Saturday, 19 February 2022

ಕೌಟುಂಬಿಕ ವೈಷಮ್ಯಕ್ಕೆ ಇಬ್ಬರು ಯುವಕರ ಕೊಲೆ

ಕೌಟುಂಬಿಕ ವೈಷಮ್ಯಕ್ಕೆ ಇಬ್ಬರು ಯುವಕರ ಕೊಲೆ

ಶಿವಮೊಗ್ಗ: ಮಾರಕಾಸ್ತ್ರಗಳಿಂದ ಹೊಡೆದಾಡಿಕೊಂಡು ಇಬ್ಬರು ಯುವಕರನ್ನು ಕೊಲೆಯಾದ  ಘಟನೆ ನಗರದ ಸೂಳೆಬೈಲು 7ನೇ ತಿರುವಿನಲ್ಲಿ ಶನಿವಾರ ರಾತ್ರಿ ಸಂಭವಿಸಿರುವುದು ವರದಿಯಾಗಿದೆ.

ಸಲೀಮ್ ಅಹ್ಮದ್( 22),ಅಬ್ದುಲ್ ದಸ್ತಗೀರ್(23) ಹತ್ಯೆಯಾದವರು.

ಕೌಟುಂಬಿಕ ವೈಷಮ್ಯಕ್ಕೆ ಸಂಬಂಧಿಸಿದಂತೆ ಶನಿವಾರ ತಡರಾತ್ರಿ ಇವರಿಬ್ಬರ ನಡುವೆ ಗಲಾಟೆ ನಡೆದಿದೆ ಎನ್ನಲಾಗಿದೆ. ಈ ವೇಳೆ ಮಾತಿಗೆ ಮಾತು ಬೆಳೆದು ಮಾರಕಾಸ್ತ್ರಗಳಿಂದ ಒಬ್ಬರಿಗೊಬ್ಬರು ಹೊಡೆದಾಡಿಕೊಂಡಿದ್ದಾರೆ. ಮಾರಕಾಸ್ತ್ರದ ಏಟಿನಿಂದ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದರೆನ್ನಲಾಗಿದೆ. ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಿತಾದರೂ ಚಿಕಿತ್ಸೆ ಫಲಿಸದೆ ಇಬ್ಬರು ಯುವಕರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಈ ಸಂಬಂಧ ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


SHARE THIS

Author:

0 التعليقات: