Monday, 7 February 2022

ಬಿಜೆಪಿಗೆ ಮತ ನೀಡುವಂತೆ ʼಭಿನ್ನ ಸಾಮರ್ಥ್ಯದʼ ವ್ಯಕ್ತಿಗೆ ಅಧಿಕಾರಿಯಿಂದ ಬಲವಂತ ಆರೋಪ: ಕ್ರಮಕ್ಕೆ ಆಗ್ರಹಿಸಿದ ಅಖಿಲೇಶ್


 ಬಿಜೆಪಿಗೆ ಮತ ನೀಡುವಂತೆ ʼಭಿನ್ನ ಸಾಮರ್ಥ್ಯದʼ ವ್ಯಕ್ತಿಗೆ ಅಧಿಕಾರಿಯಿಂದ ಬಲವಂತ ಆರೋಪ: ಕ್ರಮಕ್ಕೆ ಆಗ್ರಹಿಸಿದ ಅಖಿಲೇಶ್

ಲಕ್ನೋ: ಭಿನ್ನ ಸಾಮರ್ಥ್ಯದವರಿಗೆ ಹಾಗೂ ಹಿರಿಯ ನಾಗರಿಕರಿಗೆ ರವಿವಾರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ  ಆರಂಭಗೊಂಡಾಗ ಭಿನ್ನ ಸಾಮಥ್ರ್ಯದ ವ್ಯಕ್ತಿಯೊಬ್ಬರು ಬೇರೊಂದು ಪಕ್ಷಕ್ಕೆ ಮತ ನೀಡಲು ಬಯಸಿದ್ದರೂ ಬಿಜೆಪಿಗೇ ಮತ ಚಲಾಯಿಸುವಂತೆ ಅಧಿಕಾರಿಯೊಬ್ಬರು ಬಲವಂತಪಡಿಸಿದ್ದಾರೆನ್ನಲಾದ ಘಟನೆಯ ಕುರಿತು ಪ್ರತಿಕ್ರಿಯಿಸಿದ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್, ಸಂಬಂಧಿತ ಅಧಿಕಾರಿ ವಿರುದ್ಧ ಚುನಾವಣಾ ಆಯೋಗ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಮತದಾನ ಸಂದರ್ಭ ಹೆಚ್ಚಿನ ನಿಗಾ ವಹಿಸುವಂತೆಯೂ ಅವರು ತಮ್ಮ ಪಕ್ಷ ಕಾರ್ಯಕರ್ತರಿಗೆ ಸೂಚಿಸಿದ್ದಾರೆ.

ಆಗ್ರಾದಲ್ಲಿ ಒಂದು ಪಕ್ಷಕ್ಕೆ ಮತ ನೀಡುವಂತೆ ಅಧಿಕಾರಿ ವ್ಯಕ್ತಿಯೊಬ್ಬರಿಗೆ ಬಲವಂತಪಡಿಸಿದ್ದಾರೆ ಎಂಬ ಸುದ್ದಿ ಹರಡುತ್ತಿದ್ದದಂತೆಯೇ ಸ್ಥಳೀಯರು ಪ್ರತಿಭಟನೆ ನಡೆಸಿದ್ದಾರೆ. ಇದೊಂದು ಗಂಭೀರ ಪ್ರಕರಣ, ತಪ್ಪಿತಸ್ಥ ಅಧಿಕಾರಿಗಳನ್ನು ವಜಾಗೊಳಿಸಬೇಕು ಎಂದು ಅಖಿಲೇಶ್ ಯಾದವ್ ಹೇಳಿದ್ದಾರೆ.

"ಈ ರೀತಿ ಮಾಡಿ ನಂತರ ಅಧಿಕಾರಿ `ಏಕ್ ವೋಟ್ ಸೇ ಕುಚ್ ಹೋತಾ ಹೈ ಕ್ಯಾ' ಎಂದು ಹೇಳಿರುವುದು ಗಂಭೀರ ವಿಚಾರ. ಇಂತಹ ಅಧಿಕಾರಿಗಳನ್ನು ಗುರುತಿಸಿ ಅವರನ್ನು ತಕ್ಷಣ ವಜಾಗೊಳಿಸಬೇಕು" ಎಂದು  ಯಾದವ್ ಆಗ್ರಹಿಸಿದ್ದಾರೆ.

ಉತ್ತರ ಪ್ರದೇಶದಲ್ಲಿ ಮೊದಲ ಹಂತದ ಮತದಾನ ಫೆಬ್ರವರಿ 10ರಂದು ನಡೆಯಲಿದೆ.


SHARE THIS

Author:

0 التعليقات: