Wednesday, 16 February 2022

ಹಿಜಾಬ್ ಧರಿಸಿಯೇ ಶಾಲೆಗೆ ವಿದ್ಯಾರ್ಥಿನಿಯರ ಆಗಮನ: ಬೆಳಗಾವಿಯಲ್ಲಿ ಪೊಲೀಸ್ ಬಿಗಿ ಭದ್ರತೆ


ಹಿಜಾಬ್ ಧರಿಸಿಯೇ ಶಾಲೆಗೆ ವಿದ್ಯಾರ್ಥಿನಿಯರ ಆಗಮನ: ಬೆಳಗಾವಿಯಲ್ಲಿ ಪೊಲೀಸ್ ಬಿಗಿ ಭದ್ರತೆ

ಪಿಯು, ಪದವಿ ಕಾಲೇಜುಗಳು ಪುನರಾರಂಭವಾದ ಹಿನ್ನೆಲೆಯಲ್ಲಿ ಬೆಳಗಾವಿಯ ಎಲ್ಲ ಕಾಲೇಜುಗಳ ಎದುರು ಪೊಲೀಸ್ ಬಿಗಿ ಭದ್ರತೆ ವಹಿಸಲಾಗಿದೆ. ಇದೇ ವೇಳೆ, ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಕಾಲೇಜು ಆವರಣ ಪ್ರವೇಶಿಸಿ ನಂತರ ಕಾಲೇಜಿನ ಪ್ರತ್ಯೇಕ ಕೊಠಡಿಯಲ್ಲಿ ಹಿಜಾಬ್ ತಗೆದು ತರಗತಿಗೆ ಹಾಜರಾಗುತ್ತಿದ್ದಾರೆ.

ಬೆಳಗಾವಿ: ಹಿಜಾಬ್ ವಿವಾದದ ವಿಚಾರಣೆ ನ್ಯಾಯಾಲಯದಲ್ಲಿ ಮುಂದುವರಿದಿದೆ. ಇದರ ನಡುವೆಯೇ ಇಂದಿನಿಂದ ಜಿಲ್ಲೆಯಲ್ಲಿ ಕಾಲೇಜುಗಳು ಪುನರಾರಂಭವಾಗಿವೆ. ನಗರದ ಎಲ್ಲ ಕಾಲೇಜುಗಳ ಎದುರು ಪೊಲೀಸ್ ಬಿಗಿ ಭದ್ರತೆ ಒದಗಿಸಲಾಗಿದೆ.

ಹಿಜಾಬ್ ತಗೆದು ತರಗತಿಗೆ ಹಾಜರು: ಅಹಿತಕರ ಘಟನೆ ನಡೆಯದಂತೆ ಬೆಳಗಾವಿ ಪೊಲೀಸರು ಮುಂಜಾಗ್ರತಾ ಕ್ರಮ ತಗೆದುಕೊಂಡಿದ್ದಾರೆ. ಸರ್ದಾರ್ ಸರ್ಕಾರಿ ಕಾಲೇಜಿಗೆ ಖಡೇಬಜಾರ್ ಸಿಪಿಐ ನೇತೃತ್ವದಲ್ಲಿ ಭದ್ರತೆ ನೀಡಲಾಗಿದೆ. ಸಮವಸ್ತ್ರ ನೀತಿ ಪಾಲಿಸುವಂತೆ ನ್ಯಾಯಾಲಯ, ಸರ್ಕಾರದ ಆದೇಶವಿದ್ದು ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಕಾಲೇಜು ಆವರಣ ಪ್ರವೇಶಿಸುತ್ತಿದ್ದಾರೆ. ಕಾಲೇಜಿನ ಪ್ರತ್ಯೇಕ ಕೊಠಡಿಯಲ್ಲಿ ಹಿಜಾಬ್ ತಗೆದು ನಂತರ ತರಗತಿಗೆ ಹಾಜರಾಗುತ್ತಿದ್ದಾರೆ.

ಮಾಧ್ಯಮಗಳ ಪ್ರವೇಶಕ್ಕೆ ನಿರ್ಬಂಧ: ಕಾಲೇಜು ಆವರಣದೊಳಗೆ ಮಾಧ್ಯಮಗಳ ಪ್ರವೇಶಕ್ಕೆ ಪೊಲೀಸರು, ಕಾಲೇಜು ಆಡಳಿತ ಮಂಡಳಿ ನಿರ್ಬಂಧ ವಿಧಿಸಿದೆ.SHARE THIS

Author:

0 التعليقات: