Tuesday, 15 February 2022

ಎಸ್ಸೆಸ್ಸೆಫ್ ಕೊಯ್ಲಾ ಶಾಖೆ: ನವ ಸಾರಥಿಗಳ ಆಯ್ಕೆ


 ಎಸ್ಸೆಸ್ಸೆಫ್ ಕೊಯ್ಲಾ ಶಾಖೆ: ನವ ಸಾರಥಿಗಳ ಆಯ್ಕೆ 

ನೂತನ ಅಧ್ಯಕ್ಷರಾಗಿ ಅಬ್ದುಲ್ ರಹಿಮಾನ್ ಅನಿಲೆ, ಪ್ರ. ಕಾರ್ಯದರ್ಶಿಯಾಗಿ ರಮೀಝ್ ಮುಂಡೊಳೆ, ಕೋಶಾಧಿಕಾರಿಯಾಗಿ ಮುನೀರ್ ಝೈನಿ  ಆಯ್ಕೆ

ಎಸ್ಸೆಸ್ಸೆಫ್ ಕೊಯ್ಲಾ ಯುನಿಟ್ ಇದರ ವಾರ್ಷಿಕ ಮಹಾಸಭೆಯು  ಫೆ.10 ರಂದು ಸುನ್ನಿ ಸೆಂಟರ್ ಮಸ್ಜಿದ್ ಕೊಯ್ಲಾದಲ್ಲಿ ಮುದಸ್ಸಿರ್ ಶರವು ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಮುನೀರ್ ಝೈನಿ ಇವರ ದುಆದೊಂದಿಗೆ ಆರಂಭವಾದ ಸಭೆಯನ್ನು ಎಸ್. ವೈ.ಎಸ್ ನಾಯಕರಾದ ಹಮೀದ್ ಕೊಯ್ಲ ರವರು ಉದ್ಘಾಟಿಸಿದರು. ಪ್ರಧಾನ ಕಾರ್ಯದರ್ಶಿ ರಮೀಝ್ ಮುಂಡೋಲೆ ವಾರ್ಷಿಕ ವರದಿಯನ್ನು ವಾಚಿಸಿದರು. ಕೋಶಾಧಿಕಾರಿ ಅಬ್ದುಲ್ ರಹಿಮಾನ್ ಅನಿಲೆ ಅವರು ವಾರ್ಷಿಕ ಲೆಕ್ಕಪತ್ರ ಮಂಡಿಸಿದರು. ಸೆಕ್ಟರ್ ನಾಯಕರಾದ ಇಸ್ಮಾಯಿಲ್ ದೆಂಬಲೆ ಹಾಗೂ ನೌಶಾದ್ ಹಿಮಾಮಿ ಯವರು ವೀಕ್ಷಕರಾಗಿ ಆಗಮಿಸಿದ್ದರು. ಸಭೆಯಲ್ಲಿ ಹಿಂದೆ ಅಸ್ತಿತ್ವದಲ್ಲಿದ್ದ ಸಮಿತಿಯನ್ನು ವಿಸರ್ಜಿಸಿ ನೂತನ ಸಮಿತಿಯನ್ನು ರಚಿಸಲಾಯಿತು.
   ಅಧ್ಯಕ್ಷರಾಗಿ ಅಬ್ದುಲ್ ರಹಿಮಾನ್ ಅನಿಲೆ, ಪ್ರಧಾನ ಕಾರ್ಯದರ್ಶಿಯಾಗಿ ರಮೀಝ್ ಮುಂಡೊಳೆ, ಕೋಶಾಧಿಕಾರಿಯಾಗಿ ಮುನೀರ್ ಝೈನಿ ಮೊದಲಾದವರನ್ನು ನೇಮಕ ಮಾಡಲಾಯಿತು.
ಕ್ಯಾಂಪಸ್ ಕಾರ್ಯದರ್ಶಿಯಾಗಿ ಹಿಶಾಂ ಕೊಯ್ಲ, ದಅವಾ ಕಾರ್ಯದರ್ಶಿಯಾಗಿ ಸಿ.ಎಂ ಅಬೂಬಕ್ಕರ್, ರೈಂಬೋ ಕಾರ್ಯದರ್ಶಿಯಾಗಿ ಸಮದ್ ಪಾಲಡ್ಕ, ಮೀಡಿಯಾ ಕಾರ್ಯದರ್ಶಿಯಾಗಿ ಮುದಸ್ಸಿರ್ ಶರವು, ವಿಸ್ಡಂ (Wisdom) ಕಾರ್ಯದಶಿಯಾಗಿ ಸಿ.ಎಂ ಫಾರೂಕ್, ಕ್ವಾಲಿಟಿ ಡೆವಲಪ್ಮೆಂಟ್ (Q. D) ಕಾರ್ಯದರ್ಶಿಯಾಗಿ ರಮೀಝ್ ಕೆಮನಡ್ಕ, ಕಲ್ಚರಲ್ ಕೌನ್ಸಿಲ್ ಕಾರ್ಯದರ್ಶಿಯಾಗಿ ಸಾದಾತ್ ಕೊಯಿಲ, ಪಬ್ಲಿಕೇಶನ್ ಕಾರ್ಯದರ್ಶಿಯಾಗಿ ಹಫೀಜ್ ಕೊಯಿಲ ಮುಂತಾದವರನ್ನು ಆಯ್ಕೆ ಮಾಡಲಾಯಿತು. ಕಾರ್ಯದರ್ಶಿ ರಮೀಝ್ ಮುಂಡೋಲೆ ಸ್ವಾಗತಿಸಿ, ಹಿಶಾಮ್ ಕೊಯಿಲ ಕೃತಜ್ಞತೆ ಸಲ್ಲಿಸಿದರು.

SHARE THIS

Author:

0 التعليقات: