ರಷ್ಯಾ- ಉಕ್ರೇನ್ ಯುದ್ಧೋನ್ಮಾದ:
ಭಾರತದಲ್ಲಿ ಅಡುಗೆ ಎಣ್ಣೆ ಬೆಲೆ ಏರಿಕೆ ಸಾಧ್ಯತೆ!
ನವದೆಹಲಿ: ವ್ಯಾಪಾರದ ದೃಷ್ಟಿಯಿಂದ ಜಗತ್ತಿನ ಯಾವುದೇ ಒಂದು ದೇಶಗಳಲ್ಲಿ ನಡೆಯುವ ಬೆಳವಣಿಗೆಗಳು ಜಾಗತಿಕ ಮಾರುಕಟ್ಟೆಯ ಮೇಲೆ ಪರಿಣಾಮ ಬೀರುತ್ತದೆ. ಸದ್ಯ ರಷ್ಯಾ ಮತ್ತು ಉಕ್ರೇನ್ ನಡುವಿನ ಬಿಕ್ಕಟ್ಟಿನಿಂದ ಭಾರತದಲ್ಲಿ ಅಡುಗೆ ಎಣ್ಣೆ ಬೆಲೆ ಏರಿಕೆ ಏರಿಕೆಯಾಗುವ ಸಾಧ್ಯತೆ ಇದೆ.
ರಷ್ಯಾ- ಉಕ್ರೇನ್ ಬಿಕ್ಕಟ್ಟು ವಿಶ್ವದ ರಾಷ್ಟ್ರಗಳನ್ನು ಚಿಂತೆಗೀಡು ಮಾಡುತ್ತಿದೆ. ರಷ್ಯಾ ಅಧ್ಯಕ್ಷ ವ್ಲಾಡಿಮೀರ್ ಪುಟಿನ್ ತಮ್ಮದು ಸ್ವತಂತ್ರ ರಾಷ್ಟ್ರವೆಂದು ಘೋಷಿಸುತ್ತಿದ್ದಂತೆ ಯುದ್ಧೋನ್ಮಾದ ಆರಂಭಗೊಂಡಿದೆ. ಯುದ್ಧದ ಪರಿಣಾಮ ಉಕ್ರೇನ್ ಉತ್ಪನ್ನಗಳ ಮೇಲೆ ಅವಲಂಬಿತವಾಗಿರುವ ರಾಷ್ಟ್ರಗಳು ಸಂಕಷ್ಟಕ್ಕೆ ಸಿಲುಕುತ್ತಿವೆ. ಆ ದೇಶಗಳಲ್ಲಿ ಭಾರತ ಸಹ ಒಂದಾಗಿದೆ.
ಅಡುಗೆ ಎಣ್ಣೆ ಉತ್ಪಾದನೆಯಲ್ಲಿ ಸ್ವಾವಲಂಬನೆಗೆ ತಾಳೆ ಯೋಜನೆ: ಆದರೆ...
ಉಕ್ರೇನ್ ಜೊತೆಗಿನ ರಷ್ಯಾ ಸಂಘರ್ಷದ ಪರಿಣಾಮ ಭಾರತದ ಮೇಲೆ ಈಗ ಸ್ಪಷ್ಟವಾಗಿ ಬೀರುತ್ತಿದೆ. ನಮ್ಮ ದೇಶದಲ್ಲಿ ವ್ಯಾಪಕವಾಗಿ ಬಳಸುವ ಅಡುಗೆ ಎಣ್ಣೆಯು ಉಕ್ರೇನ್ಗೆ ಸಂಬಂಧಿಸಿದೆ. ಭಾರತವು ಉಕ್ರೇನ್ನಿಂದ ಸೂರ್ಯಕಾಂತಿ ಎಣ್ಣೆಯನ್ನು ಆಮದು ಮಾಡಿಕೊಳ್ಳುತ್ತಿದ್ದು, ಈಗ ಅದರ ಬೆಲೆ ಏರಿಕೆಯಾಗಿದೆ.
ಜಾಗತಿಕ ಮಾರುಕಟ್ಟೆಯಿಂದ ಪೂರೈಕೆ ಕೊರತೆ ಹಿನ್ನೆಲೆ ಪ್ರಮುಖ ಖಾದ್ಯ ತೈಲ ಬ್ರಾಂಡ್ಗಳ ಬೆಲೆ 15 ಲೀಟರ್ ಕ್ಯಾನ್ಗೆ ಕನಿಷ್ಠ 100 ಮತ್ತು 150 ರೂ.ಗೆ ಏರಿಕೆಯಾಗಿದೆ ಎಂದು ಪುಣೆಯ ಗುಲ್ತೆಕ್ಡಿ ಮಾರುಕಟ್ಟೆ ಯಾರ್ಡ್ ವ್ಯಾಪಾರಿಗಳು ತಿಳಿಸಿದ್ದಾರೆ.
ಅಡುಗೆ ಎಣ್ಣೆ ದರದಲ್ಲಿ ಇಳಿಕೆ; ದೀಪಾವಳಿ ಹಬ್ಬಕ್ಕೆ ಬಂಪರ್ ಕೊಡುಗೆ!
2020-21ರಲ್ಲಿ ಭಾರತದಲ್ಲಿ ಶೇ.63ರಷ್ಟು ದೇಶಿಯ ಅಡುಗೆ ಎಣ್ಣೆ ಉತ್ಪನ್ನವಾಗಿದೆ. ಆದರೂ ವಿವಿಧ ದೇಶಗಳ ಮೇಲೆ ಅಡುಗೆ ಎಣ್ಣೆಗೆ ಭಾರತ ಹೆಚ್ಚು ಅವಲಂಬಿತವಾಗಿದೆ. ರಷ್ಯಾ- ಉಕ್ರೇನ್ ಬಿಕ್ಕಟ್ಟು ಇದೀಗ ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಅಡುಗೆ ತೈಲ ಬೆಲೆ ಹೆಚ್ಚಾಗಲು ಕಾರಣವಾಗಿದೆ.
ಭಾರತ ದೇಶವು ಸೂರ್ಯಕಾಂತಿ ಎಣ್ಣೆಯಲ್ಲಿ ಗಮನಾರ್ಹ ಪಾಲನ್ನು ಹೊಂದಿದೆ. ಸೂರ್ಯಕಾಂತಿ ಎಣ್ಣೆಯನ್ನು ಭಾರತದಲ್ಲಿ ತಾಳೆ ಎಣ್ಣೆಯ ನಂತರ ಹೆಚ್ಚು ವ್ಯಾಪಕವಾಗಿ ಸೇವಿಸುವ ಎಣ್ಣೆ ಎಂದು ಅಂದಾಜಿಸಲಾಗಿದೆ. ಉಕ್ರೇನ್ನಿಂದ ಸೂರ್ಯಕಾಂತಿ ಎಣ್ಣೆಯ ಪೂರೈಕೆ ಕಡಿಮೆ ಆಗುತ್ತಿರುವುದರಿಂದ ಬೆಲೆ ಏರಿಕೆಗೆ ಕಾರಣವಾಗಿದೆ.
ಭಾರತ ಕಳೆದ ವರ್ಷ ಸುಮಾರು 1.89 ಮಿಲಿಯನ್ ಟನ್ ಸೂರ್ಯಕಾಂತಿ ಎಣ್ಣೆಯನ್ನು ಆಮದು ಮಾಡಿಕೊಂಡಿದೆ. ಇದರಲ್ಲಿ ಶೇಕಡಾ 74ರಷ್ಟು ತೈಲವು ಉಕ್ರೇನ್ನಿಂದ ಭಾರತಕ್ಕೆ ಬಂದಿದೆ. ಉಕ್ರೇನ್ನಲ್ಲಿನ ಬಿಕ್ಕಟ್ಟು ಸೂರ್ಯಕಾಂತಿ ಎಣ್ಣೆಯ ಚಿಲ್ಲರೆ ಬೆಲೆಗಳನ್ನು ಹೆಚ್ಚಿಸುವುದಲ್ಲದೆ, ಪೂರೈಕೆಗೆ ತೀವ್ರ ಅಡಚಣೆಯನ್ನು ಉಂಟು ಮಾಡುತ್ತದೆ.
ಈ ನಡುವೆ ಭಾರತ ಸರ್ಕಾರ ಸಹ ಆಮದುಗಳ ಮೇಲಿನ ತೆರಿಗೆಯನ್ನು ಕಡಿತಗೊಳಿಸುವ ನಿಟ್ಟಿನಲ್ಲಿ ಚಿಂತನೆ ನಡೆಸುತ್ತಿದೆ. ಒಂದು ವೇಳೆ ಆಮದು ಮೇಲಿನ ತೆರಿಗೆ ಕಡಿತಗೊಂಡರೆ ಅಡುಗೆ ಎಣ್ಣೆ ಬೆಲೆ ಏರಿಕೆ ಪರಿಣಾಮ ಭಾರತದದಲ್ಲಿ ಕಡಿಮೆಯಾಗಲಿದೆ.
0 التعليقات: