ಸುನ್ನೀ ಸೆಂಟರ್ ಸುರತ್ಕಲ್ ನೂತನ ಕಛೇರಿ ಉದ್ಘಾಟನೆ
ಸುರತ್ಕಲ್ ಫೆಬ್ರವರಿ 20 : ಎಸ್. ವೈ.ಎಸ್ ಸುರತ್ಕಲ್ ಸೆಂಟರ್ ಹಾಗೂ ಎಸ್ಸೆಸ್ಸೆಫ್ ಸುರತ್ಕಲ್ ಡಿವಿಷನ್ ಇದರ ಜಂಟಿ ಆಶ್ರಯದಲ್ಲಿ ಸುನ್ನೀ ಸೆಂಟರ್ ಸುರತ್ಕಲ್ ನೂತನ ಕಛೇರಿಯು ಎಸ್.ವೈ.ಎಸ್ ಸುರತ್ಕಲ್ ಸೆಂಟರ್ ಅಧ್ಯಕ್ಷರಾದ ಅಬ್ದುಲ್ ಲತೀಫ್ ಸಖಾಫಿ ಕಿನ್ನಿಗೋಳಿಯವರ ಅಧ್ಯಕ್ಷತೆಯಲ್ಲಿ ಅಸ್ಸಯ್ಯಿದ್ ಹಾಮಿದ್ ಇಸ್ಮಾಯಿಲ್ ಅಲ್ ಬುಖಾರಿ ತಂಙಳ್ ಕಾಟಿಪಳ್ಳ ಉದ್ಘಾಟಿಸಿದರು.
ಎಸ್ಸೆಸ್ಸೆಫ್ ಸುರತ್ಕಲ್ ಡಿವಿಷನ್ ಅಧ್ಯಕ್ಷರಾದ ಹನೀಫ್ ಅಹ್ಸನಿ ಕಾಮಿಲ್ ಸಖಾಫಿ ಶೇಡಿಗುರಿ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ. ಎಸ್.ವೈ.ಎಸ್ ದ.ಕ ವೆಸ್ಟ್ ಜಿಲ್ಲೆ ಸಾಂತ್ವನ ವಿಭಾಗದ ಕಾರ್ಯದರ್ಶಿ ವಿ.ಯು ಇಸ್ಹಾಖ್ ಝುಹ್ರಿ ಸೂರಿಂಜೆ ಮುಖ್ಯ ಪ್ರಭಾಷಣ ನಡೆಸಿದರು.
ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ರೀಡ್ ಪ್ಲಸ್ ಕಾರ್ಯದರ್ಶಿ ಹುಸೈನ್ ಸಅದಿ ಹೊಸ್ಮಾರ್,ಎಸ್.ಎಮ್.ಎ ಸುರತ್ಕಲ್ ರೀಜಿನಲ್ ಅಧ್ಯಕ್ಷರಾದ ಅಬ್ದುಲ್ ರಝಾಕ್ ಮುಕ್ಕ, ಎಸ್.ಎಮ್.ಎ ಸುರತ್ಕಲ್ ಝೋನ್ ಅಧ್ಯಕ್ಷರಾದ ಹಮೀದ್ ಸುರತ್ಕಲ್, ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಮಾಜಿ ಕಾರ್ಯದರ್ಶಿ ಅಬ್ದುರ್ರಹ್ಮಾನ್ ಪ್ರಿಂಟೆಕ್, ಎಸ್ಸೆಸ್ಸೆಫ್ ದ.ಕ ಜಿಲ್ಲೆ ಮಾಜಿ ಕ್ಯಾಂಪಸ್ ಕಾರ್ಯದರ್ಶಿ ಹಾಜಿ ಮುಹಮ್ಮದ್ ಆಸಿಫ್ ಕೃಷ್ಣಾಪುರ, ಸುರತ್ಕಲ್ ಡಿವಿಷನ್ ಮಾಜಿ ಉಪಾಧ್ಯಕ್ಷರಾದ ಹೈದರ್ ಮದನಿ ಸೂರಿಂಜೆ, ಎಸ್ಸೆಸ್ಸೆಫ್ ದ.ಕ ವೆಸ್ಟ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೈದರ್ ಅಲಿ 4ನೇ ಬ್ಲಾಕ್, ಎಸ್ಸೆಸ್ಸೆಫ್ ದ.ಕ ವೆಸ್ಟ್ ಜಿಲ್ಲಾ ದಅವಾ ಕಾರ್ಯದರ್ಶಿ ಆರೀಫ್ ಝುಹ್ರಿ ಮುಕ್ಕ ಉಪಸ್ಥಿತರಿದ್ದರು.
ಎಸ್.ವೈಎಸ್ ಸುರತ್ಕಲ್ ಸೆಂಟರ್ ಪ್ರಧಾನ ಕಾರ್ಯದರ್ಶಿ ಫಾರೂಕ್ ಶೇಡಿಗುರಿ ಸ್ವಾಗತಿಸಿ. ಎಸ್ಸೆಸ್ಸೆಫ್ ಸುರತ್ಕಲ್ ಡಿವಿಷನ್ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ತನ್ಸೀರ್ 4ನೇ ಬ್ಲಾಕ್ ವಂದಿಸಿದರು.
0 التعليقات: