Monday, 7 February 2022

"ಹಿಜಾಬ್ ವಿವಾದ ವಿದ್ಯಾರ್ಥಿಗಳ ನಡುವೆ ಕೋಮು ವಿಷಬೀಜ ಬಿತ್ತುವ ಸಂಘ ಪರಿವಾರದ ರಾಜಕೀಯ ಷಡ್ಯಂತ್ರ"


 "ಹಿಜಾಬ್ ವಿವಾದ ವಿದ್ಯಾರ್ಥಿಗಳ ನಡುವೆ ಕೋಮು ವಿಷಬೀಜ ಬಿತ್ತುವ ಸಂಘ ಪರಿವಾರದ ರಾಜಕೀಯ ಷಡ್ಯಂತ್ರ"

ಬೆಳ್ತಂಗಡಿ: ಶಿಕ್ಷಣ ಸಂಸ್ಥೆಗಳಲ್ಲಿ ನಡೆಯುತ್ತಿರುವ ಹಿಜಾಬ್ ವಿರೋಧಿ ನಡೆಯನ್ನು ಖಂಡಿಸಿ ಸಮಾನ ಮನಸ್ಕ ಮಹಿಳಾ ವೇದಿಕೆಯ ಬೆಳ್ತಂಗಡಿ ಘಟಕದ ನೇತೃತ್ವದಲ್ಲಿ ಸೋಮವಾರ ಬೆಳ್ತಂಗಡಿ ಮಿನಿ ವಿಧಾನ ಸೌಧದ ಎದುರು ಪ್ರತಿಭಟನೆ ನಡೆಯಿತು.

ಸಮಾನ ಮನಸ್ಕ ಮಹಿಳಾ ವೇದಿಕೆಯ ಬೆಳ್ತಂಗಡಿ ಘಟಕದ ಅಧ್ಯಕ್ಷೆ ಅಸ್ಮಾ ಮಾತನಾಡಿ, ಹಿಜಾಬ್ ಮುಸ್ಲಿಮರ ಧಾರ್ಮಿಕ ಹಕ್ಕಾಗಿದ್ದು, ಶತಮಾನಗಳಿಂದಲೂ ಅದನ್ನು ಪಾಲಿಸುತ್ತಾ ಬರಲಾಗಿದೆ. ಮಾತ್ರವಲ್ಲ ಭಾರತದ ಸಂವಿಧಾನದಲ್ಲೂ ಹಿಜಾಬ್ ಧರಿಸುವುದಕ್ಕೆ ಸಮ್ಮತಿ ಇದೆ. ಆದರೆ ಈ ವಿಚಾರವನ್ನು ಇದೀಗ ವಿವಾದವನ್ನಾಗಿ ಮಾಡಲು ಹೊರಟಿರುವುದು ಖಂಡನೀಯ. ಇದು ವಿದ್ಯಾರ್ಥಿಗಳ ನಡುವೆ ಕೋಮು ವಿಷಬೀಜ ಬಿತ್ತುವ ಸಂಘ ಪರಿವಾರದ ರಾಜಕೀಯ ಷಡ್ಯಂತ್ರ  ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಮಾನ ಮನಸ್ಕ ಮಹಿಳಾ ವೇದಿಕೆಯ ಮಂಗಳೂರು ಘಟಕದ ಸದಸ್ಯೆ ಯಾಸ್ಮೀನ್ ಮಾತನಾಡಿ, ಈ ಹೋರಾಟಕ್ಕೆ ಎಲ್ಲರೂ ಕೈ ಜೋಡಿಸುವಂತೆ ಕರೆ ನೀಡಿದರು.

ಸಮಾನ ಮನಸ್ಕ ಮಹಿಳಾ ವೇದಿಕೆಯ ಬಂಟ್ವಾಳ ಘಟಕದ ಸದಸ್ಯೆ ಸಫ್ರೀನಾ ಮಾತನಾಡಿ, ಸಂಘ ಪರಿವಾರದ ಕುತಂತ್ರಗಳ ಬಗ್ಗೆ ಎಚ್ಚರ ವಹಿಸುವಂತೆ ಕರೆ ನೀಡಿದರು.

ಪ್ರತಿಭಟನೆಯ ಬಳಿಕ ಮುಸ್ಲಿಮರ ಧಾರ್ಮಿಕ ಹಕ್ಕಾದ ಹಿಜಾಬ್ ಅನ್ನು ಧರಿಸಿ ಕಾಲೇಜಿಗೆ ಬರುತ್ತಿರುವ ವಿದ್ಯಾರ್ಥಿಗಳ ಸಂವಿಧಾನಾತ್ಮಕ ಹಕ್ಕನ್ನು ಉಳಿಸಬೇಕು ಹಾಗೂ ಇದಕ್ಕೆ ತಡೆಯೊಡ್ಡುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ತಹಶೀಲ್ದಾರರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.


SHARE THIS

Author:

0 التعليقات: