Saturday, 19 February 2022

ಸಚಿವ ಈಶ್ವರಪ್ಪರನ್ನು ವಜಾ ಮಾಡುವವರೆಗೂ ಹೋರಾಟ ಮಾಡುತ್ತೇವೆ : ಡಿ.ಕೆ. ಶಿವಕುಮಾರ್


ಸಚಿವ ಈಶ್ವರಪ್ಪರನ್ನು ವಜಾ ಮಾಡುವವರೆಗೂ ಹೋರಾಟ ಮಾಡುತ್ತೇವೆ : ಡಿ.ಕೆ. ಶಿವಕುಮಾರ್

ಬೆಂಗಳೂರು : ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ ಸಚಿವ ಕೆ.ಎಸ್.ಈಶ್ವರಪ್ಪ ಕ್ಷಮೆ ಕೇಳುವುದೆಲ್ಲಾ ಬೇಕಾಗಿಲ್ಲ. ಅವರ ರಾಜೀನಾಮೆ ನೀಡಲೇಬೇಕೆಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಒತ್ತಾಯ ಮಾಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರವು ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ ದೇಶದ್ರೋಹಿ ಹೇಳಿಕೆಯನ್ನ ಸಮರ್ಥಿಸಿಕೊಂಡಿದೆ.

ಸಚಿವ ಈಶ್ವರಪ್ಪ ಬಿಡಿ ಬಚ್ಚಲು ಬಾಯಿ ಮಾತಾಡಿದ್ದಾರೆ. ಆದರೆ ಸಿಎಂ ಬೊಮ್ಮಾಯಿ ಸಮರ್ಥಿಸಿಕೊಂಡಿದ್ದಾರೆ. ಸಚಿವ ಕೆ.ಎಸ್.ಈಶ್ವರಪ್ಪರನ್ನ ವಜಾ ಮಾಡಬೇಕು. ಸಿಎಂಗೆ ಸ್ವಾಭಿಮಾನ ಇದ್ದಿದ್ರೆ ಅಂದೇ ವಜಾ ಮಾಡಬೇಕಿತ್ತು ಎಂದು ಹೇಳಿದ್ದಾರೆ.

ಸಚಿವ ಈಶ್ವರಪ್ಪರನ್ನ ವಜಾ ಮಾಡದಿದ್ದರೆ ಹೋರಾಟ ಮಾಡ್ತೇವೆ. ಜಿಲ್ಲಾ, ತಾಲೂಕು ಮಟ್ಟದಲ್ಲೂ ಹೋರಾಟ ಮಾಡ್ತಿದ್ದೇವೆ. ನಿಮ್ಮ ದುರಾಡಳಿತದಲ್ಲಿ ಏನೆಲ್ಲಾ ನಡೆಯುತ್ತಿದ್ದೆ ಇದೆಲ್ಲ ಸಾಕ್ಷಿ. ಸಚಿವ ಈಶ್ವರಪ್ಪರನ್ನ ಸಮರ್ಥಿಸುತ್ತಿರುವುದಕ್ಕೆ ನಮ್ಮ ಖಂಡನೆ ಇದೆ ಎಂದು ವಾಗ್ದಾಳಿ ನಡೆಸಿದ್ದಾರೆ.


SHARE THIS

Author:

0 التعليقات: