯು ಮಾಜಿ ವಿದ್ಯಾರ್ಥಿ ಉಮರ್ ಖಾಲಿದ್‌ಗೆ ದಿಲ್ಲಿ ನ್ಯಾಯಾಲಯ ಇಂದು ಜಾಮೀನು ನಿರಾಕರಿಸಿದೆ. ಫೆಬ್ರವರಿ 2020 ರಲ್ಲಿ ನಡೆದಿದ್ದ ದಿಲ್ಲಿ ಗಲಭೆಗೆ ಸಂಬಂಧಿಸಿದಂತೆ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯಡಿಯಲ್ಲಿ (UAPA) ಅವರ ವಿರುದ್ಧ ಆರೋಪ ಹೊರಿಸಲಾಗಿತ್ತು.

ಮಾರ್ಚ್ 21 ರಂದು ನ್ಯಾಯಾಲಯವು ಖಾಲಿದ್ ಅವರ ಜಾಮೀನು ಅರ್ಜಿಯ ಆದೇಶವನ್ನು ಮಾರ್ಚ್ 23 ಕ್ಕೆ ಮುಂದೂಡಿತ್ತು. ನಿನ್ನೆ, ಅವರ ಜಾಮೀನು ಅರ್ಜಿಯ ತೀರ್ಪನ್ನು ಮಾರ್ಚ್ 24 ಕ್ಕೆ ಮುಂದೂಡಲಾಯಿತು, ಅಂದರೆ ಇಂದು ಮತ್ತೆ ಆದೇಶವು ತಿದ್ದುಪಡಿ ಹಂತದಲ್ಲಿದೆ ಎಂದು ನ್ಯಾಯಾಧೀಶರು ಹೇಳಿದ್ದರು. ಇದೀಗ ಅವರಿಗೆ ಜಾಮೀನು ನಿರಾಕರಿಸಲಾಗಿದೆ. ಫೆಬ್ರವರಿ 2020 ರ ಈಶಾನ್ಯ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಪ್ರಾಸಿಕ್ಯೂಷನ್ ದೊಡ್ಡ ಪಿತೂರಿಯನ್ನು ಆರೋಪಿಸಿತ್ತು.

ಕಳೆದ ವಿಚಾರಣೆಯ ಸಂದರ್ಭದಲ್ಲಿ, ಆದೇಶವನ್ನು ಪ್ರಕಟಿಸಬೇಕಿದ್ದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಅಮಿತಾಭ್ ರಾವತ್ ಅವರು ಅದನ್ನು ಇಂದಿಗೆ ಮುಂದೂಡಿದರು, ಅದು ಸಿದ್ಧವಾಗಿಲ್ಲ ಎಂದು ಹೇಳಿದರು. ಪ್ರಕರಣದ ವಿಚಾರಣೆ ಮಾರ್ಚ್ 3 ರಂದು ಮುಕ್ತಾಯಗೊಂಡಿತ್ತು ಮತ್ತು ನ್ಯಾಯಾಲಯವು ತನ್ನ ಆದೇಶವನ್ನು ಕಾಯ್ದಿರಿಸಿತ್ತು.

Wednesday, 23 March 2022

 ಬಟ್ಟೆ ಬ್ಯಾಗ್ ಖರೀದಿಯಲ್ಲಿ ಹಗರಣ ಪ್ರಕರಣ: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ತನಿಖೆಗೆ ಆದೇಶ

ಬಟ್ಟೆ ಬ್ಯಾಗ್ ಖರೀದಿಯಲ್ಲಿ ಹಗರಣ ಪ್ರಕರಣ: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ತನಿಖೆಗೆ ಆದೇಶ

 

ಬಟ್ಟೆ ಬ್ಯಾಗ್ ಖರೀದಿಯಲ್ಲಿ ಹಗರಣ ಪ್ರಕರಣ: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ತನಿಖೆಗೆ ಆದೇಶ

ಮೈಸೂರು: ಮೈಸೂರು ಜಿಲ್ಲಾ ವ್ಯಾಪ್ತಿಯಲ್ಲಿ ಪರಿಸರ ಸ್ನೇಹಿ ಬಟ್ಟೆ ಬ್ಯಾಗ್ ಗಳ ಸರಬರಾಜು ಸಂಬಂಧ ನಡೆದಿರುವ ಹಗರಣದ ಕುರಿತು ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವಂತೆ ರಾಜ್ಯ ಪೌರಾಡಳಿತ ನಿರ್ದೇಶನಾಲಯ ಮೈಸೂರು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಅವರಿಗೆ ಆದೇಶ ಹೊರಡಿಸಿದ್ದು, ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರಿಗೆ ಇದೀಗ ಸಂಕಷ್ಟ ಎದುರಾಗಿದೆ.

ಮೈಸೂರು ಜಿಲ್ಲೆ ಕೆ.ಆರ್.ನಗರ ಕ್ಷೇತ್ರದ ಶಾಸಕ ಸಾ.ರಾ.ಮಹೇಶ್ ಅವರು ಬ್ಯಾಗ್ ಖರೀದಿಯಲ್ಲಿ ಹಗರಣ ನಡೆದಿದೆ ಎಂದು ಆರೋಪಿಸಿದ್ದರಲ್ಲದೇ ತನಿಖೆಗೆ ಒತ್ತಾಯಿಸಿದ್ದರು. 

ಮೈಸೂರು ಜಿಲ್ಲಾ ವ್ಯಾಪ್ತಿಯಲ್ಲಿ ನಗರ ಮತ್ತು ಗ್ರಾಮಾಂತರ ಸ್ಥಳೀಯ ಸಂಸ್ಥೆಗಳ ಮೂಲಕ ಪರಿಸರ ಸ್ನೇಹಿ ಬಟ್ಟೆ ಬ್ಯಾಗ್ ಗಳನ್ನು ಖರೀದಿಸುವ ಸಂಬಂಧ ಜಿಲ್ಲಾಧಿಕಾರಿಗಳು ಮೈಸೂರು ಇವರು 09.04.2021 ರಂದು ಕಾರ್ಯಾದೇಶ ಹೊರಡಿಸಿದ್ದರು.ಈ ಕಾರ್ಯಾದೇಶದಲ್ಲಿ ಕರ್ನಾಟಕ ಕೈಮಗ್ಗ  ಅಭಿವೃದ್ಧಿ  ನಿಗಮ ನಿಯಮಿತ ಇವರಿಂದ ಪರಿಸರ ಸ್ನೇಹಿ ಬಟ್ಟೆ ಬ್ಯಾಗ್ ಗಳನ್ನು ಮೈಸೂರು ಜಿಲ್ಲಾ ವ್ಯಾಪ್ತಿಗೆ ಒಳಪಡುವ ನಗರ ಮತ್ತು ಗ್ರಾಮಾಂತರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಗೆ ಸರಬರಾಜು ಮಾಡುವ ಸಂಬಂಧ 4ಹೆಚ್ ವಿನಾಯಿತಿ ಅಡಿಯಲ್ಲಿ ದರಪಟ್ಟಿಗಳನ್ನು ಪಡೆದಿದ್ದು ಅದರಂತೆ 5ಕೆ.ಜಿ, 10ಕೆ.ಜಿ ಸಾಮಥ್ರ್ಯದ ಬಟ್ಟೆ ಬ್ಯಾಗ್ ಗಳಿಗೆ ರೂ.52(ಜಿಎಸ್ ಟಿ ಸೇರಿದಂತೆ) ನಿಗದಿಪಡಿಸಿ ಒಟ್ಟು 1471458 ಬಟ್ಟೆ ಬ್ಯಾಗ್ ಗಳನ್ನು ಖರೀದಿಸಲು ಅನುಮೋದನೆ ನೀಡಿರುತ್ತಾರೆ. 

ಈ ಬಟ್ಟೆ ಬ್ಯಾಗ್ ಗಳ ವಿತರಣೆ ಸಂಬಂಧ ಮೈಸೂರು ಮಹಾನಗರ ಪಾಲಿಕೆ ಮತ್ತು ಜಿಲ್ಲಾ ಪಂಚಾಯತ್ ವ್ಯಾಪ್ತಿಗೆ ಸೇರಿರುವ ಎಲ್ಲಾ ಗ್ರಾಮಪಂಚಾಯತ್ ಗಳ ಹಾಗೂ ಪುರಸಭೆಗಳ ಸಾಮಾನ್ಯ ಸಭೆಯಲ್ಲಿ ಯಾವುದೇ ವಿಧವಾದ ಅನುಮೋದನೆಯನ್ನು ಪಡೆದಿಲ್ಲ.

ಈ ಬಟ್ಟೆ ಬ್ಯಾಗ್ ಗಳ ದರಕ್ಕೆ ಸಂಬಂಧಿಸಿದಂತೆ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದವರು ಸರಬರಾಜು ಮಾಡಿರುವ ಬಟ್ಟೆ ಬ್ಯಾಗ್ ಗಳಷ್ಟೇ ಗುಣಮಟ್ಟ ಮತ್ತು ಗಾತ್ರ  ಹೊಂದಿರುವ ಬ್ಯಾಗ್ ಗಳು ಮುಕ್ತ ಮಾರುಕಟ್ಟೆಯಲ್ಲಿ ಜಿಎಸ್ ಟಿ ಸೇರಿದಂತೆ 10ರಿಂದ 13ರೂ.ಗಳಿಗೆ ಮಾರಾಟವಾಗುತ್ತಿದೆ. ಮುಕ್ತ ಮಾರುಕಟ್ಟೆಯ ಚಿಲ್ಲರೆ ಮಾರಾಟದಲ್ಲಿ 10ರಿಂದ 13ರೂ.ಗಳಿಗೆ ಸಿಗುವ ಬ್ಯಾಗ್ ಗಳಿಗೆ 52ರೂ. ನಿಗದಿಪಡಿಸಿ ಅನುಮೋದನೆ ನೀಡಿ ಸಾರ್ವಜನಿಕ ಹಣ ವ್ಯಯ ಮಾಡಿರುತ್ತಾರೆ. ಬ್ಯಾಗ್ ಗಳನ್ನು ನಿಗಮದ ವತಿಯಿಂದಲೇ ತಯಾರಿಸಿ ಸರಬರಾಜು ಮಾಡುವ ಬದಲು ಬೇರೊಬ್ಬ ಮಧ್ಯವರ್ತಿಯಿಂದ ಬ್ಯಾಗ್ ಗಳನ್ನು ಖರೀದಿಸಿ ಸರಬರಾಜು ಮಾಡಿರುತ್ತಾರೆ. ಈ ಬಟ್ಟೆ ಬ್ಯಾಗ್ ಗಳಿಗೆ ಸಂಬಂಧಿಸಿದಂತೆ ಸಂಪೂರ್ಣ ಪ್ರಕ್ರಿಯೆಯನ್ನು ತನಿಖೆ ನಡೆಸಿ ಈ ಅವಧಿಯಲ್ಲಿ ಕಾರ್ಯಾದೇಶ ನೀಡಿರುವ ಜಿಲ್ಲಾಧಿಕಾರಿಗಳ ಹಾಗೂ ಸಂಬಂಧಪಟ್ಟವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಸಾ.ರಾ.ಮಹೇಶ್ ಅವರು ಸರ್ಕಾರಕ್ಕೆ ಪತ್ರ ಬರೆದಿದ್ದರು.

ಈ ದೂರಿನಲ್ಲಿರುವ ಅಂಶಗಳ ಬಗ್ಗೆ ನಿಯಮಾನುಸಾರ ಪರಿಶೀಲಿಸಿ ಕ್ರಮ ಕೈಗೊಂಡು ವರದಿ ನೀಡಲು  ನಿರ್ದೇಶಿಸಿದ್ದಾರೆ. ದೂರಿನಲ್ಲಿರುವ ಪ್ರತಿಯೊಂದು ಅಂಶಗಳನ್ನು ಆದ್ಯತೆಯ ಮೇರೆಗೆ ಪರಿಗಣಿಸಿ ತನಿಖೆ ಕೈಗೊಂಡು ಅಭಿಪ್ರಾಯ ಸಹಿತ ವರದಿಯನ್ನು ಸಲ್ಲಿಸುವಂತೆ ಕೋರಿದ್ದಾರೆ. 

 ರಾಜಕೀಯ ಪ್ರಭಾವ ಬಳಸಿ ಪುತ್ರಿಗೆ ನಕಲಿ ಜಾತಿ ಸರ್ಟಿಫಿಕೇಟ್ ಕೊಡಿಸಿದ ರೇಣುಕಾಚಾರ್ಯ: ಕಾಂಗ್ರೆಸ್ ಆರೋಪ

ರಾಜಕೀಯ ಪ್ರಭಾವ ಬಳಸಿ ಪುತ್ರಿಗೆ ನಕಲಿ ಜಾತಿ ಸರ್ಟಿಫಿಕೇಟ್ ಕೊಡಿಸಿದ ರೇಣುಕಾಚಾರ್ಯ: ಕಾಂಗ್ರೆಸ್ ಆರೋಪ


 ರಾಜಕೀಯ ಪ್ರಭಾವ ಬಳಸಿ ಪುತ್ರಿಗೆ ನಕಲಿ ಜಾತಿ ಸರ್ಟಿಫಿಕೇಟ್ ಕೊಡಿಸಿದ ರೇಣುಕಾಚಾರ್ಯ: ಕಾಂಗ್ರೆಸ್ ಆರೋಪ

ಬೆಂಗಳೂರು:  ಹೊನ್ನಾಳಿ ಕ್ಷೇತ್ರದ ಬಿಜೆಪಿ ಶಾಸಕ ರೇಣುಕಾಚಾರ್ಯ ತನ್ನ ಪುತ್ರಿಗೆ ನಕಲಿ ಜಾತಿ ಸರ್ಟಿಫಿಕೇಟ್ ಕೊಡಿಸಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.  

ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್,   ರೇಣುಕಾಚಾರ್ಯ ತಮ್ಮ ರಾಜಕೀಯ ಪ್ರಭಾವ ಬಳಸಿ ಪುತ್ರಿಗೆ ಬೇಡಜಂಗಮ ಜಾತಿಯ ನಕಲಿ ಸರ್ಟಿಫಿಕೇಟ್ ಕೊಡಿಸಿರುವ ಪ್ರಕರಣದಿಂದ ಬಿಜೆಪಿಗರ ಅಕ್ರಮ, ನೈತಿಕ ದಿವಾಳಿತನ ಬಯಲಾಗಿದೆ ಎಂದು ಹೇಳಿದೆ.

ಅಶಕ್ತ ಸಮುದಾಯಗಳಿಗೆ ಅನ್ಯಾಯವೆಸಗುತ್ತಿರುವ ರೇಣುಕಾಚಾರ್ಯರನ್ನು ರಾಜಕೀಯ ಕಾರ್ಯದರ್ಶಿ ಹುದ್ದೆಯಲ್ಲಿ ಇನ್ನೂ ಏಕೆ ಇಟ್ಟುಕೊಂಡಿದ್ದೀರಿ? ಎಂದು ಬಸವಾಜ ಬೊಮ್ಮಾಯಿ ಅವರಿಗೆ ಕಾಂಗ್ರೆಸ್ ಪ್ರಶ್ನಿಸಿದೆ. 

 ಮುಸ್ಲಿಂ ಮಹಿಳೆಯರ ಬಗ್ಗೆ ಅಶ್ಲೀಲವಾಗಿ ವ್ಯಂಗ್ಯ ಮಾಡಿದ ಹಿರೇಮಗಳೂರು ಕಣ್ಣನ್ ವಿರುದ್ಧ ವ್ಯಾಪಕ ಟೀಕೆ

ಮುಸ್ಲಿಂ ಮಹಿಳೆಯರ ಬಗ್ಗೆ ಅಶ್ಲೀಲವಾಗಿ ವ್ಯಂಗ್ಯ ಮಾಡಿದ ಹಿರೇಮಗಳೂರು ಕಣ್ಣನ್ ವಿರುದ್ಧ ವ್ಯಾಪಕ ಟೀಕೆ


 ಮುಸ್ಲಿಂ ಮಹಿಳೆಯರ ಬಗ್ಗೆ ಅಶ್ಲೀಲವಾಗಿ ವ್ಯಂಗ್ಯ ಮಾಡಿದ ಹಿರೇಮಗಳೂರು ಕಣ್ಣನ್ ವಿರುದ್ಧ ವ್ಯಾಪಕ ಟೀಕೆ

ಮೈಸೂರು: ಮೈಸೂರಿನ ರಂಗಾಯಣದಲ್ಲಿ ಇತ್ತೀಚೆಗೆ ನಡೆದ ಬಹುರೂಪಿ ರಾಷ್ಟ್ರೀಯ ರಂಗೋತ್ಸವದ ಸಮಾರೋಪ ಸಮಾರಂಭದಲ್ಲಿ ಚಿಕ್ಕಮಗಳೂರಿನ ಪೂಜಾರಿ ಹಿರೇಮಗಳೂರು ಕಣ್ಣನ್, ಹಿಜಾಬ್ ನಿಷೇಧ ಕುರಿತ ಹೇಳಿಕೆ ನೀಡುವ ವೇಳೆ ಮುಸ್ಲಿಮ್ ಮಹಿಳೆಯರ ಬಗ್ಗೆ ಆಡಿದ್ದ ಕೀಳುಮಟ್ಟದ ಮಾತಿಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ಲೇಖಕರು, ಸಾಹಿತಿಗಳು ಮತ್ತು ಬುದ್ಧಿಜೀವಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ರಂಗಾಯಣದಲ್ಲಿ ನಡೆದ ತಾಯಿ ಪರಿಕಲ್ಪನೆಯ ಕಾರ್ಯಕ್ರಮದಲ್ಲಿ ಕಣ್ಣನ್ ಮಾತನಾಡುವ ವೇಳೆ "ಹಿಜಾಬ್ ವಿಚಾರದಲ್ಲಿ ಹೈಕೋರ್ಟ್ ತೀರ್ಪು ನೀಡಿದೆ. ಶಾಲಾ- ಕಾಲೇಜುಗಳಿಂದ ಹಿಜಾಬ್ ಹೊರಟು ಹೋಗಿದೆ. ಇನ್ನುಮಯಂದೆ ಶಾಲೆಗೆ ಹೇಗೆ ಬರಬೇಕು ಹೇಳಬೇಕು?  ಮುಖ ಮುಚ್ಕೊಂಡು ಬರಬೇಡ, ಮುಚ್ಕೊಂಡು ಬಾ. ಏನು ಭಯ ರೀ ಮಾತಾಡೋಕೆ? ಡಾಕ್ಟ್ರ ಹತ್ತಿರ ಹೋದ್ರೆ ಎಲ್ಲಾ ಬಿಚ್ಚಿ ತೋರಿಸ್ತೀರಿ. ಮಾತಾಡೋಕೆ ಯಾಕೆ ಹೆದರಬೇಕು?" ಎಂದು ಹೇಳಿದ್ದರು.

ಈ ವಿಚಾರಕ್ಕೆ ಫೇಸ್ ಬುಕ್, ವಾಟ್ಸ್ ಆ್ಯಪ್ ಗಳಲ್ಲಿ ಆಕ್ರೋಶ ವ್ಯಕ್ತವಾಗಿದ್ದು, "ತುಚ್ಚವಾಗಿ ಮಾತನಾಡುವ ಈ ನೀಚ ತಾನು ಪೂಜೆ ಮಾಡುವ ಕೋದಂಡರಾಮ ದೇವಾಲಯದಲ್ಲಿ ರಾಮನ ಜೊತೆ ನಿಂತಿರುವ ಸೀತೆಯನ್ನು ಯಾವ ದೃಷ್ಟಿಯಿಂದ ನೋಡುತ್ತಿರಬಹುದು?" ಎಂದು ಶಶಿಧರ ಹೆಮ್ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಮರ್ಶಕ ರಹಮತ್ ತರೀಕೆರೆ ಪ್ರತಿಕ್ರಿಯಿಸಿ, "ಕಣ್ಣನ್ ಅವರು ಹಿಜಾಬ್ ಹಾಕಿಕೊಂಡು ಕಾಲೇಜಿಗೆ ಬರುವ ಹೆಣ್ಣುಮಕ್ಕಳ ಬಗ್ಗೆ ತುಚ್ಛವಾದ ಶಬ್ದ ಬಳಸಿದ ಬಗ್ಗೆ ಓದಿದೆ‌. ಅವರಿಗೂ ಹೆಣ್ಣು ಮಕ್ಕಳು ಇರಬೇಕು, ಪ್ರಶ್ನೆಯೆಂದರೆ, ಎಲ್ಲಿಂದ  ಹುಟ್ಟುತ್ತಿದೆ ಈ ಅಮಾನುಷ ಕಿಲುಬು ಕ್ಷುದ್ರತೆ? ಕಲೆ ನುಡಿಯನ್ನು ಸಂವೇದನಾಶೀಲಗೊಳಿಸಬೇಕು, ಬದಲಿಗೆ ಮಲಿನಗೊಳಿಸುತ್ತಿದೆ" ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.

ಮತ್ತೊಂದೆಡೆ ಹಿರಿಯ ರಂಗಕರ್ಮಿ ಪ್ರಸನ್ನ ಮಾತನಾಡಿ ಇದು ಸಭ್ಯತೆಯ ಪ್ರಶ್ನೆ, ರಂಗ-ಧರ್ಮದ ಪ್ರಶ್ನೆ. ಶ್ರೀಯುತರು ಬಾಯಿತಪ್ಪಿ ಮರ್ಯಾದ ಮೀರಿ ಮಾತನಾಡಿದ್ದಾರೆ. ಅವರನ್ನು ನಾವು ಕ್ಷಮಿಸಿಬಿಡೋಣ. ಆದರೆ ನಾನು ರಂಗಭೂಮಿ ಮರ್ಯಾದೆ ಉಳಿಸಲು ಮಾ.27ರಿಂದ ನಗರದಲ್ಲಿ ಅನಿರ್ದಿಷ್ಟಾವಧಿಯ ಉಪವಾಸ ನಡೆಸುವೆ ಎಂದು ಹೇಳಿದ್ದಾರೆ.

 ಬೆಲೆಯೇರಿಕೆ ವಿರುದ್ಧ ಕಾಂಗ್ರೆಸ್ ಹೋರಾಟ: ಸಿದ್ದರಾಮಯ್ಯ

ಬೆಲೆಯೇರಿಕೆ ವಿರುದ್ಧ ಕಾಂಗ್ರೆಸ್ ಹೋರಾಟ: ಸಿದ್ದರಾಮಯ್ಯ


 ಬೆಲೆಯೇರಿಕೆ ವಿರುದ್ಧ ಕಾಂಗ್ರೆಸ್ ಹೋರಾಟ: ಸಿದ್ದರಾಮಯ್ಯ

ಬೆಂಗಳೂರು: ಐದು ರಾಜ್ಯಗಳ ಚುನಾವಣೆ ಇದೆ ಎಂಬ ಕಾರಣಕ್ಕೆ ನವೆಂಬರ್‌ನಲ್ಲಿ ಕೇಂದ್ರ ಸರ್ಕಾರ ಕೊನೆಯ ಬಾರಿ ಬೆಲೆಯೇರಿಕೆ ಮಾಡಿತ್ತು. ಚುನಾವಣೆ ಫಲಿತಾಂಶದ ನಂತರ ಬೆಲೆ ಹೆಚ್ಚಾಗಬಹುದು ಎಂದು ಜನ ನಿರೀಕ್ಷೆ ಮಾಡಿದ್ದರು, ಅದು ನಿಜವಾಗಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಬೆಲೆಯೇರಿಕೆ ಬಗ್ಗೆ  ವಿಧಾನಸೌಧದ ಮೊಗಸಾಲೆಯಲ್ಲಿಂದು ಮಾತನಾಡಿದ ಅವರು, ಬೆಲೆಯೇರಿಕೆ ವಿರೋಧಿಸಿ ಹೋರಾಟ ಮಾಡಲು ಪಕ್ಷದಲ್ಲಿ ತೀರ್ಮಾನ ಮಾಡಿದ್ದೇವೆ, ಮುಂದಿನ ದಿನಗಳಲ್ಲಿ ಹೋರಾಟ ಕೈಗೆತ್ತಿಕೊಳ್ಳುತ್ತೇವೆ ಎಂದರು.

ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಸುಮಾರು 80 ಪೈಸೆ, ಗ್ಯಾಸ್ ಮೇಲೆ ರೂ. 50 ಏರಿಕೆ ಮಾಡಲಾಗಿದೆ. ಈಗಾಗಲೇ ಜನ ಬೆಲೆಯೇರಿಕೆ ಇಂದ ತತ್ತರಿಸಿ ಹೋಗಿದ್ದಾರೆ. ಅಡುಗೆ ಎಣ್ಣೆ, ಕಬ್ಬಿಣ, ಸಿಮೆಂಟ್ ಹೀಗೆ ಎಲ್ಲಾ ವಸ್ತುಗಳ ಬೆಲೆ ಗಗನಕ್ಕೇರಿದೆ. ನರೇಂದ್ರ ಮೋದಿ ಅವರು ದೇಶದ ಪ್ರಧಾನಿಯಾದ ಮೇಲೆ ಬೆಲೆ ನಿಯಂತ್ರಣ ಮಾಡುವುದರಲ್ಲಿ ಸಂಪೂರ್ಣ ವಿಫಲವಾಗಿದ್ದಾರೆ. ಡೀಸೆಲ್‌ ಬೆಲೆ ಹೆಚ್ಚಾದರೆ ಗೊಬ್ಬರ, ಆಹಾರ ವಸ್ತುಗಳು ಹೀಗೆ ಎಲ್ಲದರ ಬೆಲೆ ಹೆಚ್ಚಾಗುತ್ತದೆ. ಇದರಿಂದ ಸಾಮಾನ್ಯ ಜನರಿಗೆ ಹೊರೆಯಾಗಲಿದೆ ಎಂದರು.

ಕೇಂದ್ರ ಸರ್ಕಾರ ಕಾರ್ಪೊರೇಟ್ ಸಂಸ್ಥೆಗಳ ಮೇಲಿನ ತೆರಿಗೆ ಕಡಿಮೆ ಮಾಡಿ, ಸಾಮಾನ್ಯ ಜನರ ಮೇಲೆ ಹೆಚ್ಚು ತೆರಿಗೆ ವಿಧಿಸುತ್ತಿದೆ. ಬೆಲೆಯೇರಿಕೆಗೆ ನನ್ನ ವಿರೋಧವಿದೆ. ಕೇಂದ್ರ ಸರ್ಕಾರ ಈ ಕೂಡಲೆ ಸಾಮಾನ್ಯ ಜನರಿಗೆ ಹೊರೆಯಾಗುವಂತೆ ಬೆಲೆಯೇರಿಕೆ ಮಾಡುತ್ತಿರುವುದನ್ನು ನಿಲ್ಲಿಸಬೇಕು ಎಂದು ಒತ್ತಾಯ ಮಾಡುತ್ತೇನೆ.

ಪೆಟ್ರೋಲ್, ಡೀಸೆಲ್‌ ಮತ್ತು ಗ್ಯಾಸ್ ಗಳ ಬೆಲೆಯೇರಿಕೆ ಮಾಡಿರುವುದನ್ನು ವಾಪಸ್ ಪಡೆಯಬೇಕು. ಯಾರು ಅತ್ಯಧಿಕ ಪ್ರಮಾಣದ ಆಸ್ತಿ ಸಂಪಾದನೆ ಮಾಡಿದ್ದಾರೆ ಅಂಥವರ ಮೇಲೆ ಹೆಚ್ಚು ತೆರಿಗೆ ವಿಧಿಸಿ, ಬಡವರು, ಸಾಮಾನ್ಯ ವರ್ಗದ ಜನರ ಮೇಲಿನ ತೆರಿಗೆ ಇಳಿಕೆ ಮಾಡಬೇಕು ಎಂದು ಒತ್ತಾಯಿಸಿದರು.

 'ಜೇಮ್ಸ್' ಚಿತ್ರದ ವಿಚಾರದಲ್ಲಿ ಬಿಜೆಪಿಯವರಿಗೆ ಮಾನವೀಯತೆ ಇರಬೇಕಿತ್ತು: ಡಿಕೆಶಿ

'ಜೇಮ್ಸ್' ಚಿತ್ರದ ವಿಚಾರದಲ್ಲಿ ಬಿಜೆಪಿಯವರಿಗೆ ಮಾನವೀಯತೆ ಇರಬೇಕಿತ್ತು: ಡಿಕೆಶಿ


'ಜೇಮ್ಸ್' ಚಿತ್ರದ ವಿಚಾರದಲ್ಲಿ ಬಿಜೆಪಿಯವರಿಗೆ ಮಾನವೀಯತೆ ಇರಬೇಕಿತ್ತು: ಡಿಕೆಶಿ

ಕಲಬುರಗಿ: ಪುನೀತ್ ರಾಜಕುಮಾರ್ ಅವರ ಕೊನೆ ಚಿತ್ರ ಜೇಮ್ಸ್ ಅನ್ನು ಚಿತ್ರಮಂದಿರದಿಂದ ತೆಗೆಯಬಾರದು. ಅದನ್ನು ತೆಗೆಯುವಂತೆ ಒತ್ತಡ ಹಾಕುತ್ತಿರುವ ಬಿಜೆಪಿ ಶಾಸಕರ ನಡೆ ಖಂಡನೀಯ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ಕಲಬುರ್ಗಿಯಲ್ಲಿ ಮಾಧ್ಯಮಗಳು ಕೇಳಿದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, 'ನನಗೆ ಹಲವು ಚಿತ್ರ ಮಂದಿರಗಳ ಮಾಲಕರು ಕರೆ ಮಾಡಿದ್ದರು. ಅಪ್ಪು ಕನ್ನಡ ಚಿತ್ರರಂಗದ ಖ್ಯಾತ ನಟ ಹಾಗೂ ನನ್ನ ಆತ್ಮೀಯ. ದೇಶದ ಇತಿಹಾಸದಲ್ಲಿ ಅಪಾರ ಜನರಿಂದ ಗೌರವ ಸಂಪಾದಿಸಿದವರು. ಅವರ ಕೊನೆಯ ಚಿತ್ರಕ್ಕೆ ತೊಂದರೆ ನೀಡಲಾಗುತ್ತಿದೆ. ಬಿಜೆಪಿಯವರಿಗೆ ಮಾನವೀಯತೆ ಇರಬೇಕಿತ್ತು. ಆದರೆ ಅದು ಕಾಣುತ್ತಿಲ್ಲ ಎಂದರು.

ಬೆಂಗಳೂರಿನ ಬಿಜೆಪಿ ಶಾಸಕರು ಚಿತ್ರಮಂದಿರಗಳಲ್ಲಿ ಜೇಮ್ಸ್ ಚಿತ್ರ ತೆಗೆಯುವಂತೆ ಕರೆ ಮಾಡುತ್ತಿದ್ದಾರೆ. ಕಾಶ್ಮೀರ್ ಫೈಲ್ಸ್ ಚಿತ್ರಕ್ಕೆ ಯಾವುದೇ ರೀತಿಯ ಪ್ರಚಾರ ಮಾದಿಕೊಳ್ಳಲಿ. ಅವರು ತಮ್ಮ ಪಕ್ಷಕ್ಕೆ ಅನುಕೂಲವಾಗುವಂತೆ ಚಿತ್ರಕಥೆ ಮಾಡಿ ಸಿನಿಮಾ ಮಾಡಿದ್ದಾರೆ. ಮಹಾತ್ಮಾ ಗಾಂಧಿ, ಇಂದಿರಾ ಗಾಂಧಿ ಹತ್ಯೆಗಿಂತಲೂ ಚಿತ್ರಕಥೆ ಬೇಕಾ? ಅವರು ವಾಸ್ತವಾಂಶ ಬಿಟ್ಟು ಏನು ಮಾಡುತ್ತಾರೋ ಮಾಡಲಿ, ಅದು ಅವರ ಪಕ್ಷದ ಅಜೆಂಡಾ ಎಂದು ಡಿಕೆಶಿ ಕಿಡಿಕಾರಿದರು.

ಕಾಶ್ಮೀರ್ ಫೈಲ್ಸ್ ಚಿತ್ರ ತಯಾರಕರನ್ನು ಕರೆದು ಸನ್ಮಾನ ಮಾಡಿ ತೆರಿಗೆ ವಿನಾಯಿತಿ ನೀಡಿದ್ದಾರೆ. ಅದರ ಅಗತ್ಯ ಏನಿತ್ತು? ಅವರು ನಮ್ಮನ್ನು ವಿರೋಧಿಗಳು ಎಂದು ತೋರಿಸಲು ಈ ರೀತಿ ಮಾಡುತ್ತಿದ್ದಾರೆ. ಸಂವಿಧಾನದಲ್ಲಿ ನಮಗೆ ನೀಡಲಾಗಿರುವ ಹಕ್ಕನ್ನು ಉಳಿಸಿಕೊಳ್ಳಲು  ಹೋರಾಡುತ್ತಿದ್ದೇವೆ ಎಂದರು.

ಪುನೀತ್ ರಾಜಕುಮಾರ್ ಅವರ  ಜೇಮ್ಸ್ ಚಿತ್ರವನ್ನು ಯಾವುದೇ ಚಿತ್ರಮಂದಿರದಿಂದ ತೆಗೆದುಹಾಕಬಾರದು. ಅವರು ಎಷ್ಟು ದಿನ ನಡೆಸುತ್ತಾರೋ ನಡೆಸಲಿ. ಬಿಜೆಪಿ ಶಾಸಕರ ಈ ನಡೆ ಖಂಡನೀಯ.

ನಟ ಶಿವರಾಜಕುಮಾರ್ ಮೇಕೆದಾಟು ಪಾದಯಾತ್ರೆಯಲ್ಲಿ ಪಾಲ್ಗೊಳ್ಳದಂತೆ ಮುಖ್ಯಮಂತ್ರಿ ಕರೆ ಮಾಡಿಸಿದ್ದರು. ಆದರೂ ಪರ್ವಾಗಿಲ್ಲ. ನಾವು ನಮ್ಮ ನಾಡಿನ ನೀರಿಗಾಗಿ ಹೋರಾಟ ಮಾಡಿದ್ದೇವೆ ಎಂದವರು ಹೇಳಿದರು.

Tuesday, 22 March 2022

ದೇಶದ ಅಸ್ತಿತ್ವಕ್ಕೆ ಅಪಾಯ ಎದುರಾದರೆ ಅಣ್ವಸ್ತ್ರ ಬಳಕೆ : ರಷ್ಯಾ

ದೇಶದ ಅಸ್ತಿತ್ವಕ್ಕೆ ಅಪಾಯ ಎದುರಾದರೆ ಅಣ್ವಸ್ತ್ರ ಬಳಕೆ : ರಷ್ಯಾ


ದೇಶದ ಅಸ್ತಿತ್ವಕ್ಕೆ ಅಪಾಯ ಎದುರಾದರೆ ಅಣ್ವಸ್ತ್ರ ಬಳಕೆ : ರಷ್ಯಾ

ಮಾಸ್ಕೊ: ಉಕ್ರೇನ್ ಸಂಘರ್ಷದ ಹಿನ್ನೆಲೆಯಲ್ಲಿ ದೇಶದ ಅಸ್ತಿತ್ವಕ್ಕೆ ಅಪಾಯ ಎದುರಾದರೆ ಮಾತ್ರ ರಷ್ಯಾ ಅಣ್ವಸ್ತ್ರ ಬಳಕೆ ಮಾಡಲಿದೆ ಎಂದು ಕ್ರೆಮ್ಲಿನ್ ವಕ್ತಾರ ಡಿಟ್ರಿ ಪೆಸ್ಕೋವ್ ಹೇಳಿದ್ದಾರೆ.

"ನಮ್ಮಲ್ಲಿ ಆಂತರಿಕ ಭದ್ರತೆಯ ಪರಿಕಲ್ಪನೆ ಇದೆ; ಇದು ಬಹಿರಂಗ. ಅಣ್ವಸ್ತ್ರ ಬಳಸಲು ಎಲ್ಲ ಕಾರಣಗಳನ್ನು ನೀವು ವಿಶ್ಲೇಷಿಸಬಹುದು" ಎಂದು ಪೆಸ್ಕೋವ್ ನುಡಿದರು. "ಆದ್ದರಿಂದ ನಮ್ಮ ದೇಶದ ಅಸ್ತಿತ್ವಕ್ಕೆ ಅಪಾಯ ಎದುರಾದರೆ ನಮ್ಮ ಪರಿಕಲ್ಪನೆಗೆ ಅನುಸಾರವಾಗಿ ಅಣ್ವಸ್ತ್ರ ಬಳಸಲಾಗುವುದು" ಎಂದು ಸ್ಪಷ್ಟಪಡಿಸಿದರು.

ವ್ಲಾದಿಮಿರ್ ಪುಟಿನ್ ಅವರು ಮೊದಲು ಅಣ್ವಸ್ತ್ರ ಬಳಸುವುದಿಲ್ಲ ಎಂಬ ನಿರ್ಧಾರವನ್ನು ಪ್ರಕಟಿಸಿರುವುದು ನಿಮಗೆ ಸಮಾಧಾನ ಅಥವಾ ವಿಶ್ವಾಸ ತಂದಿದೆಯೇ ಎಂದು ಸಿಎನ್‍ಎನ್ ಸಂದರ್ಶನಕಾರರು ಕೇಳಿದ ಪ್ರಶ್ನೆಗೆ ಪೆಸ್ಕೋವ್ ಈ ಉತ್ತರ ನೀಡಿದರು.

ಪೆಸ್ಕೋವ್ ಹೇಳಿಕೆ ಹಿನ್ನೆಲೆಯಲ್ಲಿ ಪೆಂಟಗಾನ್ ವಕ್ತಾರ ಜಾನ್ ಕಿರ್ಬೆ, ರಷ್ಯಾದ ಸಂಭಾವ್ಯ ಅಣ್ವಸ್ತ್ರ ಬಳಕೆ ಅಪಾಯಕಾರಿ ಎಂದು ಬಣ್ಣಿಸಿದ್ದಾರೆ. "ಜವಾಬ್ದಾರಿಯುತ ಅಣ್ವಸ್ತ್ರ ಹೊಂದಿದ ದೇಶ ನಡೆದುಕೊಳ್ಳುವ ರೀತಿ ಇದಲ್ಲ" ಎಂದೂ ಹೇಳಿದ್ದಾರೆ. 


ದೆಹಲಿ ವಿಶ್ವದ ಅತ್ಯಂತ ಮಲಿನ ನಗರ

ದೆಹಲಿ ವಿಶ್ವದ ಅತ್ಯಂತ ಮಲಿನ ನಗರ


ದೆಹಲಿ ವಿಶ್ವದ ಅತ್ಯಂತ ಮಲಿನ ನಗರ 

ಹೊಸದಿಲ್ಲಿ : ರಾಷ್ಟ್ರ ರಾಜಧಾನಿ ದೆಹಲಿ ಸತತ ನಾಲ್ಕನೇ ವರ್ಷ ವಿಶ್ವದ ಅತ್ಯಂತ ಮಲಿನ ನಗರ ಎಂಬ ಕುಖ್ಯಾತಿಗೆ ಪಾತ್ರವಾಗಿದೆ.

ವಿಶ್ವ ವಾಯು ಗುಣಮಟ್ಟ ವರದಿ-2021ರ ಪ್ರಕಾರ, ವಿಶ್ವದ 50 ಅತ್ಯಂತ ಮಲಿನ ನಗರಗಳ ಪೈಕಿ 35 ನಗರಗಳು ಭಾರತದಲ್ಲಿವೆ. ವಾಸ್ತವವಾಗಿ ವಿಶ್ವ ಆರೋಗ್ಯ ಸಂಸ್ಥೆ ನಿಗದಿಪಡಿಸಿದ ವಾಯು ಗುಣಮಟ್ಟವಾದ ಪ್ರತಿ ಘನ ಮೀಟರ್ ಗೆ 5 ಮೈಕ್ರೋಗ್ರಾಂ ಮಾನದಂಡವನ್ನು ಭಾರತದ ಯಾವ ನಗರವೂ ತಲುಪಿಲ್ಲ.

ಜಾಗತಿಕ ಮಟ್ಟದಲ್ಲಿ ಕೇವಲ ಶೇಕಡ 3ರಷ್ಟು ನಗರಗಳು ಮಾತ್ರ ಪಿಎಂ 2.5 ವಾರ್ಷಿಕ ವಾಯುಗುಣಮಟ್ಟ ಮಾರ್ಗಸೂಚಿಯ ಅನ್ವಯ ಇದ್ದು, ಯಾವುದೇ ದೇಶ ಸಮಗ್ರವಾಗಿ ಈ ಮಾನದಂಡವನ್ನು ತಲುಪಿಲ್ಲ. ವಿಶ್ವದ ಅತ್ಯಂತ ಕಡಿಮೆ ಮಲಿನ ನಗರವೆಂದರೆ ನ್ಯೂ ಕಲೆಡೋನಿಯಾ. ಇದು ಕೇವಲ 3.8 ಮಾಲಿನ್ಯಕಾರಕ ಕಣ (ಪಿಎಂ2.5)ಗಳನ್ನು ಹೊಂದಿದೆ. ಅಮೆರಿಕದ ವರ್ಜಿನ್ ದ್ವೀಪ (4.5), ಪೋರ್ಟ ರಿಕೊ (4.8), ಕೇಪ್ ವೆರ್ಡ್ (5.1) ಮತ್ತು ಸಬಾ (5.1) ನಂತರದ ಸ್ಥಾನಗಳಲ್ಲಿವೆ.

ಸ್ವಿಡ್ಝರ್‍ಲೆಂಡ್‍ನ ಎಕ್ಯೂಏರ್ ಸಂಸ್ಥೆ ಈ ವರದಿಯನ್ನು ಸಿದ್ಧಪಡಿಸಿದ್ದು, ಇದು 2021ರ ಜಾಗತಿಕ ವಾಯು ಗುಣಮಟ್ಟದ ಪಕ್ಷಿನೋಟವಾಗಿದೆ. 117 ದೇಶಗಳ 6475 ನಗರಗಳಿಂದ ಪಿಎಂ2.5 ಅಂಕಿ ಅಂಶಗಳನ್ನು ಪಡೆದು ವರದಿ ಸಿದ್ಧಪಡಿಸಲಾಗಿದೆ.

ವರದಿಯ ಪ್ರಕಾರ ದೆಹಲಿ ನಂತರ ಅತ್ಯಂತ ಮಲಿನ ನಗರಗಳೆಂದರೆ ಢಾಕಾ, ಚಡ್ ದೇಶದ ಎನ್'ಜಮೇನಾ, ತಜಕಿಸ್ತಾನದ ಡಶ್ಚನ್‍ಬೆ ಮತ್ತು ಓಮನ್‍ನ ಮಸ್ಕತ್.

ದೇಶವನ್ನು ಸಮಗ್ರವಾಗಿ ತೆಗೆದುಕೊಂಡರೆ ಭಾರತ ವಿಶ್ವದಲ್ಲೇ 5ನೇ ಗರಿಷ್ಠ ಮಾಲಿನ್ಯ ಹೊಂದಿದ ದೇಶವಾಗಿದೆ. ಬಾಂಗ್ಲಾದೇಶ, ಛಡ್, ಪಾಕಿಸ್ತಾನ ಹಾಗೂ ತಜಕಿಸ್ತಾನ ಮೊದಲ ನಾಲ್ಕು ಸ್ಥಾನಗಳಲ್ಲಿವೆ. ಭಾರತದಲ್ಲಿ ಮಾಲಿನ್ಯಕಾರಕ ಕಣ (ಪಿಎಂ2.5) ಪ್ರತಿ ಘನ ಮೀಟರ್‍ಗೆ 58.1ರಷ್ಟಿದೆ. ಬಾಂಗ್ಲಾದೇಶದಲ್ಲಿ ಈ ಪ್ರಮಾಣ 76.9 ಆಗಿದೆ. ವಿಶ್ವ ಆರೋಗ್ಯ ಸಂಸ್ಥೆ ನಿಗದಿಪಡಿಸಿರುವ ಪ್ರಮಾಣ 5.0 ಆಗಿದೆ.


ಮದುವೆ ಬಳಿಕ ಪತಿಯ ಜಾತಿ ಪತ್ನಿಗೆ ವರ್ಗಾವಣೆಯಾಗಲ್ಲ; ಹೈಕೋರ್ಟ್

ಮದುವೆ ಬಳಿಕ ಪತಿಯ ಜಾತಿ ಪತ್ನಿಗೆ ವರ್ಗಾವಣೆಯಾಗಲ್ಲ; ಹೈಕೋರ್ಟ್

ಮದುವೆ ಬಳಿಕ ಪತಿಯ ಜಾತಿ ಪತ್ನಿಗೆ ವರ್ಗಾವಣೆಯಾಗಲ್ಲ; ಹೈಕೋರ್ಟ್ 

ಬೆಂಗಳೂರು: ವಿವಾಹದ ಬಳಿಕ ಪತಿಯ ಜಾತಿ ಪತ್ನಿಗೆ ವರ್ಗಾವಣೆಯಾಗುವುದಿಲ್ಲ ಎಂದು ಹೈಕೋರ್ಟ್ ಏಕಸದಸ್ಯ ಪೀಠದಿಂದ ಆದೇಶ ನೀಡಲಾಗಿದೆ.

ಗ್ರಾಮ ಪಂಚಾಯತಿ ಸದಸ್ಯೆಯೊಬ್ಬರು ಎಸ್ಟಿ ಕ್ಷೇತ್ರದಿಂದ ಆಯ್ಕೆಯಾಗಿದ್ದರು.

ಪತಿಯ ಪರಿಶಿಷ್ಟ ವರ್ಗವೇ ತನಗೂ ಅನ್ವಯವಾಗುತ್ತದೆ ಎಂದು ವಾದಿಸಿದ್ದರು. ಸಿವಿಲ್ ಕೋರ್ಟ್ ಸದಸ್ಯೆ ಆಯ್ಕೆ ಅಸಿಂಧುಗೊಳಿಸಿತ್ತು. ಇದನ್ನು ಪ್ರಶ್ನಿಸಿ ಗ್ರಾಪಂ ಸದಸ್ಯೆ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದರು.

ಸಾಮಾನ್ಯವಾಗಿ ತಂದೆಯ ಜಾತಿಯನ್ನು ಮಕ್ಕಳು ಪಡೆಯುತ್ತಾರೆ. ಜನ್ಮದ ಆಧಾರದ ಮೇಲೆ ಜಾತಿ ನಿರ್ಧಾರವಾಗುತ್ತದೆ. ಹೀಗಾಗಿ ಪತಿಯ ಜಾತಿಯನ್ನು ಪತ್ನಿಗೆ ಅನ್ವಯಿಸಲಾಗದು ಎಂದು ಗ್ರಾಮ ಪಂಚಾಯಿತಿ ಸದಸ್ಯೆ ವಾದವನ್ನು ಹೈಕೋರ್ಟ್ ತಿರಸ್ಕರಿಸಿದೆ.


ಯಾದಗಿರಿ:   ಹಿಜಾಬ್ ಧರಿಸಿ ಪರೀಕ್ಷೆಗೆ ಹಾಜರಾದವರಿಂದ ಪ್ರಶ್ನೆ ಪತ್ರಿಕೆ ವಾಪಸ್

ಯಾದಗಿರಿ: ಹಿಜಾಬ್ ಧರಿಸಿ ಪರೀಕ್ಷೆಗೆ ಹಾಜರಾದವರಿಂದ ಪ್ರಶ್ನೆ ಪತ್ರಿಕೆ ವಾಪಸ್


ಯಾದಗಿರಿ: 
ಹಿಜಾಬ್ ಧರಿಸಿ ಪರೀಕ್ಷೆಗೆ ಹಾಜರಾದವರಿಂದ ಪ್ರಶ್ನೆ ಪತ್ರಿಕೆ ವಾಪಸ್

ಯಾದಗಿರಿ: ಪಟ್ಟಣದ ಸರ್ಕಾರಿ ಪದವಿ ಕಾಲೇಜಿನಲ್ಲಿ ಮಂಗಳವಾರ ಹಿಜಾಬ್ ಧರಿಸಿ ವಿದ್ಯಾರ್ಥಿನಿಯರು ಪರೀಕ್ಷೆ ಬರೆದಿದ್ದು, ನ್ಯಾಯಾಲಯದ ಆದೇಶ ಉಲ್ಲಂಘಿಸಲಾಗಿದೆ ಎನ್ನುವ ಆರೋಪ‌ ಕೇಳಿ ಬಂದಿದೆ.

ಪದವಿ ಮೊದಲನೆ ಸೆಮಿಸ್ಟರ್ ಪ್ರಾಯೋಗಿಕ ಪರೀಕ್ಷೆಗೆ ಹಿಜಾಬ್ ಧರಿಸಿ ಆಗಮಿಸಿದ ಸುಮಾರು ಐದು ವಿದ್ಯಾರ್ಥಿನಿಯರಿಗೆ ಅವಕಾಶ ಮಾಡಿಕೊಡಲಾಗಿದೆ.

ನ್ಯಾಯಾಲಯದ ಆದೇಶ ಉಲ್ಲಂಘನೆ ಮಾಡಿ ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರಿಗೆ ಪರೀಕ್ಷೆ ಬರೆಯಲು ಅವಕಾಶ ಕೊಟ್ಟ ಕಾಲೇಜು ಆಡಳಿತ ಮಂಡಳಿ ವಿರುದ್ಧ ಕಾಲೇಜಿನಲ್ಲಿ ಗದ್ದಲ ಉಂಟಾಗಿದೆ. ಕೂಡಲೇ ಪರೀಕ್ಷಾ ಮೇಲ್ವಿಚಾರಕರು ಒಂದು ಗಂಟೆಯ ನಂತರ ಪ್ರಶ್ನೆ ಪತ್ರಿಕೆ ಮರಳಿ ಪಡೆದಿದ್ದಾರೆ.

ಈ ಕುರಿತು ಕಾಲೇಜಿನ ಪ್ರಾಚಾರ್ಯ ಎಚ್.ಎಂ.ವಗ್ಗರ್ ಘಟನೆ ಬಗ್ಗೆ ನನಗೆನೂ ಗೊತ್ತಿಲ್ಲವೆಂದು ತಿಳಿಸಿದ್ದಾರೆ.

ಕಾಲೇಜಿನ ಪ್ರಾಚಾರ್ಯ ಮತ್ತು ಪರೀಕ್ಷಾ ಮೇಲ್ವಿಚಾರಕರ ಪ್ರಮಾದದಿಂದ ನ್ಯಾಯಾಲಯದ ಆದೇಶ ಉಲ್ಲಂಘನೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.


 ಮಂಗಳೂರು : ಇನ್‌ಸ್ಪೆಕ್ಟರ್ ಮುಹಮ್ಮದ್ ಶರೀಫ್ ಅಮಾನತು

ಮಂಗಳೂರು : ಇನ್‌ಸ್ಪೆಕ್ಟರ್ ಮುಹಮ್ಮದ್ ಶರೀಫ್ ಅಮಾನತು


 ಮಂಗಳೂರು : ಇನ್‌ಸ್ಪೆಕ್ಟರ್ ಮುಹಮ್ಮದ್ ಶರೀಫ್ ಅಮಾನತು

ಮಂಗಳೂರು : ಸಂಚಾರ ಉತ್ತರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಮುಹಮ್ಮದ್ ಶರೀಫ್‌ರನ್ನು ಮಂಗಳವಾರ ಸೇವೆಯಿಂದ ಅಮಾನತುಗೊಳಿಸಿ ಆದೇಶಿಸಲಾಗಿದೆ.

ಮುಹಮ್ಮದ್ ಶರೀಫ್ ಇಲಾಖೆಯ ಹಿರಿಯ ಅಧಿಕಾರಿಗಳ ಅನುಮತಿ ಪಡೆಯದೆ ವಿದೇಶ ಪ್ರವಾಸ ಮಾಡಿರುವ ಹಿನ್ನೆಲೆಯಲ್ಲಿ ಅಮಾನತುಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಮಾ.16ರಿಂದ ಅಜ್ಮೀರ್ ಪ್ರವಾಸ ಮಾಡುವುದಾಗಿ ರಜೆ ಪಡೆದು ಬಳಿಕ ದುಬೈಗೆ ತೆರಳಿದ್ದರು. ವಿದೇಶ ಪ್ರವಾಸ ಮಾಡುವುದಾದರೆ ಡಿಜಿಪಿ ಅವರಿಂದ ಪೂರ್ವ ಅನುಮತಿ ಪಡೆಯಬೇಕಾಗಿದೆ. ಸೋಮವಾರ ಮಂಗಳೂರಿಗೆ ಹಿಂತಿರುಗಿದ್ದರು. ಮುಂದಿನ ಆದೇಶದ ತನಕ ಅಮಾನತು ಮಾಡಲಾಗಿದೆ ಎಂದು ತಿಳಿದು ಬಂದಿದೆ.

 ಪಶ್ಚಿಮ ಬಂಗಾಳವು ಹಿಂಸಾಚಾರದ ಸಂಸ್ಕೃತಿ ಹಾಗೂ ಅರಾಜಕತೆಯ ಹಿಡಿತದಲ್ಲಿದೆ: ರಾಜ್ಯಪಾಲ ಹೇಳಿಕೆ

ಪಶ್ಚಿಮ ಬಂಗಾಳವು ಹಿಂಸಾಚಾರದ ಸಂಸ್ಕೃತಿ ಹಾಗೂ ಅರಾಜಕತೆಯ ಹಿಡಿತದಲ್ಲಿದೆ: ರಾಜ್ಯಪಾಲ ಹೇಳಿಕೆ

 

ಪಶ್ಚಿಮ ಬಂಗಾಳವು ಹಿಂಸಾಚಾರದ ಸಂಸ್ಕೃತಿ ಹಾಗೂ ಅರಾಜಕತೆಯ ಹಿಡಿತದಲ್ಲಿದೆ: ರಾಜ್ಯಪಾಲ ಹೇಳಿಕೆ

 ಕೋಲ್ಕತಾ: ಪಶ್ಚಿಮ ಬಂಗಾಳದ ಬಿರ್ಭೂಮ್ ಜಿಲ್ಲೆಯಲ್ಲಿ ಸೋಮವಾರ ಭುಗಿಲೆದ್ದ ಹಿಂಸಾಚಾರವನ್ನು ಪಶ್ಚಿಮಬಂಗಾಳದ ರಾಜ್ಯಪಾಲ ಧನಕರ್ ಮಂಗಳವಾರ ಬಲವಾಗಿ ಖಂಡಿಸಿದ್ದಾರೆ. ‘ಅಲ್ಲಿ ಮಾನವಹಕ್ಕುಗಳ ನಾಶವಾಗಿದೆ ಹಾಗೂ ಕಾನೂನಿನ ಪ್ರಭುತ್ವಕ್ಕೆ ಗರಬಡಿದಿದೆ’ ಎಂದವರು ಕಳವಳ ವ್ಯಕ್ತಪಡಿಸಿದ್ದಾರೆ.

ಭಿರ್ಭೂಮ್ ಹಿಂಸಾಚಾರದಲ್ಲಿ ತಮ್ಮವರನ್ನು ಕಳೆದುಕೊಂಡ ಕುಟುಂಬಗಳಿಗೆ ಸಂತಾಪ ವ್ಯಕ್ತಪಡಿಸಿದ ರಾಜ್ಯಪಾಲರು ಪಶ್ಚಿಮಬಂಗಾಳವು ಹಿಂಸಾಚಾರದ ಸಂಸ್ಕೃತಿ ಹಾಗೂ ಅರಾಜಕತೆಯ ಹಿಡಿತದಲ್ಲಿದೆ ಎಂದರು. ಬಿರ್‌ಭೂಮ್‌ನ ರಾಮಪುರಹಾತ್‌ನಲ್ಲಿ ಟಿಎಂಸಿ ನಾಯಕ ಬಹಾದೂರ್ ಶೇಖ್ ಅವರ ಹತ್ಯೆಯ ಬಳಿಕ ಗುಂಪೊಂದು ಮನೆಗಳಿಗೆ ಬೆಂಕಿ ಹಚ್ಚಿದ ಘಟನೆಯಲ್ಲಿ ಎಂಟು ಮಂದಿ ಸಜೀವದಹನಗೊಂಡ ಭಯಾನಕ ಹಾಗೂ ಬರ್ಬರವಾದ ಘಟನೆಯು ತನಗೆ ನೋವುಂಟು ಮಾಡಿದೆ ಹಾಗೂ ವಿಚಲಿತಗೊಳಿಸಿದೆ ಎಂದವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

    ಬಿರ್‌ಭೂಮ್‌ನಲ್ಲಿ ಸಂಭವಿಸಿರುವ ಘಟನೆಯು ಭಯಾನಕ ಹಿಂಸಾಚಾರ ಹಾಗೂ ದಂಗೆಯ ಸ್ವೇಚ್ಛಾಚಾರವಾಗಿದೆ’’ ಎಂದು ಬಣ್ಣಿಸಿದರು. ಇಂತಹ ಹಿಂಸಾಚಾರ ಹಾಗೂ ಕಾನೂನುಭಂಜನೆಯ ಸಂಸ್ಕೃತಿಗೆ ಸರಕಾರವು ಅವಕಾಶ ನೀಡಕೂಡದು ಎಂದವರು ಕರೆ ನೀಡಿದ್ದಾರೆ.

  ಬಿರ್ಭೂಮ್ ಹಿಂಸಾಚಾರವು ಸರಕಾರದ ಕಾನೂನು ಮತ್ತು ಸುವ್ಯವಸ್ಥೆ ತಲೆಕೆಳಗಾಗಿರುವುದರ ಸೂಚನೆಯಾಗಿದೆ. ಸರಕಾರವು ಪಕ್ಷಪಾತದ ಧೋರಣೆಯನ್ನು ಮೀರಿ ನಿಲ್ಲಬೇಕಾಗಿದೆಯಾದರೂ, ವಾಸ್ತವಿಕವಾಗಿ ರಾಜ್ಯದಲ್ಲಿ ಅದು ಪ್ರತಿಫಲನಗೊಳ್ಳುತ್ತಿಲ್ಲವೆಂದು ಧನಕರ್ ವಿಷಾದ ವ್ಯಕ್ತಪಡಿಸಿದರು.

 ಪೆಟ್ರೋಲ್, ಅಡುಗೆ ಅನಿಲ ಬೆಲೆ ಏರಿಕೆ, ಬಿಜೆಪಿ ಮತ್ತೆ ಜನರ ಪಿಕ್ ಪಾಕೆಟ್ ಮಾಡಲು ಆರಂಭಿಸಿದೆ: ಡಿ.ಕೆ.ಶಿವಕುಮಾರ್

ಪೆಟ್ರೋಲ್, ಅಡುಗೆ ಅನಿಲ ಬೆಲೆ ಏರಿಕೆ, ಬಿಜೆಪಿ ಮತ್ತೆ ಜನರ ಪಿಕ್ ಪಾಕೆಟ್ ಮಾಡಲು ಆರಂಭಿಸಿದೆ: ಡಿ.ಕೆ.ಶಿವಕುಮಾರ್


 ಪೆಟ್ರೋಲ್, ಅಡುಗೆ ಅನಿಲ ಬೆಲೆ ಏರಿಕೆ, ಬಿಜೆಪಿ ಮತ್ತೆ ಜನರ ಪಿಕ್ ಪಾಕೆಟ್ ಮಾಡಲು ಆರಂಭಿಸಿದೆ: ಡಿ.ಕೆ.ಶಿವಕುಮಾರ್

ಕಲಬುರಗಿ: ಪೆಟ್ರೋಲ್, ಅಡುಗೆ ಅನಿಲ ಬೆಲೆ ಏರಿಕೆ ಮಾಡುವ ಮೂಲಕ ಬಿಜೆಪಿ ಮತ್ತೆ ಜನರ ಪಿಕ್ ಪಾಕೆಟ್ ಮಾಡಲು ಆರಂಭಿಸಿದೆ. ಚುನಾವಣೆ ನಡೆಯುವಾಗ ಸುಮ್ಮನಿದ್ದರು. ಚುನಾವಣೆ ಮುಗಿದ ನಂತರ ಮತ್ತೆ ಬೆಲೆ ಹೆಚ್ಚಿಸಿದ್ದಾರೆ. ಇಷ್ಟಾದರೂ ಮತದಾರ ಅವರಿಗೆ ಮತ ಹಾಕುತ್ತಿದ್ದಾನೆ. ಎಲ್ಲರಿಗೂ ಒಂದು ತಾಳ್ಮೆ ಇರುತ್ತದೆ. ಅದರಲ್ಲೂ ಹೆಣ್ಣು ಮಕ್ಕಳು ತಾಳ್ಮೆ ಕಳೆದುಕೊಳ್ಳುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಿಡಿಗಾರಿದರು.

ಮಂಗಳವಾರ ಕಲಬುರಗಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ಸರಕಾರ ರೈತರ ಆದಾಯ ಡಬಲ್ ಮಾಡುತ್ತೇವೆ ಎಂದಿದ್ದರು. ಆದರೆ ವೆಚ್ಚ ಡಬಲ್ ಆಗಿದೆ. ಯಾರ ಆದಾಯವೂ ಡಬಲ್ ಆಗಿಲ್ಲ. ಬೆಲೆ ಏರಿಕೆ ವಿರೋಧಿಸಿ ಪಿಕ್ ಪಾಕೆಟ್ ಸರಕಾರದ ವಿರುದ್ಧ ವ್ಯಾಪಕ ಕಾರ್ಯಕ್ರಮ ರೂಪಿಸಿ ಅದನ್ನು ಶೀಘ್ರದಲ್ಲೇ ಪ್ರಕಟಿಸುತ್ತೇನೆ ಎಂದರು.

ನಾನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡುತ್ತೇನೆ. ಯಾವುದೇ ಕಾರಣಕ್ಕೂ ನೀವು ಪೆಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲ ಬೆಲೆ ಹೆಚ್ಚಳಕ್ಕೆ ಅವಕಾಶ ನೀಡಬಾರದು. ಡಬಲ್ ಇಂಜಿನ್ ಸರಕಾರ ಹೆಚ್ಚಿಸುತ್ತಿರುವ ಬೆಲೆ ಏರಿಕೆ ತಡೆಯಲು ರಾಜ್ಯ ಸರಕಾರವೇ ಸಬ್ಸಿಡಿಯನ್ನು ನೀಡಿ ನಿಯಂತ್ರಣ ಮಾಡಬೇಕು. ಜನರಿಗೆ ತೊಂದರೆ ಆಗದಂತೆ ನೋಡಿಕೊಳ್ಳುವುದು ನಿಮ್ಮ ಜವಾಬ್ದಾರಿ ಎಂದು ಅವರು ಆಗ್ರಹಿಸಿದರು.

ರಾಜ್ಯದಲ್ಲಿ ಬಿಡಿಎ ದಲ್ಲಾಳಿಗಳ ಮೇಲೆ ದಾಳಿ ಮಾಡುವಷ್ಟು ಭ್ರಷ್ಟಾಚಾರ ನಡೆಯುತ್ತಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, 'ಈ ಸರಕಾರ ಭ್ರಷ್ಟಾಚಾರವನ್ನು ಉತ್ತುಂಗಕ್ಕೆ ಕೊಂಡೊಯ್ದಿದೆ. ನಮ್ಮ ಪ್ರಿಯಾಂಕ್ ಖರ್ಗೆ ಅವರು ಮಾಧ್ಯಮಗೋಷ್ಠಿ ನಡೆಸಿ ಬಡವರಿಗೆ, ಹಿಂದುಳಿದ, ಅಲ್ಪಸಂಖ್ಯಾತ ಹಾಗೂ ದಲಿತರ ವಿವಿಧ ನಿಗಮಗಳಲ್ಲಿ ಕೊಳವೆ ಬಾವಿ ಕೊರೆದುಕೊಡುವ ಗಂಗಾ ಕಲ್ಯಾಣ ಯೋಜನೆಯಲ್ಲಿ ಅಡಿಗೆ ಸುಮಾರು 300 ರೂ.ಲೆಕ್ಕದಲ್ಲಿ 90 ಸಾವಿರ ರೂ. ಮೊತ್ತದ ಕೊಳವೆ ಬಾವಿ ನಿರ್ಮಾಣ ಕಾಮಗಾರಿಯ ಮೊತ್ತವನ್ನು ಸುಮಾರು 1.80 ಲಕ್ಷಕ್ಕೆ ಅಂದರೆ ಡಬಲ್ ಮಾಡಿ ಗುತ್ತಿಗೆದಾರರಿಗೆ ನೀಡಲಾಗಿದೆ. ಆ ಮೂಲಕ ಈ ಸರಕಾರ  ಭ್ರಷ್ಟಾಚಾರದಲ್ಲಿ ಶೇ.40 ರಿಂದ 100ಕ್ಕೆ ಭಡ್ತಿ ಪಡೆದಿದೆ ಎಂದರು.

ರೈತನ ಕೊಳವೆ ಬಾವಿಯಲ್ಲಿ ಶೇ.100ರಷ್ಟು  ಭ್ರಷ್ಟಾಚಾರ ಮಾಡುತ್ತಿದ್ದಾರೆ. ಗುತ್ತಿಗೆದಾರರಿಂದ ಶೇ.40ರಷ್ಟು ಲಂಚ ಪಡೆಯುತ್ತಿದ್ದಾರೆ. ಮೊನ್ನೆ ಮಾಧ್ಯಮದಲ್ಲಿ ಆರೋಗ್ಯ ಇಲಾಖೆ ಅಕ್ರಮದ ಬಗ್ಗೆ ವರದಿ ಬಂದಿದೆ. ರಾಜ್ಯ ಸರಕಾರದ  ಭ್ರಷ್ಟಾಚಾರಕ್ಕೆ ಪ್ರಧಾನಿ ಮೋದಿ ಅವರೇ ಅತ್ಯುನ್ನತ ಪ್ರಶಸ್ತಿಯನ್ನು ನೀಡಬೇಕಿದೆ. ಎಲ್ಲರೂ ಸೇರಿ  ಭ್ರಷ್ಟಾಚಾರ ಮಾಡುತ್ತಿದ್ದಾರೆ' ಎಂದು ಶಿವಕುಮಾರ್ ದೂರಿದರು.

ಧರ್ಮ ಹೇಳಲು ಧಾರ್ಮಿಕ ವಿದ್ವಾಂಸರಿದ್ದಾರೆ, ಅದರಲ್ಲಿ ಯಾವ ರಾಜಕೀಯ ಪಕ್ಷದ ಹಸ್ತಕ್ಷೇಪ ಬೇಡ: ಮುಹಿಯುದ್ದೀನ್ ಕಾಮಿಲ್ ಸಖಾಫಿ ತೋಕೆ

ಧರ್ಮ ಹೇಳಲು ಧಾರ್ಮಿಕ ವಿದ್ವಾಂಸರಿದ್ದಾರೆ, ಅದರಲ್ಲಿ ಯಾವ ರಾಜಕೀಯ ಪಕ್ಷದ ಹಸ್ತಕ್ಷೇಪ ಬೇಡ: ಮುಹಿಯುದ್ದೀನ್ ಕಾಮಿಲ್ ಸಖಾಫಿ ತೋಕೆ

 

ಧರ್ಮ ಹೇಳಲು ಧಾರ್ಮಿಕ ವಿದ್ವಾಂಸರಿದ್ದಾರೆ, ಅದರಲ್ಲಿ ಯಾವ ರಾಜಕೀಯ ಪಕ್ಷದ ಹಸ್ತಕ್ಷೇಪ ಬೇಡ: ಮುಹಿಯುದ್ದೀನ್ ಕಾಮಿಲ್ ಸಖಾಫಿ ತೋಕೆ 

ಕೊಡಗು: ಧರ್ಮದ ಬಗ್ಗೆ ಹೇಳಿ ಕೊಡಲು ಇಲ್ಲಿ ಧಾರ್ಮಿಕ ವಿದ್ವಾಂಸರಿದ್ದಾರೆ. ಅದರಲ್ಲಿ ಯಾವ ರಾಜಕೀಯ ಪಕ್ಷದ ಹಸ್ತಕ್ಷೇಪ ಬೇಡ ಅಂತ ಕರ್ನಾಟಕ ಜಂಇಯ್ಯತುಲ್ ಉಲಮಾ ಕಾರ್ಯದರ್ಶಿ ಮುಹಿಯುದ್ದೀನ್ ಕಾಮಿಲ್ ಸಖಾಫಿ ಉಸ್ತಾದ್ ತೋಕೆ ಹೇಳಿದರು.

   ಸಂವಿಧಾನ, ಧರ್ಮ, ರಾಜಕೀಯ ಎಂಬ ವಿಷಯದ ಬಗ್ಗೆ SSF ಕರ್ನಾಟಕ ರಾಜ್ಯ ಸಮಿತಿಯ ಆಜ್ಞೆಯಂತೆ ಕರ್ನಾಟಕ ರಾಜ್ಯದಾದ್ಯಂತ 100 ಡಿವಿಷನ್ ಗಳಲ್ಲಿ ಡಿವಿಶನ್ ಕಾನ್ಫರೆನ್ಸ್ ಗಳು ನಡೆಯುತ್ತಿದ್ದು. ಇದರ ಭಾಗವಾಗಿ ಸೋಮವಾರಪೇಟೆ ಡಿವಿಷನ್ ಕಾನ್ಫರೆನ್ಸ್ ಸುಂಟಿಕೊಪ್ಪ ಕೊಡವ ಸಮಾಜದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಆಗಮಿಸಿದ ಕರ್ನಾಟಕ ಜಂಇಯ್ಯತುಲ್ ಉಲಮಾ ಕಾರ್ಯದರ್ಶಿ ಮುಹಿಯುದ್ದೀನ್ ಕಾಮಿಲ್ ಸಖಾಫಿ ಉಸ್ತಾದ್ ತೋಕೆ  ಅವರು ಧರ್ಮ ಹಾಗೂ ರಾಜಕೀಯ ವಿಷಯಗಳ ಕುರಿತು ಗಂಭೀರವಾಗಿ ಭಾಷಣ ಮಾಡಿದರು. 

   ಕಾರ್ಯಕ್ರಮದ ಅಧ್ಯಕ್ಷತೆಯನ್ನು SSF  ಸೋಮವಾರಪೇಟೆ ಡಿವಿಷನ್ ಅಧ್ಯಕ್ಷರಾದ ಶಾಫಿ ಅನ್ವಾರಿ ಸಖಾಫಿ ಕೊಡಗರಹಳ್ಳಿ ರವರು ವಹಿಸಿದ್ದರು. ಉಸಾಮ ಸಖಾಫಿಯವರ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡ ಕಾರ್ಯಕ್ರಮವು SYS ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಮೌಲಾನಾ  ಹಫೀಳ್ ಸಅದಿ ಕೊಳಕೇರಿ ಉದ್ಘಾಟಿಸಿದರು.   SSF ಕೊಡಗು ಜಿಲ್ಲಾ ಅಧ್ಯಕ್ಷರಾಗಿರುವ ಶಾಫಿ ಸಅದಿ ಸೋಮವಾರಪೇಟೆ ರವರು ಪ್ರಾಸ್ತಾವಿಕ ಭಾಷಣ ಮಾಡಿದರು. ಕರ್ನಾಟಕ ಮುಸ್ಲಿಂ ಜಮಾಅತ್ ಸದಸ್ಯರಾದ ಪಿ ಎಂ ಲತೀಫ್ ಸಂದೇಶ ಭಾಷಣ ನಡೆಸಿದರು. ಸಂವಿಧಾನ ಎಂಬ ವಿಷಯದ ಬಗ್ಗೆ  SSF ರಾಷ್ಟ್ರೀಯ ಕಾರ್ಯದರ್ಶಿ ಯಾಕೂಬ್ ಮಾಸ್ಟರ್ ಕೊಳಕೇರಿ ಅರ್ಥಗರ್ಭಿತ ಭಾಷಣ ಮಾಡಿದರು. 

ಕಾರ್ಯಕ್ರಮದಲ್ಲಿ ನಿಯಾಸ್ ಅನ್ವಾರಿ ನೇತೃತ್ವದಲ್ಲಿ ಕ್ರಾಂತಿ ಗೀತೆ ನಡೆಯಿತು. ಮುಖ್ಯ ಅತಿಥಿಗಳಾಗಿ ಮುಹಮ್ಮದ್ ಅಲಿ ಸುಂಟಿಕೊಪ್ಪ, ಶೌಕತ್ ಸುಂಟಿಕೊಪ್ಪ, ನಾಸರ್ ಸುಂಟಿಕೊಪ್ಪ,ಉಸ್ಮಾನ್ ಸುಂಟಿಕೊಪ್ಪ SSF ಕರ್ನಾಟಕ ರಾಜ್ಯ ಕ್ಯಾಂಪಸ್ ಕಾರ್ಯದರ್ಶಿ ಶರೀಫ್ ಮಾಸ್ಟರ್ ಹೊಸ್ತೋಟ, ಜಲೀಲ್ ಅಮೀನಿ ಪಾಲಿಬೆಟ್ಟ, ನಾಸರ್ ಮುಸ್ಲಿಯಾರ್,ರಫೀಕ್ ಲತೀಫಿ, ನಝೀರ್ ಸಖಾಫಿ ಕುಂಜಿಲ,ಝಕರಿಯಾ ಜೌಹರಿ ರಝಾಕ್ ಸಅದಿ,ನೌಫಲ್ ಮಲ್ಹರಿ, ಹನೀಫ್ ಅಶ್ರಫಿ ಉಪಸ್ಥಿತರಿದ್ದರು.

ಸ್ವಾಗತ ಸಮಿತಿ ಚೇರ್ಮನ್ ನಜ್ಮುದ್ದೀನ್ ಝುಹ್ರಿ ಸ್ವಾಗತಿಸಿ  ಹುಸೈನ್ ಸಖಾಫಿ ಹೊಸತೋಟ ವಂದಿಸಿದರು.

 ಬರಿಗಾಲಿನಲ್ಲಿ ಬಂದು ಸಾಷ್ಟಾಂಗ ಪ್ರಣಾಮ ಸಲ್ಲಿಸಿ ಪದ್ಮಶ್ರೀ ಸ್ವೀಕರಿಸಿದ 125 ವರ್ಷದ ಯೋಗ ಗುರು ಸ್ವಾಮಿ ಶಿವಾನಂದ

ಬರಿಗಾಲಿನಲ್ಲಿ ಬಂದು ಸಾಷ್ಟಾಂಗ ಪ್ರಣಾಮ ಸಲ್ಲಿಸಿ ಪದ್ಮಶ್ರೀ ಸ್ವೀಕರಿಸಿದ 125 ವರ್ಷದ ಯೋಗ ಗುರು ಸ್ವಾಮಿ ಶಿವಾನಂದ


 ಬರಿಗಾಲಿನಲ್ಲಿ ಬಂದು ಸಾಷ್ಟಾಂಗ ಪ್ರಣಾಮ ಸಲ್ಲಿಸಿ ಪದ್ಮಶ್ರೀ ಸ್ವೀಕರಿಸಿದ 125 ವರ್ಷದ ಯೋಗ ಗುರು ಸ್ವಾಮಿ ಶಿವಾನಂದ

 ಹೊಸದಿಲ್ಲಿ: ರಾಷ್ಟ್ರಪತಿ ಭವನದ ದರ್ಬಾರ್ ಹಾಲ್‍ನಲ್ಲಿ ಸೋಮವಾರ  ನಡೆದ ಸಮಾರಂಭದಲ್ಲಿ ಬರಿಗಾಲಿನಲ್ಲಿಯೇ ನಡೆದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಂದ ಪದ್ಮ ಶ್ರೀ ಪ್ರಶಸ್ತಿ ಸ್ವೀಕರಿಸಿದ 125 ವರ್ಷದ ಯೋಗ ಗುರು ಸ್ವಾಮಿ ಶಿವಾನಂದ ಎಲ್ಲರ ಗಮನ ಸೆಳೆದಿದ್ದಾರೆ. ಪ್ರಶಸ್ತಿ ಸ್ವೀಕರಿಸುವ ಮುನ್ನ ಸ್ವಾಮಿ ಶಿವಾನಂದ ಅವರು ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿಗಳಿಗೆ ಸಾಷ್ಟಾಂಗ ಪ್ರಣಾಮ ಮಾಡುತ್ತಿದ್ದಂತೆಯೇ ಅಲ್ಲಿ ನೆರೆದಿದ್ದವರು ಕರತಾಡನ ಮಾಡಿದರು.

ತಮ್ಮೆದುರು ಸ್ವಾಮಿ ಶಿವಾನಂದ ಸಾಷ್ಟಾಂಗ ಪ್ರಣಾಮ ಮಾಡುತ್ತಿದ್ದಂತೆಯೇ ಎದ್ದು ನಿಂತ ಪ್ರಧಾನಿ ನರೇಂದ್ರ ಮೋದಿ ಕೂಡ ತಲೆಬಗ್ಗಿಸಿ ನೆಲ ಮುಟ್ಟಿ ನಮಸ್ಕರಿಸಿದರು.

ವೇದಿಕೆ ಬಳಿ ಆಗಮಿಸುತ್ತಿದ್ದಂತೆಯೇ ಮತ್ತೆ ನೆಲಕ್ಕೆ ಮಂಡಿಯೂರಿ ಪ್ರಣಾಮ ಮಾಡಿದ ಯೋಗ ಗುರು ಅವರ ಬಳಿ ತೆರಳಿ ಅವರನ್ನು ಮೇಲಕ್ಕೆತ್ತಿ ಅವರಿಗೆ ರಾಷ್ಟ್ರಪತಿಗಳು ಪ್ರಶಸ್ತಿ ಹಸ್ತಾಂತರಿಸಿದರು.

ತಮ್ಮ ಜೀವನವನ್ನು ಸಮಾಜದ ಕಲ್ಯಾಣಕ್ಕೆ ಮುಡಿಪಾಗಿರಿಸಿರುವ ಸ್ವಾಮಿ ಶಿವಾನಂದ ಅವರು ಅವಿಭಜಿತ ಭಾರತದ, ಈಗ ಬಾಂಗ್ಲಾದೇಶದ ಭಾಗವಾಗಿರುವ ಸಿಲ್ಹೆಟ್ ಜಿಲ್ಲೆಯಲ್ಲಿ ಆಗಸ್ಟ್ 8, 1896ರಂದು ಜನಿಸಿದರು. ತಮ್ಮ ಆರನೇ ವರ್ಷದಲ್ಲಿ ಹೆತ್ತವರನ್ನು ಅವರು ಕಳೆದುಕೊಂಡಿದ್ದರು. ಕಡು ಬಡತನದಲ್ಲಿದ್ದ ಅವರನ್ನು ಅವರ ಹೆತ್ತವರ ನಿಧನಾನಂತರ ಪಶ್ಚಿಮ ಬಂಗಾಳದ ನಬದ್ವೀಪ್ ಎಂಬಲ್ಲಿರುವ ಗುರೂಜಿ ಆಶ್ರಮಕ್ಕೆ ಕರೆತರಲಾಗಿತ್ತು. ಅಲ್ಲಿ ಗುರು ಓಂಕಾರಾನಂದ ಸ್ವಾಮಿ ಅವರನ್ನು ಬೆಳೆಸಿ ಅವರಿಗೆ ಶಿಕ್ಷಣ ಒದಗಿಸಿದ್ದರು.

ಅವರ ಆರೋಗ್ಯದ ಗುಟ್ಟು ಹಾಗೂ ಅವರ ದೀರ್ಘಾಯುಷ್ಯ ಅನೇಕ ಅಧ್ಯಯನಗಳಿಗೆ ಕಾರಣವಾಗಿ ಕಾರ್ಪೊರೇಟ್ ಆಸ್ಪತ್ರೆಗಳು ಸಹ ಅವರ ಆರೋಗ್ಯ ಹಾಗೂ ಅವರ ದೈಹಿಕ ಸ್ಥಿತಿಗತಿಗಳನ್ನು ಅರಿಯಲು ಅವರನ್ನು ತಪಾಸಣೆಗೆ ಒಳಪಡಿಸಿದ್ದವು.

ಸಮಾಜಸೇವೆಗೆ ತಮ್ಮನ್ನು ಮುಡಿಪಾಗಿಸಿರುವ ಸ್ವಾಮಿ ಶಿವಾನಂದ ಪುರಿಯಲ್ಲಿ ಹಲವಾರು  ಕುಷ್ಠ ರೋಗಿಗಳ ಆರೈಕೆಯನ್ನೂ ಮಾಡುತ್ತಿದ್ದಾರೆ. ಹಲವಾರು ಪ್ರಶಸ್ತಿಗಳಿಗೆ ಪಾತ್ರರಾಗಿರುವ ಅವರು 2019ರಲ್ಲಿ ಯೋಗ ರತ್ನ ಪ್ರಶಸ್ತಿಯನ್ನೂ ಗಳಿಸಿದ್ದಾರೆ.

 ಮೇಕೆದಾಟು: ತಮಿಳುನಾಡು ವಿಧಾನಸಭೆ ನಿರ್ಣಯಕ್ಕೂ ರಾಜ್ಯಕ್ಕೂ ಸಂಬಂಧ ಇಲ್ಲ; ಕುಮಾರಸ್ವಾಮಿ

ಮೇಕೆದಾಟು: ತಮಿಳುನಾಡು ವಿಧಾನಸಭೆ ನಿರ್ಣಯಕ್ಕೂ ರಾಜ್ಯಕ್ಕೂ ಸಂಬಂಧ ಇಲ್ಲ; ಕುಮಾರಸ್ವಾಮಿ


 ಮೇಕೆದಾಟು: ತಮಿಳುನಾಡು ವಿಧಾನಸಭೆ ನಿರ್ಣಯಕ್ಕೂ ರಾಜ್ಯಕ್ಕೂ ಸಂಬಂಧ ಇಲ್ಲ; ಕುಮಾರಸ್ವಾಮಿ

ಬೆಂಗಳೂರು: ಮೇಕೆದಾಟು ವಿಷಯದಲ್ಲಿ ಸೋಮವಾರದಂದು ತಮಿಳುನಾಡು ವಿಧಾನಸಭೆಯಲ್ಲಿ ಕೈಗೊಂಡಿರುವ ನಿರ್ಣಯಕ್ಕೂ ಮತ್ತು ರಾಜ್ಯಕ್ಕೂ ಸಂಬಂಧ ಇಲ್ಲ. ರಾಜ್ಯ ಸರಕಾರ ಈ ಯೋಜನೆ ವಿಷಯದಲ್ಲಿ ಇಚ್ಛಾಶಕ್ತಿ ಪ್ರದರ್ಶನ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು  ಸಲಹೆ ಮಾಡಿದರು.

ವಿಧಾನಸೌಧದ ಬಳಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಅವರು, ನಿನ್ನೆ ವಿಧಾನಸಭೆಯಲ್ಲಿ ತಮಿಳುನಾಡಿನ ಎಲ್ಲಾ ಪಕ್ಷಗಳು ಮೇಕೆದಾಟು ಯೋಜನೆಗೆ ಕೇಂದ್ರ ಸರ್ಕಾರ ಅನುಮತಿ ನೀಡಬಾರದು ಎಂದು ನಿರ್ಣಯ ಮಾಡಿದ್ದಾರೆ. ಅಕ್ಕಪಕ್ಕದ ರಾಜ್ಯಗಳ ಮೇಲೆ, ಅದರಲ್ಲೂ ಕರ್ನಾಟಕದ ಮೇಲೆ ತಮಿಳುನಾಡು ಸರ್ಕಾರ ಒತ್ತಡ ಹೇರುವಂತದ್ದು ನಿರಂತರವಾಗಿ ನಡೆಯುತ್ತಿದೆ ಎಂದು ಹೇಳಿದರು.

ಬೆಂಗಳೂರು ನಗರಕ್ಕೆ ಹೆಚ್ಚುವರಿ ನೀರನ್ನು ಕುಡಿಯುವ ಹಕ್ಕಿದೆ. ಅವರ ನೀರನ್ನು ಕೊಡದಿದ್ದಾಗ ಅವರು ಕೇಳಬೇಕು. ನಮ್ಮ ಭಾಗದಲ್ಲಿ ಜಲಾಶಯ ಕಟ್ಟಲು  ತಕರಾರು ಇಲ್ಲ ಎಂದು ತಮಿಳುನಾಡು ವಕೀಲರೇ ಸುಪ್ರೀಂ ಕೋರ್ಟಿನಲ್ಲಿ ಹೇಳಿದ್ದಾರೆ. ಈಗ ನೋಡಿದರೆ ಹೊಸ ವರಸೆ ಶುರು ಮಾಡಿದ್ದಾರೆ ಎಂದು ಅವರು ಕಿಡಿಕಾರಿದರು 

ಮೇಕೆದಾಟು ಯೋಜನೆಯನ್ನು ವಿರೋಧ ಮಾಡುವ ಯಾವುದೇ ಹಕ್ಕು ತಮಿಳುನಾಡಿಗೆ ಇಲ್ಲ. ನಮಗೆ ಪರಿಸರ ವಿಷಯದಲ್ಲಿ ಮಾತ್ರ ಒಪ್ಪಿಗೆ ಬಾಕಿ ಇದೆ. ತಮಿಳುನಾಡಿನ ನಾಯಕರು ವಿಧಾನಸಭೆಯಲ್ಲಿ ಮಾಡಿಕೊಂಡಿರುವ ನಿರ್ಣಯಕ್ಕೂ ಕರ್ನಾಟಕಕ್ಕೂ ಯಾವುದೇ ಸಂಬಂಧ ಇಲ್ಲ. ಸರ್ಕಾರ ಬದ್ದತೆ ತೋರಿಸಬೇಕು. ಎಲ್ಲವೂ ಸರ್ಕಾರದ ಕೈಯಲ್ಲಿದೆ ಎಂದು ಮಾಜಿ ಮುಖ್ಯಮಂತ್ರಿಗಳು ಹೇಳಿದರು.

ಕಾವೇರಿಯಲ್ಲಿ ನಮ್ಮ ನೀರನ್ನು ಪಡೆಯುವುದರಲ್ಲಿ ಅನ್ಯಾಯ ಆಗಿದೆ ಅದನ್ನು ಸರ್ಕಾರ ತ್ವರಿತಗತಿಯಲ್ಲಿ ಸರಿಪಡಿಸಬೇಕು. ಮುಂಗಡ ಪತ್ರದಲ್ಲಿ 1000 ಕೋಟಿ  ಇಟ್ಟರೆ ಸಾಲದು,  ಕೆಲಸ ಆರಂಭ ಆಗಬೇಕು. ಅಲ್ಲದೆ, ಕಾವೇರಿ ವ್ಯಾಪ್ತಿಯಲ್ಲಿ ತಮಿಳುನಾಡು ಸರ್ಕಾರ ಕೆಲ ಯೋಜನೆಯನ್ನು ನಡೆಸುತ್ತಿದೆ.‌ ಅವರು ಏನು ಚಟುವಟಿಕೆ  ಮಾಡುತ್ತಿದ್ದಾರೆ.‌ ಕರ್ನಾಟಕ ಎಂದೂ ತೊಂದರೆ ಮಾಡಿಲ್ಲ.‌ಹೀಗಾಗಿ ಅವರ ಚಟುವಟಿಕೆ ನಡೆಯುತ್ತಲೆ ಇದೆ.‌ ಇದೇ ರೀತಿ ಮುಂದುವರೆದರೆ 9 ಸಾವಿರ ಕೋಟಿ ಡಿಪಿಆರ್ ಎಲ್ಲಿಗೆ ಹೋಗುತ್ತದೆ ಎಂದು ಅವರು ಪ್ರಶ್ನಿಸಿದರು.

ಮೇಕೆದಾಟು ಯೋಜನೆಯನ್ನು ಯಾವ ರೀತಿ ಕಾರ್ಯಗತ ಮಾಡಬೇಕು ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೆಗೌಡರು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ಎರಡು ಹಂತಗಳಲ್ಲಿ ಕಾರ್ಯಗತ ಮಾಡಿ ಎಂದು ಅವರು ಹೇಳಿದ್ದಾರೆ. ನಾನು ಕೂಡ ಸದನದಲ್ಲಿ ಪ್ರಸ್ತಾಪಿಸಿದ್ದೇನೆ. ಜತೆಗೆ, ಮುಖ್ಯಮಂತ್ರಿಗಳು ಸರ್ವಪಕ್ಷ ನಾಯಕರನ್ನು ದೆಹಲಿಗೆ ಕರೆದೊಯ್ಯುವ ವಿಚಾರವನ್ನು ಸರ್ವಪಕ್ಷ  ಸಭೆಯಲ್ಲಿ ಹೇಳಿದ್ದಾರೆ. ಮೊದಲು ಸೋಮವಾರ ಗೋವಿಂದ ಕಾರಜೋಳ ದೆಹಲಿಗೆ ಹೋಗಿದ್ದಾರೆ. ನಂತರ ಸಂಸದರ ನಿಯೋಗ ಭೇಟಿ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಕಾದು ನೋಡೋಣ ಎಂದು ಕುಮಾರಸ್ವಾಮಿ ಅವರು ತಿಳಿಸಿದರು.