Wednesday, 9 February 2022

ಉತ್ತರಪ್ರದೇಶ: ಮೊದಲ ಹಂತದ ಮತದಾನ ಆರಂಭ

ಉತ್ತರಪ್ರದೇಶ: ಮೊದಲ ಹಂತದ ಮತದಾನ ಆರಂಭ

ಲಕ್ನೊ: ಉತ್ತರಪ್ರದೇಶ ವಿಧಾನಸಭೆಗೆ ಮೊದಲ ಹಂತದ ಮತದಾನವು ಗುರುವಾರ ಆರಂಭವಾಗಿದೆ. ಒಟ್ಟು 7 ಹಂತಗಳಲ್ಲಿ ಮತದಾನ ನಡೆಸಲು ಚುನಾವಣಾ ಆಯೋಗ ನಿರ್ಧರಿಸಿದೆ.

ರೈತರ ಪ್ರತಿಭಟನೆಯ ಕೇಂದ್ರವಾಗಿರುವ ರಾಜ್ಯದ ನಿರ್ಣಾಯಕ ಪಶ್ಚಿಮ ಉತ್ತರಪ್ರದೇಶದ 58 ಕ್ಷೇತ್ರಗಳಲ್ಲಿ   ಇಂದು  ಚುನಾವಣೆ ನಡೆಯಲಿದ್ದು ಚತುಷ್ಕೋನ ಸ್ಪರ್ಧೆ ಏರ್ಪಟ್ಟಿದೆ.

ಮೊದಲ ಹಂತದ ಮತದಾನದಲ್ಲಿ ಸ್ಪರ್ಧಾ ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳಲ್ಲಿ ನೋಯ್ಡಾದ ಹಾಲಿ ಶಾಸಕ ಹಾಗೂ  ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಪುತ್ರ ಪಂಕಜ್ ಸಿಂಗ್ ಮತ್ತು ಆಗ್ರಾ ಗ್ರಾಮಾಂತರದಿಂದ ಸ್ಪರ್ಧಿಸುತ್ತಿರುವ ಉತ್ತರಾಖಂಡದ ಮಾಜಿ ಗವರ್ನರ್ ಬೇಬಿ ರಾಣಿ ಮೌರ್ಯ ಸೇರಿದ್ದಾರೆ.

ಮತದಾನ ಆರಂಭವಾದ ಒಂದು ಗಂಟೆಯ ನಂತರ ಶಾಮ್ಲಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಜಸ್ಜಿತ್ ಕೌರ್ ಅವರು ಇವಿಎಂಗಳ ಬಗ್ಗೆ ಕೆಲವು ದೂರುಗಳನ್ನು ಸ್ವೀಕರಿಸಿದ್ದೇವೆ ಮತ್ತು ಆ ಯಂತ್ರಗಳನ್ನು ಬದಲಾಯಿಸುತ್ತಿದ್ದೇವೆ. ಶಾಂತಿಯುತ ಮತದಾನ ನಡೆಯುತ್ತಿದೆ ಎಂದು ಸುದ್ದಿ ಸಂಸ್ಥೆ ANI ಗೆ ತಿಳಿಸಿದರು.


 


SHARE THIS

Author:

0 التعليقات: