Sunday, 13 February 2022

ಕೋರ್ಟ್ ತೀರ್ಪು ಬರುವವರೆಗೂ ಹಿಂದಿನ ಸಮವಸ್ತ್ರ ಪದ್ಧತಿ ಮುಂದುವರಿಯಲಿ: ಮಾಜಿ ಸಚಿವ ಯು.ಟಿ.ಖಾದರ್


 ಕೋರ್ಟ್ ತೀರ್ಪು ಬರುವವರೆಗೂ ಹಿಂದಿನ ಸಮವಸ್ತ್ರ ಪದ್ಧತಿ ಮುಂದುವರಿಯಲಿ: ಮಾಜಿ ಸಚಿವ ಯು.ಟಿ.ಖಾದರ್

ಮೈಸೂರು: ಕೋರ್ಟ್ ತೀರ್ಪು ಬರುವವರೆಗೂ ಹಿಂದಿನ ಸಮವಸ್ತ್ರ ಪದ್ದತಿ ಮುಂದುವರಿಯಲಿ ಎಂದು ಮಾಜಿ ಸಚಿವ ಯು.ಟಿ.ಖಾದರ್ ಹೇಳಿದರು.

ನಗರದಲ್ಲಿ ರವಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಲ್ಲವನ್ನೂ ನ್ಯಾಯಾಲಯವೇ ಬಗೆಹರಿಸಲು ಸಾಧ್ಯವಿಲ್ಲ. ಸರ್ಕಾರ ಕೂಡಲೇ ಧಾರ್ಮಿಕ ಮುಖಂಡರು,ಸರ್ವ ಪಕ್ಷಗಳ ಸಭೆ ನಡೆಸಬೇಕು.ಕೋರ್ಟ್ ಹೊರಗಡೆಯೇ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಬೇಕು. ಎಲ್ಲಾ ಕಡೆ ಕೋರ್ಟೆ ಸಮಸ್ಯೆ ಬಗೆಹರಿಸಲು ಸಾಧ್ಯವಿಲ್ಲ.ಸರ್ಕಾರವೇ ಮುಂದೆ ನಿಂತು ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಿದರು.

ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಇಂತಹ ಯಾವುದೇ ಸಮಸ್ಯೆ ಇರಲಿಲ್ಲ. ಶಾಲೆ ಕಟ್ಟಲು ಸಾಕಷ್ಟು ಹಣ ಬರುತ್ತಿತ್ತು.ಇವತ್ತು ಬಿಜೆಪಿಯವರು ಒಂದು ಶಾಲೆ ಕಟ್ಟಿದ್ದಾರಾ. ಉಚಿತ ಲ್ಯಾಪ್‍ಟಾಪ್, ಹೆಚ್ಚಿನ ಸ್ಕಾಲರ್ ಶಿಪ್ ಕೊಡುತ್ತಿದ್ದಾರಾ.ಈ ಸೌಲಭ್ಯಗಳು ಬಿಜೆಪಿ ಸರ್ಕಾರದಲ್ಲಿದಿಯಾ? ಶಿಕ್ಷಣ ಸಂಸ್ಥೆಗಳಲ್ಲಿ ಸಮಸ್ಯೆ ಉಂಟು ಮಾಡಿದ್ದು ಬಿಜೆಪಿ.ಕಾಂಗ್ರೆಸ್ ಸಂವಿಧಾನದ ಪ್ರಕಾರ ಕೆಲಸ ಮಾಡುತ್ತಿದೆ. ರಾಜಕೀಯ ಲಾಭ ಪಡೆಯಲು ಮುಂದಾಗಿರುವವರೇ ಕಾಂಗ್ರೆಸ್ ವಿರುದ್ದ ಮಾತುಗಳನ್ನಾಡುತ್ತಿದ್ದಾರಂದು ಟೀಕಿಸಿದರು.

ಪ್ರತಿಪಕ್ಷಗಳು ಆಡಳಿತ ಪಕ್ಷದ ವೈಫಲ್ಯ ಕೇಳಬೇಕು.ಆದರೆ ನಮ್ಮ ರಾಜ್ಯದಲ್ಲಿ ಉಲ್ಟಾ ಆಗಿದೆ.ಹೆತ್ತವರಿಗೆ ಮಾತ್ರ ಮಕ್ಕಳ ನೋವು ಗೊತ್ತಾಗೋದು.ರಾಜ್ಯ ಸರ್ಕಾರ ಎಲ್ಲಾ ಜಾತಿ ವರ್ಗವನ್ನ ಒಟ್ಟಿಗೆ ಕೊಂಡೊಯ್ಯಬೇಕು.ನಿರ್ಭಯವಾಗಿ ವ್ಯಾಸಂಗ ಮಾಡಲು ಅವಕಾಶ ನೀಡಬೇಕು.ಕೂಡಲೇ ಸರ್ವ ಪಕ್ಷ ಸಭೆ ಕರೆದು ಚರ್ಚೆ ಮಾಡಬೇಕು ಎಂದು ಹೇಳಿದರು. 


SHARE THIS

Author:

0 التعليقات: