Wednesday, 16 February 2022

ಉಕ್ರೇನ್ ಗಡಿಯಲ್ಲಿ ರಷ್ಯಾದಿಂದ ಮತ್ತಷ್ಟು ಸೇನೆ ನಿಯೋಜನೆ

ಉಕ್ರೇನ್ ಗಡಿಯಲ್ಲಿ ರಷ್ಯಾದಿಂದ ಮತ್ತಷ್ಟು ಸೇನೆ ನಿಯೋಜನೆ

ವಾಷಿಂಗ್ಟನ್: ಉಕ್ರೇನ್ ಜನತೆ ದೇಶಾದ್ಯಂತ ಧ್ವಜ ಪ್ರದರ್ಶನ ಮೂಲಕ ಏಕತೆಯನ್ನು ಪ್ರದರ್ಶಿಸಿ ಮಾಸ್ಕೊ ಒತ್ತಡವನ್ನು ಧಿಕ್ಕರಿಸಿದ ನಡುವೆಯೇ, ಉಕ್ರೇನ್ ಗಡಿಯಲ್ಲಿ ರಷ್ಯಾ ಸೇನೆ 7000 ಪಡೆಗಳನ್ನು ನಿಯೋಜಿಸಿದೆ ಎಂದು ಅಮೆರಿಕ ಎಚ್ಚರಿಕೆ ನೀಡಿದೆ.ಕ್ರೆಮ್ಲಿನ್ ಒಪ್ಪಂದದ ಅನ್ವಯ ಈ ಭಾಗದಿಂದ ಪಡೆಗಳನ್ನು ಹಿಂದಕ್ಕೆ ಪಡೆಯಬೇಕಿತ್ತು.

ಉಕ್ರೇನ್ ಮೇಲೆ ದಾಳಿ ನಡೆಸುವ ರಷ್ಯಾ ಯೋಜನೆ ಕಾರ್ಯಗತಗೊಂಡಿಲ್ಲವಾದರೂ, ಯೂರೋಪಿಯನ್ ಭದ್ರತೆ ಮತ್ತು ಆರ್ಥಿಕ ಸ್ಥಿರತೆ ಸಮತೋಲನದಲ್ಲಿದ್ದು, ದಾಳಿ ಭೀತಿ ಇನ್ನೂ ಇದೆ ಎಂದು ಅಮೆರಿಕ ಹಾಗೂ ಮಿತ್ರಪಡೆಗಳು ಎಚ್ಚರಿಸಿವೆ.

ಪಾಶ್ಚಿಮಾತ್ಯ ದೇಶಗಳ ಅಂದಾಜಿನ ಪ್ರಕಾರ ಉಕ್ರೇನ್‌ನ ನಾಲ್ಕೂ ಸುತ್ತಲು 1.5 ಲಕ್ಷ ಸೈನಿಕರನ್ನು ರಷ್ಯಾ ನಿಯೋಜಿಸಿದೆ. ಈ ಸಂಘರ್ಷದ ಸಂದರ್ಭದಲ್ಲಿ ನಾವು ಶಾಂತಿಯುತ ಮಾರ್ಗವನ್ನು ಬಯಸುತ್ತೇವೆ ಎಂಬ ಸಂಕೇತವನ್ನು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಸಾರಿದ್ದಾರೆ, ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರು ರಾಜತಾಂತ್ರಿಕ ಬೆಂಬಲದ ಭರವಸೆ ನೀಡಿದ್ದಾರೆ ಆದರೆ ರಷ್ಯಾದ ಉದ್ದೇಶದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಉಕ್ರೇನ್‌ನ ಸಾರ್ವಭೌಮತ್ವವನ್ನು ಗೌರವಿಸುವ ಮೂಲತತ್ವವನ್ನು ವಾಷಿಂಗ್ಟನ್ ಹಾಗೂ ಅದರ ಮಿತ್ರ ದೇಶಗಳು ಬಲಿಕೊಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಕಳೆದ 2014ರಲ್ಲಿ ಉಕ್ರೇನ್‌ನಿಂದ ಬೇರ್ಪಟ್ಟಿರುವ ಕಪ್ಪು ಸಮುದ್ರ ಪರ್ಯಾಯ ಭೂಮಿ ಪ್ರದೇಶದಲ್ಲಿ ಕ್ರಿಮೆಯಾ ಸೇತುವೆಯಿಂದಾಚೆಗೆ ಒಂದು ಟ್ರೈನ್‌ ಲೋಡ್ ಶಸ್ತ್ರಾಸ್ತ್ರ ಸಹಿತ ವಾಹನಗಳು ಸಂಚರಿಸುತ್ತಿರುವ ವಿಡಿಯೊವನ್ನು ರಷ್ಯಾದ ರಕ್ಷಣಾ ಸಚಿವಾಲಯ ಪ್ರದರ್ಶಿಸಿದೆ. ತರಬೇತಿ ಅಭ್ಯಾಸಗಳು ಮುಗಿದ ಬಳಿಕ ಮತ್ತಷ್ಟು ಟ್ಯಾಂಕ್ ಘಟಕಗಳು ಸ್ವಸ್ಥಾನಕ್ಕೆ ಮರಳಲಿವೆ ಎಂದು ಅವರು ದೃಢಪಡಿಸಿದ್ದಾರೆ.


SHARE THIS

Author:

0 التعليقات: