ಕಡಬದಲ್ಲಿ ಕಳ್ಳರ ಹಾವಳಿ: ಎರಡು ಮನೆಗಳಿಗೆ ನುಗ್ಗಿದ ಕಳ್ಳರು
ಕಡಬ, ಫೆ.22: ಕಡಬ ಪರಿಸರದಲ್ಲಿ ಕಳ್ಳರ ಹಾವಳಿ ಕಾಣಿಸಿಕೊಂಡಿದ್ದು, ಎರಡು ಮನೆಗಳಿಗೆ ನುಗ್ಗಿರುವ ಘಟನೆ ವರದಿಯಾಗಿದೆ.
ಕಡಬ ಠಾಣಾ ವ್ಯಾಪ್ತಿಯ ಬಂಟ್ರ ಗ್ರಾಮದ ಚಾಕೋಟೆಕೆರೆ ನಿವಾಸಿ ಅಶ್ರಫ್ ಎಂಬವರ ಮನೆಯ ಹಿಂಬಾಗಿಲು ಮುರಿದು ಒಳ ನುಗ್ಗಿರುವ ಕಳ್ಳರು ಮನೆಯಿಡೀ ಜಾಲಾಡಿದ್ದಾರೆ. ಮನೆಯಲ್ಲಿ ಯಾರೂ ಇಲ್ಲದೇ ಇರುವುದನ್ನು ಅರಿತವರೇ ಈ ಕೃತ್ಯ ಎಸಗಿರಬಹುದು ಎಂದು ಶಂಕಿಸಲಾಗಿದೆ.
ಈ ನಡುವೆ ಪಾಲೆತ್ತಡ್ಕ ನಿವಾಸಿ ಮರ್ಧಾಳದಲ್ಲಿ ಅಂಗಡಿ ಹೊಂದಿರುವ ಬಾಲಕೃಷ್ಣ ರೈ ಎಂಬವರ ಮನೆಗೂ ನುಗ್ಗಿರುವ ಕಳ್ಳರು ನಗದನ್ನು ದೋಚಿದ್ದಾರೆ. ಸ್ಥಳಕ್ಕೆ ಕಡಬ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
0 التعليقات: