Monday, 21 February 2022

ಎಸ್.ಎಸ್.ಎಫ್ ಪುತ್ತೂರು ಡಿವಿಶನ್ :ನೂತನ ಸಾರಥಿ ಗಳು


ಎಸ್.ಎಸ್.ಎಫ್ ಪುತ್ತೂರು ಡಿವಿಶನ್ :ನೂತನ ಸಾರಥಿ ಗಳು

SSF ಪುತ್ತೂರು ಡಿವಿಶನ್ ವಾರ್ಷಿಕ ಮಹಾಸಭೆ ಯು ದಿನಾಂಕ 20-02-2022 ಆದಿತ್ಯವಾರ  ಡಿವಿಶನ್ ಅಧ್ಯಕ್ಷರಾದ ಹಾಫಿಲ್ ತೌಸೀಫ್ ಸಅದಿ ರವರ ಅಧ್ಯಕ್ಷತೆಯಲ್ಲಿ ಪುತ್ತೂರು ಸುನ್ನಿ ಸೆಂಟರಿನಲ್ಲಿ ನಲ್ಲಿ ನಡೆಯಿತು.

ಜಿಲ್ಲಾ ಅಧ್ಯಕ್ಷರಾದ ಜಿ.ಕೆ ಇಬ್ರಾಹಿಂ ಅಂಜದಿಯವರು ಉದ್ಘಾಟಿಸಿದರು.

ಡಿವಿಶನ್ ಪ್ರಧಾನ ಕಾರ್ಯದರ್ಶಿ ಗಳಾದ ಹಾರಿಸ್ ಅಡ್ಕ ವರದಿ ಹಾಗೂ ಲೆಕ್ಕಪತ್ರ ವಾಚಿಸಿದರು.

ನಂತರ ಡಿವಿಶನ್ ವೀಕ್ಷಕರಾಗಿ ಆಗಮಿಸಿದ ಜಿಲ್ಲಾ ನಾಯಕರಾದ ಮಿಸ್ಬಾಹಿ ಉಸ್ತಾದರ ನೇತೃತ್ವದಲ್ಲಿ ನೂತನ ಸಮಿತಿ ರಚಿಸಲಾಯಿತು.

ಅಧ್ಯಕ್ಷರಾಗಿ ರಫೀಕ್  ಬಾಸನಿ ರೆಂಜ, ಪ್ರಧಾನ ಕಾರ್ಯದರ್ಶಿ ಗಳಾಗಿ ಮುಹ್ಸಿನ್ ಕಟ್ಟತ್ತಾರ್, ಕೋಶಾಧಿಕಾರಿ ಯಾಗಿ ರಫೀಕ್ ಮಣ್ಣಾಪು, ಕ್ಯಾಂಪಸ್ ಕಾರ್ಯದರ್ಶಿ ಯಾಗಿ ಹಾರಿಸ್ ಅಡ್ಕ,ಮೀಡಿಯಾ ಕಾರ್ಯದರ್ಶಿ ಯಾಗಿ ಶಿಹಾಬ್ ಸಖಾಫಿ ಈಶ್ವರಮಂಗಲ,ದ ಅವಾ ಕಾರ್ಯದರ್ಶಿ ಯಾಗಿ ಸಲಾಂ ಹನೀಫಿ ಕಬಕ,ರೈಂಬೋ ಕಾರ್ಯದರ್ಶಿ ಯಾಗಿ ಶಮೀರ್ ಸಖಾಫಿ, ಪಬ್ಲಿಕೇಶನ್ ಕಾರ್ಯದರ್ಶಿ ಶಿಹಾಬುರ್ರಹ್ಮಾನ್ ಹಸನ್ ನಗರ,ಕಲ್ಚರಲ್ ಕಾರ್ಯದರ್ಶಿ ಯಾಗಿ ಶಫೀಕ್ ಸಅದಿ ಈಶ್ವರಮಂಗಲ , ಕ್ವಾಲಿಟಿ ಡೆವೆಲಪ್ ಮೆಂಟ್ ಕಾರ್ಯದರ್ಶಿ ಯಾಗಿ ಖಲಂದರ್ ಪಾಟ್ರಕೋಡಿ, ವಿಸ್ಡಮ್ ಕಾರ್ಯದರ್ಶಿ ಯಾಗಿ ಸೈಫುಲ್ಲಾ ಸಅದಿ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸಾಬಿತ್ ತಂಙಳ್,ಕರೀಂ ಬಾಹಸನಿ,ಮುಸ್ತಫಾ ಬುಡೋಳಿ,ಇಲ್ಯಾಸ್ ಕಟ್ಟತ್ತಾರ್,ಶಮೀರ್ ಬನ್ನೂರು,ಅಶ್ರಫ್ ಅಜ್ಜಿಕಲ್ಲು,ಹನೀಫ್ ಬನ್ನೂರು,ಹಾಫಿಲ್ ತೌಸೀಫ್ ಸಅದಿ,ಮುಸ್ತಫಾ ಗಟ್ಟಮನೆ,ನಾಸಿರ್ ಕುಕ್ಕಾಜೆ,ಇಬ್ರಾಹಿಂ ಪಳ್ಳತ್ತಾರ್,ರಝಾಕ್ ಹಿಮಮಿ,ಹಾರಿಸ್ ಅಂಕಜಾಲ್ ಇವರನ್ನು ಆಯ್ಕೆ ಮಾಡಲಾಯಿತು.

ಕಾರ್ಯಕ್ರಮ ದಲ್ಲಿ ಜಿಲ್ಲಾ ನಾಯಕರಾದ ಸಿದ್ದೀಕ್ ಗೂನಡ್ಕ, ಝುಬೈರ್ ಸಖಾಫಿ, ಶಫೀಕ್ ಮಾಸ್ಟರ್, ಇಸಾಕ್ ಮದನಿ, ಅಶ್ಫಾಕ್ ಕೊಡುಂಗಾಯಿ ಉಪಸ್ಥಿತರಿದ್ದರು. ಆರು ಸೆಕ್ಟರ್ ಗಳಿಂದ  ಕೌನ್ಸಿಲರ್ಸ್ ಗಳು ಆಗಮಿಸಿದ್ದರು.

ಹಾರಿಸ್ ಅಡ್ಕ ಸ್ವಾಗತಿಸಿ,ನೂತನ ಕಾರ್ಯದರ್ಶಿ ಮುಹ್ಸಿನ್ ಕಟ್ಟತ್ತಾರ್ ಧನ್ಯವಾದ ಸಲ್ಲಿಸಿದರು. 


SHARE THIS

Author:

0 التعليقات: