ಎಸ್ಸೆಸ್ಸೆಫ್ ಮಂಗಳೂರು ಡಿವಿಷನ್: ನೂತನ ಪದಾಧಿಕಾರಿಗಳ ಆಯ್ಕೆ
ಎಸ್ಸೆಸ್ಸೆಫ್ ಮಂಗಳೂರು ಡಿವಿಷನ್ ವಾರ್ಷಿಕ ಮಹಾಸಭೆಯು ಝಹ್ರತುಲ್ ಕುರ್-ಆನ್ ಅಡ್ಯಾರ್ ಕಣ್ಣೂರ್ ನಲ್ಲಿ ನಡೆಯಿತು. ಡಿವಿಷನ್ ಮಾಜಿ ಉಪಾಧ್ಯಕ್ಷರಾದ ಸಯ್ಯಿದ್ ಇಸ್ಹಾಖ್ ತಂಙಳ್ ಕಣ್ಣೂರ್ ದುಆ ನೆರವೇರಿಸಿ,ಹನೀಫ್ ಇಂಜಿನಿಯರ್ ಪೇರಿಮಾರ್ ಉದ್ಘಾಟಿಸಿ, ಎಸ್ಸೆಸ್ಸೆಫ್ ದ.ಕ ಜಿಲ್ಲಾ ಕ್ಯೂಡಿ ಕಂನ್ವೀನರ್ ಮನ್ಸೂರ್ ಹಿಮಮಿ ಮೊಂಟೆಪದವು ಸಂಘಟನಾ ತರಗತಿ ನಡೆಸಿದರು.
ಎಸ್ಸೆಸ್ಸೆಫ್ ದ.ಕ ಜಿಲ್ಲಾ ವೆಸ್ಟ್ ಅಧ್ಯಕ್ಷರಾದ ನವಾಝ್ ಸಖಾಫಿ ಅಡ್ಯಾರ್ ಪದವು ಉಪಸ್ಥಿತರಿದ್ದರು. ವೀಕ್ಷಕರಾಗಿ ಎಸ್ಸೆಸ್ಸೆಫ್ ದ.ಕ ಜಿಲ್ಲಾ ವೆಸ್ಟ್ ಐ.ಟಿ ಕಾರ್ಯದರ್ಶಿ ಇರ್ಷಾದ್ ಹಾಜಿ ಗೂಡಿನಬಳಿ ಆಗಮಿಸಿದ್ದರು.
ನೂತನ ಅಧ್ಯಕ್ಷರಾಗಿ ಮುಹಮ್ಮದ್ ಅಝ್ಮಲ್, ಪ್ರ.ಕಾರ್ಯದರ್ಶಿಯಾಗಿ ನೌಸಿಫ್ ಹುಸೈನ್,ಕೋಶಾಧಿಕಾರಿಯಾಗಿ ಉಮರುಲ್ ಫಾರೂಖ್ ಆಯ್ಕೆಯಾದರು.
ಕಾರ್ಯದರ್ಶಿಗಳಾಗಿ ಕ್ಯಾಂಪಸ್-ಅಕೀಲ್ ಹಸನ್,ಕ್ಯೂಡಿ-ಮುಹಮ್ಮದ್ ಶಾಕಿರ್,ದಅವಾ- ಆಸಿಫ್ ಸಅದಿ ಅಡ್ಯಾರ್ ಪದವು, ಸಿ.ಸಿ- ದಾವೂದುಲ್ ಹಕೀಂ, ರೀಡ್ ಪ್ಲಸ್-ರಝ್ಝಾಕ್ ಕಣ್ಣೂರು,ವಿಸ್ಡಂ - ಉನೈಸ್ ಪೇರಿಮಾರ್ ,ರೈನ್ಬೋ-ಹುಸೈನ್ ಬೆಂಗರೆ, ಮೀಡಿಯಾ- ಮುಹಮ್ಮದ್ ಸವಾದ್ ಮತ್ತು 14 ಮಂದಿಯ ಕಾರ್ಯಕಾರಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.
0 التعليقات: