Saturday, 19 February 2022

ತಡರಾತ್ರಿ ಶಿವಮೊಗ್ಗದಲ್ಲಿ ಡಬಲ್ ಮರ್ಡರ್


ತಡರಾತ್ರಿ ಶಿವಮೊಗ್ಗದಲ್ಲಿ ಡಬಲ್ ಮರ್ಡರ್

ಶಿವಮೊಗ್ಗ: ಹಳೆ ದ್ವೇಷದ ಹಿನ್ನೆಲೆಯಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಇಬ್ಬರನ್ನು ಕೊಲೆ ಮಾಡಲಾಗಿದೆ. ತಡರಾತ್ರಿ ಶಿವಮೊಗ್ಗದ ಸೂಳೆಬೈಲ್ ಪ್ರದೇಶದಲ್ಲಿ ಘಟನೆ ನಡೆದಿದೆ.

ಅಲ್ಲಾಭಕ್ಷ್ ಮತ್ತು ಸಲೀಂ ಕೊಲೆಯಾದವರು ಎಂದು ಹೇಳಲಾಗಿದೆ.

ಸೂಳೆಬೈಲ್ 7 ನೇ ತಿರುವಿನಲ್ಲಿ ಇವರ ಮೇಲೆ ದಾಳಿ ಮಾಡಿದ ಟಿಪ್ಪು ಹಾಗೂ ಸಹಚರರು ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ. ತುಂಗಾ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆನ್ನಲಾಗಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.


SHARE THIS

Author:

0 التعليقات: