Sunday, 20 February 2022

ನೂರಾರು ಜನರು ನೋಡುನೋಡುತ್ತಿದ್ದಂತೆಯೇ ಸಮುದ್ರಕ್ಕೆ ಬಿತ್ತು ಹೆಲಿಕಾಪ್ಟರ್.!


 ನೂರಾರು ಜನರು ನೋಡುನೋಡುತ್ತಿದ್ದಂತೆಯೇ ಸಮುದ್ರಕ್ಕೆ ಬಿತ್ತು ಹೆಲಿಕಾಪ್ಟರ್.!

ಅಮೆರಿಕ ಫ್ಲೋರಿಡಾದ ಮಿಯಾಮಿ ಬೀಚ್‌ನಲ್ಲಿ ಭಾರೀ ಅವಘಡವೊಂದು ತಪ್ಪಿದೆ. ಶನಿವಾರ ಮಿಯಾಮಿ ಬೀಚ್ ಬಳಿಯ ಅಟ್ಲಾಂಟಿಕ್ ಸಾಗರದಲ್ಲಿ ಹೆಲಿಕಾಪ್ಟರ್ ಒಂದು ಪತನಗೊಂಡಿದೆ. ಈ ಅಪಘಾತದಲ್ಲಿ ಇಬ್ಬರು ಗಾಯಗೊಂಡಿದ್ದು, ಗಾಯಾಳುಗಳನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.‌

ಶನಿವಾರ ಮಧ್ಯಾಹ್ನ 1:10ಕ್ಕೆ, 10 ನೇ ಸ್ಟ್ರೀಟ್ ಬಳಿ ಸಮುದ್ರದಲ್ಲಿ ಹೆಲಿಕಾಪ್ಟರ್ ಅಪಘಾತದ ಬಗ್ಗೆ ಮಿಯಾಮಿ ಪೊಲೀಸರಿಗೆ ಮಾಹಿತಿ ಲಭ್ಯವಾಗಿದೆ.

ತಕ್ಷಣ ಸ್ಥಳಕ್ಕಾಗಮಿಸಿದ ಅವರು ಮಿಯಾಮಿ ಬೀಚ್‌ನ ಅಗ್ನಿಶಾಮಕ ತಂಡದ ಜೊತೆಗೂಡಿ ಹೆಲಿಕಾಪ್ಟರ್ ನಲ್ಲಿದ್ದವರನ್ನ ರಕ್ಷಿಸಿದ್ದಾರೆ.

ಈ ಸಂದರ್ಭದಲ್ಲಿ, ಅಪಘಾತದಲ್ಲಿ ಗಾಯಗೊಂಡ ಇಬ್ಬರನ್ನು ಜಾಕ್ಸನ್ ಸ್ಮಾರಕ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಕಡಲತೀರದಿಂದ 50 ಗಜ ದೂರದಲ್ಲಿ ಅಪಘಾತ ಸಂಭವಿಸಿದೆ. ಹೆಲಿಕಾಪ್ಟರ್ ನಲ್ಲಿ ಮೂವರು ಪ್ರಯಾಣಿಸುತ್ತಿದ್ದರು, ಪ್ರಯಾಣದ ನಡುವೆ ಹೆಲಿಕಾಪ್ಟರ್ ಎಂಜಿನ್ ಪವರ್ ಕಳೆದುಕೊಂಡಿದೆ. ಈ ತಾಂತ್ರಿಕ ದೋಷದಿಂದ ಅಪಘಾತ ಸಂಭವಿಸಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಘಟನೆಯ ವಿಡಿಯೋ ಕೂಡ ಸೆರೆಯಾಗಿದ್ದು ಎಲ್ಲೆಡೆ ವೈರಲ್ ಆಗುತ್ತಿದೆ. ಅದೃಷ್ಟವಶಾತ್ ಅಪಘಾತದಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ ಎಂದು ಪೊಲೀಸ್ ಅಧಿಕಾರಿ ಮೇರಿ ಶಿಯಾವೋ ತಿಳಿಸಿದ್ದಾರೆ.‌


SHARE THIS

Author:

0 التعليقات: