ಖ್ಯಾತ ಮಲಯಾಳಂ ನಟ ಪ್ರದೀಪ್ ಕೊಟ್ಟಾಯಂ ನಿಧನ
ಕೊಚ್ಚಿನ್: ಖ್ಯಾತ ಮಲಯಾಳಂ ಚಿತ್ರನಟ ಪ್ರದೀಪ್ ಕೊಟ್ಟಾಯಂ ಗುರುವಾರ ಮುಂಜಾನೆ 4.15ಕ್ಕೆ ಮೃತಪಟ್ಟರು. ಅವರಿಗೆ 61 ವರ್ಷ ವಯಸ್ಸಾಗಿತ್ತು. ಅಸ್ವಸ್ಥತೆ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಅವರು ಹೃದಯಾಘಾತದಿಂದ ನಿಧನರಾದರು.
ಹಲವು ಮಲಯಾಳಂ ಮತ್ತು ತಮಿಳು ಚಿತ್ರಗಳಲ್ಲಿ ಅವರು ನಟಿಸಿದ್ದರು. ಸಹಜ ಹಾಸ್ಯದಿಂದ ಅವರು ಪ್ರೇಕ್ಷಕರ ಮನ ಗೆದ್ದಿದ್ದರು. 2001ರಲ್ಲಿ ಐವಿ ಸಸಿ ಅವರ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ್ದರು.
'ವಿನ್ನೈತ್ತಾಂಡಿ ವರುವಯ್ಯ' ಚಿತ್ರದ ಪಾತ್ರ ಅವರಿಗೆ ವಿಶೇಷ ಜನಮನ್ನಣೆ ಗಳಿಸಿಕೊಟ್ಟಿತ್ತು. ನಟಿ ತೃಷಾ ಪಾತ್ರದ ಮಾವನಾಗಿ ಅವರು ಈ ಚಿತ್ರದಲ್ಲಿ ನಟಿಸಿದ್ದರು.
ಅವರ ಇತರ ಪ್ರಮುಖ ಚಿತ್ರಗಳೆಂದರೆ ಥಟ್ಟತ್ತಿನ್ ಮರಯಾತು, ಒರು ವಡಕ್ಕನ್ ಸೆಲ್ಫಿ, ವೆಲ್ಕಮ್ ಟು ಸೆಂಟ್ರಲ್ ಜೈಲ್, ಅಮರ್ ಅಕ್ಬರ್ ಆಂಥೋನಿ, ಲೈಫ್ ಆಫ್ ಜೋಸುಟ್ಟಿ, ಕುಂಜಿರಾಮಾಯಣಂ, ಕಟ್ಟಪ್ಪನಯಿಲೆ ಋತ್ವಿಕ್ ರೋಶನ್, ಅದು ಒದು ಭೀಗರ ಜೀವಿ ಆನು ಮತ್ತು ಅದಿ ಕಪ್ಯಾರೆ ಕೂಟಮನಿ.
ಮಾಯಾ ಅವರನ್ನು ವಿವಾಹವಾಗಿದ್ದ ಪ್ರದೀಪ್ ಕೊಟ್ಟಾಯಂ ಅವರಿಗೆ ಇಬ್ಬರು ಮಕ್ಕಳಿದ್ದಾರೆ.
0 التعليقات: