Sunday, 13 February 2022

ಗೋವಾ ಮತ್ತು ಉತ್ತರಾಖಂಡದಲ್ಲಿ ಒಂದೇ ಹಂತದ ಮತದಾನ ಆರಂಭ


ಗೋವಾ ಮತ್ತು ಉತ್ತರಾಖಂಡದಲ್ಲಿ ಒಂದೇ ಹಂತದ ಮತದಾನ ಆರಂಭ

ಹೊಸದಿಲ್ಲಿ: ಉತ್ತರ ಪ್ರದೇಶದ ಒಂಬತ್ತು ಜಿಲ್ಲೆಗಳಲ್ಲಿ ಹರಡಿರುವ ಐವತ್ತೈದು ಕ್ಷೇತ್ರಗಳಿಗೆ ಇಂದು ಎರಡನೇ ಹಂತದ  ಮತದಾನ ನಡೆಯುತ್ತಿದ್ದು,  ಇನ್ನೆರಡು ಬಿಜೆಪಿ ಆಡಳಿತವಿರುವ ರಾಜ್ಯಗಳಾದ ಗೋವಾ ಮತ್ತು ಉತ್ತರಾಖಂಡದಲ್ಲೂ ಕೂಡ  ಇಂದು ಒಂದೇ ಹಂತದಲ್ಲಿ ಮತದಾನ ನಡೆಯುತ್ತಿದೆ.

 ರಾಜಕೀಯವಾಗಿ ಮಹತ್ವದ ರಾಜ್ಯ ಉತ್ತರಪ್ರದೇಶದ 55 ಸ್ಥಾನಗಳಲ್ಲಿ ಬೆಳಿಗ್ಗೆ 9 ಗಂಟೆಯವರೆಗೆ ಸರಾಸರಿ ಮತದಾನವು ಶೇಕಡಾ 9.45 ರಷ್ಟಿತ್ತು.  ಬಿಜ್ನೋರ್, ಸಂಭಾಲ್ ಮತ್ತು ಸಹರಾನ್‌ಪುರ ಜಿಲ್ಲೆಗಳಾದ್ಯಂತ ಎಂಟು ಸೂಕ್ಷ್ಮ ಕ್ಷೇತ್ರಗಳ ಮೇಲೆ ವಿಶೇಷ ಗಮನ ಹರಿಸಲಾಗಿದೆ.

ಗೋವಾ ಮತ್ತು ಉತ್ತರಾಖಂಡದಲ್ಲಿ ಒಂದೇ ಹಂತದ ಮತದಾನ ನಡೆಯುತ್ತಿದೆ. ಗೋವಾದ 40 ಸ್ಥಾನಗಳು ಮತ್ತು ಉತ್ತರಾಖಂಡ ರಾಜ್ಯದ 70 ಸ್ಥಾನಗಳಿಗೆ ಮತದಾನ ನಡೆಯುತ್ತಿದೆ.

ಮುಖ್ಯಮಂತ್ರಿಗಳಾದ ಪ್ರಮೋದ್ ಸಾವಂತ್ (ಗೋವಾ) ಮತ್ತು ಪುಷ್ಕರ್ ಸಿಂಗ್ ಧಾಮಿ(ಉತ್ತರಾಖಂಡ), ಮಾಜಿ ಸಿಎಂ ಹರೀಶ್ ರಾವತ್(ಉತ್ತರಾಖಂಡ)  ಮತ್ತು ಸಮಾಜವಾದಿ ಪಕ್ಷದ ನಾಯಕ ಅಝಂ ಖಾನ್ (ಉತ್ತರಪ್ರದೇಶ) ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳು.

11 ಲಕ್ಷಕ್ಕೂ ಹೆಚ್ಚು ಮತದಾರರನ್ನು ಹೊಂದಿರುವ ಕರಾವಳಿ ರಾಜ್ಯ ಗೋವಾದಲ್ಲಿ 40 ವಿಧಾನಸಭಾ ಸ್ಥಾನಗಳಿಗೆ 301 ಅಭ್ಯರ್ಥಿಗಳು ಸ್ಪರ್ಧಿಸಿದ್ದರೆ, 81 ಲಕ್ಷ ಮತದಾರರನ್ನು ಹೊಂದಿರುವ ಉತ್ತರಾಖಂಡದಲ್ಲಿ 152 ಪಕ್ಷೇತರರು ಸೇರಿದಂತೆ 632 ಅಭ್ಯರ್ಥಿಗಳು 70 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದ್ದಾರೆ.



SHARE THIS

Author:

0 التعليقات: