Wednesday, 9 February 2022

''ಬಟ್ಟೆ ಬಿಚ್ಚಿಸುತ್ತೇವೆ, ಸಾಯಿಸುತ್ತೇವೆ ಎಂದು ಕೇಸರಿ ಶಾಲು ಧರಿಸಿದ್ದ ವಿದ್ಯಾರ್ಥಿಗಳಿಂದ ಬೆದರಿಕೆ''

 

''ಬಟ್ಟೆ ಬಿಚ್ಚಿಸುತ್ತೇವೆ, ಸಾಯಿಸುತ್ತೇವೆ ಎಂದು ಕೇಸರಿ ಶಾಲು ಧರಿಸಿದ್ದ ವಿದ್ಯಾರ್ಥಿಗಳಿಂದ ಬೆದರಿಕೆ''

ಬೇಲೂರು: ನಗರದ ವೈಡಿಡಿ ಕಾಲೇಜಿನಲ್ಲಿ ಮಂಗಳವಾರ ನಡೆದ ಪ್ರತಿಭಟನೆ ವೇಳೆ ಹೇಮಂತ್ ಎಂಬ ವಿದ್ಯಾರ್ಥಿ ಹಿಜಾಬ್ ಧರಿಸಿದ್ದ ವಿದ್ಯಾರ್ಥಿನಿಗೆ ಬಟ್ಟೆ ಬಿಚ್ಚಿಸುತ್ತೇನೆ ಎಂದು ಬೆದರಿಕೆ ಹಾಕಿರುವ ಆರೋಪ ಕೇಳಿ ಬಂದಿದೆ.

ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಲು ಬಂದ ವಿದ್ಯಾರ್ಥಿನಿ ಸಾದಿಯಾ ಮಾಧ್ಯಮದವರೊಂದಿಗೆ ಮಾತನಾಡಿ, ‘‘ನಾವು ಕಾಲೇಜಿಗೆ ಬಂದ ಸಂದರ್ಭದಲ್ಲಿ ಪ್ರಾಂಶುಪಾಲ ಪುಟ್ಟರಾಜು ನಮ್ಮನ್ನು ಅಡ್ಡಗಟ್ಟಿ ನೀವು ಹಿಜಾಬ್ ಧರಿಸಿ ಬಂದರೆ ಪೊಲೀಸರನ್ನು ಕರೆಸುತ್ತೇನೆ ಎಂದು ಹೇಳಿದ್ದರು. ಹೇಮಂತ್ ಎಂಬ ವಿದ್ಯಾರ್ಥಿ ಬಂದು ಇವತ್ತು ನಿಮ್ಮ ಹಿಜಾಬ್ ಬಿಚ್ಚಿಸಿದ್ದೇವೆ. ನಾಳೆ ಬಟ್ಟೆ ಬಿಚ್ಚಿಸುತ್ತೇವೆ, ನಿಮ್ಮನ್ನು ಸಾಯಿಸಿಬಿಡ್ತೀವಿ ಎಂದು ಬೆದರಿಕೆ ಹಾಕಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಹಾಗಾಗಿ ನಾವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲು ಬಂದಿದ್ದೇವೆ’’ ಎಂದು ತಿಳಿಸಿದರು. 

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು.


SHARE THIS

Author:

0 التعليقات: