ಪುತ್ತೂರು: ಮರದ ಕೊಂಬೆ ಮೈಮೇಲೆ ಬಿದ್ದು ಯುವಕ ಮೃತ್ಯು
ಪುತ್ತೂರು,: ಮರ ಕಡಿಯುತ್ತಿದ್ದ ವೇಳೆಯಲ್ಲಿ ಕೊಂಬೆ ಮುರಿದು ಮೈಮೇಲೆ ಬಿದ್ದು ಯುವಕನೋರ್ವ ಮೃತಪಟ್ಟ ಘಟನೆ ಪುತ್ತೂರು ತಾಲೂಕಿನ ಸರ್ವೆ ಗ್ರಾಮದ ಪುರುಷರ ಕಟ್ಟೆ ಎಂಬಲ್ಲಿ ಬುಧವಾರ ಮಧ್ಯಾಹ್ನ ನಡೆದಿದೆ.
ತಿಂಗಳಾಡಿ ಸಮೀಪದ ಕೂಡುರಸ್ತೆ ನಿವಾಸಿ ದಿ.ಹಸೈನಾರ್ ಎಂಬವರ ಪುತ್ರ ಬಾತಿಷ್ ಸುಲ್ತಾನ್(32) ಮೃತ ಪಟ್ಟ ಯುವಕ.
ಇವರು ಕೂಲಿ ಕಾರ್ಮಿಕರಾಗಿದ್ದು, ಟಿಂಬರ್ ಕೆಲಸ ಮಾಡುತ್ತಿದ್ದರು. ಪುರುಷರ ಕಟ್ಟೆಯಲ್ಲಿ ಮರ ಕಡಿಯುತ್ತಿದ್ದ ಸಂದರ್ಭದಲ್ಲಿ ಮರದ ಕೊಂಬೆ ಬಾತಿಷ್ ಸುಲ್ತಾನ್ ಮೈಮೇಲೆ ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಮೃತರು ತಾಯಿ, ಪತ್ನಿ, ಓರ್ವ ಪುತ್ರನನ್ನು ಅಗಲಿದ್ದಾರೆ.
ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 التعليقات: