Monday, 14 February 2022

ಬೆಳ್ಳಂಬೆಳಗ್ಗೆ ಆಕಾಶದಲ್ಲಿ ವಿಚಿತ್ರ ಬೆಳಕಿನಾಟ : ಬೆರಗಾದ ಜನತೆ


ಬೆಳ್ಳಂಬೆಳಗ್ಗೆ ಆಕಾಶದಲ್ಲಿ ವಿಚಿತ್ರ ಬೆಳಕಿನಾಟ : ಬೆರಗಾದ ಜನತೆ

ಗಂಗಾವತಿ: ಬೆಳಗಿನ ಜಾವ 5.30 ರ ಸುಮಾರಿಗೆ ಆಕಾಶದಲ್ಲಿ ಬೆಳಕಿನ ವಿಚಿತ್ರ ನಲಿದಾಟ ನಡೆದಿದ್ದು ಇದನ್ನು ಗಮನಿಸಿದ ಜನರು ಬೆರಗಾಗಿರುವ ಘಟನೆ ತಾಲೂಕಿನ ಬಾಪಿರೆಡ್ಡಿ ಕ್ಯಾಂಪಿನಲ್ಲಿ ಸೋಮವಾರ ನಡೆದಿದೆ.

ಬಾಪಿರೆಡ್ಡಿ ಕ್ಯಾಂಪಿನ ರೈತ ಟಿ.ಸತ್ಯನಾರಾಯಣ ಸೋಮವಾರ ಬೆಳಗಿನ ಜಾವ ತಮ್ಮ ಗದ್ದೆಗೆ ಹೋಗುವಾಗ ಪೂರ್ವದಿಕ್ಕಿನಲ್ಲಿ ಉದ್ದನೆ ಬೆಂಕಿ ಉಂಡೆಯಂತಹ ಸಾಲು ಕಾಣಿಸಿಕೊಂಡಿದ್ದು ಇದನ್ನು ಕುತುಹಲಕ್ಕಾಗಿ ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದ್ದಾರೆ.

ನಂತರ ಇಡೀ ಕ್ಯಾಂಪಿನ ಮೊಬೈಲ್ ವಾಟ್ಸಪ್ ಗ್ರುಪ್ ಗೆ ಹಾಕಿದ್ದರಿಂದ ಇದೀಗ ಆಕಾಶದಲ್ಲಿನ ಬೆಂಕಿಯ ಬೆಳಕಿನ ಉಂಡಿಯ ವಿಡಿಯೋ ಮತ್ತು ಪೊಟೋಗಳು ವೈರಲ್ ಆಗಿದ್ದು ಆಕಾಶ ಕಾಯದಲ್ಲಿಯ ವಿಚಿತ್ರ ಕಂಡು ಜನರು ಬೆರಗಾಗಿದ್ದಾರೆ.

ಇತ್ತೀಚಿಗೆ ಪತ್ರಿಕೆಗಳಲ್ಲಿ ಆಕಾಶದಲ್ಲಿ ಕ್ಷುದ್ರಗ್ರಹಗಳು ಭೂಮಿಗೆ ಹತ್ತಿರವಾಗಿ ಹೋಗುತ್ತವೆ ಇದರ ಪರಿಣಾಮದ ಕುರಿತು ವರದಿಗಳು ಪ್ರಕರಟವಾಗಿತ್ತು. ಕ್ಷುದ್ರ ಗ್ರಹಗಳು ಭೂಮಿಯ ಕಾಯದಲ್ಲಿ ಸಂಚರಿಸುವಾಗ ಗುರುತ್ವಾಕರ್ಷಣೆಯ ಪ್ರದೇಶದಲ್ಲಿ ಘರ್ಷಣೆಯ ಸಂದರ್ಭದಲ್ಲಿ ಕ್ಷುದ್ರಗ್ರಹಗಳಲ್ಲಿ ವ್ಯತ್ಯಾಸವಾಗಿ ಬೆಂಕಿ ಉಂಟಾಗುವ ಸಾಧ್ಯತೆ ಕುರಿತು ವರದಿಯಲ್ಲಿ ತಿಳಿಸಲಾಗಿತ್ತು. ಬಾಪಿರೆಡ್ಡಿಕ್ಯಾಂಪಿನಲ್ಲಿ ಇಂತಹ ಘಟನೆ ನಡೆದಿರುವ ಸಾಧ್ಯತೆ ಇದೆ.


SHARE THIS

Author:

0 التعليقات: